Viral News: ಮಾಂಸಾಹಾರ ಬ್ಯಾನ್ ಆಗಿರುವ ಪ್ರಪಂಚದ ಏಕೈಕ ನಗರ ಇದೇ ನೋಡಿ; ಇದು ಇರೋದು ಭಾರತದಲ್ಲಿ!
Non-Vegetarian Food: ಈ ಒಂದು ಜಿಲ್ಲೆಯಲ್ಲಿ ಮಾಂಸಾಹಾರ ಆಹಾರವನ್ನೇ ನಿಷೇಧಿಸಿದ ವಿಶ್ವದ ಮೊದಲ ನಗರವಾಗಿ ಪ್ರಸಿದ್ಧಿ ಪಡೆದಿದೆ.. ಗುಜರಾತ್‌ನ ಭಾವನಗರ ಜಿಲ್ಲೆಯಲ್ಲಿರುವ ಒಂದು ಸಣ್ಣ ನಗರವು ಮಾಂಸಾಹಾರವನ್ನು ನಿಷೇಧ ಮಾಡಿದ ವಿಶ್ವದ ಮೊದಲ ನಗರವಾಗಿ ಪ್ರಸಿದ್ಧಿ ಪಡೆದಿದೆ. ಏಕೆಂದರೆ, ಈ ನಗರದಲ್ಲಿ ಮಾಂಸಾಹಾರವನ್ನು ಮಾರಾಟ ಮಾಡುವುದು, ಖರೀದಿಸುವುದು ಮತ್ತು ಸೇವಿಸುವುದನ್ನು ಕಾನೂನಿನ ಮೂಲಕ ಸಂಪೂರ್ಣವಾಗಿ ನಿಷೇಧ ಮಾಡಲಾಗಿದ್ದು ಯಾರು ಕೂಡ ಸೇವನೆ ಮಾಡು ವಂತಿಲ್ಲ. ಹಾಗಿದ್ರೆ ಇದಕ್ಕೆ ಕಾರಣವೇನು? ಯಾಕಾಗಿ ಈ ನಿಯಮವನ್ನು ಇಲ್ಲಿ ಜಾರಿ ಮಾಡಿದ್ದಾರೆ?
-
ಗುಜರಾತ್: ಪ್ರತಿಯೊಬ್ಬರ ಆಹಾರ, ರುಚಿ ಮತ್ತು ಅಭಿರುಚಿಗಳು ವಿಭಿನ್ನವಾಗಿ ಇರುತ್ತವೆ. ಅದರಲ್ಲೂ ಆಹಾರ ಅಂತ ಬಂದಾಗ ಸಸ್ಯಹಾರಿ ಹಾಗೂ ಮಾಂಸಹಾರಿ ಆಹಾರ ಪದಾರ್ಥಗಳಿವೆ. ಇದರಲ್ಲಿ ಕೆಲವರು ಶುದ್ಧ ಹಸಿರು ತರಕಾರಿಗಳಿಗೆ ಆದ್ಯತೆ ನೀಡಿದ್ರೆ ಇನ್ನು ಕೆಲವರು ಊಟಕ್ಕೆ ಮಾಂಸಾಹಾರವೇ ಬೇಕು ಅನ್ನುವವರು ಇದ್ದಾರೆ. ಆದರೆ ಈ ಒಂದು ಜಿಲ್ಲೆಯಲ್ಲಿ ಮಾಂಸಾಹಾರ ಆಹಾರವನ್ನೇ ನಿಷೇಧಿಸಿದ ವಿಶ್ವದ ಮೊದಲ ನಗರವಾಗಿ ಪ್ರಸಿದ್ಧಿ ಪಡೆದಿದೆ. ಭಾರತದ ಗುಜರಾತ್ ರಾಜ್ಯದ ಭಾವನಗರ ಜಿಲ್ಲೆಯಲ್ಲಿರುವ ಪಾಲಿತಾನ ನಗರವು ಜಗತ್ತಿನ ಇತಿಹಾಸದಲ್ಲಿ ಸಸ್ಯಹಾರ ಮಾತ್ರ ಸೇವನೆ ಮಾಡುವ ವಿಶಿಷ್ಟ ಸ್ಥಾನ ಪಡೆದಿದೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗಿದ್ದು, ಈ ಬಗ್ಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗುಜರಾತ್‌ನ ಭಾವನಗರ ಜಿಲ್ಲೆಯಲ್ಲಿರುವ ಒಂದು ಸಣ್ಣ ನಗರವು ಮಾಂಸಾಹಾರವನ್ನು ನಿಷೇಧ ಮಾಡಿದ ವಿಶ್ವದ ಮೊದಲ ನಗರವಾಗಿ ಪ್ರಸಿದ್ಧಿ ಪಡೆದಿದೆ. ಏಕೆಂದರೆ, ಈ ನಗರದಲ್ಲಿ ಮಾಂಸಾ ಹಾರವನ್ನು ಮಾರಾಟ ಮಾಡುವುದು, ಖರೀದಿಸುವುದು ಮತ್ತು ಸೇವಿಸುವುದನ್ನು ಕಾನೂನಿನ ಮೂಲಕ ಸಂಪೂರ್ಣವಾಗಿ ನಿಷೇಧ ಮಾಡಲಾಗಿದ್ದು ಯಾರು ಕೂಡ ಸೇವನೆ ಮಾಡುವಂತಿಲ್ಲ. ಹಾಗಿದ್ರೆ ಇದಕ್ಕೆ ಕಾರಣವೇನು? ಯಾಕಾಗಿ ಈ ನಿಯಮವನ್ನು ಇಲ್ಲಿ ಜಾರಿ ಮಾಡಿದ್ದಾರೆ?
ಪಾಲಿತಾನ ನಗರವು ಜೈನ ಧರ್ಮದ ಪ್ರಮುಖ ಮತ್ತು ಅತಿ ಪವಿತ್ರ ತೀರ್ಥಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಹಾಗಾಗಿ ಈ ನಗರ 'ದೇವಾಲಯಗಳ ನಗರ' ಎಂದು ಕೂಡ ಪ್ರಸಿದ್ದಿ ಪಡೆದಿದೆ. ಇಲ್ಲಿ 900 ವರ್ಷಗಳ ಇತಿಹಾಸವಿರುವ 800ಕ್ಕೂ ಹೆಚ್ಚು ಸೂಕ್ಷ್ಮ ಕೆತ್ತನೆಯ ಜೈನ ದೇವಾಲಯಗಳಿವೆ. ಹಾಗಾಗಿ ಜೈನ ಸಮುದಾಯದ ಧಾರ್ಮಿಕ ತತ್ವಗಳನ್ನು ಗೌರವಿಸುವ ಸಲುವಾಗಿ ಇಲ್ಲಿ ಮಾಂಸಹಾರ ಸೇವನೆ ನಿಷೇಧ ಮಾಡಲಾಗಿದೆ.
ಇನ್ನು ಈ ಕಠಿಣ ನಿರ್ಧಾರದ ಹಿಂದಿನ ಪ್ರಮುಖ ಕಾರಣವೆಂದರೆ ಜೈನ ಧರ್ಮದ ಅಹಿಂಸಾ ತತ್ವ. ಪ್ರಾಣಿಗಳಿಗೆ ಹಿಂಸೆ ನೀಡುವುದನ್ನು ವಿರೋಧಿಸುವ ನಿಟ್ಟಿನಲ್ಲಿ ಇಡೀ ನಗರವು ಸಸ್ಯಾಹಾರವನ್ನು ಕಡ್ಡಾಯವಾಗಿ ಅನುಸರಿಸುತ್ತಿದೆ. ಈ ನಿಷೇಧವು 2014ರಲ್ಲಿ ಜಾರಿಗೆ ಬಂದಿದ್ದು ಮಾಂಸ ಮಾರಾಟ ವನ್ನು ನಿಲ್ಲಿಸುವಂತೆ ಆಗ್ರಹಿಸಿ ಸುಮಾರು 200 ಜೈನ ಮುನಿಗಳು ಉಪವಾಸ ಸತ್ಯಾಗ್ರಹ ನಡೆಸಿದ ನಂತರ, ಸರ್ಕಾರವು ಮಾಂಸ, ಮೀನು ಮತ್ತು ಮೊಟ್ಟೆಗಳ ಮೇಲೆ ಸಂಪೂರ್ಣ ನಿಷೇಧವನ್ನು ಹೇರಿತು.
ಮಾಂಸಾಹಾರ ಮಾತ್ರವಲ್ಲದೆ, ಇಲ್ಲಿನ ಅನೇಕ ಜೈನರು ನೆಲದಡಿಯಲ್ಲಿ ಬೆಳೆಯುವ ಈರುಳ್ಳಿ, ಬೆಳ್ಳುಳ್ಳಿ ಮತ್ತು ಆಲೂಗಡ್ಡೆಯಂತಹ ಬೇರು ತರಕಾರಿಗಳನ್ನು ಸಹ ಸೇವಿಸುವುದರಿಂದ ದೂರ ವಿರುತ್ತಾರೆ. ಈ ನಗರಕ್ಕೆ ಭೇಟಿ ನೀಡುವ ಪ್ರವಾಸಿಗರು ಢೋಕ್ಲಾ, ಖಂಡವಿ, ಕಧಿ, ಗಾಥಿಯಾ ಮತ್ತು ದಾಲ್ ಢೋಕ್ಳಿಯಂತಹ ಗುಜರಾತಿ ಸಸ್ಯಾಹಾರಿ ಖಾದ್ಯಗಳನ್ನು ಸವಿಯಬಹುದು. ಜೋಳದ ರೊಟ್ಟಿ ಮತ್ತು ಟೊಮ್ಯಾಟೊ ಗ್ರೇವಿಯಾದ 'ಸೇವ್ ಟಮೆಟಾ ನು ಶಾಕ್' ಇಲ್ಲಿನ ಮತ್ತೊಂದು ಜನಪ್ರಿಯ ಭಕ್ಷ್ಯವಾಗಿದೆ. ಸದ್ಯ ಈ ನಗರದಲ್ಲಿ ಮಾಂಸಹಾರ ಆಹಾರವನ್ನೇ ನಿಷೇಧ ಮಾಡಲಾಗಿದೆ.