ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಯಬ್ಬ! ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರು: ಪಿಜ್ಜಾ ಡೆಲಿವರಿ ಮಾಡಲು ಹೋದಾಗ ಬಡಿದ ಮಿಂಚು; ಕ್ಯಾಮೆರಾದಲ್ಲಿ ಸೆರೆಯಾಗಿದೆ ದೃಶ್ಯ

Viral Video: ಅಮೆರಿಕದ ನ್ಯೂಜೆರ್ಸಿಯಲ್ಲಿ ಸೋಮವಾರ ಸಂಜೆ ಗುಡುಗು ಸಹಿತ ಭಾರಿ ಮಳೆಯಾಗಿದೆ. ಮಳೆಯ ಸಮಯದಲ್ಲಿ ಡೆಲಿವರಿ ಏಜೆಂಟ್ ಪಿಜ್ಜಾ ಡೆಲಿವರಿ ಮಾಡುತ್ತಿದ್ದಾಗ, ಆ ವ್ಯಕ್ತಿಯ ಹಿಂದೆ ಮಿಂಚು ಬಡಿದಿದೆ. ಅದೃಷ್ಟವಶಾತ್ ಡೆಲಿವರಿ ಬಾಯ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಪಿಜ್ಜಾ ಡೆಲಿವರಿ ಮಾಡಲು ಹೋದಾಗ ಬಡಿದ ಮಿಂಚು

Profile Ramesh B Jul 19, 2025 6:59 PM

ವಾಷಿಂಗ್ಟನ್‌: ಸಿಡಿಲು ಬಡಿತದಿಂದ ಕೂದಲೆಳೆಯ ಅಂತರದಲ್ಲಿ ಪಿಜ್ಜಾ ಡೆಲಿವರಿ ಏಜೆಂಟ್ ಪಾರಾಗಿದ್ದಾನೆ. ಅಮೆರಿಕದ ನ್ಯೂಜೆರ್ಸಿಯಲ್ಲಿ ಈ ಘಟನೆ ನಡೆದಿದ್ದು, ಭಯಾನಕ ದೃಶ್ಯ ಡೋರ್‌ಬೆಲ್‌ನ ಕ್ಯಾಮರಾದಲ್ಲಿ ಸೆರೆಯಾಗಿದೆ (Viral Video). ನ್ಯೂಜೆರ್ಸಿಯಲ್ಲಿ ಸೋಮವಾರ ಸಂಜೆ ಗುಡುಗು ಸಹಿತ ಭಾರಿ ಮಳೆಯಾಗಿದೆ. ಮಳೆಯ ಸಮಯದಲ್ಲಿ ಆಹಾರ ಡೆಲಿವರಿ ಏಜೆಂಟ್ ಪಿಜ್ಜಾ ನೀಡಲು ಬಂದಾಗ ಈ ಘಟನೆ ಸಂಭವಿಸಿದೆ. ಆ ವ್ಯಕ್ತಿಯ ಹಿಂದೆ ಮಿಂಚು ಬಡಿಯುತ್ತಿರುವ ದೃಶ್ಯ ವಿಡಿಯೊದಲ್ಲಿ ನೋಡಬಹುದು.

ಡೆಲಿವರಿ ಏಜೆಂಟ್ ಮನೆಯೊಂದಕ್ಕೆ ಪಿಜ್ಜಾ ಡೆಲಿವರಿ ಮಾಡಲು ಬಂದಿದ್ದಾನೆ. ಡೋರ್‌ಬೆಲ್ ಒತ್ತುತ್ತಿದ್ದಂತೆ ಹಿಂದೆ ಮಿಂಚು ಬಡಿದಿದೆ. ಅರೆಕ್ಷಣ ವ್ಯಕ್ತಿ ಭಯಬೀತನಾಗಿದ್ದಾನೆ. ಕೆಲವು ಕ್ಷಣಗಳ ನಂತರ ಆರ್ಡರ್ ಮಾಡಿದಾತ ಬಾಗಿಲು ತೆರೆದಾಗ, ಡೆಲಿವರಿ ಏಜೆಂಟ್ ಭಯಭೀತನಾಗಿ ಕಾಣುತ್ತಿದ್ದನು. ಸಿಡಿಲು ತನಗೆ ಬಡಿದಂತೆ ಭಾಸವಾಯಿತು ಎಂದು ಈ ವೇಳೆ ಡೆಲಿವರಿ ಬಾಯ್ ಆತನಿಗೆ ಹೇಳಿದ್ದಾನೆ.



ಇನ್ನು ಡೆಲಿವರಿ ಏಜೆಂಟ್‍ನನ್ನು ಜೋವಾನಿ ಬೆಹುನ್ ಎಂದು ಗುರುತಿಸಲಾಗಿದೆ. ಪಿಜ್ಜಾ ಡೆಲಿವರಿ ಮಾಡಲು ಹೋದಾಗ ದೊಡ್ಡ ಶಬ್ದ ಬಂದಿತು. ಮೊದಲಿಗೆ ಆ ಶಬ್ದ ಏನೆಂದು ನಿಜವಾಗಿಯೂ ತಿಳಿದಿರಲಿಲ್ಲ. ತಾನು ಸ್ವಲ್ಪ ಚಲಿಸಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದೆ. ನಿಜವಾಗಿಯೂ ತಾನು ಅದೃಷ್ಟಶಾಲಿ ಎಂದು ಬೆಹುನ್ ತಿಳಿಸಿದ್ದಾಗಿ ವರದಿ ತಿಳಿಸಿದೆ.

ಬೆಹುನ್ ಆಹಾರವನ್ನು ಡೆಲಿವರಿ ಮಾಡಿ ತನ್ನ ಕಾರಿಗೆ ಹಿಂತಿರುಗಿ ಓಡಿಹೋಗಿದ್ದಾನೆ. ಸದ್ಯ ಈ ವಿಡಿಯೊ ಭಾರಿ ವೈರಲ್ ಆಗಿದೆ. ವಿಡಿಯೋದಲ್ಲಿ ಆಕಾಶವು ಕಪ್ಪು ಮೋಡಗಳಿಂದ ಆವೃತವಾಗಿರುವುದನ್ನು ತೋರಿಸಲಾಗಿದೆ. ಈ ವೇಳೆ ಒಮ್ಮೆಲೆ ಮಿಂಚು ಬಡಿದಿದೆ.

ಭಾರಿ ಮಳೆಗೆ ಇಬ್ಬರು ಸಾವು

ನಿರಂತರ ಮಳೆಯಿಂದ ನ್ಯೂಯಾರ್ಕ್ ನಗರ ಪ್ರದೇಶವು ಜಲಾವೃತವಾಗಿದೆ. ನ್ಯೂಜೆರ್ಸಿಯಲ್ಲಿ ಕಾರು ಹೊಳೆಗೆ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ. ವಾಷಿಂಗ್ಟನ್ ಡಿಸಿಯಿಂದ ಕೆರೊಲಿನಾಸ್‌ವರೆಗೆ ಪ್ರವಾಹ ಉಂಟಾಗಬಹುದು ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.