ತನ್ನ ಮರಿಯಂತೆ ಬೀದಿ ನಾಯಿಮರಿಯನ್ನು ಎತ್ತಿ ಮುದ್ದಾಡಿದ ಕೋತಿ; ಹೃದಯಸ್ಪರ್ಶಿ ವಿಡಿಯೋ ವೈರಲ್
Viral News: ಮಂಗವೊಂದು ನಾಯಿಮರಿಯನ್ನು ಮರದ ಮೇಲೆ ಹೊತ್ತುಕೊಂಡು ಕಾಳಜಿಯಿಂದ ನೋಡಿಕೊಳ್ಳುತ್ತಿರುವ ದೃಶವೊಂದು ವೈರಲ್ ಆಗಿದೆ. ರಸ್ತೆಯ ಬದಿಯಲ್ಲಿದ್ದ ಸಣ್ಣ ಬೀದಿನಾಯಿ ಮರಿಯನ್ನು ಎತ್ತಿ ಕೊಂಡ ಮಂಗವು ಸರಸರನೆ ಸುಮಾರು 20 ಅಡಿ ಎತ್ತರದ ಮರವನ್ನು ಹತ್ತಿ ಕೂಳಿತಿದೆ.. ಅದರಲ್ಲೂ ನಾಯಿ ಮರಿಯನ್ನು ಮಂಗ ಈ ರೀತಿ ಮುದ್ದಾಡುತ್ತಿರುವುದು ಕಂಡು ನೆಟ್ಟಿಗರೇ ಆಚ್ಚರಿ ವ್ಯಕ್ತ ಪಡಿಸಿದ್ದಾರೆ
ಇಂಟರ್ ನೆಟ್ ಚಿತ್ರ -
ಮಂಡಿ,ಜೂ.9: ಪ್ರಾಣಿ ಪ್ರಿಯರ ಮೊಗದಲ್ಲಿ ಮಂದಹಾಸ ಮೂಡುವಂತ ಘಟನೆಯೊಂದು ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ರೇವಾಲ್ಸರ್ ಪ್ರದೇಶದಲ್ಲಿ ನಡೆದಿದೆ. ಮಂಗವೊಂದು ನಾಯಿಮರಿಯನ್ನು ಮರದ ಮೇಲೆ ಹೊತ್ತುಕೊಂಡು ಕಾಳಜಿಯಿಂದ ನೋಡಿಕೊಳ್ಳುತ್ತಿರುವ ದೃಶವೊಂದು ವೈರಲ್ (Viral News) ಆಗಿದೆ. ರಸ್ತೆಯ ಬದಿಯಲ್ಲಿದ್ದ ಸಣ್ಣ ಬೀದಿನಾಯಿ ಮರಿಯನ್ನು ಎತ್ತಿ ಕೊಂಡ ಮಂಗವು ಸರಸರನೆ ಸುಮಾರು 20 ಅಡಿ ಎತ್ತರದ ಮರವನ್ನು ಹತ್ತಿ ಕೂಳಿತಿದೆ. ಅದರಲ್ಲೂ ನಾಯಿ ಮರಿಯನ್ನು ಮಂಗ ಈ ರೀತಿ ಮುದ್ದಾಡುತ್ತಿರುವುದು ಕಂಡು ನೆಟ್ಟಿಗರೇ ಆಚ್ಚರಿ ವ್ಯಕ್ತ ಪಡಿಸಿದ್ದಾರೆ
ಮಂಗವೊಂದು ನಾಯಿಮರಿಯನ್ನು ಮರದ ಮೇಲೆ ಕೂರಿಸಿಕೊಂಡು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಿದೆ. ಮಂಗವು ರಸ್ತೆಬದಿಯಿಂದ ನಾಯಿಮರಿಯನ್ನು ಎತ್ತಿಕೊಂಡು ಸುಮಾರು 20 ಅಡಿ ಎತ್ತರದ ಮರಕ್ಕೆ ಹತ್ತಿತು. ಅವರಲ್ಲಿ ಹಲವರು ಮರದ ಕೆಳಗೆ ನಿಂತು ಪ್ರಾಣಿ ನಾಯಿಮರಿ ಯನ್ನು ಎತ್ತರದಿಂದ ಬೀಳಿಸಬಹುದು ಎಂಬ ಭಯದಿಂದ ಇದ್ದರು. ಆದರೆ ಕೋತಿಯೂ ತನ್ನದೆ ಮಗುವಿನ ರೀತಿಯಲ್ಲಿ ಅದನ್ನು ನೋಡಿಕೊಂಡಿದೆ.
ವಿಡಿಯೋ ನೋಡಿ:
बंदरों का आतंक इससे ज़्यादा क्या हो हो सकता है कि वो एक कुत्ते के पिल्ले को लेकर पेड़ पर जा चढ़े। यह घटना हिमाचल के रिवालसर की है। सहमा सा पिल्ला बंदर की गोद में दुबका है कि कहीं पेड़ से नीचे फेंक दे। pic.twitter.com/CptEiUwp9O
— thehillnews.in (@thehill_news) June 8, 2026
ಈ ಅಪರೂಪದ ದೃಶ್ಯವು ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಪ್ರಾಣಿ ಪ್ರಿಯರು ಇಂತಹ ಮುದ್ದಾದ ದೃಶ್ಯ ಎಲ್ಲಿಯೂ ನೋಡಿರಲಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ನಾಯಿಮರಿಯನ್ನು ತನ್ನ ಹತ್ತಿರ ಹಿಡಿದಿಟ್ಟುಕೊಂಡು ಕೋತಿ ಸುಮಾರು 10 ರಿಂದ 15 ನಿಮಿಷಗಳ ಕಾಲ ಮರದ ಮೇಲೆ ಕುಳಿತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮರದ ಮೇಲೆ ಸ್ವಲ್ಪ ಸಮಯ ಕಳೆದ ನಂತರ, ಕೆಳಗೆ ಇಳಿದು ನಾಯಿಮರಿಯನ್ನು ಸುರಕ್ಷಿತವಾಗಿ ನೆಲದ ಮೇಲೆ ಬಿಟ್ಟಿದೆ. ನಾಯಿ ಮರಿಗೆ ಯಾವುದೇ ರೀತಿಯಲ್ಲಿ ಹಾನಿಯಾಗಿರಲಿಲ್ಲ.
Viral Video: ಛೇ ಎಂತಾ ಅಮಾನವೀಯ ಕೃತ್ಯ: ಭಾರಿ ತೂಕದ ಪಾರ್ಸೆಲ್ ಹೊತ್ತು ಹೈರಾಣಾದ ಡೆಲಿವರಿ ಬಾಯ್!
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕ ಬಳಕೆದಾರರು ಈ ದೃಶ್ಯವನ್ನು ಅಪರೂಪ ಎಂದು ಬಣ್ಣಿಸಿದ್ದಾರೆ. ಈ ಕೋತಿ ಹೆಣ್ಣಾಗಿರಬಹುದು,ಹಾಗಾಗಿ ಮಾತೃ ಪ್ರೇಮ ಮೆರೆದಿದೆ ಎಂದು ಎಂದು ಬರೆದಿದ್ದಾರೆ. ಆದರೆ, ಇದೇ ವೇಳೆ ಈ ಘಟನೆಯು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು ಕೋತಿಗಳು ಇದೇ ರೀತಿ ಸಣ್ಣ ಮಕ್ಕಳನ್ನೂ ಎತ್ತಿಕೊಂಡು ಹೋಗಬಹುದೇ? ಎಂದು ಆತಂಕ ವ್ಯಕ್ತಪಡಿಸಿದರು. ಆದರೆ ಪರಿಸರವಾದಿ ಒಬ್ಬರು ಇಂತಹ ಘಟನೆಗಳು ಪ್ರಕೃತಿಯಲ್ಲಿ ಹೊಸದೇನಲ್ಲ. ಮಂಗಗಳು ಕೆಲವೊಮ್ಮೆ ಇತರ ಪ್ರಾಣಿಗಳ ಮೇಲೂ ಕಾಳಜಿ ವಹಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.