ಸೀರೆ ಧರಿಸಿ ಏಷ್ಯಾದ ಕ್ರೀಡೆಯಲ್ಲಿ ಪಾಲ್ಗೊಂಡ ಯುವತಿ: ವಿಡಿಯೊ ವೈರಲ್
Viral Video: ಬಿಹಾರದ ಮಹಿಳೆಯೊಬ್ಬರು ಕ್ರೀಡಾ ಉಡುಪುಗಳನ್ನು ಧರಿಸದೆ, ಸೀರೆ ಧರಿಸಿ ಏಷ್ಯಾದ ಕ್ರೀಡಾತ್ಸೋವದಲ್ಲಿ ಪಾಲ್ಗೊಂಡ ಘಟನೆ ನಡೆದಿದೆ. ಸಾಮಾನ್ಯವಾಗಿ ಕ್ರೀಡಾ ಸ್ಪರ್ಧಿಗಳು ಟ್ರ್ಯಾಕ್ ಪ್ಯಾಂಟ್ ಮತ್ತು ಟೀ ಶರ್ಟ್ ಧರಿಸಿ ಪಾಲ್ಗೊಳ್ಳುತ್ತಾರೆ. ಆದರೆ ಏಷ್ಯಾದ ಅತ್ಯಂತ ಕಠಿಣ ಅಡೆತಡೆಗಳ ಓಟವನ್ನು ನಿಶಾ ಎಂಬ ಯುವತಿ ಸಾಂಪ್ರದಾಯಿಕ ಸೀರೆಯನ್ನು ಉಟ್ಟುಕೊಂಡೇ ಯಶಸ್ವಿ ಗೊಳಿಸಿ ದ್ದಾರೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.