About Us Advertise with us Be a Reporter E-Paper

Breaking Newsಪಾಲಿಟಿಕ್ಸ್ಪ್ರಚಲಿತ
Trending

ಮಲ್ಯ ಓಡಿಹೋಗಲು ಪ್ರಧಾನಿ ಹಾಗು ಸಿಬಿಐ ಕಾರಣ: ರಾಹುಲ್‌ ಗಾಂಧಿ ಆಪಾದನೆ

ದೆಹಲಿ: ಆರ್ಥಿಕ ಅಪರಾಧಿ ಮಲ್ಯನನ್ನು ದೇಶದಿಂದ ಪಲಾಯನಗೈಯ್ಯಲು ಸಿಬಿಐ ನೆರವಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಅಪ್ಪಣೆಯೂ ಇದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ತಿಳಿಸಿದ್ದಾರೆ.

ಮಲ್ಯ ವಿರುದ್ಧ ಇದ್ದ ಲುಕ್‌ಔಟ್‌ ನೊಟೀಸ್‌ಅನ್ನು ಪ್ರಧಾನಿ ಆದೇಶದ ಮೇರಿಗೆ ಬದಲಿಸಲಾಗಿದೆ ಎಂದು ರಾಹುಲ್‌ ಹೇಳಿದ್ದಾರೆ. “ಸಿಬಿಐ ನೇರವಾಗಿ ಪ್ರಧಾನಿಗೆ ರಿಪೋರ್ಟ್‌ ಮಾಡಿಕೊಳ್ಳುತ್ತದೆ, ಅವರ ಅನುಮತಿ ಇಲ್ಲದೇ ಲುಕ್‌ಔಟ್‌ ನೊಟೀಸ್‌ಅನ್ನು ಬದಲಿಸಲು ಸಾಧ್ಯವಿಲ್ಲ” ಎಂದು ರಾಹುಲ್‌ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿಬಿಐ, ಮಲ್ಯ ವಿರುದ್ಧ ಲುಕ್‌ಔಟ್‌ ಸುತ್ತೋಲೆಯಲ್ಲಿ ಬದಲಾವಣೆ ಮಾಡಿದ್ದು ತೀರ್ಮಾನ ತೆಗೆದುಕೊಳ್ಳುವಾಗ ಮಾಡಿದ ತಪ್ಪಾಗಿದೆ ಎಂದಿದೆ. ಮಲ್ಯನ ಚಲನವಲನಗಳ ಮೇಲೆ ಕಣ್ಣಿಡಲು ಮೊದಲ ಬಾರಿಗೆ ನೋಟಿಸ್‌ ಜಾರಿ ಮಾಡಿದಾಗ ಆತ ವಿದೇಶದಲ್ಲಿದ್ದ ಎಂದು ಸಿಬಿಐ ತಿಳಿಸಿದೆ.

ಅಂದಿನ ಸಂದರ್ಭ ಆತನ ವಿರುದ್ಧ ಯಾವುದೇ ಬಂಧನದ ವಾರಂಟ್‌ ಇಲ್ಲದ ಹಾಗು ಆತನ ಸಂಸದೀಯ ಸ್ಥಾನಮಾನಗಳ ಅಡಚಣೆ ಕಾರಣ ಮಲ್ಯನನ್ನು ವಿದೇಶದಿಂದ ಆಗಮಿಸಿದ ಸಂದರ್ಭ ಬಂಧಿಸಲು ಸಾಧ್ಯವಾಗಲಿಲ್ಲ.ಅಲ್ಲದೇ ಅಂದಿನ ದಿನಗಳಲ್ಲಿ ತನಿಖೆಯು ಆರಂಭಿಕ ಹಂತದಲ್ಲಿತ್ತು. ಐಡಿಬಿಐ ಬ್ಯಾಂಕಿನಿಂದ 900 ಕೋಟಿ ರು ಸಾಲ ಪಡೆದ ಕುರಿತಂತೆ ಮಲ್ಯ ವಿರುದ್ಧ ಸಿಬಿಐ ಪ್ರಬಲ ಸಾಕ್ಷ್ಯಗಳನ್ನು ಕಲೆ ಹಾಕುತ್ತಿತ್ತು.

ಮಲ್ಯ ವಿದೇಶಕ್ಕೆ ಪಲಾಯಗೈದ ವಿಚಾರವಾಗಿ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ರಾಜೀನಾಮೆಯನ್ನು ಕಾಂಗ್ರೆಸ್‌ ಕೋರಿದೆ. ಇದಕ್ಕೆ ಪ್ರತಿಯಾಗಿ, ನ್ಯಾಷನಲ್ ಹೆರಾಲ್ಡ್‌ ಪ್ರಕರಣದಲ್ಲಿ ಭಾಗಿಯಾಗಿರುವ ರಾಹುಲ್‌ ಗಾಂಧಿ ತಮ್ಮ ಸಂಸದೀಯ ಸ್ಥಾನಮಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ಆಗ್ರಹಿಸಿದೆ.

Tags

Related Articles

Leave a Reply

Your email address will not be published. Required fields are marked *

Language
Close