About Us Advertise with us Be a Reporter E-Paper

Breaking Newsವಿದೇಶ
Trending

‘ವಿಯೆನ್ನಾ’ ವಿಶ್ವದಲ್ಲೇ ಅತ್ಯಂತ ವಾಸಯೋಗ್ಯ ನಗರ..!

ವಿಯೆನ್ನಾ: ಆಸ್ಟ್ರೀಯಾ ದೇಶದ ವಿಯೆನ್ನಾ ನಗರವು ಪ್ರಪಂಚದಲ್ಲೇ ವಾಸಯೋಗ್ಯ ನಗರ ಎಂದು ಹೆಸರು ಪಡೆದು, ಮೊದಲ ಸ್ಥಾನವನ್ನು ಅಲಂಕರಿಸಿದೆ.

ಎಕನಾಮಿಕ್ ಇಂಟಲಿಜೆನ್ಸ್ ಯುನಿಟ್ಸ್ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಬಹಿರಂಗವಾಗಿದೆ. ಕಳೆದ ಹಲವು ವರ್ಷಗಳಿಂದ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರವು ಪ್ರಥಮ ಸ್ಥಾನದಲ್ಲಿತ್ತು. ಇದೀಗ ಮೆಲ್ಬೋರ್ನ್ ನನ್ನು ಹಿಂದಿಕ್ಕಿ ವಿಯೆನ್ನಾ ಇದೇ ಮೊದಲ ಬಾರಿಗೆ ಪಟ್ಟಿಯಲ್ಲಿ ಪ್ರಥಮ ಸ್ಥಾನ ಗಳಿಸಿದೆ.

ಇತ್ತೀಚಿನ ವರ್ಷಗಳಲ್ಲಿ ಯುರೂಪ್ ರಾಷ್ಟ್ರಗಳಲ್ಲಿ ಭಯೋತ್ಪಾದನಾ ಕೃತ್ಯದಂಥ ಘಟನೆಗಳು ಹೆಚ್ಚಾಗುತ್ತಿವೆ. ಆದ್ರೆ ವಿಯೆಟ್ನಾ ನಗರದಲ್ಲಿ ಕಡಿಮೆ ಅಪರಾಧ ಪ್ರಕರಣಗಳು ಕಂಡು ಬಂದಿದೆ. ಹೀಗಾಗಿ ವಿಯೆಟ್ನಾಗೆ ಹೊಸ ಪಟ್ಟ ದಕ್ಕಿದೆ.ಇನ್ನು ಬಾಂಗ್ಲಾದೇಶದ ಢಾಕಾ ಹಾಗೂ ನೈಜೀರಿಯಾದ ನಿಗೋಸ್ ನಗರಗಳು ಈ ಪಟ್ಟಿಯಲ್ಲಿ ಕೊನೆ ಸ್ಥಾನವನ್ನು ಗಳಿಸಿದೆ. ಆದರೆ ವಿಶ್ವದ ಅತ್ಯಂತ ಅಪಾಯಕಾರಿ ನಗರಗಳು ಎನ್ನಲಾದ ಬಾಗ್ದಾದ್ ಮತ್ತು ಕಾಬೂಲ್ ನಗರಗಳು ಈ ಪಟ್ಟಿಯಲ್ಲಿಯೇ ಇಲ್ಲ.

Tags

Related Articles

Leave a Reply

Your email address will not be published. Required fields are marked *

Language
Close