Sri Ganesh Tel

ವಿನಾಯಕನ ಸನ್ನಿಧಿಯಲ್ಲಿ ‘ರಾಜಮಾರ್ತಾಂಡ’

Posted In : ಸಿನಿಮಾ ಸಮಾಚಾರ

ಶ್ರೀಮಾದೇಶ್ವರ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ಶಿವಕುಮಾರ್ ಎನ್.ಅವರು ನಿರ್ಮಾಣದ, ಚಿರಂಜೀವಿ ಸರ್ಜಾ ನಟನೆಯ ‘ರಾಜ ಮಾರ್ತಾಂಡ’ ಚಿತ್ರದ ಮುಹೂರ್ತ ಸಮಾರಂಭ ಬುಧವಾರ ಮೋದಿ ಆಸ್ಪತ್ರೆ ಬಳಿ ಇರುವ ವಿನಾಯಕ ದೇವಸ್ಥಾನದಲ್ಲಿ ನೆರವೇರಿತು. ದೇವರ ಮೇಲೆ ಚಿತ್ರಿಸಲಾದ ಮೊದಲ ಸನ್ನಿವೇಶಕ್ಕೆ ದಿವ್ಯ ಎನ್. ಹಾಗೂ ಕವಿತಾ ಕೆಂಪಯ್ಯ ಆರಂಭ ಫಲಕ ತೋರಿ ದರು. ‘ಸ್ನೇಹಿತರು’, ‘ಪೈಪೋಟಿ’, ‘ಟೈಸನ್’ ಹಾಗೂ ‘ಕ್ರ್ಯಾಕ್’ ಚಿತ್ರ ನಿರ್ದೇಶಿಸಿರುವ ಕೆ.ರಾಮ್ ನಾರಾಯಣ್, ‘ರಾಜ ಮಾರ್ತಾಂಡ’ಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ಈ ಮಾಸಾಂತ್ಯಕ್ಕೆ ಚಿತ್ರೀಕರಣ ಪ್ರಾರಂಭವಾಗಲಿದ್ದು ಬೆಂಗಳೂರು, ಮೈಸೂರು ಸೇರಿದಂತೆ ಕರ್ನಾಟಕದ ಸುಂದರ ತಾಣಗಳಲ್ಲಿ ಶೂಟಿಂಗ್ ನಡೆಯಲಿದೆ. ರಾಮ್ ನಾರಾಯಣ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ಜನ್ಯರ ಸಂಗೀತ ನಿರ್ದೇಶನವಿದ್ದು, ಜಬೇಜ್ ಕೆ. ಗಣೇಶ್ ಛಾಯಾಗ್ರಹಣ, ವೆಂಕಟೇಶ್ ಯುಡಿವಿ ಸಂಕಲನ ಹಾಗೂ ರವಿವರ್ಮ, ವಿನೋದ್ ಅವರ ಸಾಹಸ ನಿರ್ದೇಶನವಿದೆ. ಚಿತ್ರಕ್ಕೆ ನಾಯಕಿ ಸೇರಿದಂತೆ ಉಳಿದ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.

Leave a Reply

Your email address will not be published. Required fields are marked *

twenty − twenty =

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

 

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

Back To Top