ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Road Rage Bangaluru: ಬೈಕ್‌ ಸವಾರನಿಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದ ಕ್ಯಾಬ್‌ ಚಾಲಕ; ವಿಡಿಯೋ ವೈರಲ್‌

ಕ್ಯಾಬ್ ಚಾಲಕನೊಬ್ಬ ಉದ್ದೇಶಪೂರ್ವಕವಾಗಿ ತನ್ನ ಕಾರನ್ನು ಬೈಕ್‌ಗೆ ಡಿಕ್ಕಿ ಹೊಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶುಕ್ರವಾರ ಮಧ್ಯಾಹ್ನ ಕೆ.ಆರ್. ಪುರಂ ಸೇತುವೆಯಲ್ಲಿ ಈ ಘಟನೆ ನಡೆದಿದ್ದು, ಕಾರು ಚಾಲಕನ ಕೃತ್ಯ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.

ಬೈಕ್‌ ಸವಾರನಿಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದ ಕ್ಯಾಬ್‌ ಚಾಲಕ!

-

Vishakha Bhat Vishakha Bhat Nov 2, 2025 10:43 AM

ಬೆಂಗಳೂರು: ಕ್ಯಾಬ್ ಚಾಲಕನೊಬ್ಬ ಉದ್ದೇಶಪೂರ್ವಕವಾಗಿ ತನ್ನ ಕಾರನ್ನು ಬೈಕ್‌ಗೆ ಡಿಕ್ಕಿ ಹೊಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. (Road Rage Bangaluru) ಶುಕ್ರವಾರ ಮಧ್ಯಾಹ್ನ ಕೆ.ಆರ್. ಪುರಂ ಸೇತುವೆಯಲ್ಲಿ ಈ ಘಟನೆ ನಡೆದಿದ್ದು, ಕಾರು ಚಾಲಕನ ಕೃತ್ಯ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಇಬ್ಬರು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬೈಕ್ ಆಕಸ್ಮಿಕವಾಗಿ ಕ್ಯಾಬ್‌ಗೆ ಡಿಕ್ಕಿ ಹೊಡೆದಾಗ ಈ ಘಟನೆ ಸಂಭವಿಸಿದೆ. ಕ್ಯಾಬ್ ಚಾಲಕ ಮತ್ತು ಬೈಕ್‌ನಲ್ಲಿದ್ದ ಇಬ್ಬರು ವ್ಯಕ್ತಿಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.

ಕ್ಯಾಬ್ ಚಾಲಕ ಉದ್ದೇಶಪೂರ್ವಕವಾಗಿ ತನ್ನ ಕಾರನ್ನು ಬೈಕ್‌ಗೆ ಡಿಕ್ಕಿ ಹೊಡೆದನು, ಇದರಿಂದಾಗಿ ಬೈಕ್‌ ಸ್ಕಿಡ್‌ ಆಗಿ ಕೆಳಗಿ ಬಿದ್ದಿದ್ದಾರೆ. ಈ ದೃಶ್ಯಾವಳಿಯಲ್ಲಿ ಬೈಕ್ ಸವಾರನು ಫ್ಲೈಓವರ್ ಮೇಲೆ ವಾಣಿಜ್ಯ ಪರವಾನಗಿ ಫಲಕ ಹೊಂದಿರುವ ಬಿಳಿ ಸೆಡಾನ್ ಕಾರಿನ ಪಕ್ಕದಲ್ಲಿ ನಿಂತು ಚಾಲಕನಿಗೆ ಸನ್ನೆ ಮಾಡುತ್ತಿರುವುದನ್ನು ತೋರಿಸಲಾಗಿದೆ. ಕೆಲವು ಸೆಕೆಂಡುಗಳ ನಂತರ, ಸೆಡಾನ್ ಇದ್ದಕ್ಕಿದ್ದಂತೆ ಬೈಕ್ ಕಡೆಗೆ ತಿರುಗಿ, ಬದಿಯಿಂದ ಡಿಕ್ಕಿ ಹೊಡೆದಿದೆ. ಈ ಡಿಕ್ಕಿಯ ಪರಿಣಾಮವಾಗಿ ದ್ವಿಚಕ್ರ ವಾಹನವು ತಿರುಗುತ್ತದೆ ಮತ್ತು ಹಿಂಬದಿ ಸವಾರನು ರಸ್ತೆಗೆ ಬೀಳುತ್ತಿರುವುದು ಕಂಡುಬರುತ್ತದೆ.

ಡಿಕ್ಕಿಯ ನಂತರ, ಕ್ಯಾಬ್ ಚಾಲಕ ತನ್ನ ಕಾರಿನಿಂದ ಇಳಿದು, ಬೈಕನಲ್ಲಿದ್ದವರ ಮೇಲೆ ಕೂಗಾಡಿದ್ದಾನೆ. ಬೈಕ್ ಸವಾರ ತನ್ನ ಕೀಲಿಯನ್ನು ಪಡೆಯಲು ಪ್ರಯತ್ನಿಸುತ್ತಿರುವುದು ದೃಶ್ಯದಲ್ಲಿ ಕಂಡು ಬಂದಿದೆ. ಬಳಿಕ ಕೀಲಿಯನ್ನು ಕಸಿದುಕೊಂಡಿದ್ದಾನೆ. ವೈರಲ್‌ ವಿಡಿಯೋ ಕುರಿತಂತೆ ಪ್ರತಿಕ್ರಿಯೆ ನೀಡಿದ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಯಾವುದೇ ಔಪಚಾರಿಕ ದೂರು ದಾಖಲಾಗಿಲ್ಲ. ಆದರೆ, ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ವೈರಲ್‌ ಆದ ವಿಡಿಯೋ



ಈ ಸುದ್ದಿಯನ್ನೂ ಓದಿ: Actor Darshan: ಸೀಕ್ರೆಟ್‌ ಆಗಿ ಮದುವೆ ಆಗಿದ್ರಾ ನಟ ದರ್ಶನ್‌; ಪವಿತ್ರಾ ಗೌಡ ಜತೆಗಿನ ಹಳೆಯ ಫೋಟೊಗಳು ವೈರಲ್‌!

ಪ್ರತ್ಯೇಕ ಘಟನೆಯಲ್ಲಿ ಬೈಕ್​ ಟಚ್​ ಆಗಿದೆ ಎಂಬ ಕಾರಣಕ್ಕೆ ಕಚೇರಿಗೆ ತೆರಳುತ್ತಿದ್ದ ಸ್ವಾಫ್ಟ್​ವೇರ್​ ಉದ್ಯೋಗಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿ ಮೂರು ದಿನಗಳ ಹಿಂದೆ ನಡೆದಿದೆ. ಸ್ವಾಫ್ಟ್​ವೇರ್​ ಉದ್ಯೋಗಿ ಪ್ರತೀಕ್​ ಎಂಬಾತ ನಿನ್ನೆ ಕಚೇರಿಗೆ ತೆರಳುತ್ತಿದ್ದ ವೇಳೆ ಇವರ ಬೈಕ್​ ಮತ್ತೊಂದು ಬೈಕ್​ಗೆ ಟಚ್​ ಆಗಿದೆ. ಇದೇ ಕಾರಣಕ್ಕೆ ಪ್ರತೀಕ್​ ಬೈಕ್​ ಕೀ ಕಿತ್ತುಕೊಳ್ಳಲಾಗಿದ್ದು, ತಲೆಗೆ ಹೊಡೆದು ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಸದ್ಯ ಪೊಲೀಸರಿಗೆ ದೂರು ನೀಡಲಾಗಿದ್ದು, ತನಿಖೆ ನಡೆಯುತ್ತಿದೆ.