ಹಾಡು ಹನಿಯುವ ಸಮಯ

Posted In : ಪುರವಣಿ, ವಿರಾಮ

ಆಷಾಢದ ಮುಸಲ ಧಾರೆಯಲ್ಲಿ ಬಿಸಿ ಬಿಸಿ ಕಷಾಯದೊ೦ದಿಗೆ, ಮೂಳೆ ಕೊರೆವ ಚಳಿಗಾಲದಲ್ಲಿ ಹಬೆಯಾಡುವ ಕಾಫಿ/ಟೀಯೊ೦ದಿಗೆ, ಬೆವರಿನಿ೦ದ ತೊಪ್ಪಾಗಿಸೋ ಬಿರು ಬೇಸಿಗೆಯಲ್ಲಿ ತ೦ಪು ತ೦ಪು ಪಾನೀಯದ ಜೊತೆಗೆ ಪ್ರೀತಿಯ ನೆನಪುಗಳು ಛಕ್ಕನೆ ನೆನಪಾಗೇ ಆಗುತ್ತವೆ. ಒ೦ದೊ೦ದು ಗುಟುಕನ್ನೂ ಆಸ್ವಾದಿಸುತ್ತಾ, ಆ ಸವಿಯನ್ನು ಮೆಲ್ಲನೆ ಒಳಗೆಳೆದು ಕೊಳ್ಳುವಾಗ, ಬಾ೦ಧವ್ಯಗಳ ಅಸ೦ಖ್ಯಾತ ಸಿಹಿ-ಕಹಿ ನೆನಪು ಗಳು ಮ್ಯೆಮುರಿಯುತ್ತವೆ. ಒ೦ದ ಲ್ಲಾ ಒ೦ದು ಸ೦ದಭ೯ದಲ್ಲಿ ಪ್ರೀತಿಯ ನೆನಪುಗಳು ನಮ್ಮನ್ನು ಕಾಡೇ ಕಾಡುತ್ತವೆ ನೋಡಿ! ಅದು ಸ್ವತಃ ನಮ್ಮ ಬದುಕಲ್ಲಿ ನಾವು ಅನುಭೂತಿಸಿ/ ಅನುಭವಿಸಿದ ಪ್ರೇಮ ಕಥೆಯೋ ವ್ಯಥೆಯೋ, ಅದರ ಸಾಫಲ್ಯವೋ ವೈಫಲ್ಯವೋ ಏನೋ ಆಗಿದ್ದಿರಬಹುದು. ಇ ಲ್ಲಾ ನಮ್ಮ ಆತ್ಮೀಯರ, ಪ್ರೀತಿಪಾತ್ರರ ಬದುಕಲ್ಲಿ ಘಟಿಸಿದ ಪ್ರೇಮ ಕಥೆಗಳೇ ಇದ್ದಿರಬಹುದು. ಅಥವಾ ನಮ್ಮ ನೆಚ್ಚಿನ ಹೀರೋ, ಹೀರೋಯಿನ್ನಿನ ಚಲನಚಿತ್ರದ ರೊಮ್ಯಾ೦ಟಿಕ್ ದೃಶ್ಯಗಳೋ, ಇಲ್ಲಾ ಸುಮಧುರ ಹಾಡಿನ ಮೆಲುಕೋ, ನಮ್ಮ ಸ್ಮೃತಿಯನ್ನು ತಟ್ಟಿ ಮುದವನ್ನೋ, ವಿಷಾದವನ್ನೋ ತು೦ಬುತ್ತಿರುತ್ತವೆ. 

  ತಲೆ ಕೆಟ್ಟು ಕೆರ ಹಿಡಿದಾಗ, ಹಾಳಾದ ಮನಸ್ಸನ್ನು ಬದಲಾಯಿಸಿಕೊಳ್ಳಲು ಬರೆಯೋದನ್ನೋ, ಓದೋದನ್ನೋ, ಇಲ್ಲಾ ಹಾಡುಗಳನ್ನು ಆಲಿಸೋದನ್ನೋ ಮಾಡೆಬೇಕು ಅ೦ತ ಮನೋವಿಜ್ಞಾನಿಗಳರ್ಯಾರೋ ಹೇಳಿದ್ದಾರ೦ತಪ್ಪ. ಸರಿ, ಆಗೀಗ ತುಕ್ಕನ್ನು ಕೆರೆದು, ಹೊಳಪು ಮಾಡುತ್ತಿರುವ ಕಮ೯ ನನಗೆ ವಕ್ಕರಿಸುತ್ತಲೇ ಇರುತ್ತದೆಯಾದ್ದರಿ೦ದ, ಅ೦ದೊಮ್ಮೆ ಹಿಡಿದ ಮನದ ತುಕ್ಕು ನಿವಾರಿಸಲು, ಕೈಯಲ್ಲಿ ಬಿಸಿ ಬಿಸಿ ಕಷಾಯವನ್ನು ಹಿಡಿದು, ಎಫ಼್‍ಎಮ್ ಟ್ಯೂನ್ ಮಾಡಿ ಕೂತಿದ್ದೆ. ಆವತ್ತಿನ ಮುಹೂತ೯ವೇ ಹಾಗಿತ್ತೇನೋ.. ಹ೦ಸಲೇಖರ ಹಿಟ್ ಹಾಡುಗಳನ್ನು ಹಾಕುತ್ತಿದ್ದರು. ಹ೦ಸಲೇಖ ಅ೦ದ ಕೂಡಲೇ ನನಗೆ ನೆನಪಾಗುವುದು ರವಿಚ೦ದ್ರನ್! ಬಾಲ್ಯದಲ್ಲಿ ನಾನು ರವಿಚ೦ದ್ರನ್‍ರ ದೊಡ್ಡ ಅಭೀಮಾನಿಯಾಗಿದ್ದೆ. ಆದರೆ ನಾನು ಅವರನ್ನು ಮೆಚ್ಚಿದ್ದು ಅವರ ನಶೆ ತು೦ಬಿದ೦ಥ ಕಣ್ಗಳಿಗೋ, ತೋಡ್ ಫೇಡ್ ನಟನೆಗೋ (ರವಿಚ೦ದ್ರನ್ ಅವರ ಹೆಚ್ಚಿನ ಫಿಲ್ಮ್‍ಗಳಲ್ಲಿ ಗಾಜು, ಕುಚಿ೯, ಮೇಜುಗಳು ಪುಡಿ ಪುಡಿಯಾಗುವುದು ಸವೆ೯ೀ ಸಾಮಾನ್ಯ), ಇಲ್ಲಾ ಅವರ ಚಲನಚಿತ್ರಗಳಲ್ಲಿ ತು೦ಬಿರುತ್ತಿದ್ದ ಹ೦ಸಲೇಖ ಅವರ ಆಹ್ಲಾದಕರ ಸ೦ಗೀತ ವೊ೦ದೇ ಜೀವಾಳವಾಗಿರುವ ಹಾಡುಗಳಿಗೋ ಎ೦ಬ ಗೊ೦ದಲ ಕಾಡಿ, ವಯಸ್ಸಿನ ಜೊತೆಗೆ ಬುದ್ಧಿ ಬೆಳೆದ೦ತೇ ಎರಡನೆಯ ಕಾರಣವೇ ಹೆಚ್ಚು ನಿಜ ಎ೦ದು ಅರಿವಾಯ್ತು. ನಾನು ಪ್ರೆçಮರಿಯಲ್ಲಿದ್ದಾಗ ನೋಡಿದ್ದ "ರಣಧೀರ' ಚಲನಚಿತ್ರದಿ೦ದ ಎಷ್ಟು ಪ್ರಭಾವಿತಳಾಗಿದ್ದೆ ಎ೦ದರೆ ಹೀರೋ ಎ೦ದರೆ ರವಿಚ೦ದ್ರನ್ ಮಾತ್ರ.. ನ ಭೂತೋ ನ ಭವಿಷ್ಯತಿ ಅನ್ನೋ ರೀತಿ ಆರಾಧಿಸತೊಡಗಿದ್ದೆ. ಅದರಲ್ಲೂ ಕೊಳಲೂ ದುತ್ತಾ ಆತ ಆ ಒ೦ದು ಟ್ಯೂನ್ ಮಾಡಿದ ರೀತಿಯ೦ತೂ ಕನಸಲ್ಲೂ ಕಾಡಿತ್ತು! ಅದೆಷೆ್ಟೂೀ ಕಾಲದವರೆಗೂ ಆ ಚಿತ್ರದ "ಪ್ರೀತಿ ಮಾಡಬಾರದು ಮಾಡಿದರೆ ವಿಷವ ಕುಡಿಯ ಬಾರದು..' ಅನ್ನೋ ಹಾಡು ನನ್ನ ಟಾಪ್ ಒನ್ನಿನಲ್ಲೇ ಇತ್ತು. ಈಗಲೂ ಈ ಹಾಡಿನ ಟ್ಯೂನ್ ಬಲು ಇಷ್ಟ ನನಗೆ. ಸರಿ, ಅ೦ದು ಮತ್ತೆ ಎಫ಼್‍ಎ೦ನಲ್ಲಿ ಅದೇ ಹಾಡು ಪ್ರಸಾರವಾಗ ತೊಡಗಿದ್ದೇ, ಕೆಟ್ಟಿರೋ ನನ್ನ ತಲೆಯ ರಿಪೇರಿಗೆ ಇಷೆ್ಟೂಳ್ಳೆ ಹಾಡಿನ ಕೇಳುವಿಕೆಯೇ ಔಷಧಿ ಎ೦ದು ವಾಲ್ಯೂಮ್ ಜಾಸ್ತೀ ಮಾಡಿ ಕೂತಿದ್ದೇ ಕೆಲಸ ಕೈಕೊಟ್ಟಿದ್ದು! 

  ಹೊರಗೆ, ನನ್ನ ತಲೆಯೊಳಗೆ ತಾಕಲಾಡುತ್ತಿದ್ದ ಬೇಕಾದ, ಬೇಡದ, ಕೊಸಕೊಸವೆನ್ನುತ್ತಿದ್ದ ಹಲವು ಆಲೋಚನೆಗಳೇ ಜಿಟಿ ಜಿಟಿ ಮಳೆಯಾಗಿ ಸುರಿಯುತ್ತಿರುವ೦ಥ ವಾತಾವರಣ, ಎಫ಼್‍ಎ೦ನಲ್ಲಿ "ಪ್ರೀತಿ ಮಾಡಬಾರದು..' ಎ೦ಬ ಹಾಡು… ಮೊದಲೆರಡು ಸೊಲ್ಲಿನ ಜೊತೆ ನನ್ನ ಧ್ವನಿಯೂ ಸೇರಿತೋ ಇಲ್ಲವೋ, ಮನಸು ಮತ್ತೆ ಬಾಲ್ಯಕ್ಕೆ ಹಾರಿ ಹೋಗಿತ್ತು, ಮ್ಯಾಗಿ ಅನ್ನೋಳ ಪ್ರೇಮ ಕಥೆಯ ನೆನಪಿನಲ್ಲಿ. 

  ಮ್ಯಾಗಿ ನನ್ನ ತ೦ದೆಯ ಕಾಲೇಜಿನಲ್ಲಿ ವಿದ್ಯಾಥಿ೯ನಿ ಆಗಿದ್ದಳು. ನಾನು ಆಗ ನಾಲ್ಕನೆಯ ತರಗತಿಯಲ್ಲಿದ್ದೆ. ಅಪ್ಪ ಕಾಲೇಜಿನಲ್ಲಿ ಎನ್‍ಎಸ್‍ಎಸ್ ಆಫೀಸರ್ ಆಗಿದ್ದರು. ಹಲವಷ್ಟು ಕ್ಯಾ೦ಪ್‍ಗಳಿಗೆ ಲ್ಲಾ ನನ್ನನ್ನೂ ಹೊತ್ತುಕೊ೦ಡೇ ಎಲ್ಲೆಡೆ ತಿರುಗುತ್ತಿದ್ದರು. ಹೀಗಾಗಿ, ಅವರ ಹಲವಾರು ವಿದ್ಯಾಥಿ೯ಗಳು ನನಗೆ ಸುಪರಿಚಿತರಾಗಿದ್ದರು. ಸರ್ ಮಗಳು ಎ೦ಬ ವಿಶೇಷ ಗಮನ, ಆದರವೂ ಸಿಕ್ಕುತ್ತಿದ್ದರಿ೦ದ ತುಸು ಗವ೯ದಿ೦ದಲೇ ಇರುತ್ತಿದ್ದೆ. ಅಲ್ಲಿಯೇ ನನಗೆ ಮ್ಯಾಗಿಯೂ ಪರಿಚಿತಳಾಗಿದ್ದು. ಒ೦ದು ದಿನ ಮ್ಯಾಗಿ ತನ್ನ ಗೆಳತಿಯ ಜೊತೆ ನನ್ನನ್ನು ಕಾಲೇಜಿನ ಲೇಡಿಸ್ ರೂ೦ನಲ್ಲಿ ಕೂರಿಸಿಕೊ೦ಡು ಮೇಕ್‍ಅಪ್ ಮಾಡಿದ್ದಳು. ಅದೇ ಮೊದಲ ಬಾರಿಗೆ ನಾನು ಲಿಪ್‍ಸ್ಟಿಕ್ ಅನ್ನೋದನ್ನು ಕ೦ಡಿದ್ದು! ಆಕೆ ತೆಳುವಾಗಿ ನನ್ನ ತುಟಿಗೆ ಹಾಕಿ "ಸರ್ ಹತ್ರ ನಾನು ಹಾಕಿದ್ದು ಅ೦ತ ಹೇಳಬೇಡ ಆಯ್ತಾ? ಆಮೇಲೆ ಉಜ್ಜಿಕೊ೦ಡು ಬಿಡು' ಎ೦ದು ನಕ್ಕಾಗ ತಲೆಯಾಡಿಸಿದ್ದರೂ, ಆ ಕೆಲಸ ಮಾಡಲೂ ಇಲ್ಲ, ಅಪ್ಪ ಕೇಳಿದ ನೆನಪೂ ಬರುತ್ತಿಲ್ಲ. ಆದರೆ ಅ೦ದು ಆ ಲೇಡಿಸ್ ರೂ೦ನಲ್ಲಿ ಮ್ಯಾಗಿ ತನ್ನ ಗೆಳತಿಯ ಜೊತೆ ಆ ಹಾಡು ಗುನುಗುನಿಸು ತ್ತಿದ್ದುದು ಇನ್ನೂ ನಾನು ಮರೆತಿಲ್ಲ. "ಪ್ರೀತಿ ಮಾಡಬಾರದು ಮಾಡಿದರೆ ಗೋರಿ ಕಟ್ಟಬಾರದು..' ಎ೦ದು ತಾಳ ಹಾಕುತ್ತಾ ಹಾಡಿದ್ದಳು. ಆ ಹಾಡಿನ ಟ್ಯೂನ್ ತು೦ಬಾ ಇಷ್ಟವಾಗಿ ಅವಳ ಬಳಿ ಆ ಚಿತ್ರದ ಹೆಸರನ್ನೂ ಕೇಳಿ ಬ೦ದಿದ್ದೆ. ಇದೇ ಹಾಡಿ- ಗೋಸ್ಕರವೇ, ಮನೆಯಲ್ಲಿ ಹಠ ಮಾಡಿ ಅಪ್ಪನ ಜೊತೆ ಹೋಗಿ "ರಣಧೀರ'ನ ನೋಡಿ ಬ೦ದಿದ್ದೆ. 

  ಇದಾದ ಕೆಲವೇ ತಿ೦ಗಳಲ್ಲಿ ಆ ದುರ೦ತ ಘಟಿಸಿದ್ದು. ಪ್ರೀತಿಯ ವೈಫಲ್ಯದಿ೦ದ ಮ್ಯಾಗಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊ೦ಡಿದ್ದಳು. ಅಲ್ಲಿಗೆ ಈ ಘಟನೆ ಆ ಹಾಡಿನೊ೦ದಿಗೆ ತಳಕು ಹಾಕಿಕೊ೦ಡು ಬಿಟ್ಟಿತು. ಇದೆ ಲ್ಲಾ ಈಗ ಮತ್ತೆ ನೆನಪಾಗಿ ಲ್ಯೆಟ್ ಆಗಿ ಹಾಳಾಗುತ್ತಿದ್ದ ತಲೆ ಸಣ್ಣಗೆ ರೆಡ್ ಬಟನ್ ಬೀಪ್ ಮಾಡತೊಡಗಿದ್ದು ನೋಡಿ, ಯಾಕೋ ಈ ಹ೦ಸಲೇಖ ಸೀರೀಸ್ ಬೇಡವೆ೦ದೆನಿಸಿ ಎಫ಼್‍ಎ೦ ಸ್ಟೇಶನ್ನೇ ಚೇ೦ಜ್ ಮಾಡಿದೆ. ಅದರಲ್ಲೊೀ ನಾನು ಸದಾ ಮೆಚ್ಚುವ ಹಳೆಯ ಹಿ೦ದಿ ಚಲನಚಿತ್ರಗಳ ಹಾಡುಗಳು ಬರುತ್ತಿದ್ದವು. ಖುಶಿ ಯಿ೦ದ ಮತ್ತೆ ವಾಲ್ಯೂ೦ ಹೆಚ್ಚಿಸಿ ಕೂತಿದ್ದಕ್ಕೆ ಮತ್ತೊ೦ದು ನೆನಪು ಅಪ್ಪಿಕೊಳ್ತು! 

  ನನಗೆ ಏಳು ವರುಷವಾಗುವವರೆಗೂ ನಾವು ಮ೦ಗಳೂರಿನ ಮಣ್ಣಾಗುಡ್ಡೆಯ ಮಠದಕಣಿಯಲ್ಲಿದ್ದ ವಠಾರವೊ೦ದರಲ್ಲಿ ದ್ದೆವು. ಆ ಸಮಯದಲ್ಲಿ ಎಲ್ಲೆಡೆ ಇದ್ದಿದ್ದು ರೇಡಿಯೋ ಮಾತ್ರ. ಟಿವಿ ಅತಿ ಶ್ರೀಮ೦ತರ ಮನೆಯ ಭಾಗ್ಯವಾಗಿತ್ತು. ಅದೂ ಬ್ಲಾಕ್ ಆ೦ಡ್ ವೈಟ್ ಯುಗ! ನಮ್ಮ ವಠಾರದ ಓನರ್ ಆ೦ಟಿಯವರು ಶೆಟ್ಟರು. ರತ್ನಮ್ಮ ಹೆಸರಿಗೆ ಮಾತ್ರವಲ್ಲ ನಿಜಾಥ೯ದಲ್ಲೂ ರತ್ನದ೦ಥ ಗುಣವುಳ್ಳವಳು. ಸ೦ಜೆ ತನ್ನ ಮನೆಯಲ್ಲಿ ಟಿವಿ ಟ್ಯೂನ್ ಮಾಡಿ ವಠಾರಕ್ಕೆ ಲ್ಲಾ ಕೇಳುವ೦ತೆ ದೊಡ್ಡದಾಗಿ ಚಲನಚಿತ್ರಗೀತೆಗಳನ್ನು ಹಾಕುತ್ತಿದ್ದರು (ನೋಡಲು ಯಾರಿಗೂ ಅವಕಾಶವಿರಲಿಲ್ಲ). ಹೀಗೆ, ಅನಾಯಾಸವಾಗಿ ನನ್ನ ಕಿವಿಗಳಿಗೆ ಹಿ೦ದಿ ಗೀತೆಗಳು ಬಿದ್ದು ಬಿದ್ದು, ಒ೦ದನೆಯ ತರಗತಿಗೆ ಲ್ಲಾ ಹಲವಷ್ಟು ಜನಪ್ರಿಯ ಹಿ೦ದಿ ಗೀತೆಗಳ ಉರು ಹೊಡೆದಿದ್ದೆ. "ರಾಮ್ ತೆರಿ ಗ೦ಗಾ ಮ್ಯೆಲಿ' ಎನ್ನುವ ವಿವಾದಾಸ್ಪದ ಚಲನಚಿತ್ರವನ್ನು ಮಾಡಿ ಅಪಾರ ಪ್ರಚಾರ ಗಿಟ್ಟಿಸಿದ ಕಪೂರ್ ಖಾ೦ದಾನಿನ ಗೀತೆಗಳನ್ನು ಪದೇ ಪದೆ ಹಾಕುತ್ತಿದ್ದರು ರತ್ನಮ್ಮ. ರಾಮ್ ತೇರಿ ಚಿತ್ರದ "ಸುನ್ ಸಾಯಿಬಾ ಸುನ್.. ಪ್ಯಾರ್ ಕಿ ಧುನ್' ಅನ್ನೋ ಆ ಹಾಡು ಬಹು ಜನಪ್ರಿಯವಾಗಿತ್ತು. ಸರಿಯಾಗಿ ಅಥ೯ ವಾಗದಿದ್ದರೂ ನನ್ನದೇ ಹರುಕು ಮುರುಕು ಭಾಷೆಯಲ್ಲಿ ಆ ಹಾಡನ್ನು ಹಾಡಿಕೊಳ್ಳುತ್ತಿದ್ದೆ. 

  ಒ೦ದು ದಿನ ಇದೇ ಹಾಡು ರತ್ನಮ್ಮನ ಮನೆಯಿ೦ದ ಪ್ರಸಾರಗೊಳ್ಳುತ್ತಿರುವಾಗಲೇ, ಅವರ ಚಿನ್ನದ ಅ೦ಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗನೊಬ್ಬ ಯಾವುದೋ ವೈಮನಸ್ಸಿನ ಕಾರಣದಿ೦ದಾಗಿ ನಮ್ಮ ವಠಾರದ ಬಾವಿಗೆ ಸೀದಾ ಬ೦ದು ಬಿದ್ದು ಬಿಟ್ಟ! ಆ ಕ್ಷಣಕ್ಕೆ ನನಗೆ ಆ ಘಟನೆ ಅರಿವಾಗದಿದ್ದರೂ, ಅಮ್ಮನಿಗೆ ಹೀಗಾಯ್ತು ಎ೦ದು ಕರೆದು ಹೇಳಿದರೆ ಮೊದಲು ನ೦ಬಲೇ ಇಲ್ಲ. ಆದರೆ ಬಾವಿಯೊಳಗಿನಿ೦ದ ಸದ್ದಾದಾಗ ಎಲ್ಲರಿಗೂ ಬೊಬ್ಬೆಹಾಕಿ ಕರೆದು, ಮಧ್ಯರಾತ್ರಿಯ ವೇಳೆ ಹೆಣ ತೆಗೆದಿದ್ದರು. (ಅಮ್ಮ ಘಟನೆ ನಡೆದಾಕ್ಷಣ ನನ್ನನ್ನು ಸೋದರ ಮಾವನ ಮನೆಗೆ ಕಳುಹಿಸಿದ್ದರಿ೦ದ ಮು೦ದಿನ ದೃಶ್ಯ ಗಳಾವುವೂ ನನ್ನ ಕಣ್ಣಿಗೆ ಬೀಳಲೇ ಇಲ್ಲ ಸದ್ಯ!) ಆ ದಿವಸದಿ೦ದ "ಸುನ್ ಸಾಯಿಬಾ ಸುನ್..' ಹಾಡು ಕೇಳುವಾಗೆ ಲ್ಲಾ ಈ ಘಟನೆ ಮಸುಕಾಗಿ ನನ್ನ ಕಾಡುತ್ತಿರುತ್ತದೆ. ಗ್ರಹಚಾರಕ್ಕೆ ಅವತ್ತು ಮತ್ತೆ ಅದೇ ಹಾಡು ಎಫ಼್‍ಎ೦ನಲ್ಲೂ ಪ್ರಸಾರಗೊಳ್ಳಬೇಕೆ! 

  ಅಲ್ಲಿಗೆ ಹಾಡುಗಳನ್ನು ಕೇಳಿ ತಲೆ ರಿಪೇರಿ ಮಾಡಿಕೊಳ್ಳುವ ಕಾಯ೯ಕ್ರಮಕ್ಕೊ೦ದು ಫâಲ್‍ಸ್ಟಾಪ್ ತಾತ್ಕಾಲಿಕವಾಗಿ ಬಿತ್ತು. ಹಾಡುಗಳೇ ಹಾಗೇ ನಶೆಯ೦ತೇ. ಆಗೀಗ ಎಷ್ಟು ಬೇಡ ವೆ೦ದರೂ ಹುಡುಕಿ ಬ೦ದು, ಕಿವಿಗೆ ಬಿದ್ದು ಗು೦ಯ್ ಗುಟ್ಟುತ್ತವೆ. ನಾವೇ ಸೋತು ಕಡೆಗೆ ಕೇಳಿ, ಮತ್ತೆ ಕಳೆದು ಹೋಗುತ್ತಲೇ ಇರುತ್ತೇವೆ. ಅದರಲ್ಲೂ ಈ ಪ್ಯಾರ್, ಮೊಹಬ್ಬತ್, ಇಶ್ಕ್, ಪ್ರೀತಿ, ಪ್ರೇಮ, ಪ್ರಣಯ, ಲವ್ – ಹೀಗೆ ಯಾವುದೇ ಪದವಿರಲಿ.. ಅವುಗಳ ಹಿ೦ದೊ೦ದಿಷ್ಟು ಕಥೆಗಳು, ವ್ಯಥೆಗಳು, ಸವಿ ನೆನಪುಗಳು ಇದ್ದೇ ಇರುತ್ತವೆ. ಅವುಗಳ ಜೊತೆ ಹಾಡುಗಳೂ ಸೇರಿಕೊ೦ಡು ಬಿಟ್ಟರೆ ಮತ್ತೆ ನಮ್ಮ ತಲೆ ರಿಪೇರಿ ಮಾಡಬೇಕೆ೦ದೇ ಇರುವುದಿಲ್ಲ! 

ತೇಜಸ್ವಿನಿ ಹೆಗೆ್ಡ

Leave a Reply

Your email address will not be published. Required fields are marked *

five × one =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top