About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಕಾಶ್ಮೀರ: ರಾಜ್ಯಪಾಲರ ಆಳ್ವಿಕೆಯಲ್ಲಿ ತಗ್ಗಿದ ಭಯೋತ್ಪಾದಕ ದಾಳಿಗಳು

ದೆಹಲಿ: ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರ ಆಳ್ವಿಕೆ ಬಂದ ಸಮಯದಿಂದಲೂ ಭಯೋತ್ಪಾದಕ ದಾಳಿಗಳಲ್ಲಿ ಇಳಿಕೆಯಾಗಿದ್ದು,ಇದೇ ವೇಳೆ ಕಲ್ಲುತೂರಾಟದ ಘಟನೆಗಳಲ್ಲಿ ಸಾಕಷ್ಟು ಏರಿಕೆ ಕಂಡುಬಂದಿದೆ ಎಂದು ಕೇಂದ್ರ ಗೃಹ ಸಚಿವಾಲಯ ವರದಿ ತಿಳಿಸಿದೆ.

ರಾಜ್ಯದಲ್ಲಿ ಭದ್ರತಾ ಪಡೆಗಳ ಕಡೆಯಿಂದ ರಂಝಾನ್‌ ಮಾಸದಲ್ಲಿ ಕದನ ವಿರಾಮವಿದ್ದ ಸಂದರ್ಭ ಆಗಿದ್ದಕ್ಕಿಂತಲೂ, ಜೂನ್‌ 16-ಜುಲೈ 15ರ ಅವಧಿಯಲ್ಲಿ ಸಾಕಷ್ಟು ಕಡಿಮೆ ಪ್ರಮಾಣದಲ್ಲಿ ಭಯೋತ್ಪಾದಕ ದಾಳಿಗಳಾಗಿವೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಮೇ 16ರಂದು ರಂಝಾನ್‌ ಮಾಸದ ಪ್ರಯುಕ್ತ ಭದ್ರತಾ ಪಡೆಗಳಿಂದ ಏಕಪಕ್ಷೀಯವಾಗಿ ಕದನ ವಿರಾಮ ಉಲ್ಲಂಘನೆಯನ್ನು ಘೋಷಿಸಲಾಗಿತ್ತು. ಇದೇ ಮಾಸದಲ್ಲಿ ಕಣಿವೆಯಲ್ಲಿ ಭಯೋತ್ಪಾದಕ ಘಟನೆಗಳು ಸಾಕಷ್ಟು ಹೆಚ್ಚಿದ್ದವು. ಈ ವಿಚಾರವಾಗಿ ಕೇಂದ್ರ ಸರಕಾರದ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ಮೇ 16- ಜೂನ್‌ 15ರ ಕಾಲಾವಧಿಯಲ್ಲಿ 80 ಭಯೋತ್ಪಾದಕ ದಾಳಿಗಳಾಗಿದ್ದು, ಸಾಕಷ್ಟು ಬಾರಿ ಭಯೋತ್ಪಾದಕರು ಗ್ರೆನೇಡ್‌ ದಾಳಿಗಳನ್ನೂ ಮಾಡಿದ್ದಾರೆ. ಇದೇ ಸಂದರ್ಭ 24 ಭಯೋತ್ಪಾದಕರು ಸತ್ತು, 10 ಮಂದಿ ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. 90 ಬಾರಿ ಕಲ್ಲುತೂರಾಟದ ಪ್ರಕರಣಗಳು ದಾಖಲಾಗಿವೆ.

ಜೂನ್‌16-ಜುಲೈ 15ರ ಅವಧಿಯಲ್ಲಿ, ಇದೇ ಕಣಿವೆಯಲ್ಲಿ 47 ಬಾರಿ ಭಯೋತ್ಪಾದಕ ದಾಳಿಗಳು ನಡೆದಿವೆ. ಇದೇ ವೇಳೆ 14 ಭಯೋತ್ಪಾದಕರನ್ನು ಕೊಲ್ಲಲಾಗಿದ್ದು, ಐವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಕಲ್ಲು ತೂರಾಟದ 95 ಪ್ರಕರಣಗಳು ದಾಖಲಾಗಿವೆ.

ನಂತರದ ವಿದ್ಯಾಮಾನದಲ್ಲಿ , ಮೆಹಬೂಬಾ ಮುಫ್ತಿ ನೇತೃತ್ವದ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಬಿಜೆಪಿ ಹಿಂಪಡೆದುಕೊಂಡ ಕಾರಣ ರಾಜ್ಯಪಾಲರ ಆಳ್ವಿಕೆ ಜಾರಿಯಗಿತ್ತು.

Related Articles

Leave a Reply

Your email address will not be published. Required fields are marked *

Language
Close