ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರೆಸ್ಟೋರೆಂಟ್‌ನಲ್ಲಿ ಭಾರತೀಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ; ವಿವಾದ ಸೃಷ್ಟಿಸಿದ ಈ ಮಹಿಳೆ!

Viral News: ಅಮೆರಿಕದ ಟೆಕ್ಸಾಸ್‌ನಲ್ಲಿ ಭಾರತೀಯ ರೆಸ್ಟೋರೆಂಟ್‌ ನಡೆಸುತ್ತಿರುವ ಮುಂಬೈ ಮೂಲದ ಮಹಿಳೆಯೊಬ್ಬರು ರೆಸ್ಟೋರೆಂಟ್ ನಲ್ಲಿ ಕೆಲಸ ನಿರ್ವಹಿಸುತ್ತಿರುವ ಉದ್ಯೋಗಿಗಳ ಬಗ್ಗೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ನನ್ನ ರೆಸ್ಟೋರೆಂಟ್‌ನಲ್ಲಿ ನಾನು ಭಾರತೀಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ ಎಂದು ಮಹಿಳೆಯೊಬ್ಬರು ಹೇಳಿಕೊಂಡಿದ್ದು ಈ ಹೇಳಿಕೆಗೆ ನೆಟ್ಟಿಗರು ಕಿಡಿಕಾರಿದ್ದಾರೆ.

ರೆಸ್ಟೋರೆಂಟ್‌ನಲ್ಲಿ ಭಾರತೀಯರಿಗಿಲ್ಲ ಕೆಲಸ: ವಿವಾದಾತ್ಮಕ ಹೇಳಿಕೆ ವೈರಲ್

ವಿವಾದಾತ್ಮಕ ಹೇಳಿಕೆ ನೀಡಿದ ಮುಂಬೈ ಮೂಲದ ಮಹಿಳೆ -

Profile
Pushpa Kumari Jun 9, 2026 9:30 PM

ಟೆಕ್ಸಾಸ್,ಜೂ.9: ಇಂದು ಉದ್ಯೋಗ ಅನ್ನೋದು ಪ್ರತಿಯೊಬ್ಬ ವ್ಯಕ್ತಿಗೂ ಅಗತ್ಯ. ಆದ್ರೆ ಎಲ್ಲರಿಗೂ ಇಂದು ಅಂದುಕೊಂಡ ಉದ್ಯಮದಲ್ಲಿ ಯಶಸ್ಸು ಪಡೆಯಲು ಸಾಧ್ಯ ಆಗೋದಿಲ್ಲ. ಇದೀಗ ಅಮೆರಿಕದ ಟೆಕ್ಸಾಸ್‌ನಲ್ಲಿ ಭಾರತೀಯ ರೆಸ್ಟೋರೆಂಟ್‌ ನಡೆಸುತ್ತಿರುವ ಮುಂಬೈ ಮೂಲದ ಮಹಿಳೆಯೊಬ್ಬರು ರೆಸ್ಟೋರೆಂಟ್ ನಲ್ಲಿ ಕೆಲಸ ನಿರ್ವಹಿಸುತ್ತಿರುವ ಉದ್ಯೋಗಿಗಳ ಬಗ್ಗೆ ವಿವಾದಾತ್ಮಕ ಹೇಳಿಕೆಯೊಂದನ್ನು (Viral News) ನೀಡಿದ್ದಾರೆ. ನನ್ನ ರೆಸ್ಟೋರೆಂಟ್‌ನಲ್ಲಿ ನಾನು ಭಾರತೀಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ ಎಂದು ಮಹಿಳೆಯೊಬ್ಬರು ಹೇಳಿಕೊಂಡಿದ್ದು ಈ ಹೇಳಿಕೆಗೆ ನೆಟ್ಟಿಗರು ಕಿಡಿಕಾರಿದ್ದಾರೆ.

ಟೆಕ್ಸಾಸ್‌ನ ನ್ಯೂ ಬ್ರೌನ್‌ಫೆಲ್ಸ್‌ನಲ್ಲಿರುವ ಪ್ರಸಿದ್ಧ '7 ಮಂಕ್ಸ್ ಕೆಫೆ' ಮಾಲೀಕ ರಶ್ಮಿ ಭಟ್ ಅವರ ಈ ವಿಡಿಯೋ ಹೇಳಿಕೆ ಈಗ ಆಕ್ರೋಶಕ್ಕೆ ಕಾರಣವಾಗಿದೆ."ನಾನು ನನ್ನ ಭಾರತೀಯ ರೆಸ್ಟೋರೆಂಟ್‌ನಲ್ಲಿ ಕೂಡ ಭಾರತೀಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ''. ಸಾಮಾನ್ಯವಾಗಿ ಗ್ರಾಹಕರು ಭಾರತೀಯ ರೆಸ್ಟೋರೆಂಟ್‌ಗೆ ಬಂದಾಗ ಅಲ್ಲಿ ಕೆಲಸ ಮಾಡುವ ಜನರೆಲ್ಲ ಭಾರತೀಯರೇ ಆಗಿರುತ್ತಾರೆ ಎಂದು ಭಾವಿಸುತ್ತಾರೆ. ಆದರೆ ಆ ರೀತಿ ನಾವು ಆಯ್ಕೆ ಮಾಡುವುದಿಲ್ಲ ಅಂದಿದ್ದಾರೆ.

ವಿಡಿಯೋ ನೋಡಿ:

ಈ ಹೇಳಿಕೆ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಿಡಿಕಾರಿದ್ದು "ಇದು ಭಾರತೀಯರಿಗೆ ಮಾಡುವ ತಾರತಮ್ಯದ ಉಲ್ಲಂಘನೆ ಎಂದು ಹೇಳಿದ್ದಾರೆ. ವಿವಾದ ತಾರಕಕ್ಕೇರುತ್ತಿದ್ದಂತೆ ಈ ಮಹಿಳೆ ತಮ್ಮ ಪೋಸ್ಟ್‌ಗೆ ಸ್ಪಷ್ಟನೆ ನೀಡಿದ್ದಾರೆ. ನಾವು ಕೆಲಸಕ್ಕೆ ಭಾರತೀಯರನ್ನು ಸಂಪೂರ್ಣವಾಗಿ ನಿಷೇಧ ಮಾಡಿಲ್ಲ.. ಆರ್ಹತೆ ಇರುವ ಯಾರ ನ್ನಾದರೂ ಕೆಲಸಕ್ಕೆ ತೆಗೆದುಕೊಳ್ಳುತ್ತೇವೆ. ಅವರು ಆಹಾರ ಶೈಲಿ, ಮಾತುಗಾರಿಕೆಗೆ ಮ್ಯಾಚ್ ಆಗಬೇಕು ಅಂದಿದ್ದಾರೆ.

Viral Video: ರೀಲ್ಸ್ ತಂದ ಅವಾಂತರ; ವಿಡಿಯೊ ಮಾಡುತ್ತ ಮೈಮರೆತು ಚರಂಡಿಗೆ ಬಿದ್ದ ಯುವತಿ

ಸ್ಥಳೀಯ ಸಮುದಾಯದಲ್ಲಿರುವ ವಿದ್ಯಾರ್ಥಿಗಳು, ಒಂಟಿ ತಾಯಂದಿರು, ನಿವೃತ್ತರಿಗೂ ಉದ್ಯೋಗ ನೀಡಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಆದರೆ ಕೆಲವರು ಈ ಮಾತನ್ನು ತಿರಸ್ಕಾರಿಸಿದ್ದು ಇಂತಹ ರೆಸ್ಟೋರೆಂಟ್‌ಗೆ ನಾವು ಹೋಗುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನೇಮಕ ಮಾಡುವಾಗ ಭಾರತೀಯರನ್ನು ಪಕ್ಕಕ್ಕೆ ಇರಿಸಿ, ನೀವು ಒಂದು ನಿರ್ದಿಷ್ಟ ಜನಾಂಗದ ವಿರುದ್ಧ ತಾರತಮ್ಯ ಮಾಡುತ್ತಿದ್ದೀರಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.