ರೋಮಾಂಚಕ ಚಿತ್ರ ಯಾತ್ರೆ

Posted In : ಪುರವಣಿ, ವಿರಾಮ

 

ಆಲ್ ರೋಡ್ಸ್ ಲೀಡ್ ಟು ರೋಮ್’ ಎಂಬ ಒಂದು ನಾಣ್ನುಡಿಯಿದೆ. ಏನು ಹಾಗೆಂದರೆ? ಆಗೆ ರೋಮ್ ರಾಜ್ಯಾಧಿಕಾರವು ಕಳ್ಳರ ಸಂತೆಯಾಗಿತ್ತು. ರೋಮನ್ನರು ಬೇರೆ ಬೇರೆ ದೇಶಗಳನ್ನೆಲ್ಲ ಸೋಲಿಸಿ ಅಲ್ಲಿನ ರಸ್ತೆ, ಕಟ್ಟಡ, ಖಜಾನೆಗಳಿಂದ ಕಲ್ಲುಗಳನ್ನು ಕದ್ದು ತಮ್ಮ ಊರಲ್ಲ ರಸ್ತೆಗಳನ್ನು ಮಾಡಿದರು. ಎಲ್ಲ ರಸ್ತೆಗಳೂ ರೋಮಿನ ಕಡೆ ಮುಖಮಾಡಿವೆ ಎಂಬುದು ಇದೇ ಅರ್ಥ ದ.’ – ಎಂದು ರೋಮನ್ ಕಲೋಸಿಯಮ್ ಬಳಿ ಸಿನಿಕ ಪ್ರವಾಸಿ ಗೈಡೊಬ್ಬ ತನ್ನ ಗುಂಪಿಗೆ ವಿವರಿಸುತ್ತಿದ್ದ. ಕಲೋಸಸ್ ಎಂದರೆ ಬೃಹತ್ ಎಂಬ ಭಾಷಾರ್ಥ ಹುಟ್ಟಿಕೊಂಡದ್ದೇ ಕಲೋಸಿಯಮ್ ಅನ್ನು ನೋಡಿದ ಮೇಲಿರಬೇಕು.ಕಲೋಸಿಯಮ್ಮಿಗೆ ಬಹಳ ಹತ್ತಿರದ, ರೋಮ್ ನಗರದ ಜ್ಯೂಲಿಯಸ್ ಸೀಸರ್‌ನನ್ನು ಕೊಂದ ಮೈದಾನವಿದೆ, ಅದು ನೂರಡಿ ಉದ್ದ ಅಗಲವೂ ಇಲ್ಲ. ಕನ್ನಡ ಭಾಷೆಯಲ್ಲಿ ಆತ ಎಷ್ಟು ಎತ್ತರಕ್ಕೆ ಚಿತ್ರಿಸ ಲ್ಪಟ್ಟಿzನೋ ಅಷ್ಟೂ ಎತ್ತರವಿರಲಿಲ್ಲ ಸೀಸರ್ ಅಸಲಿಯಾಗಿ ಕೊನೆಯುಸಿ ರೆಳೆದ ಆ ತಾಣ. ಕಲೋಸಿಯಮ್‌ನ ಬಳಿ ಒಂದು ಐಸ್‌ಕ್ರೀಂ ಕೊಂಡು ಅದನ್ನು ತಿನ್ನುತ್ತ ನಡೆದರೂ, ಅದು ಮುಗಿವ ಮುನ್ನವೇ ಸಿಗುವ ತಾಣ;1958ರಲ್ಲಿ ಅಲ್ಲಿಯೇ ಶೂಟ್ ಮಾಡಲಾದ ‘ಬೆನ್ ಹರ್’ ಎಂಬ ಸಿನೆಮದ ಸುಮಾರು ಇಪ್ಪತ್ತು ನಿಮಿಷದ ಕುದುರೆ ರೇಸ್‌ನ ಮೈದಾನ. ಈ ಕನ್ನಡ ಸಾಹಿತಿಗಳನ್ನ, ಆ ಹಾಲಿವುಡ್ ನಿರ್ದೇಶಕರನ್ನಿಬ್ಬರನ್ನೂ ಆ ಕ್ಷಣಕ್ಕೆ ಒಮ್ಮೆಲೆ ಹಿಡಿದು, ‘ಯು ಟೂ ಬ್ರೂಟಸ್’ (ನೀವು ಕಡ್ಡೀನ ಗುಡ್ಡ ಮಾಡಿದ್ರಲ್ಲ)ಎಂದು ಕೇಳಿಬಿಡಬೇಕೆನ್ನಿಸಿಬಿಡುತ್ತದೆ. ಅಷ್ಟರ ಮಟ್ಟಿಗೆ ಈ ಎರಡೂ ಜಾಗ ಗಳು ಎರಡೂವರೆ ಸಾವಿರ ವರ್ಷಕ್ಕೆ ಸೇರಿz ಅಥವ ಕೇವಲ ಎರಡೂವರೆ ವರ್ಷದ ಹಿಂದೆ ರಿಯಲ್ ಎಸ್ಟೇಟ್ ದಂದೆಯಿಂದ ಇಕ್ಕಟ್ಟಿಗೊಳಗಾದ ಕಟ್ಟಡವನ್ನು ಗುಡಿಸಿಹಾಕಲಾದ ತಾಣವೋ ತಿಳಿಯದಂತೆನಿಸುತ್ತದೆ.

 ತನ್ನಿಂದ ಮೂವತ್ತಡಿ ದೂರವಿದ್ದರೂ ಪ್ರೇಕ್ಷಕರೊಂದಿಗೆ ಆ ಗೈಡ್ ಮಾತಾಡುತ್ತಿದ್ದುದು ಪಿಸು ಧ್ವನಿಯ, ಕೈಯಂದು ನಿರ್ದಿಷ್ಟ ವರ್ಣದ ಬಾವುಟ ಹಿಡಿದಿದ್ದ-ತನಗೆ ಹಣ ನೀಡಿದ ಪ್ರೇಕ್ಷಕರು ಮಾತ್ರ ತನ್ನ ಮಾತು ಕೇಳಿರಿ ಎಂದು. ನಾನು ಕದ್ದುಮುಚ್ಚಿ ಆತನ ಸಮೀಪವೇ ಸುಳಿಯುತ್ತ, ಫೋಟೋಗಳನ್ನು ತೆಗೆಯುತ್ತ (ಕಟ್ಟಡಗಳದ್ದು) ಆತನ ಮಾತುಗಳನ್ನು ಕೇಳುತ್ತಿz. ಕಿವಿಗೊಟ್ಟು ಕೇಳಿಸಿಕೊಂಡರಷ್ಟೇ ಇಟಾಲಿಯನ್ ಗೈಡ್‌ಗಳು ಮಾತನಾಡುತ್ತಿರುವುದು ಇಂಗ್ಲೀಷ್ ಎಂದು ಹೊಳೆಯುವುದು. ರೋಮ್‌ನ ಪ್ರವಾಸೋದ್ಯಮದಲ್ಲಿ ಬಾಂಗ್ಲಾದೇಶಿ ಗಂಡುಗಳೇ ತುಂಬಿ ಹೋಗಿದ್ದರೂ, ಯಾವ ಬಾಂಗ್ಲಾದೇಶೀಯನೂ ಗೈಡ್ ಪಾತ್ರ ವಹಿಸು ತ್ತಿರುವುದು ಕಂಡುಬರಲಿಲ್ಲ. ತುಂಬಾ ರೇಸಿಸ್ಟ್ ನಗರವದು, ಗೈಡ್ಗಳಾಗಲು ಸ್ಪಧಿಸುವ ಏಷ್ಯನ್ನರನ್ನೆಲ್ಲ ಯೂರೋಪಿಯನ್ನರು ಬದಿಗೆ ಸರಿಸುವ ಪ್ರವಾಸೋದ್ಯಮದ ‘ರೇಸ್’ ಅದು. ಪಾಪ, ಬಾಂಗ್ಲಾಬಂಧುಗಳು ನಾವು ಪ್ರವಾಸಿ ಬಸ್ಸಿಗಾಗಿ ಕಾಯುತ್ತಿರುವಾಗ ಟೊಪ್ಪಿಗಳನ್ನು, ನೀರನ್ನು ಕೆಲವೇ ಯೂರೋಗಳಿಗೆ ಮಾರುತ್ತಾ ನಿಂತುಬಿಟ್ಟಿರುತ್ತಾರೆ. ಕೆಲವರಂತೂ ಅದಾಗಲೇ ಟೊಪ್ಪಿ ತೊಟ್ಟವರಿಗೂ ಸಹ, ನಮ್ಮ ಟೊಪ್ಪಿ ಮಾತ್ರ ನಿಮ್ಮ ಬಿಸಿಲಿನ ಧಗೆಯನ್ನು ಪರಿಹರಿಸಬಹುದು ಎಂದು ನಂಬಿಸಿ ಮಾರಾಟ ಮಾಡಿದ್ದನ್ನು ನನ್ನ ಟೋಪಿಯ ಕೆಳಗಿನ ಇದೇ ಕಂಗಳಿಂದ ನೋಡಿದ್ದೇನೆ.

ಎರಡು ದಶಕಗಳಿಂದಲೂ ಇಂಗ್ಲೆಂಡ್, ಫ್ರಾನ್ಸ್, ಸ್ವಿಟ್ಸರ್ಲೆಂಡ್, ಜರ್ಮನಿಗೆ, ಸ್ವೀಡನ್, μನ್ಲೆಂಡ್ ಮತ್ತು ರಷ್ಯಕ್ಕೆ ಹೋಗಿಬರುವ ಸೌಭಾಗ್ಯ (ಅಥವ ಯುರೊಪಿನ ದೌರ್ಭಾಗ್ಯವೆನ್ನಿ) ಹೊಂದಿದ್ದ ನನಗೆ ರೋಮ್ ಮಾತ್ರ ನೋಡಲಿಲ್ಲವಲ್ಲ ಎಂಬ ಚಿಂತೆ ಕಾಡತೊಡಗಿತು. ಕಾರಣ, ಗೆಳೆಯ ರೆಲ್ಲ ಹಾಗೆಂದು ನನಗೆ ಹೇಳ ತೊಡಗಿದ್ದರು! ಪಿಕಾಸೋ, ಗೋಯಾ ಮತ್ತು ಡಾಲಿಯರ ಸ್ಪೇನ್ ದೇಶ, ಗ್ರೀಕರ ಗ್ರೀಸು, ವ್ಯಾನ್‌ಗೋ ರೆಂಬ್ರಾರ ನೆದರ್ಲ್ಯಾಂಡು- ಬೆಲ್ಜಿಯಂಗಳಿಗೆಲ್ಲ ಹೋಗಿ ಬರದಿದ್ದದ್ದು ಕಾಡಿರಲಿಲ್ಲ, ಏಕೆಂದರೆ ಗೆಳೆಯರು ಹಾಗೆಂದು ನನ್ನನ್ನು ಕಾಡಿರಲಿಲ್ಲ. ಆದರೆ     ಮಿಕೆಲೆಂಜೆಲೋ, ಡಾ ವಿಂಚಿ ಹಾಗೂ ರಫಲರು ಬದುಕಿದ್ದ ರೋಮಿಗೇ ಹೋಗಿಲ್ಲವೆಂದರೆ ಅವರ ಪ್ರಕಾರ ನಾನು ಬಹಳ ದುಃಖಿತನಾಗಿರಬೇಕಿತ್ತು.ಈಗ ನನಗೊಂದು ಪ್ರಾಯಶ್ಚಿತ್ತದ ಅವಶ್ಯಕತೆಯೂ ಇತ್ತು. 1992ರಿಂದ ಕನ್ನಡ-ಇಂಗ್ಲಿಷುಗಳಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ರೋಮನ್ನರ, 15ನೇ ಶತಮಾನದಲ್ಲಿ ಅಂತ್ಯ ಕಂಡ, ರೆನಾಯಸಾನ್ಸ್ ಕಾಲದ ಕಲೆಯ ಇತಿಹಾಸವನ್ನು ಬೋಧಿಸುತ್ತಿದ್ದೇನೆ -ಅಸಲಿ ಕೃತಿಗಳನ್ನೇ ನೋಡದೆ. ಪ್ರಾಯಶ್ಚಿತ್ತವಾಗಲೇ ಬೇಕೆಂದು ನನಗೆ ಹೊಳೆದದ್ದು ರೋಮಿನಲ್ಲಿ ಕಾಲೂರಿದ ನಂತರವೇ. ಅಸಲಿ ಕೃತಿಗಳನ್ನು ನೋಡುವುದೇ ಪ್ರಾಯಶ್ಚಿತ್ತ! ರೋಮ್ ನೋಡಲು ನನಗೆ ಮಿಕೆಲೆಂಜೆಲೋ ನೆಪವಾಗಿ ಒದಗಿಬಂದಿದ್ದ.

ಆದರೆ ಯಾರನ್ನಾದರೂ ಕೇಳಿನೋಡಿ: ಆತ ರೋಮನ್ನನಲ್ಲ. ರ-ಲ್, ಡಾ ವಿಂಚಿ ಹಾಗೂ ಮೆಕೆಲೆಂಜೆಲೋ ಮುಂತಾದವರೆಲ್ಲರೂ ಎಲ್ಲಿಂದಲೋ ಇಲ್ಲಿ ಬಂದು ರೋಮಿನಲ್ಲಿ ನೆಲೆನಿಂತವರು.ಜೂನ್ 2016ರಲ್ಲಿ ನಾನು ಬರ್ಲಿನ್ನಿನಲ್ಲಿ ಒಂದೂವರೆ ತಿಂಗಳ ಕಾಲ ಇದ್ದು ನಂತರ ಇಟಲಿಗೆ ಹೋದದ್ದು ಒಂದರ್ಥದಲ್ಲಿ ಬಲವಂತವಾಗಿಯೇ. ಬರ್ಲಿನ್‌ನಿಂದ ಹಿಂದಿರುಗುವಾಗ ರೋಮಿನಲ್ಲಿ ಇಪ್ಪತ್ತಾರು ಗಂಟೆ ಕಾಲ ಏರ್‌ಪೋರ್ಟಿನ ಅನಿವಾರ್ಯವಾಗಿ ಕಾಯಲೇಬೇಕಿತ್ತು. ವಿಮಾನ ಪ್ರಯಾಣವೇ ಹಾಗೆ- ಕನೆಕ್ಟಿಂಗ್ ಫ್ಲೈಟ್‌ಗಾಗಿ ಗಂಟೆಗಟ್ಟಲೆ ಕಾಯುವ ತಾಳ್ಮೆಯಿದ್ದರೆ ಸಾವಿರಗಟ್ಟಲೆ ರೂಗಳನ್ನು ಉಳಿಸಿ ಬಿಡಬಹುದು. ಇಂದು ಮಾರ್ಗವೇ ಗಮ್ಯವನ್ನು ನಿರ್ಧರಿಸುವ ಕಾರ್ಖಾನೆಯನ್ನೇ ವಿಮಾನ ಪ್ರಯಾಣವೆನ್ನಬಹುದು. ಇಪ್ಪತ್ತನಾಲ್ಕು ಗಂಟೆ ಕಾಲ ಸುಮ್ಮನೆ ಬೋರ್ ಹೊಡೆಸಿಕೊಂಡು ರೋಮ್ ಏರ್‌ಪೋರ್ಟಲ್ಲಿ ಕೂರುವ ಬದಲು ಎಪ್ಪತ್ತೆರಡು ಗಂಟೆ ರೋಮ್ ನಗರದಲ್ಲಿ ಅಲೆದಾಡುವಂತೆ ಯೋಜನೆ ರೂಪಾಂತರಿಸಿಕೊಂಡೆ. ರೋಮಿ ನಲ್ಲಿ ರೊಮೇನಿಯನ್ನರೂ ಬಹಳವೇ ಇದ್ದಾರೆ. ಭಾರತೀಯರಿಗೆ ಇವರೇ ಅತ್ಯಂತ ಹತ್ತಿರವಿರುವ ಯುರೋಪಿಯನ್ನರು ನಡವಳಿಕೆಯಲ್ಲಿ, ಚುರುಕುತನ ಹಾಗೂ ಕಳ್ಳಬುದ್ಧಿಯಲ್ಲಿ. ರೈಲು ಟಿಕೆಟ್ ಅನ್ನು ಗಾಡಿ ಹತ್ತುವ ಮುನ್ನ ಊರ್ಜಿತಗೊಳಿಸದಿದ್ದರೆ, ನಾವು ಪ್ರವಾಸಿಗಳು ಎಂಬ ಮುಗ್ಧ ಮುಖಭಾವ ಹಾಕಿಬಿಟ್ಟರೆ ಟಿ.ಟಿಗಳು ನಿಮ್ಮನ್ನು ದಂಡ ಹಾಕದೆ ಕ್ಷಮಿಸಿ ಬಿಡುವುದಿಲ್ಲ, ಹುಷಾರು ಎನ್ನುತ್ತದೆ ಅವರ ಔಪಚಾರಿಕ ನೀತಿನಿಯಮ ಗಳು. ಪ್ರವಾಸೋದ್ಯಮವೇ ಜೀವಾಳವಾಗಿರುವಾಗಲೂ ಅವರು ಹೀಗೆ ನುಡಿಯಲು ಕಾರಣ ಅವರಿಗಿರುವ ಜನಪ್ರಿಯತೆ. ನಾನು ಗೆಳೆಯರ ಒತ್ತಾಯಕ್ಕಾಗಿ ರೋಮಿಗೆ ಬಂದಿಲ್ಲವೆಂದು ನಿರೂಪಿಸಲು ಸಾಂಪ್ರದಾಯಿಕವಾಗಿರುವ ಇಟಾಲಿಯನ್ ಕಲೆಯ ಬದಲು ಒಂದು ಅದ್ಭುತ ಸಮಕಾಲೀನ ಕಲೆಯನ್ನು ನೊಡಬೇಕಿತ್ತು. ಸುಲ್ಝಾನೋ ಎಂಬುದು ಇಸಿಯೋ ಎಂಬ, ಹತ್ತಾರು ಹಳ್ಳಿಗಳನ್ನೊಳಗೊಂಡ ದ್ವೀಪವನ್ನು ಸುತ್ತುವರಿದ ಊರು.

ಇದನ್ನು ಒಳಗೊಂಡ ವಿಶಾಲ ಇಸಿಯೋ ಎಂಬ ಕೊಳದ ಮೇಲೆ ಐದು ಕಿಲೋಮೀಟರ್ ಉದ್ದನೆಯ, ಹದಿನಾರು ಮೀಟರ್ ಅಗಲದ ತೇಲುವ ‘ಫ್ಲೋಟಿಂಗ್ ಪಯರ್ಸ್’ ಎಂಬ ಕಲಾಕೃತಿಯನ್ನು ನಿರ್ಮಿಸಲಾಗಿತ್ತು. ಮಹಾಭಾರತದ ವೈಶಂಪಾಯನ ಕೊಳದಂತಹ ಆ ನೀರ ಹಳ್ಳಕ್ಕೆ ತಾತ್ಕಾಲಿಕ ಸೇತುವೆ ಅದು, ನೀರಿನ ಏರಿಳಿತದಿಂದ ಅಲುಗದ ಸೇತುವೆ ಅದು, ನಾಲ್ಕು ದಶಕದ ಮುನ್ನ ಅದನ್ನು ಮೊದಲು ಕಲ್ಪಿಸಿಕೊಂಡಾಗ ನಿರ್ಮಿಸಲು ಅಂದಿನ ತಾಂತ್ರಿಕತೆ ಅಸಹಾಯಕವಾಗಿತ್ತು. ಇದನ್ನು ಸೃಷ್ಟಿಸಿದ ಕಲಾವಿದ ಜೀನ್ ಕ್ರಿಸ್ಟೋ. ಕೇವಲ ಹದಿನಾರು ದಿನಗಳ ಮಟ್ಟಿಗೆ ಮಾತ್ರ ಇದನ್ನು ಪ್ರದರ್ಶಿಸಲು ಆತ ನಿರ್ಧರಿಸಿದ್ದ. ಅದಕ್ಕಾಗಿ ನಡೆಸಿದ ತಯಾರಿ ನಲವತ್ತಾರು ವರ್ಷದ್ದು. ಈತನಿಗೀಗ ತೊಂಬತ್ತು ವರ್ಷ ವಯಸ್ಸು. ಹದಿನಾರು ದಿನ ತೇಲಲಿದ್ದ ಪಯರ್ಸ್‌ಗೆ (ನದಿಯ ಮೇಲೆ ತೇಲುವ ಮಾರ್ಗವಿಸ್ತರಣೆ) ತಗುಲಿದ ವೆಚ್ಚದಿಂದ ಸುಮಾರು ಎರಡು ಹಾಲಿವುಡ್ ಸಿನೆಮ ತಯಾರಿಸಬಹುದಿತ್ತು. ಇದಕ್ಕಾಗುವ ಖರ್ಚನ್ನು ಕ್ರಿಸ್ಟೋ ಸರ್ಕಾರಗಳಿಂದ, ಕಾರ್ಪೊರೇಟ್ ಸಂಸ್ಥೆ ಗಳಿಂದ, ಎಡಬಲ ನಡುಮಧ್ಯದ ತತ್ವಾಧರಿತ ಕೊಡುಗೈದಾನಿಗಳಿಂದ ಖಡ ತಂದು ಭರಿಸಲಿಲ್ಲ.

ಮುಂದೆ ತಾನು ಸೃಷ್ಟಿಸಲಿರುವ ಪಯರ್ಸ್ ಪೂರ್ಣ ಗೊಂಡಾಗ ಹೇಗೆ ಕಾಣುತ್ತದೆಂಬುದರ ಚಿತ್ರಗಳನ್ನು ರಚಿಸಿ, ಅವುಗಳನ್ನು ಮಾರಾಟ ಮಾಡಿ ಬಂದ ಹಣದಿಂದಲೇ ಈತ ಇದನ್ನು ಸೃಷ್ಟಿಸಿದ್ದ! ಸ್ಪೇನಿನ ಅತ್ಯಂತ ಆಕರ್ಷಕ ಬಂಗಲೆಯ ಚಿತ್ರವನ್ನು ಪಿಕಾಸೊ ಬರೆದು ಆ ಚಿತ್ರವನ್ನು ಮಾರಿದ್ದಲ್ಲಿ, ಅದೇ ಬಂಗಲೆಯನ್ನು ಕೊಳ್ಳುವಷ್ಟು ಹಣ ದಕ್ಕುತ್ತಿತ್ತಂತೆ, ಆತನಿಗೆ, ಆತ ಬದುಕಿzಗಲೇ. ಕ್ರಿಸ್ಟೋವಿನ ಸಾಹಸ ಪಿಕಾಸೋಗಿಂತ ಮಿಗಿಲು ಏಕೆಂದರೆ ಕಲೆಯ ಮೂಲಕವೇ, ಸ್ವಂತ ಖರ್ಚಿನ ಬೃಹತ್ ಕೃತಿ ರಚಿಸಿದ ನಂತರ ಮಾರಾಟ ಮಾಡಲು, ಕಲೆಯನ್ನು ಬಂಡವಾಳಶಾಹಿ ಮಷೀನಿಗೆ ಉಣಬಡಿಸಿ ಗ್ಯಾಲರಿ-ಕಲಾಕೃತಿ ರಚಿಸಲು ಆತನ ಬಳಿ ಏನೇನೂ ಉಳಿದಿರುವುದಿಲ್ಲ.

ಪ್ಲೋಟಿ೦ಗ್ ಪಯಸ್‍೯' ಎ೦ಬ ಈ ಕೃತಿಯು ಇಸಿಯೊದಲ್ಲಿ 18ನೇ ಜುಲ್ಯೆ 2016ರ೦ದು ಹದಿನಾರು ದಿನಗಳ ಮಟ್ಟಿಗೆ ಮಾತ್ರ ಪ್ರದಶಿ೯ತವಾಗಲು ಹುಟ್ಟಿ- ಕೊ೦ಡಾಗ, ಅದರ ಅಧ೯-ಕತೃ೯ ಜೇನ್ ಕ್ಲಾಡ್ (ಕ್ರಿಸ್ಟೋನ ಮಡದಿ) ಸತ್ತು ಏಳು ವಷ೯ಗಳಾಗಿತ್ತು. ದೃಶ್ಯಕಲಾಕೃತಿಯೊ೦ದು ಅದರ ಕತೃ೯ವಿನ ಸಾವಿನ ನ೦ತರವೂ ಜನ್ಮ ತೆಳೆವ ಟೆಸ್ಟ್ ಟ್ಯೂ ಬ್ ಬೇಬಿ ಇದು. ತದ್ವಿರುದ್ಧವಾಗಿ ರೋಮಿನಲ್ಲಿ ಸತ್ತ ಮೇಲೆ ಜಗತ್ತ ಸಿದ್ಧರಾಗಿದ್ದವರು ಐನೂರು ವಷ೯ದ ಮುನ್ನ ಸಮಕಾಲೀನರಾಗಿದ್ದ ಮೂವರು- ಡಾ ವಿ೦ಚಿ ಹಾಗೂ ಮತ್ತಿಬ್ಬರು. ಇವರೆಲ್ಲ ಯಾವ ಊರನ್ನು ತಮ್ಮ ಕೃತಿಗಳ ಮೂಲಕ ಅಜರಾಮರಗೊಳಿಸಿದ್ದರೋ ಅದರ ಮೂಲವಾಸಿಗಳೂ ಅಲ್ಲ. ಇ೦ದು ಅನಿವಾಯ೯ವೆ೦ಬ೦ತಾಗುತ್ತಿರುವ ಭೌಗೋಳಿಕ ವಲಸೆಗಳಿಗೆ, ಈ ಅಥ೯ ದಲ್ಲಿ "ಪ್ಲೋಟಿ೦ಗ್  ಪಯಸ್‍೯' ಒ೦ದು ಸೂಕ್ತ ಉಪಮೆಯಾಗಿ ಒದಗಿ ಬರುತ್ತದೆ. 

    ಈ ಐದು ಕಿಲೋಮೀಟರ್ ತೇಲುವ ಸ್ವಗ೯ದ ಭೌತಿಕ ಭಾಗವಾದ ಬಟ್ಟೆಗಳನ್ನು ಜುಲ್ಯೆ 3ರ ನ೦ತರ ಬೇಕಾದವರಿಗೆಲ್ಲ ತು೦ಡುತು೦ಡಾದ ನೆನಪುಗಳನ್ನಾಗಿಸಿ ಕೊಟ್ಟೋ, ಅದನ್ನು ಮಾರಿ ಬ೦ದ ಲಾಭವನ್ನು ಯಾವುದೋ ಸಾಮಾಜಿಕ ಕಾರಣ ಗಳಿಗೆ ಬಿಟ್ಟುಕೊಟ್ಟುಬಿಡುವುದೋ ಕ್ರಿಸ್ಟೋನ ಉದ್ದೇಶ. ಆದ್ದರಿ೦ದ ತಾತ್ವಿಕವಾಗಿ ಈತನ ನಿಲುವು ಆ ಐದು ಕಿಲೋಮೀಟರ್ ತೇಲುವ ಪಯಸಿ೯ಗಿ೦ತ ಎಷೆ್ಟೂೀ ಪಟ್ಟು ಬೃಹತ್ ಆದುದು. ಈತನ ಹೆ೦ಡತಿ ಜೀನ್ ಮತ್ತು ಈತ ಇದರ ಪರಿಕಲ್ಪನೆಯನ್ನು ಮಾಡಿದ್ದು ಮೂವತ್ತೆದು ವಷ೯ದ ಹಿ೦ದೆ, 1970ರಲ್ಲಿ. ಪ್ರಸ್ತುತದಲ್ಲಿ ಕ್ರಿಸ್ಟೋನ ಒ೦ಟಿ ಸಾಹಸ ಸಾಧಾರಣ ಇಚ್ಛಾಶಕ್ತಿಯ ಪರಿ˜ಯನ್ನು ಮೀರಿದ್ದು, ಶಿವರಾಮ ಕಾರ೦ತರನ್ನು ನೆನಪಿಸುವ೦ತಹದ್ದು. ಸ್ವತಃ ಡಾ ವಿ೦ಚಿ, ನಮ್ಮ ಕಲಾವಿದ ಕೆ. ವೆ೦ಕಟಪ್ಪನವರುಗಳು ತಮ್ಮ ಕೊನೆಗಾಲಗಳಲ್ಲಿ ಕಲಾಸೃಷ್ಟಿಯನ್ನು ನಿಲ್ಲಿಸಿಬಿಟ್ಟಿದ್ದರು.

    ಬದುಕಿನ ಆಟದ ಮು೦ದೆ ಕಲಾಸೃಷ್ಟಿ ಮಕ್ಕಳಾಟಿಕೆಯ೦ತೆ ಕ೦ಡುಬಿಟ್ಟಿರಬೇಕು ಇವರುಗಳಿಗೆ. ಆದರೆ ಕ್ರಿಸ್ಟೋಗೆ ತನ್ನ ಕಲೆಯ ಮು೦ದೆ ತನ್ನ ಬದುಕೇ ಮಕ್ಕಳಾಟಿಕೆ ಯ೦ತೆ ಕ೦ಡ೦ತೆನಿಸಿಬಿಟ್ಟಿರಬೇಕು. ಜೀನಳನ್ನು ಕಳೆದುಕೊ೦ಡ ನ೦ತರ ಬದುಕಿ ಗೊ೦ದು ಕಾರಣ, ಪ್ರೇರಣೆಯನ್ನು ಹುಡುಕುವುದಕ್ಕಾಗಿಯೇ ಆತ ಈ ಮೆಗಾ-ಕೃತಿ ಯನ್ನು ಈಗ ನಿಮಿ೯ಸಿದ೦ತಿತ್ತು. ಆ ಕೃತಿಯನ್ನು ಅಲಾ³ಯುಷಿಯನ್ನಾಗಿಸಿದ್ದೂ ಸಹ ಬೌದ್ಧರ ಮ೦ಡಲ ಚಿತ್ರಗಳ ಸಾರ ಹೊ೦ದಿದೆ. ಸೂಜ್ಞ್ಮತಿಸೂಕ್ಷ್ಮ ಸೃಷ್ಟಿಕ್ರಿಯೆಯ ನ೦ತರ ಖಡಕ್ಕಾಗಿ ಅಳಿಸಿಹೋಗಿಬಿಡುವ ನಶ್ವರತೆಯ ಗುರುತು ಈ ಕೃತಿ. ಇಸಿಯೋ ದ್ವೀ ಪಕ್ಕೆ ಭಾನುವಾರ ಬೆಳಿಗ್ಗೆಯೇ ಗೆಳೆಯರೊ೦ದಿಗೆ ಕಾರಿನಲ್ಲಿ ಹೊರಟೆವು. ಸುತ್ತಲಿನ ಏಳೂರುಗಳ ಜನರ ವಾಹನಗಳನ್ನು ಬಿಟ್ಟರೆ ಉಳಿದವನ್ನು ಪೋಲೀಸರು ದ್ವೀ ಪದ ಸಮೀಪಕ್ಕೂ ಬಿಡುತ್ತಿರಲಿಲ್ಲ. ಸುತ್ತಿಬಳಸಿ, ಗೊತ್ತಿಲ್ಲದ ರೈಲುನಿಲ್ದಾಣದಲ್ಲಿ ಪಾಕ್‍೯ ಮಾಡಿ ಇಸಿಯೋಗೆ ಟಿಕೆಟ್ ಕೇಳಿದೆವು. ಯುರೋಪಿನಲ್ಲಿ, ಇಟಾಲಿಯನ್ ಅಲ್ಲದ, ಗೊತ್ತಿಲ್ಲದ ಎಲ್ಲ ಭಾಷೆಗಳಿಗೂ ಟಿಕೆಟ್ ಕೊಡುವಾತ ನಲ್ಲಿ ಒ೦ದೇ ಉತ್ತರ: ತನಗೇನೂ ಗೊತ್ತಿಲ್ಲವೆ೦ದು. ಈಗ ರೈಲು ಅಲ್ಲಿಗೆ ಹೋಗುತ್ತದೆಯೇ? ಮು೦ದಿನ ರೈಲು ಯಾವಾಗ? ರೈಲಿಲ್ಲದಿದ್ದರೆ ಬಸ್ಸು, ಬೋಟುಗಳಿದ್ದಾವೆಯೇ ಅಲ್ಲಿ ಗೆ ಹೋಗಲು? 

ಎಲ್ಲದಕ್ಕೂ ಒ೦ದೇ ಇಟಾಲಿಯನ್ ಉತ್ತರ: ಗೊತ್ತಿಲ್ಲ ಎ೦ದು. ಡೋ೦ಟ್ ನೋ ಎ೦ಬೆರೆಡು ಪದಗಳು ಆತನಿ೦ದ ಕಡೆಗೂ, ಅಧ೯ ಗ೦ಟೆಯ ನ೦ತರವೂ ಬರಲಿಲ್ಲ. ಕೇವಲ ಎರಡು ಬೋಗಿ ಮತ್ತು ಒ೦ದು ಇ೦ಜಿನ್ ಇದ್ದ ರೈಲು ಸಾವಿರಾರು ಜನ ಕಲಾಭೀಮಾನಿಗಳನ್ನು ಒಮ್ಮೆಲೆ ನೋಡಿ, ಒಮ್ಮೆ ಜೋರಾಗಿ ಕಿರುಚಿ ನಿಸ್ತೆೀಜವಾಗಿಬಿಟ್ಟಿತ್ತು. 19ನೇ ಜೂನ್ ಭಾನುವಾರ ಬೆಳಿಗ್ಗೆ ಚಚಿ೯ಗೆ ಹೋಗುವ ಹೊತ್ತು. ಕಲಾವಿದನ ಹೆಸರು ಕ್ರಿಸ್ಟೋ. ಇಸಿಯೋ ಎ೦ಬುದನ್ನು ಇಸಯ್ಯ ಎ೦ದು ಕ್ರೆçಸ್ತನ ಇ೦ಡಿಯನೈಸ್ಡ್ ಅಥ೯ದಲ್ಲಿ ಓದಿಕೊ೦ಡೆ. ಕ್ರಿಸ್ಟೋನ ತೇಲುವ ಪಯಸ್‍೯ ಮೇಲೆ ನಡೆದು ಹೋಗುವುದು ಸ್ವತಃ ಕ್ರೆçಸ್ತನು ನೀರಿನ ಮೇಲೆ ನಡೆದ೦ತೆಯೇ ಎ೦ದು, ಸರಿಯೋ ತಪೊ³ೀ, ಭಾವಿಸಿಕೊ೦ಡುಬಿಟ್ಟೆ. ಅದು ತಿಮಿ೦ಗಲದ ಮೇಲೆ ಸವಾರಿ ಮಾಡಿದ೦ತೆ ಎ೦ದಿದ್ದ ಸ್ವತಃ ಕ್ರಿಸ್ಟೋ. ಅಲ್ಲಿ ಬ೦ದವರೆಲ್ಲರೂ ತೀಥ೯ಯಾತ್ರೆ ಹೊರಟ೦ತೆಯೇ ಇದ್ದರು.

      ಕೇವಲ ಐದು ಕಿಲೋಮೀಟರ್ ನಡೆದು ಹೋದರೆ, ಅಲ್ಲಿ೦ದ ಐದು ಕಿಲೋಮೀಟರ್ ದೂರದಲ್ಲಿ ಕ್ರಿಸ್ಟೋನ ಹಳದಿ ಪಯಸ್‍೯ ನೀರಿನಲ್ಲಿ ತೇಲುವುದು ಕಾಣುತ್ತದೆ. ಆದರೆ ನಡೆದು ಹೋಗಲು ಸೂಕ್ತವಾದ ಶೂಗಳು ನಿಮ್ಮಲ್ಲಿದ್ದ೦ತೆ ಕಾಣದು, ಎ೦ದು ಯಾರೋ ನಾವು ನಡೆದು ಅಲ್ಲಿಗೆ ಹೋಗುವ ಎಲ್ಲ ದಾರಿಗಳಿಗೂ ಎಳ್ಳುನೀರು ಸುರಿದುಬಿಟ್ಟಿದ್ದರು. ಆ ಊರಿನ ನದಿಯ ಲ೦ಗರಿನ ಸಮೀಪ ಬ೦ದರೆ ಮ್ಯೆಲುದ್ದದ ಸಾಲು, ಬೋಟ್ ಹತ್ತಲು. ಅಧ೯ಗ೦ಟೆಗೊಮ್ಮೆ, ಐವತ್ತು ಜನರನ್ನು ಮಾತ್ರ ಹಿಡಿಸುವ ಬೋಟು ಬ೦ದು ಮ೦ದಿಯನ್ನು ಕರೆದೊಯ್ಯುತ್ತಿತ್ತು. ನಮ್ಮ ಸಾಲು ಮಾತ್ರ ಹಾಗೆಯೇ ನಿ೦ತಿತ್ತು. ಏಕೆ೦ದರೆ ಆನ್‍ಲ್ಯೆನ್‍ನಲ್ಲಿ ಬೋಟಿನ ಟಿಕೆಟನ್ನು ಕಾಯ್ದಿರಿಸಿದವರಿಗೆ ಮೊದಲ ಪ್ರಾಶಸ್ತ್ಯ್ತ. ಮಳೆ ಬರತೊಡಗಿತು. ಎಲ್ಲರ ಕೊಡೆಗಳೂ ಅರಳಿದ ವೈವಿಧ್ಯ ಮಯ ವಣ೯ದ ಹೂಗಳ೦ತೆ ಕಾಣುತ್ತಿದ್ದವು, ಸ್ಯಾಟಲ್ಯೆಟಿನ ಛಾಯಾಚಿತ್ರಗಳಲ್ಲಿ. ನಾನದನ್ನು ಆಗ ನೊಡಲಿಲ್ಲ, ಆದರೆ ಹಾಗೆ ನಾವೆಲ್ಲ ದೇವರ೦ತಹ ಗೂಗಲ್ ಮ್ಯಾಪಿನ ಕ್ಯಾಮರದಲ್ಲಿ ಮೇಲಿನಿ೦ದ ಆ ಕ್ಷಣದಲ್ಲಿ ಸೆರೆಯಾಗುತ್ತಿದ್ದೇವೆ೦ಬ ಗ್ಯಾರ೦ಟಿಯಿ೦ದ ಹುಟ್ಟಿಕೊ೦ಡ ಕಲ್ಪನೆಯದಾಗಿತ್ತು. 

     ಕ್ರಿಸ್ಟೋ ಕಾಲಿಟ್ಟಲ್ಲೆಲ್ಲ ಎಲ್ಲ ಗ್ಯಾಲರಿ, ಸ೦ಗ್ರಹಾಲಯಗಳೆಲ್ಲವೂ ಬ೦ದ್. ಏಕೆ೦ದರೆ ಅವರೆಲ್ಲ ಕ್ರಿಸ್ಟೋನ ಕೃತಿಯನ್ನು ನೋಡಬೇಕಲ್ಲ! ಸುಮಾರು ಮೂರು ಸಲ ಒ೦ದೇ ಬೋಟು ಬ೦ದು ಹೋಗಿ ಮಾಡುತ್ತಿತ್ತು. ಒಬ್ಬ ಯಃಕಶ್ಚಿತ್ ಕಲಾವಿದ ಇಡಿಯ ತಾಲ್ಲೂಕಿನ ಸಾರಿಗೆ ವ್ಯವಸ್ಥೆಯನ್ನು ವ್ಯತ್ಯಸ್ಥಗೊಳಿಸಿ ಬಿಟ್ಟಿದ್ದ. ಪೋಲೀಸರು, ಅ˜ಕಾರಿಗಳು, ರಾಜಕಾರಣಿಗಳು, ಜಲನಿಪುಣರು, ವೈಮಾನಿಕರು, ಸ೦ಪಕಾ೯˜ಕಾರವಿದ್ದವರು, ಇವರೆಲ್ಲರೂ ಸೇರಿ ಮಾಡುವ ಕೃತಿ ಯನ್ನೇ ಕ್ರಿಸ್ಟೋನ ಕೃತಿ ಎನ್ನುವುದು. ಗೆಳೆಯರೊ೦ದಿಬ್ಬರನ್ನು ಬೋಟಿಗಾಗಿ ಸಾಲಿ ನಲ್ಲಿ ನಿಲ್ಲಿಸಿ, ನಾವೊ೦ದಿಬ್ಬರು ಬೋಟಿ ತಿನ್ನಲು, ಊರು ಸುತ್ತಲು ಹೋದೆವು. ತಿ೦ದು ಕುಡಿದು ಕ್ರಿಸ್ಟೋನ ಪಯಸ್‍೯ ಕೃತಿಯ ಮೇಲೆ ನಡೆಯುವ ರೋಮಾ೦ಚನ ವನ್ನು ಇದ್ದಲ್ಲೇ ಅನುಭವಿಸತೊಡಗಿದೆವು. ತು೦ಬಾ ತಿ೦ದು ಅದರ ಮೇಲೆ ನಡೆದಲ್ಲಿ ಅದು ಮುಳುಗಬಹುದಲ್ಲವೆ? ಎ೦ದು ನಮ್ಮಲ್ಲೇ ತೂಕವಿಲ್ಲದ ಜೋಕ್ ಮಾಡಿ- ಕೊ೦ಡೆವು. ಈ ಕೃತಿಯನ್ನು ನೋಡುವ೦ತಿಲ್ಲ, ಅದರ ಮೇಲೆ ಓಡಾಡಬೇಕು. ಅದಕ್ಕೆ ಪ್ರವೇಶದರವಿಲ್ಲ, ಅದು ಎಲ್ಲರಿಗೂ ಸೇರಿದ್ದು, ಎಲ್ಲರೂ ಆ ತೇಲುವ ಸ್ವಗ೯ದ ಮೇಲೆ ನಿ೦ತಾಗಲೇ ಅದು ಕೃತಿಯಾಗುವುದು. ಆದರೆ ಆತನ ಕೃತಿ ನೋಡಬೇಕೆ೦ದರೆ ಯುರೋಪು ಅಮೆರಿಕಗಳಿಗೆ ಖಚು೯ ಮಾಡಿಕೊ೦ಡು ಹೋಗಬೇಕಷ್ಟೇ. ಅಥವ ರೋಮಿನ ಏರ್‍ಪೋಟಿ೯ನಲ್ಲಿ ಕಾಯುವ ಯೋಗ ಪಡೆದಿರಬೇಕು. 

    ಇದು ಎಲ್ಲರೂ ಸೇರಿ, ಸೇರಿದಾಗ ಮಾತ್ರ ನಿಮಿ೯ಸುವ ಕೃತಿ. ಇದನ್ನು ಮಾರುವ೦ತಿಲ್ಲ, ಪ್ರದಶ೯ನ ಮುಗಿದಾಕ್ಷಣ ಕೈಗಾರಿಕಾ ರದ್ದಿಯೆ೦ದು ಪರಿಗಣಿಸಲಾಗುವುದು ಅ೦ತಾನೆ ಕ್ರಿಸ್ಟೋ. ಜೊತೆಗೆ ನೆನ್ನೆಯಷ್ಟೇ (18ನೇ ಜೂನ್ 2016) ಮೊದಲ ದಿನ ಅಲ್ಲಿಗೆ ಹೋಗಿದ್ದ ವರಿಗೆಲ್ಲ ಕ್ರಿಸ್ಟೋನ ಕಲಾಕೃತಿಯ ಒ೦ದು ತುಣುಕು, ಮೂರಿ೦ಚು ಮೂರಿ೦ಚಿನ ಹಳದಿ ಬಟ್ಟೆಯನ್ನು ಕೊಡುಗೆಯಾಗಿ ನೀಡಿದ್ದರು, ಅಲ್ಲಿ ಕಾವಲು ನಿ೦ತ ಸ್ವಯ೦ ಸೇವಕರು. ಆತನ ಕೃತಿಯ ನೆನಪನ್ನು ಮಾತ್ರ ಮನೆಗೆ ಮರಳಿ ತೆಗೆದುಕೊ೦ಡು ಹೋಗುವ ಬದಲಿಗೆ, ಕೃತಿಯ ಒ೦ದು ಭಾಗವೇ ಅನೇಕ ಖ೦ಡ ದೇಶಗಳ ಮನೆ ಗಳನ್ನು ಹೊಕ್ಕುವ ಕ್ರಿಯಾಶೀಲ ಉಪಾಯವಿದಾಗಿತ್ತು. ದೋಣಿಗಾಗಿ ಕಾಯುವ ಸಾಲನ್ನು ನೋಡಿ ಸಕ೯ಸ್ ಕಲಾವಿದನೊಬ್ಬ ತನ್ನ ಪ್ರದಶ೯ನವನ್ನು ಅಲ್ಲಿಯೇ ಶುರುವಿಟ್ಟುಕೊ೦ಡುಬಿಟ್ಟ. ಕ್ರಿಸ್ಟೋ ಕೈಯಳತೆಯ ದೂರದಲ್ಲಿದ್ದ, ಜೋರು ಬಿರುಗಾಳಿ- ಮಳೆ ಬರುವ ಸಾಧ್ಯತೆ ಇತ್ತು, ಅದರಿ೦ದ ಬೋಟ್ ಪಯಣ ನಿಲ್ಲುವ ಸೂಚನೆ ಇತ್ತು. ಅದಕ್ಕೂ ಮೊದಲೇ ಬಸ್ಸು ಕಾಣೆಯಾಗಿತ್ತು, ರೈಲು ನಿವೃತ್ತಿಯಾಗಿತ್ತು, ಕಾಲ್ನಡಿಗೆಯ ದಾರಿ ಜಾರುತ್ತಿತ್ತು. ಹಳೇ ಕಪ್ಪುಬಿಳುಪಿನ ಕನ್ನಡ ಸಿನೆಮದಲ್ಲಿ ಭಕ್ತನೊಬ್ಬ ಓಡೋಡಿ ಬ೦ದರೂ ಅಷೆ್ಟೂತ್ತಿಗೇ ರಾಘವೇ೦ದ್ರ ಸ್ವಾಮಿಗಳು ಸಮಾಧಿಸ್ಥರಾಗಿಬಿಟ್ಟಿರುತ್ತಾರಲ್ಲ, ಹಾಗಾಗಿತ್ತು ನಮ್ಮಗಳ ಪಾಡು. ಇ೦ದು ತಪ್ಪಿದರೆ, ಕ್ರಿಸ್ಟೋನ ಯಾವ ಕಾಲ-ಸ್ಥಳ-ನಿದಿ೯ಷ್ಟ ಕೃತಿಯನ್ನು ಅದು ಆಗುತ್ತಿರುವಾಗಲೇ ಮತ್ತೆ೦ದೂ ನೋಡಲಾರೆ ಎನ್ನಿಸತೊಡಗಿತು. ಹೀಗೆ ಕಲೆ ಸೃಷ್ಟಿಸುವುದನ್ನು "ಹ್ಯಾಪೆನಿ೦ಗ್' ಎನ್ನುತ್ತಾರೆ. ಪ್ಯೆ೦ಟಿ೦ಗ್, ಸ್ಕಲ್‍ಪ್ಟಿ೦ಗ್ ಇದ್ದ೦ತೆ ಇದೂ. ಕಲಾಕ್ರಿಯೆ ನಡೆಯುವಾಗಲೇ, ಅದು ಆಗುತ್ತಿರುವಾಗಲೇ ನೋಡಬಹುದಾದ್ದರಿ೦ದ ಒ೦ದು ಸಮಕಾಲೀನ ಮಾಧ್ಯಮ ಎ೦ದು ಪರಿಗಣಿಸಲಾಗುತ್ತದೆ. ಕೊನೆಗೂ ಇಟಾಲಿಯನ್ ದೋಣಿಯ ಅ˜ಕಾರಿಗಳು ಮನಸ್ಸು ದೊಡ್ಡದು ಮಾಡಿ, ಕೇವಲ ಐವತ್ತು ಮ೦ದಿಯ ಬದಲು ಅದರ ಎರಡು ಪಟ್ಟು ಜನರನ್ನು ಹತ್ತಿಸಿಕೊ೦ಡರು. 

     ಅದರಲ್ಲಿ ನಾನೂ ಇದ್ದೆ. ಕೇವಲ ಹತ್ತು ನಿಮಿಷದಲ್ಲಿ ಇಸಿಯೋ ದ್ವೀ ಪದಲ್ಲಿದ್ದೆ. ಎಲ್ಲೆಲ್ಲೂ ಕ್ರಿಸ್ಟೋನ ಹಳದಿ ಬಣ್ಣದ ಹೊದಿಕೆಯಿದ್ದ ಸೇತುವೆ. ಇಡಿಯ ಇಸಿಯೋ ದ್ವೀ ಪದ ಒಳಹೊರಗೆಲ್ಲ ಹಳದಿ ಬಣ್ಣ. ಆದಷ್ಟೂ ಶೂ ತೆಗೆದು ಈ ಬಟ್ಟೆಯ ಸ್ಪಷ೯ವನ್ನು ಅನುಭವಿಸುತ್ತ ನಡೆಯಿರಿ, ತುದಿಗೆ ಹೋಗಬೇಡಿ, ಈ ತಾತ್ಕಾಲಿಕ ಸೇತುವೆಯ ಮೇಲೆ ಊಟ ಮಾಡಬೇಡಿ, ತು೦ಬಾ ಜನ ಬರುವವ ರಿರುವುದರಿ೦ದ ಇಲ್ಲಿ ಕುಳಿತುಕೊಳ್ಳಬೇಡಿ, ಬಲದಿ೦ದ ಎಡಕ್ಕೆ ಚಲಿಸಿ ಎ೦ಬ ಅರೆ ಮನಸ್ಸಿನ ಸಾವಿರ ಸಲಹೆ ಸೂಚನೆಗಳು ನಮಗೆಲ್ಲರಿಗೂ ಅವರು ನೀಡುತ್ತಲೇ ಇದ್ದರು – ಕಾವಲಿದ್ದವರು, ಅಕ್ಕಪಕ್ಕ ಕಾವಲು ದೋಣಿಯಲ್ಲಿದ್ದವರು ಹಾಗೂ ಸ್ವಯ೦ ಸೇವಕರು. ಆದರೆ ಈ ತಾತ್ಕಾಲಿಕ ಸೇತುವೆಯ ಸೊಬಗಿನ ಮೇಲೆ ನಡೆದಾಡುತ್ತಲೇ ಕುಣಿದಾಡುವ೦ತಾಗುತ್ತಿತ್ತು, ವಯಸ್ಸಾದವರಿಗೆ, ಕುಣಿದಾಡಿಯೇ ಬಿಡುತ್ತಿದ್ದರು ವಯಸ್ಕರು. ಆ ಹಳ್ಳಿಗಳ ಸ೦ದುಗೊ೦ದುಗಳಿ೦ದ ಬಸ್ಸುಗಳಲ್ಲಿ ಬರು ತ್ತಿದ್ದ ಜನ ಒಮ್ಮೆಲೆ ಕೊಳದ ಸೇತುವೆ ಕ೦ಡಕೂಡಲೇ ಸನ್ನಿ ಹಿಡಿದವರ೦ತೆ, ಸನ್ನಿ ಯಿ೦ದ ಬಿಡಿಸಿಕೊ೦ಡವರು ಮಾಡುವ ಎಲ್ಲವನ್ನೂ ಮಾಡುತ್ತಿದ್ದರು. ಚಪ್ಪಾಳೆ ತಟ್ಟುತ್ತಿದ್ದರು, ಕೇಕೆ ಹಾಕುತ್ತಿದ್ದರು. 

   ಎಲ್ಲರೂ ಮಾಡುತ್ತಿದ್ದ ಒ೦ದು ಕೆಲಸ ಬ೦ಡಿಗಟ್ಟಲೆ ಫೋಟೋ ತೆಗೆಯುವುದು. ಸೆಲಿ#ಗಳನ್ನು ತೆಗೆದುಕೊಳ್ಳುತ್ತಲೇ, ಅವಕಾಶವಾದಾಗ ಇತರರ ಗು೦ಪುಚಿತ್ರಗಳನ್ನು ಕ್ಲಿಕ್ಲಿಕ್ಲಿಕ್ಲಿಕ್ಕಿಸಿ ಕೊಡುತ್ತಿದ್ದರು. ಜುಲ್ಯೆ 19ರ ನ೦ತರ, ವ್ಯಾಟಿಕನ್ ನಗರದಲ್ಲಿ ಸಿಸ್ಟಿನ್ ಛಾಪೆಲ್ಲಿಗೆ ಹೋಗಲು ಕ್ಯೂ ನಿ೦ತಿದ್ದೆ. ಈ ಛಾಪೆಲ್ಲಿಗಿ೦ತಲೂ ಬೃಹತ್ತಾದ, ಬಿಟ್ಟಿ ಪ್ರವೇಶವಿದ್ದ ಪಕ್ಕದ ಬೆಸಿಲಿಕಕ್ಕೆ ಹೋಗುವ ಬದಲಿಗೆ, ಸಾವಿರ ರೂಪಾಯಿ ತೆತ್ತು ಸಿಸ್ಟಿನನ್ನೇ ನೋಡಲು ಹೊರಟದ್ದಕ್ಕೆ ಕಾರಣ ಅಲ್ಲಿ ರೆನಾಸಾನ್ಸ್ ಕಲಾವಿದ ಮಿಕೆಲೆ೦ಜೆಲೋ ಬುವನರೊಟ್ಟಿ ಎ೦ಬ ಜಗತ್ತಪಸಿದ್ಧ ಕಲಾವಿದ ಮುವತ್ತದನೇ ವಯಸ್ಸಿನಲ್ಲಿ ರಚಿಸಿದ್ದ "ಜೆನಿಸಿಸ್' ಎ೦ಬ ಮೇಲಾfವಣಿಯ ಚಿತ್ರಗುಚ್ಛ; ಹಾಗೂ ತನ್ನ ಅರವತ್ತನೇ ವಯಸ್ಸಿನಲ್ಲಿ ಚಿತ್ರಿಸಿದ್ದ "ಲಾಸ್ಟ್ ಜಜ್‍ಮೆ೦ಟ್' ಎ೦ಬ ಭೀತ್ತಿಚಿತ್ರಗಳು ಒ೦ದೇ ಕೋಣೆಯಲ್ಲಿದ್ದುದಾಗಿತ್ತು. ಕ್ರೆಸ್ತಧಮ೯ದ ಸ್ವಗ೯ಕ್ಕೆ ಪ್ರವೇಶ ದೊರಕಿಸಿ ಕೊಡುವ ಪೋಪ್ ಇರುವ ಈ ಅತ್ಯ೦ತ ಪ್ರಭಾವಕಾರಿ ದೇಶವಾದ ವ್ಯಾಟಿಕನ್‍ನಲ್ಲಿ ಎಸ್.ಟಿ.ಎಲ್ ಅಥವ ಸ್ಕಿಪ್ ದ ಲ್ಯೆನ್ ಎ೦ಬ ಸ೦ಪ್ರದಾಯ ಬಹಳ ಜನಜನಿತವಾದುದು.

       ಒ೦ದರ ಬದಲು ಮೂರು ಸಾವಿರ ರೂ ತೆತ್ತರೆ ನಾವು ಗ೦ಟೆಗಟ್ಟಲೆ ಸಾಲು ನಿಲ್ಲುವುದನ್ನು ತಪ್ಪಿಸಬಹುದಾಗಿತ್ತು. ಇಷ್ಟು ದೂರವೇ ಬ೦ದಿದ್ದೇನ೦ತೆ, ಕಾರು, ಬಸ್ಸು, ವಿಮಾನ ಹಾಗೂ ದೋಣಿಗಳಲ್ಲಿ. ಈಗ ಸಾಲು ನಿಲ್ಲುವುದನ್ನು ಬಿಟ್ಟು ನಿಮ್ಮೊ೦ದಿಗೆ ಹೆಚ್ಚು ಹಣ ತೆತ್ತು ಬ೦ದುಬಿಟ್ಟರೆ, ಮಿಕೆಲೆ೦ಜೆಲೋವಿನ ಕೃತಿದಶ೯ನದ ಸೊಗಸು ಒ೦ದಷ್ಟು ಬಾಡಿದ೦ತಾಗುವುದಿಲ್ಲವೆ? ದೇವರಿಗೆ ಹರಕೆ ಹೊತ್ತು ಆಮೇಲೆ ನಮ್ಮ ಬದಲಿಗೆ ಬೇರೆಯವರು ಆ ಹರಕೆಯನ್ನು ಪೂರೈಸಿದರೆ ಅದರ ಪುಣ್ಯ ನಮ್ಮದು ಹೇಗಾಗುತ್ತೆ? ಎ೦ದು ಅಲ್ಲಿಯೇ ಓಡಾಡುತ್ತಿದ್ದ ಗೈಡನ್ನು ಕೇಳಿಯೇಬಿಟ್ಟೆ. ಆತ ನಕ್ಕ. ನಾನು ಸಾಲಿನಲ್ಲಿ ನಿ೦ತ ಮೊದಲಧ೯ ಗ೦ಟೆ ಕಾಲ ನನ್ನೊ೦ದಿಗೆ ನಿ೦ತವರೆಲ್ಲರಿಗೂ ಆತ ಬೇಡಿಕೊಳ್ಳುವ ಶೈಲಿಯಲ್ಲಿ ಹೆದರಿಸುತ್ತಿದ್ದುದು ಈ ಸಾಲಿಗೆ ಅ೦ತ್ಯವಿಲ್ಲ ಎ೦ದು. ಮತ್ತೊ೦ದಧ೯ ಗ೦ಟೆ ಕಾಲ, ನಾವು ಮತ್ತೊ೦ದಧ೯ ಕಿಲೋಮೀಟರ್ ಮುನ್ನಡೆದು ಹೋಗತೊಡಗಿದಾಗ ಆತ ಸಿಸ್ಟಿನ್ ಛಾಪೆಲ್ಲಿನ ಛಾಯಾಚಿತ್ರಗಳನ್ನು ಮಾರಾಟ ಮಾಡಲು ಬ೦ದ.

       ಆದರೆ ನನ್ನ ಫೆೀವರಿಟ್ ಎ೦ದರೆ, ಕೊನೆಯ ಅಧ೯ ಗ೦ಟೆಯಲ್ಲಿ ಆತ ವಹಿಸಿದ ಪಾತ್ರ: ಕೊನೆಯ ಮೂರು ಬಾಟೆಲ್ ಕುಡಿಯುವ ನೀರಿದೆ, ಕೊಳ್ಳಿರಿ. ಒ೦ದು ಬಾಟೆಲಿಗೆ ಒ೦ದೇ ಯೂರೋ ಎ೦ದು ಸುಮಾರು ಐದಾರು ಸಲ ಕೊನೆಯ ಮೂರು ಬಾಟಲಿಗಳನ್ನು ಮಾರಿದ್ದ. ಆತನ ಬಹುರೂಪ ಕ೦ಡು ನನಗೆ ಸಾಜ್ಞತ್ ಮಿ- ಕೆಲೆ೦ಜೆಲೋ, ಡಾ ವಿ೦ಚಿಯರ ಪ್ರತಿಭೆಯನ್ನೇ ಕ೦ಡ೦ತಾಗಿಬಿಟ್ಟಿತು. ಯುದ್ಧ ನಿಪುಣ, ಅಭೀಯ೦ತರ, ಸಸ್ಯಶಾಸ್ತ್ರ ಇತ್ಯಾದಿಯಾಗಿ ತನ್ನನ್ನು ಕೆಲಸಕ್ಕಿಟ್ಟು- ಕೊಳ್ಳುವ೦ತೆ ದೊರೆಯ ಪತ್ರವೊ೦ದರಲ್ಲಿ ವಣಿ೯ಸಿಕೊ೦ಡ ಡಾ ವಿ೦ಚಿ ಕೊನೆಗೊ೦ದು ಬಾಲ೦ಗೋಚಿ ಸೇರಿಸುತ್ತಾನೆ, ನಾನು ಚಿತ್ರವನ್ನೂ ಬರೆಯಬಲ್ಲೆನೆ೦ದು. ವ್ಯಾಟಿಕನ್ ಸ೦ಗ್ರಹಾಲಯವನ್ನು ಕಡೆಗೂ ಪ್ರವೇಶಿಸಿದಾಗ ಕಣ್ಣಿಗೆ ಬಿದ್ದದ್ದು ಅಕ್ಷರಶಃ ಸಾವಿರಗಟ್ಟಲೆ ಕಲಾಕೃತಿಗಳು: ಗ್ರೀ ಕರ ಶಿಲ್ಪಗಳು, ರಫೈಲನ ಚಿತ್ರಗಳನ್ನಾಧರಿ ಸಿದ ಬೃಹತ್ ಹೊಲಿಗೆಯ ಪರದೆಗಳು, ಪುಸ್ತಕಗಳು, ಮೆಮೆ೦ಟೋಗಳು (ಸ್ಮರಣಿಕೆ) ಇತ್ಯಾದಿ. ಆದರೆ ಸ೦ಗ್ರಹಾಲಯದಲ್ಲಿ ಉಸಿರಾಡಲು ತೊ೦ದರೆಯಾಗುವಷ್ಟು ಜನಜ೦ಗುಳಿ. ಅದೂ ರಜೆಯ ದಿನವೂ ಅಲ್ಲ. ಅಸಲಿಯಾಗಿ ವ್ಯಾಟಿಕನ್ನನ್ನು ನೋಡಲು ಹೋಗುವ ಜನರ ಮ೦ದೆಯನ್ನೇ ನೋಡಲು ಬ೦ದ೦ತಾಗಿತ್ತು. ಆದ್ದರಿ೦ದಲೇ ಎಲ್ಲರ ಗಮನವೂ ಆ ಸ೦ಗ್ರಹಾಲಯದೊಳಗೇ ಇರುವ ಸಿಸ್ಟಿನ್ ಛಾಪೆಲ್ ಮೇಲೆಯೇ. ಏಕೆ೦ದರೆ ಎಷ್ಟೇ ಜನಜ೦ಗುಳಿಯಿದ್ದರೂ ಕತ್ತೆತ್ತಿ ನೋಡು ವ೦ತಹ ಮೇಲ್ಚಾವಣಿಯಲ್ಲಿರುವ ಕೃತಿಯದು. ಆಕಾಶ ನೋಡಲು ನೂಕು ನುಗ್ಗಲೇ? ಮಿಕೆಲೆ೦ಜೆಲೋ ಭೀತ್ತಿಚಿತ್ರವೆಲ್ಲಿ? ಸಿಸ್ಟಿನ್ ಛಾಪೆಲ್ ಎಲ್ಲಿ? ಎ೦ದೇ ಎಲ್ಲರೂ ಎಲ್ಲರನ್ನೂ ಕೇಳುತ್ತಿದ್ದರು. ಬಹುಪಾಲು ಪ್ರವಾಸಿಗರು ತಮ್ಮ ಪ್ರವಾಸವನ್ನು ಹಾಳುಮಾಡಿಕೊಳ್ಳುವುದು ಹೇಗೆ೦ದರೆ ಮೊದಲೇ ಒ೦ದು ಗಮ್ಯವನ್ನು ನಿಧ೯ರಿಸಿಬಿಟ್ಟಿರುತ್ತಾರೆ.

   ಅದನ್ನು ತಲುಪುವ ದಾರಿಯಲ್ಲಿ ಕಾಣುವ ಅದ್ಯುತಗಳನ್ನು ಪರಿಶೀಲಿಸುವುದನ್ನು ಮರೆತು ಬಿಟ್ಟಿರುತ್ತಾರೆ. ವ್ಯಾಟಿಕನ್ ಸ೦ಗ್ರಹಾಲಯದ ಕಥೆಯೂ ಅ೦ತಹದ್ದೇ. ಕಡೆಗೂ ಇದ್ದ ಎರಡು ಗ೦ಟೆ ಕಾಲದಲ್ಲಿ ಮಿಕೆಲೆ೦ಜೆಲೋವನ್ನು ನೋಡಲೇಬೇಕೆ೦ಬ ಹಠದಲ್ಲಿ ಸಿಸ್ಟಿನ್ ಛಾಪೆಲ್ ಎ೦ಬ ಹೆಸರಿದ್ದ ಸಣ್ಣ ಪ್ರವೇಶದ್ವಾರವು ಆ ಜನಜ೦ಗುಳಿಯಲ್ಲೂ ಕ೦ಡುಬ೦ದು ಕ೦ಗಳಿಗೆ ಖುಷಿಯಾಯಿತು. ಎರಡು ದಿನ ಮು೦ಚೆ, ಬೋಟಿನಿ೦ದ ತೇಲುವ ಪಿಯಸ್‍೯ ಅನ್ನು ತಲುಪಿದಾಗ ಕ೦ಡದ್ದು ಸಾವಿರಾರು ಜನರು ನೀರಿನ ಮೇಲೆ ನಡೆಯುತ್ತಿದ್ದುದಷ್ಟೇ. ಕ್ರಿಸ್ಟೋನ ಕೃತಿಯ ಹಳದಿ ಬಣ್ಣದ ಹೊದಿಕೆ ಆ ಮನುಷ್ಯರ ಕಾಲುಗಳ ಸ೦ದಿನಿ೦ದ ಅಷ್ಟಿಷ್ಟು ಗೋಚರಿಸುತ್ತಿತ್ತು. ಏನೂ ಲಾಭವಿಲ್ಲದೆ ಈ ಮನುಷ್ಯ ಈ ಇಳಿವಯಸ್ಸಿನಲ್ಲಿ ಈ ಸಾಹಸಕ್ಕೆ ಎಳೆಸಿದ ಮನೋಭಾವವೇ ನನಗೆ ಈ ಕೃತಿಯಲ್ಲಿ ತೇಲುತ್ತಿತ್ತು. ಇಸಿಯೋ ದ್ವೀ ಪ ಕಣ್ಣಿಗೆ ಸ್ವಗ೯, ಆದರೆ ಅದನ್ನು ಯಾರೂ ನೋಡುತ್ತಿರಲಿಲ್ಲ, ನೋಡಬೇಕೆನ್ನು ವವರಿಗೂ ಅದು ಕಾಣುತ್ತಿರಲಿಲ್ಲ, ಬದಲಿಗೆ ಜನ ಅದನ್ನು ಅಕ್ಷರಶಃ ದೇಹದ ಮೇಲಿನ ಬಟ್ಟೆಯ೦ತೆ ಮುತ್ತಿಬಿಟ್ಟಿದ್ದರು! ಪ್ರಕೃತಿಯ ಸೊಬಗನ್ನು ಒ೦ದು ಕ್ಷಣ ದೀಮ೦ತ ಮಾನವ ಯತ್ನ ಮರೆಮಾಡಿದ್ದ ಕ್ಷಣವದು. 

     ಸಿಸ್ಟಿನ್ ಛಾಪೆಲ್ಲಿಗೆ ಹೋಗಲು ಅತ್ಯ೦ತ ಇಕ್ಕಟ್ಟಾದ ಇಳಿಜಾರಿನ ಮೆಟ್ಟಿಲುಗಳಿದ್ದವು. ಈಗ ಇಲ್ಲಿ ಬೆ೦ಕಿ ಹತ್ತಿದರೆ ಅಥವ ಅ೦ತಹ ಸುದ್ಧಿಯೊ೦ದು ಹುಟ್ಟಿಕೊ೦ಡು ಪಿಸುಗುಟ್ಟಿಬಿಟ್ಟರೂ ಸಾಕು, ಕಾಡ್ಗಿಚ್ಚಿನ೦ತೆ ಅದು ಹರಡಿ ಇಲ್ಲಿ ನೂರಾರು ಹೆಣಗಳು ಬೀಳುವುದರಲ್ಲಿ ಅನುಮಾನವೇ ಎಲ್ಲ ಎ೦ದು ಗೆಳೆಯನೊಬ್ಬ ಪಕ್ಕದಲ್ಲೇ ಪಿಸುಗುಟ್ಟಿದ. ಹೌದಲ್ಲ ಎನ್ನಿಸಿಬಿಟ್ಟಿತು. ಜಗತ್ತಿನ ಅತ್ಯ೦ತ ಪ್ರಭಾವಕಾರಿ ದೇಶವಾದ ವ್ಯಾಟಿಕನ್ನಿನ ಜಗತ್ತಸಿಸಿದ್ಧ ಕಲಾವಿದನ ಕೃತಿ ವೀಕ್ಷಿಸಲು ಈ ರಿಸ್ಕ್ ತೆಗೆದುಕೊಳ್ಳಲೇ ಬೇಕಿತ್ತು. ಸರಪಳಿಯ ಅತ್ಯ೦ತ ಕ್ಷೀಣವಾದ ಕೊ೦ಡಿಯೇ ಅದರ ಬಲಿಷ್ಠತೆಯ ಸ೦ಕೇತವ೦ತೆ. ಹಾಗಾಯ್ತಿದು. ಫೊಟೋಗಳನ್ನು ತೆಗೆಯುವ೦ತಿಲ್ಲ ಎ೦ಬ ಫಲಕ ಗಳು ರಾರಾಜಿಸುತ್ತಿದ್ದವು. ಸಿಸ್ಟಿನ್ ಛಾಪೆಲ್ ಒ೦ದು ದೇವಾಲಯ, ದಯವಿಟ್ಟು ಅದನ್ನು ಗೌರವಿಸಿ ಎ೦ಬ ಬರಹವೂ ಇತ್ತು. ಒಳ ಹೊಕ್ಕಾಗ ಆ ಜಾಗದ ಬಗ್ಗೆಗಿದ್ದ ಕಲ್ಪನೆ, ನಿರೀಕ್ಷೆ ಹಾಗೂ ನಾನೂ ಇಲ್ಲಿದ್ದೇನೆ ಎ೦ಬ ಭಾವದಿ೦ದಾಗಿ ಅದೊ೦ದು ರೋಮಾ೦ಚಕ ಅನುಭವವೇ ಆಗಿತ್ತು. ಶ್ ಶ್, ಸದ್ದು ಮಾಡಬೇಡಿ ಎ೦ಬ ಘೋಷಣೆ ಮಾಡುವ ಮೂಲಕ ಸ್ವತಃ ಅಲ್ಲಿನ ಕಾವಲುಗಾರರೇ ಸಿಹಿಗೆ ಹುಳಿ ಹಿ೦ಡುತ್ತಿದ್ದರು.

         ತಲೆಯೆತ್ತಿ, ಸುತ್ತಲೂ ದಿಟ್ಟಿಸಿ ನೋಡುತ್ತಿದ್ದ ನೂರಾರು ಜನರ ಸ್ಥಬ್ದ ನಿಶ್ಯಬ್ದ. ಹೇಗಾದರೂ ಕೂಗಿಕೊಳ್ಳಿ ಎ೦ಬ೦ತಿದ್ದ ಕ್ರಿಸ್ಟೋನ ಕೃತಿಯ ಮೇಲೆ ನಡೆಯುವಾಗ ಪ್ರಕೃತಿಯ ಸ೦ಗೀತದ್ದೆ ಕಾರುಬಾರು. ಪ್ಯಾರಿಸಿನ ಲೂವ್ರ್ ಸ೦ಗ್ರಹಾಲಯದ ಪುಸ್ತಕಗಳ ಮುಖಪುಟಗಳಲ್ಲೆಲ್ಲ ಡಾ ವಿ೦ಚಿಯ ಮೊನಾಲಿಸ. ವ್ಯಾಟಿಕನ್ನಿನಲ್ಲಿ ಮಿಕೆಲೆ೦ಜೆಲೋವಿನ "ಲಾಸ್ಟ್ ಜಜ್ ಮೆ೦ಟ್' ನ ಚಿತ್ರಗಳು. ಒ೦ದೇ ಊರಿನಲ್ಲಿ ಒಮ್ಮೆಲೆ ಬದುಕಿದ್ದ ಇಬ್ಬರು ಪರಸ್ಪರ ಸ್ಪ˜೯ಗಳು ಐನೂರು ವಷ೯ಗಳ ನ೦ತರವೂ ಜಗತ್ತಿನ ಜನರನ್ನು ತಮ್ಮೆಡೆ ಸೆಳೆಯುವು ದೆ೦ದರೇನು, ಜೆರುಸೆಲೆಮ್ಮಿನಲ್ಲಿ ಹುಟ್ಟಿದ ಕ್ರೇಸ್ತನನ್ನು ವ್ಯಾಟಿಕನ್ ಎ೦ಬಲ್ಲಿ ಕಲೆಯ ಮೂಲಕ ಆಚರಿಸುವುದೆ೦ದರೇನು, ಇತ್ಯಾದಿ ಕಥೆಗಳನ್ನು ನನ್ನ ಪಕ್ಕದಲ್ಲಿ ಕುಳಿತಿದ್ದ ತಾಯಿ-ಮಗನಿಗೆ ಅವರ ಪಕ್ಕದ ಕಲಾ ಇತಿಹಾಸಕಾರನೊಬ್ಬ ಪಿಸುಮಾತಿನಲ್ಲಿ ವಿವರಿಸುತ್ತಿದ್ದ, ಮ್ಯೆಕಿನಲ್ಲಿ ಸುಮ್ಮನಿರುವ೦ತೆ ಗದರಿಸುತ್ತಿದ್ದ ಪಿಸುಘೋಷಣೆಯಲ್ಲಿ ನನ್ನ ಮಾತು ಅಲ್ಪ ಎ೦ಬ ಕಲ್ಪನೆಯಲ್ಲಿ. ಕಾವಲುಗಾರನೊಬ್ಬ ಆತನ ಬಳಿ ಬ೦ದು ಇಟಾಲಿಯನ್ನಿನಲ್ಲಿ ದಯವಿಟ್ಟು ನನ್ನೊ೦ದಿಗೆ ಬನ್ನಿ ಎ೦ದ. ಇಟಾಲಿಯನ್ ಬರದ ಈ ಈತ ಸುಮ್ಮನೆ ಆತನೊ೦ದಿಗೆ ಹೊರಗೋಗಿ, ಮತ್ತೊಬ್ಬ ಕಾವಲುಗಾರನಿಗೆ ಸಮಜಾಯಿಶಿ ನೀಡಿ, ವಾಪಸ್ ಬ೦ದು ಕುಳಿತ. ಮತ್ತೆ ಹತ್ತು ನಿಮಿಷ. ಅಚ೯ಕನೊಬ್ಬ ಬ೦ದು ಮ್ಯೆಕಿನಲ್ಲಿ ಈಗ ನಾವೆಲ್ಲ ಪ್ರಾಥಿ೯ಸೋಣ ಎ೦ದು ಎಲ್ಲರನ್ನೂ ಬಲವ೦ತ ಮಾಡುತ್ತಿದ್ದ. 

      ಸಿಸ್ಟಿನ್ ಛಾಪೆಲ್ ಅನ್ನು ಪ್ರವಾಸಿತಾಣವನ್ನಾಗಿ ನೋಡಲು ಬ೦ದವರಿಗೆ ಧಮ೯ದ ಅಫೀಮನ್ನು ಬಲವ೦ತವಾಗಿ ತಿನ್ನಿಸುವ, ಅಸುರಕ್ಷಿತ ಇಕ್ಕಟ್ಟಿನ ಜಾಗ ನಿಜಕ್ಕೂ ಉಸಿರುಗಟ್ಟಿಸುವ೦ತಿತ್ತು. ಮತ್ತೆ ಆ ಇತಿಹಾಸ ಕಾರನನ್ನು ಅದೇ ಕಾವಲುಗಾರ ಮತ್ತೆ ಬ೦ದು ಹೊರಕ್ಕೆ ಕಳಿಸಲು ಯತ್ನಿಸುತ್ತಿದ್ದ. "ಕಾಸು ಕೊಟ್ಟು ಬ೦ದಿದ್ದೇನೆ, ಬಿಟ್ಟಿಯಾಗಲ್ಲ. ನಿಮ್ಮ ದೇವಾಲಯ ಉಳಿದು ಖ್ಯಾತವಾಗಿರುವುದೇ ನಮ್ಮ೦ತಹವರಿ೦ದ ಎ೦ಬುದನ್ನು ಮರೆಯಬೇಡಿ' ಎ೦ದು ಈತ ಇ೦ಗ್ಲೀಷಿನಲ್ಲಿ ಹೇಳುತ್ತಿದ್ದುದನ್ನು, ಈ ಭಾಷೆ ಬರದ ಕಾವಲುಗಾರ ಕೇಳುವ ಉಮೇದಿನಲ್ಲಿರಲಿಲ್ಲ. ಇತಿಹಾಸಕಾರನನ್ನು ಮತ್ತೆ ಮತ್ತೊಬ್ಬ ಕಾವಲುಗಾರನ ಬಳಿ ಕಳಿಸಲಾಯಿತು. ಇ೦ಗ್ಲೀಷ್ ಹಾಗೂ ಇಟಾಲಿಯನ್ ಎರಡೂ ಬರದ ದೇವಪುತ್ರನ ಕುರಿತಾದ ಹಿರಿಮೆಯನ್ನು ಪಿಸುದನಿಯ ಲ್ಲಾ ದರೂ ಹಾಡಿಹೊಗಳುತ್ತಿದ್ದ ಇತಿಹಾಸ ಕಾರ ಮಾತ್ರ ದೇವರು ಕೊಟ್ರೂ ಪೂಜಾರಿ ಕೊಡ ಎ೦ದು ಶಪಿಸುತ್ತಿದ್ದ.

  "ಫ್ಲೋಟಿ೦ಗ್ ಪಯಸ್‍೯' ಕಲಾಕೃತಿಯು ಕೆಲವು ದಿನ ಇದ್ದೂ ಇಲ್ಲವಾಗುವ ಕೃತಿ. ತದ್ವಿರುದ್ಧವಾಗಿ ಮಿಕೆಲೆ೦ಜೆಲೋ ವಿನ್ಯಾಸಗೊಳಿಸಿದ ಎ೦ಬ ಒ೦ದೇ ಕಾರಣಕ್ಕೆ ವ್ಯಾಟಿಕನ್ನಿನ ಗ್ರ೦ಥಾಲಯವನ್ನು ಸ೦ಗ್ರಹಾಲಯವನ್ನಾಗಿಸಿಬಿಟ್ಟಿದ್ದಾರೆ. ಯಾರೂ ಇದನ್ನೀಗ ಗ್ರ೦ಥಾಲಯವಾಗಿ ಬಳಸುವ೦ತಿಲ್ಲ. ಕ್ರಿಸ್ಟೋನ ಕೃತಿ ಅದರ ಮೇಲೆ ಓಡಾಡುವಾಗ ಮಾತ್ರ ಜೀವ೦ತ, ನ೦ತರ ಅದು ನಮ್ಮ ನೆನಪಿನಲ್ಲಷ್ಟೇ ಅಮರ. ಕಾಲಿ೦ದು ತಲೆಗೆ ಹತ್ತುವ ಕ್ರಿಯೆಯದು. ಮಿಕೆಲೆ೦ಜೆಲೋವನ್ನು ಹುಡುಕಿ ಸಿಸ್ಟಿನ್ನಿಗೆ ಹೋಗುವುದೆ೦ದರೆ, ಆತ ಏನೆಲ್ಲ ಚಿತ್ರಿಸಿದ್ದ ಅದಕ್ಕೆ ವ್ಯತಿರಿಕ್ತವಾಗಿರುವ ಬ೦ಧನದ ಅನುಭವ. ಆತ ರಚಿಸಿದ ನಗ್ನ ಚಿತ್ರಗಳಿಗೆ ನ೦ತರದ ಶತಮಾನದಲ್ಲಿ ಮತ್ತೊಬ್ಬ ಪೋಪ್ ಮತ್ತೊಬ್ಬ ಕಲಾವಿದನನ್ನು ಹಿಡಿದು ಬಟ್ಟೆ ತೊಡಿಸಿಬಿಟ್ಟಿದ್ದಾನೆ. ಮೃಷ್ಟಾನ್ನ ಭೋಜನವನ್ನು ಸವಿಯುವಾಗ ಅದರ ಮೇಲೆ ನೊಣ ಕುಳಿತ೦ತಿದು. ಜೊತೆಗೆ, ಆತ ಚಿತ್ರಿಸಿದ ಕೋಣೆಯು ದೇವಾಲಯ, ಆದ್ದರಿ೦ದ ಸುಮ್ಮನಿರಿ ಎ೦ದು ಜೋರಾಗಿ ಗದರುವುದು, ಅವರ೦ತೆಯೇ ಪ್ರಾಥಿ೯ಸಿರಿ ಎ೦ದೆಲ್ಲ ಕಾವಲುಗಾರರು ಗೋಳಿಡಿಸು ವುದು, ಪ್ರವಾಸಿತಾಣವೆ೦ದು ಟಿಕೆಟ್ ನೀಡಿ, ದೇವಾಲಯವೆ೦ದು ಪ್ರವಾಸಾನು ಭವಕ್ಕೆ ತೊಡರಾಗುವುದು ನಿರ೦ತರ. ಇ೦ತಹ ಇಕ್ಕಟ್ಟುಗಳ ಬಗ್ಗೆಯೇ, ಆಧ್ಯಾತ್ಮಕ್ಕೆ ಧಮ೯ವು ತೊಡರಾಗುವ ಬಗ್ಗೆಯೇ ಆತ ಚಿತ್ರ ಬಿಡಿಸಿದ್ದು. ಕ್ರೆçಸ್ತನ ಕೈಯಲ್ಲಿ ಸುಲಿಯಲಾದ ಮಾನವ ಚಮ೯ವು ಆತನ ಮುಖವನ್ನುಳ್ಳದ್ದು. ಅಥವ ಮು೦ದೆ ಪ್ರೇಕ್ಷಕರ ಪರಿಸ್ಥಿತಿ ಹೇಗಾಗುತ್ತದೆ೦ಬುದನ್ನು ಮೊದಲೇ ತಿಳಿದ೦ತೆ ಚಿತ್ರಬಿಡಿಸಿದ್ದಾನೆ. 

    ತದ್ವಿರುದ್ಧವಾಗಿ ಕ್ರಿಸ್ಟೋನ ಸೇತುವೆಯ ಮೇಲೆ ನಾವು ನಡೆದ೦ತೆಲ್ಲ ಅದು ಬದಲಾಗುತ್ತದೆ. ನಮ್ಮ ನಡಿಗೆಯೇ ಅದಕ್ಕೊ೦ದು ಅಥಾ೯ನುಭವ ಕೊಡುತ್ತದೆ. ಐನೂರು ವಷ೯ದಲ್ಲಿ ಇಟಲಿಯ ಕಲೆ ಪ್ರವಾಸೋದ್ಯಮವಾಗಿ ಪರಿವತಿ೯ತ ವಾಗಿರುವ ಸ೦ಯೋಗವಿದು. ರೋಮಿನಲ್ಲಿ ಕಾಲಿಟ್ಟ ಎಡೆಯಲ್ಲೆಲ್ಲ ಕಲೆ ಸಿಗುತ್ತಿತ್ತು. ಆದ್ದರಿ೦ದಲೇ ಆ ಊರಿನಲ್ಲಿ ನಿಮ್ಮ ಸ್ವ೦ತದ್ದೇ ಮನೆಯಿದ್ದರೂ, ಅದನ್ನು ಚೂರೂ ಬದಲಿಸುವ೦ತಿಲ್ಲ. ಆದರೆ ಕಲಾವಿದ ಕ್ರಿಸ್ಟೋ ಕಾಲಿಟ್ಟಿದ್ದರಿ೦ದಲೇ ಕಲೆಯನ್ನು ಸೃಷ್ಟಿಸುವ ಪ್ರಜಾಪ್ರಭುತ್ವವವಾದಿ ತ೦ತ್ರ ರೂಪಿಸಿದ್ದಾನೆ. ಜಗತ್ತಿನ ಅತ್ಯ೦ತ ಬಲಿಷ್ಠ ದೇಶದ ಪ್ರಭುತ್ವದ ಸಾರವನ್ನು ಅದರ ಸಮೀಪದಿ೦ದಲೇ ನೀರಿಳಿಸುವ ಕಲಾತ್ಮಕ ರಾಜಕಾರಣದ ಸೊಬಗಿದು.

Leave a Reply

Your email address will not be published. Required fields are marked *

eleven − 6 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top