About Us Advertise with us Be a Reporter E-Paper

Breaking Newsದೇಶ
Trending

ಮಲ್ಯಗೆ ಸಾಲ ನೀಡುವ ಸಂಬಂಧ ಯಾವುದೇ ನಿಯಮ ಮೀರಿಲ್ಲ: ಎಸ್‌ಬಿಐ

ದೆಹಲಿ: ಆರ್ಥಿಕ ಅಪರಾಧಿ ವಿಜಯ್‌ ಮಲ್ಯಗೆ ಕೆಟ್ಟ ಸಾಲ ನೀಡಿರುವ   ಕುರಿತಾಗಿ ತನ್ನಿಂದ ಯಾವುದೇ ನಿಯಮಗಳ ಉಲ್ಲಂಘನೆಯಾಗಿಯಲ್ಲ ಎಂದು ದೇಶದ ಅತಿ ದೊಡ್ಡ ಸಾರ್ವಜನಿಕ ಬ್ಯಾಂಕಿಂಗ್‌ ಸಂಸ್ಥೆ ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾ ತಿಳಿಸಿದೆ.

ಮಲ್ಯ ಒಡೆತನದ ಕಿಂಗ್‌ಫಿಷರ್‌ ಏರ್‌ಲೈನ್ಸ್‌ಗೆ ಅತಿ ದೊಡ್ಡ ಪ್ರಮಾಣದಲ್ಲಿ ಸಾಲ ನೀಡಿರುವ ಸಂಸ್ಥೆಯಾದ ಎಸ್‌ಬಿಐಗೆ ಫೆಬ್ರವರಿ 2016ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸೂಚಿಸಲಾಗಿತ್ತು. ಆದರೆ ಮಲ್ಯ ದೇಶ ಬಿಟ್ಟು ಪಲಾಯನಗೈದ ಕೆಲ ದಿನಗಳ ಬಳಿಕವಷ್ಟೇ ಎಸ್‌ಬಿಐ ಸುಪ್ರೀಂ ಮೆಟ್ಟಿಲೇರಿತ್ತು.

ಮಾರ್ಚ್ 2, 2016ರಲ್ಲಿ ಮಲ್ಯ ದೇಶ ಬಿಟ್ಟು ಓಡಿಹೋಗಿದ್ದಾನೆ. ಇದಾದ ನಾಲ್ಕು ದಿನಗಳ ಬಳಿಕ ಮಾತ್ರವೇ ಆತನ ವಿರುದ್ಧ 13 ಬ್ಯಾಂಕ್‌ಗಳ ಸಮೂಹ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು.

17 ಬ್ಯಾಂಕುಗಳ ಸಮೂಹದಿಂದ ಒಟ್ಟಾರೆ 9000 ಕೋಟಿ ರುಗಳಿಗಿಂತ ಹೆಚ್ಚಿನ ಮೊತ್ತದ ಸಾಲವನ್ನು ಮಲ್ಯ ಪಡೆದಿದ್ದು ಪಾವತಿ ಮಾಡದೇ ಪಲಾಯಗೈದಿದ್ದಾನೆ.

ಇದೇ ಕುರಿತಂತೆ ಬಹಿರಂಗ ಪತ್ರ ಬರೆದಿದ್ದ ಮಲ್ಯ, ತನ್ನ ಸಂಸ್ಥೆಯ ಆರ್ಥಿಕ ಸ್ಥಿತಿಗತಿ ತಿಳಿದಿದ್ದರೂ, ಸಾಲ ಮಂಜೂರು ಮಾಡಿದ ಬ್ಯಾಂಕುಗಳೂ ಈ ಕೆಟ್ಟ ಸಾಲದ ವಿಚಾರವಾಗಿ ಸಮಪ್ರಮಾಣದ ತಪ್ಪಿತಸ್ಥರಾಗಿದ್ದು, ಸುಖಾಸುಮ್ಮನೇ ತನ್ನನ್ನು ಕೆಟ್ಟ ಸಾಲದ ಪೋಸ್ಟರ್‌ ಬಾಯ್‌ ಮಾಡಲಾಗುತ್ತಿದೆ ಎಂದು ಹೇಳೀಕೊಂಡಿದ್ದ.

 

Tags

Related Articles

Leave a Reply

Your email address will not be published. Required fields are marked *

Language
Close