ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪೌರ ಕಾರ್ಮಿಕರಿಗೆ ಚಹಾ, ಬಿಸ್ಕೆಟ್ ಕೊಟ್ಟು ಎಲ್ಲರ ಹೃದಯ ಗೆದ್ದ ಬೆಂಗಳೂರಿನ ಮಹಿಳೆ

ಮಾಡುವ ಸಣ್ಣದೊಂದು ಸಹಾಯ, ತೋರುವ ಕೊಂಚ ಪ್ರೀತಿ, ಕರುಣೆ ಕೂಡ ಕೆಲವೊಬ್ಬರ ಪಾಲಿಗೆ ದೇವರಾಗಿ ಬಂದರೇನೋ ಎಂದೆನಿಸುವಂತೆ ಮಾಡುತ್ತದೆ. ನಿಸ್ವಾರ್ಥವಾಗಿ ಮಾಡುವ ಇಂತಹ ಕಾರ್ಯಗಳೇ ಮಾನವೀಯತೆಯ ಬಹುದೊಡ್ಡ ಉದಾಹರಣೆಗಳಾಗಿ ಕಾಣುತ್ತವೆ. ಹೀಗೆ ಬೆಂಗಳೂರಿನ ಮಹಿಳೆಯೊಬ್ಬರು ಮಾಡಿದ ಸಣ್ಣ ಕಾರ್ಯ ಈಗ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಆನ್‌ಲೈನ್‌ನಲ್ಲಿ ಎಲ್ಲರ ಹೃದಯ ಗೆದ್ದ ಬೆಂಗಳೂರಿನ ಮಹಿಳೆ

ಸಂಗ್ರಹ ಚಿತ್ರ -

ಬೆಂಗಳೂರು: ನಿತ್ಯವೂ ಸ್ವಚ್ಛತಾ ಕೆಲಸ ಮಾಡುವವರು (municipal workers) ತಮ್ಮ ಪಾಡಿಗೆ ಬಂದು ಕೆಲಸ ಮಾಡಿ ಹೋಗುತ್ತಾರೆ. ಯಾರೂ ಕೂಡ ಅವರನ್ನು ಗಮನಿಸುವುದಿಲ್ಲ. ಅವರಲ್ಲಿ ಮಾತನಾಡಲು ಕೂಡ ಹೋಗುವುದಿಲ್ಲ. ಅವರು ಬದುಕಿನ ಅನಿವಾರ್ಯತೆಗಾಗಿ ಆ ಕೆಲಸವನ್ನು ಮಾಡುತ್ತಿದ್ದಾರೆ ಎನ್ನುವ ತಾತ್ಸಾರ ಎಲ್ಲರಲ್ಲೂ ಇದ್ದರೆ ಈ ಮಹಿಳೆ (Bengaluru Woman) ಮಾತ್ರ ಅವರ ಯೋಗ ಕ್ಷೇಮ ವಿಚಾರಿಸಿ, ಅವರಿಗಾಗಿ ಒಂದು ಕಪ್ ಚಹಾ ಜೊತೆಗೆ ಬಿಸ್ಕೆಟ್ ನೀಡಿ ಅವರ ತನು ಮನದ ದಣಿವನ್ನು ನೀಗಿಸಿ ಮತ್ತಷ್ಟು ಕೆಲಸ ಮಾಡಲು ಉತ್ಸಾಹ ತುಂಬುತ್ತಿದ್ದಾರೆ. ಇದು ಈಗ ಸಾಮಾಜಿಕ ಮಾಧ್ಯಮದಲ್ಲಿ ಬಹುದೊಡ್ಡ ಸುದ್ದಿಯಾಗಿ ವೈರಲ್ (Viral video) ಆಗಿದೆ.

ದಿನ ಬೆಳಗಾದರೆ ಈ ಪೌರ ಕಾರ್ಮಿಕರು ಯಾವಾಗ ಬರುತ್ತಾರೆ, ಯಾವಾಗ ಮನೆಯ ಕಸ ತೆಗೆದುಕೊಂಡು ಹೋಗುತ್ತಾರೆ ಎಂದು ಕಾಯುವವರೇ ಹೆಚ್ಚು. ಆದರೆ ಮಹಿಳೆ ಮಾತ್ರ ಅವರಿಗೆ ಕಸದ ಬದಲಿಗೆ ಬಿಸಿಬಿಸಿ ಚಹಾ ಮಾಡಿಟ್ಟು, ಕೆಲವು ಬಿಸ್ಕೆಟ್ ಗಳನ್ನು ತಟ್ಟೆಯಲ್ಲಿಟ್ಟು ಕಾಯುತ್ತಾರೆ. ಇವರ ಈ ಕಾರ್ಯ ಈಗ ಸಾಮಾಜಿಕ ಮಾಧ್ಯಮದ ಮೂಲಕ ಎಲ್ಲರ ಗಮನ ಸೆಳೆದಿದೆ.

ಹಗಲಿನಲ್ಲೇ ಮಹಿಳೆಯರಿದ್ದ ಆಟೋ ಬೆನ್ನಟ್ಟಿದ ಬೆತ್ತಲೆ ಕಾಮುಕರು! ಸಂತ್ರಸ್ತೆ ಹೇಳಿದ್ದೇನು?

ನಾವು ಮಾಡುವ ಸಣ್ಣದೊಂದು ಸಹಾಯ, ತೋರುವ ಕೊಂಚ ಪ್ರೀತಿ, ಕರುಣೆ ಕೂಡ ಕೆಲವೊಬ್ಬರ ಪಾಲಿಗೆ ನಮ್ಮನ್ನು ದೇವರಾಗಿ ಮಾಡುತ್ತದೆ. ನಿಸ್ವಾರ್ಥವಾಗಿ ಮಾಡುವ ಇಂತಹ ಕಾರ್ಯಗಳೇ ಮಾನವೀಯತೆಯ ಬಹುದೊಡ್ಡ ಉದಾಹರಣೆಗಳಾಗಿ ಬಿಡುತ್ತವೆ. ಹೀಗೆ ಬೆಂಗಳೂರಿನ ಮಹಿಳೆಯೊಬ್ಬರು ಮಾಡಿದ ಸಣ್ಣ ಕಾರ್ಯ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರ ಹೃದಯವನ್ನು ಗೆದ್ದಿದೆ.

ಹಲವಾರು ವರ್ಷಗಳಿಂದ ಬೆಂಗಳೂರಿನ ಮಹಿಳೆಯೊಬ್ಬರು ಮಾಡುವ ಈ ಕೆಲಸವನ್ನು ಇನ್‌ಸ್ಟಾಗ್ರಾಮ್ ಬಳಕೆದಾರ ಜಗದೀಶ್ ನಡನಳ್ಳಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಪ್ರಾಣಿ, ಪಕ್ಷಿಗಳು ಸೇರಿದಂತೆ ಎಲ್ಲರಿಗೂ ದಯೆ, ಪ್ರೀತಿಯನ್ನು ತೋರುವ ಈ ಮಹಿಳೆ ಮಾಡುತ್ತಿರುವುದು ಸಣ್ಣ ಕೆಲಸವಲ್ಲ. ಮಾನವೀಯತೆಯ ಬಹುದೊಡ್ಡ ಉದಾಹರಣೆಯಾಗಿದೆ.

ಈ ಮಹಿಳೆ ಬೆಳಗ್ಗೆ ಮನೆಯಿಂದ ಹೊರಗೆ ಬಂದು ತಮ್ಮ ದೈನಂದಿನ ಕರ್ತವ್ಯಗಳನ್ನು ನಿರ್ವಹಿಸುತ್ತಿರುವ ಪುರಸಭೆಯ ಕಾರ್ಮಿಕರ ಬಳಿ ಹೋಗಿ ಅವರಿಗೆ ಚಹಾ ಮತ್ತು ಬಿಸ್ಕೆಟ್ ಗಳನ್ನು ನೀಡುತ್ತಾರೆ. ಈ ಸಂದರ್ಭದಲ್ಲಿ ಸಮವಸ್ತ್ರ ಧರಿಸಿದ ಪೌರ ಕಾರ್ಮಿಕರು, ಮಹಿಳೆಯೊಂದಿಗೆ ಪ್ರೀತಿಯಿಂದ ಮಾತನಾಡುತ್ತಾರೆ. ಅವರು ನೀಡುವ ಉಪಾಹಾರವನ್ನು ಸ್ವೀಕರಿಸುತ್ತಾರೆ. ಇದು ಮಹಿಳೆಯ ನಿತ್ಯದ ದಿನಚರಿಯ ಭಾಗವಾಗಿದೆ ಎಂದು ಜಗದೀಶ್ ತಿಳಿಸಿದ್ದಾರೆ.

ಸಾಮಾನ್ಯವಾಗಿ ಬಡವರು, ವೃದ್ಧ ನಾಗರಿಕರು, ಆಟೋ ಚಾಲಕರು ಮತ್ತು ರಸ್ತೆಬದಿಯ ಮಾರಾಟಗಾರರಿಗೆ ಸಹಾಯ ಮಾಡುವವರ ಬಗ್ಗೆ ಕೇಳಿದ್ದೇವೆ. ಆದರೆ ಇವರು ಮಾತ್ರ ಭಿನ್ನ. ಯಾವುದೇ ಪ್ರಚಾರ ಅಥವಾ ಹಣ ಗಳಿಸುವ ಉದ್ದೇಶವಿಲ್ಲದೆ ಅನೇಕ ವರ್ಷಗಳಿಂದ ಈ ಮಹಿಳೆ ಸದ್ದಿಲ್ಲದೆ ಇತರರಿಗೆ ಸಹಾಯ ಮಾಡುತ್ತಿದ್ದಾರೆ. ಅವರ ಈ ಕೆಲಸ ಕೇವಲ ಆತ್ಮತೃಪ್ತಿಗಾಗಿ ಎನ್ನುತ್ತಾರೆ ಎಂದಿದ್ದಾರೆ ಜಗದೀಶ್.

ಈ ಪ್ರದೇಶಕ್ಕೆ ಬರುವ ನೈರ್ಮಲ್ಯ ಕಾರ್ಮಿಕರಿಗೆ ಅವರು ನಿಯಮಿತವಾಗಿ ಕಾಫಿ, ಬ್ರೆಡ್, ಬಿಸ್ಕತ್ತು ಮತ್ತು ಬಾಳೆಹಣ್ಣುಗಳನ್ನು ನೀಡುತ್ತಾರೆ. ವಿಶೇಷ ಸಂದರ್ಭಗಳಲ್ಲಿ ಬಗೆಬಗೆಯ ಖಾದ್ಯಗಳು, ಉಪಯುಕ್ತ ವಸ್ತುಗಳನ್ನು ಕೂಡ ನೀಡುತ್ತಾರೆ. ಇನ್ನು ಬೀದಿ ನಾಯಿಗಳು ಮತ್ತು ಬೆಕ್ಕುಗಳಿಗಾಗಿ ಹಾಲು, ಅನ್ನವನ್ನು ಹಾಕುತ್ತಾರೆ. ಮನೆಯ ಟೆರೇಸ್‌ ಮೇಲೆ ಪಕ್ಷಿಗಳಿಗೆ ಧಾನ್ಯಗಳು, ನೀರನ್ನು ಕೂಡ ಇಡುತ್ತಾರೆ. ಇದು ಅವರ ನಿತ್ಯದ ಕಾಯಕವಾಗಿದೆ.

ಹಸು, ಕರುಗಳೊಂದಿಗೆ ಬರುವ ಜನರನ್ನು ಕೂಡ ಆತ್ಮೀಯವಾಗಿ ಮಾತನಾಡಿಸುವ ಮಹಿಳೆ ತರಕಾರಿ, ಹೂವು ಮತ್ತು ಹಣ್ಣು ಮಾರಾಟಗಾರರನ್ನು ಕೂಡ ತಮ್ಮ ಕುಟುಂಬ ಸದಸ್ಯರಂತೆ ನಡೆಸಿಕೊಳ್ಳುತ್ತಾರೆ ಎಂದು ಜಗದೀಶ್ ಹೇಳಿದ್ದಾರೆ.

ಕೆಲವೊಮ್ಮೆ ಅವರಿಗೆ ಏನೂ ಖರೀದಿ ಮಾಡಲು ಇಲ್ಲದೇ ಇದ್ದರೂ ಕೂಡ ಮಾರಾಟಗಾರರೊಂದಿಗೆ ಮಾತನಾಡಲೆಂದೇ ಅವರ ಮನೆಗೆ ಭೇಟಿ ನೀಡುತ್ತಾರೆ. ಪ್ರತಿದಿನ ಇತರರಿಗೆ ಸಹಾಯ ಮಾಡಲು ಇಷ್ಟು ಸಮರ್ಪಿತವಾಗಿರುವ ವ್ಯಕ್ತಿಯನ್ನು ನಾನು ಎಂದೂ ನೋಡಿಲ್ಲ. ಆಕೆ ಒಬ್ಬ ಮಹಾನ್ ತಾಯಿಯಂತೆ ಭಾಸವಾಗುತ್ತಾಳೆ ಎಂದು ಜಗದೀಶ್ ಅವರು ತಿಳಿಸಿದ್ದಾರೆ.

ಬಾಲ್ಯದ ಮುಗ್ಧತೆ ಕಸಿಯುವ ಯತ್ನ: ಬಾಲಕಿಯ ಮೀತಿ ಮೀರಿದ ಡ್ಯಾನ್ಸ್ ಸ್ಟೆಪ್ ಕಂಡು ಆತಂಕ ಹೊರಹಾಕಿದ ನೆಟ್ಟಿಗರು

ಜಗದೀಶ್ ಅವರ ಈ ವಿಡಿಯೋಗೆ ಸಾಕಷ್ಟು ಮೆಚ್ಚುಗೆಗಳು ಬಂದಿವೆ. ಅನೇಕರು ಮಹಿಳೆಯ ಶಾಂತ ಔದಾರ್ಯವನ್ನು ಹೇಳಿಕೊಂಡಿರುವುದಕ್ಕೆ ಜಗದೀಶ್ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರ ಇದು ತುಂಬಾ ಸುಂದರ ಬರಹ. ನಿಮ್ಮ ಮಾತುಗಳು ಚಿಂತನಶೀಲ ಅವಲೋಕನದಿಂದ ಕೂಡಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು ಅವಳು ಧನ್ಯಳು, ಜಗತ್ತನ್ನು ವಾಸಿಸಲು ಸುಂದರವಾದ ಸ್ಥಳವನ್ನಾಗಿ ಮಾಡಿದ್ದಾಳೆ ಎಂದು ಹೇಳಿದ್ದಾರೆ.