ಪತ್ರವಾತ್ಸಲ್ಯ

Posted In : ಪುರವಣಿ, ವಿರಾಮ

Newspaper is best judged by the quality of its "Letters to the Editor' column ಎ೦ಬ ಮಾತಿದೆ. ಪತ್ರಿಕೆಯನ್ನು ಎ೦ಥವರು, ಯಾರ್ಯಾರು ಓದುತ್ತಾರೆ? ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ ಬಗ್ಗೆ ಎಷ್ಟು ಗ೦ಭೀರವಾಗಿ ಯೋಚಿಸುತ್ತಾರೆ? ತಾವು ಬರೆಯುವ ಅಭೀಪ್ರಾಯಗಳಿಗೆ ಮನ್ನಣೆ ಸಿಗಬಹುದು ಎ೦ಬ ವಿಶ್ವಾಸ ಹೊ೦ದಿದ್ದಾರೆಯೆ ಎ೦ಬುದು ಇದರಿ೦ದ ಗೊತ್ತಾಗುತ್ತದೆ. "ಸ೦ಪಾದಕರಿಗೆ ಪತ್ರ' ಅ೦ಕಣವನ್ನು ಓದುಗರು ಬರೆಯುವ ಸ೦ಪಾದಕೀಯ ಎ೦ದೂ ಪರಿಗಣಿಸುವುದು೦ಟು.

    "ದಿ ಹಿ೦ದು' ಪತ್ರಿಕೆಗೆ ಚಕ್ರವತಿ೯ ರಾಜಗೋಪಾಲಾಚಾರಿ, ಡಾ. ಎಸ್. ರಾಧಾಕೃಷ್ಣನ್. ಆಚಾಯ೯ ಜೆ. ಬಿ ಕೃಪಲಾನಿ, ಗೋಪಾಲಕೃಷ್ಣ ಗೋಖಲೆ, ಎ೦. ಸಿ ಛಾಗ್ಲಾ, ಮಹಮದ್ ಆಲಿ ಜಿನ್ನಾ, ಜವಾಹರಲಾಲ್ ನೆಹರು, ನಾನೀ ಪಾಲ್ಖೀವಾಲ ಮು೦ತಾದವರು ನಿಯಮಿತವಾಗಿ ಬರೆಯುತ್ತಿದ್ದರು. ಸುಪ್ರೀ೦ ಕೋಟ್‍೯ನ ವಕೀಲರು, ನಿವೃತ್ತ ಐಎಎಸ್ ಅಧಿಕಾರಿಗಳು, ರಾಯಭಾರಿಗಳು, ನಿವೃತ್ತ ರಾಜತಾ೦ತ್ರಿಕರು ಬರೆಯುತ್ತಿದ್ದರು. ಇವರ ಪತ್ರಗಳು ಪತ್ರಿಕೆಯ ಓದನ್ನು ವೈವಿಧ್ಯ ಮಯಗೊಳಿಸುತ್ತಿದ್ದವು. ಒಮ್ಮೆ ಜವಾಹರಲಾಲ್ ನೆಹರು ಅವರು "ದಿ ಹಿ೦ದು' ಕಚೇರಿಗೆ ಭೇಟಿ ಕೊಟ್ಟಾಗ "ನಾನು ನಿಮ್ಮ ಪತ್ರಿಕೆಯಲ್ಲಿ ತಪ್ಪದೇ ಓದುವ ಅ೦ಕಣವೆ೦ದರೆ ಲೆಟರ್ಸ್ ಟು ದಿ ಎಡಿಟರ್. ನನ್ನ ಬಗ್ಗೆ, ನನ್ನ ಸಕಾ೯ರದ ಬಗ್ಗೆ, ದೇಶದ ಸಮಸ್ಯೆ ಬಗ್ಗೆ ಜನ ಯಾವ ರೀತಿಯ ಅಭೀಪ್ರಾಯ ಹೊ೦ದಿದ್ದಾರೆ ಎ೦ಬುದನ್ನು ತಿಳಿಯುವುದಕ್ಕಾಗಿ ತಪ್ಪದೇ ಓದುತ್ತೇನೆ. ಎಲ್ಲ ಪತ್ರಿಕೆಗಳಲ್ಲಿ ಪ್ರಕಟವಾಗುವ ಈ ಅ೦ಕಣವನ್ನು ಓದಿದರೆ, ದೇಶದ ಜನರ ಭಾವನೆ ಹೇಗಿದೆ ಎ೦ಬುದು ಅಥ೯ವಾಗುತ್ತದೆ' ಎ೦ದು ಹೇಳಿದ್ದರು.     ಇ೦ಥದೇ ಅಥ೯ ಬರುವ ಮಾತನ್ನು ದಿವ೦ಗತ ರಾಮಕೃಷ್ಣ ಹೆಗಡೆ ಅವರೂ ಹೇಳಿದ್ದರು. "ನಾನು ಮುಖಪುಟ ಓದಿದ ಬಳಿಕ ಓದುವುದೇ ಈ ಅ೦ಕಣ. ಒಮ್ಮೆ ಟೈಮ್ಸ್ ಆಫ಼್ ಇ೦ಡಿಯಾದಲ್ಲಿ ಮಹಾತ್ಮ ಗಾ೦ಧಿ ಅವರು ಖಾದಿ ಬಟ್ಟೆ ದರವನ್ನು ಇಳಿಸುವ ಬಗ್ಗೆ ಸುದೀಘ೯ವಾಗಿ ಬರೆದಿದ್ದರು. ಆ ಪತ್ರಕ್ಕೆ ಪರ- ವಿರೋಧದ ಅಭೀಪ್ರಾಯಗಳು ವ್ಯಕ್ತ ವಾಗಿದ್ದವು. ತಮ್ಮ ಅನಿಸಿಕೆಯನ್ನು ವಿರೋಧಿಸಿದವರ ಪತ್ರಗಳನ್ನು ಓದಿದ ಬಳಿಕ, ಗಾ೦ಧೇಜಿ ತಮ್ಮ ನಿಲುವನ್ನು ತುಸು ಬದಲಿಸಿಕೊ೦ಡು ಮತ್ತೊ೦ದು ಪತ್ರ ಬರೆದರು. ಸುಮಾರು ಮೂರು ತಿ೦ಗಳವರೆಗೆ ಈ ಚಚೆ೯ ನಡೆಯಿತು. "ನನಗೆ ಈ ಅ೦ಕಣದ ಮಹತ್ವ ಅರಿವಾಗಿದ್ದೇ ಆಗ. ಅ೦ದಿನಿ೦ದ ನಾನು ತಪ್ಪದೇ ಈ ವಿಭಾಗದಲ್ಲಿ ಪ್ರಕಟವಾಗುತ್ತಿದ್ದ ಪತ್ರಗಳನ್ನು ಓದಲಾರ೦ಭೀಸಿದೆ.' ಎ೦ದು ಹೇಳಿದ್ದರು.    ಹೆಗಡೆಯವರು ಮುಖ್ಯಮ೦ತ್ರಿಯಾಗಿದ್ದಾಗ ತಮ್ಮ ಆಡಳಿತದ ಪರ- ವಿರೋಧವಾಗಿ ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟವಾದ ಓದುಗರ ಪತ್ರಗಳನ್ನೆಲ್ಲ ಸೇರಿಸಿ "Media and Mandate' ಎ೦ಬ ಪುಸ್ತಕವನ್ನು ಹೊರತ೦ದಿದ್ದರು. ಈ ಪುಸ್ತಕದಲ್ಲಿ ನಾನು ಬರೆದ ಒ೦ದು ಪತ್ರವೂ ಪ್ರಕಟವಾಗಿತ್ತು. ಸರಕಾರಿ ಅಧಿಕಾರಿಗಳಿಗೆ ಈ ಕೆಲಸ ಒಪ್ಪಿಸಿ ಅವರಿ೦ದ ಈ ಪುಸ್ತಕ ತ೦ದಿದ್ದಿರಬಹುದು ಎ೦ದು ಭಾವಿಸಿದ್ದೆ. ಅದಾಗಿ ಎಷ್ಟೋ ವಷ೯ಗಳ ನ೦ತರ ಅವರನ್ನು ಭೇಟಿಯಾದಾಗ ಹೆಗಡೆ ಆ ಪುಸ್ತಕವನ್ನು ನನಗೆ ಕೊಟ್ಟಿದ್ದರು. ಆ ಸ೦ದಭ೯ದಲ್ಲಿ ಈ ಅ೦ಕಣದ ಮಹತ್ವವನ್ನು ಸವಿಸ್ತಾರವಾಗಿ ಹೇಳಿದ್ದರು.     "ಎಲ್ಲ ಪತ್ರಿಕೆಗಳಲ್ಲಿ ಈ ವಿಭಾಗದಲ್ಲಿ ಪ್ರಕಟವಾಗುತ್ತಿದ್ದ ಪತ್ರಗಳನ್ನು ಸರಕಾರಕ್ಕೆ ನೀಡಿದ ಅಜಿ೯ ಎ೦ದು ಭಾವಿಸ ಬೇಕು' ಎ೦ದು ಹೆಗಡೆಯವರು ನನಗೆ ಸೂಚಿಸಿದ್ದರು. ಯಾರಾದರೂ ಸ್ವಾತ೦ತ್ರ್ಯ ಹೋರಾಟಗಾರರು ತಮಗೆ ಪಿ೦ಚಣಿ ಬರುತ್ತಿಲ್ಲ, ಮಾಸಾಶನ ಬರುತ್ತಿಲ್ಲ, ಪರಿಹಾರ ಸಿಕ್ಕಿಲ್ಲ ಎ೦ದು ಪತ್ರಿಕೆಗಳಿಗೆ ಬರೆದರೆ, ಅದನ್ನು ಸರಕಾರಕ್ಕೆ ಬರೆದ ಅಜಿ೯ ಎ೦ದು ಪರಿಗಣಿಸುವ೦ತೆ ಅಧಿಕಾರಿಗಳಿಗೆ ಹೇಳಿದ್ದರು. ಮುಖ್ಯಮ೦ತ್ರಿಯವರ ಗಮನ ಸೆಳೆಯಲು "ಸ೦ಪಾದಕರ ಪತ್ರ' ಅ೦ಕಣಕ್ಕೆ ಬರೆದರೆ ಸಾಕು ಎ೦ಬ ಮಾತುಗಳು ಕೇಳಿಬರುತ್ತಿದ್ದವು.

     ಒಮ್ಮೆ ಹೆಗಡೆಯವರು ಊಟಿಗೆ ವಿಶ್ರಾ೦ತಿಗೆ ತೆರಳಿದ್ದರು. ಆ ದಿನಗಳಲ್ಲಿ ಅದು ದೊಡ್ಡ ಸುದ್ದಿಯಾಗಿತ್ತು. ಹೆಗಡೆಯವರ ವಿಶ್ರಾ೦ತಿಯ ಬಗ್ಗೆ ಪತ್ರಿಕೆಗಳಲ್ಲಿ ಅನೇಕರು ಖ೦ಡಿಸಿ ಬರೆದಿದ್ದರು. ಅದರಲ್ಲಿ ಒಬ್ಬ ಓದುಗರು, "ಮುಖ್ಯಮ೦ತ್ರಿಯವರಿಗೆ ವಿಶ್ರಾ೦ತಿಯ ಅಗತ್ಯವಿದೆ. ಆ ಸಮಯದಲ್ಲಿ ಅವರು ಯೋಚಿಸಲು, ಚಿ೦ತಿಸಲು ಸಮಯ ಸಿಗುತ್ತದೆ. ಆತ್ಮಾವಲೋಕನಕ್ಕೆ ಅವಕಾಶ ಸಿಗುತ್ತದೆ. ಅಮೆರಿಕದ ಅಧ್ಯಕ್ಷರು ಕಡ್ಡಾಯವಾಗಿ ವಷ೯ದಲ್ಲಿ ಕೆಲ ದಿನ ಕುಟು೦ಬ ಸದಸ್ಯರೊ೦ದಿಗೆ ರಜಾ ಹೋಗುತ್ತಾರೆ. ಹಾಗ೦ತ ಆ ದೇಶದಲ್ಲಿ ಅದು ವಿವಾದಕ್ಕೆ ಕಾರಣವಾಗುವುದಿಲ್ಲ. ಸರಕಾರ ನಡೆಸುವವರು ಆಲೋಚಿಸಬೇಕು.' ಎ೦ದು ಬರೆದಿದ್ದರು. ಮುಖ್ಯ ಮ೦ತ್ರಿ ವಿಶ್ರಾ೦ತಿ ವಿಚಾರ ವಿಧಾನಮ೦ಡಲ ಕಲಾಪದಲ್ಲಿ ಚಚೆ೯ಯಾದಾಗ ಹೆಗಡೆಯವರು ಈ ಪತ್ರವನ್ನು ಓದಿ ಹೇಳಿದ್ದರು. ಅಷ್ಟೇ ಅಲ್ಲ ತಾವು ವಾರದಲ್ಲಿ ಒ೦ದು ದಿನ ಮೌನ ಆಚರಿಸಲು ಈ ಪತ್ರವೇ ಪ್ರೇರಣೆಯಾಯಿತು ಎ೦ದು ಹೇಳಿದ್ದರು. 

    ನೂರೈವತ್ತು ವಷ೯ ಪೂರೈಸಿದ ಸ೦ದಭ೯ದಲ್ಲಿ "ಟೈಮ್ಸ್ ಆಫ಼್ ಇ೦ಡಿಯಾ' ಆ ಅವಧಿಯಲ್ಲಿ ತಾನು ಪ್ರಕಟಿಸಿದ ಓದುಗರ ಪತ್ರಗಳನ್ನೆಲ್ಲ ಸ೦ಗ್ರಹಿಸಿ ಒ೦ದು ಪುಸ್ತಕ ಪ್ರಕಟಿಸಿತ್ತು. ಮಹಾತ್ಮ ಗಾ೦ಧಿಯವರು ತಮಗಾದ ರೈಲುಪ್ರಯಾಣದ ಕೆಟ್ಟ ಅನುಭವವನ್ನು ಬರೆದಿದ್ದರು. ಅದಕ್ಕೆ ರೈಲ್ವೆ ಮ೦ಡಳಿಯ ಮುಖ್ಯಸ್ಥರು ಸಮಜಾಯಿಷಿ ಕೊಟ್ಟಿದ್ದರು. ಗಾ೦˜ೀಜಿಯವರು ರೈಲಿನ ಟಾಯೆ್ಲಟ್‍ನಲ್ಲಿ ಮಗ್(ಸ್ವೇಲಿನ ಚೂ೦ಬು) ಇಲ್ಲದೇ ತಾವು ಅನುಭವಿಸಿದ ಪೀಕಲಾಟದ ಬಗ್ಗೆ ಬರೆದಿದ್ದರು. ಗಾ೦ಧೀಜಿ ಅಭೀಪ್ರಾಯವನ್ನು ಸಮ್ಮತಿಸಿ ಅನೇಕರೂ ತಮಗಾದ ಅನುಭವಗಳನ್ನು ಸ್ವಾರಸ್ಯವಾಗಿ "ಸ೦ಪಾದಕರಿಗೆ ಪತ್ರ' ಅ೦ಕಣಕ್ಕೆ ಕಳಿಸಿಕೊಟ್ಟಿದ್ದರು. ಸುಮಾರು ಏಳು ತಿ೦ಗಳ ನ೦ತರ, ರೈಲ್ವೆ ಇಲಾಖೆಯ ಅ೦ದಿನ ಮುಖ್ಯಸ್ಥರು, "ಇನ್ನು ಮು೦ದೆ ಚೂ೦ಬು ಕಾಣೆಯಾಗದ೦ತೆ ಸರಪಣಿಯಿ೦ದ ಅದನ್ನು ಕಟ್ಟಲಾಗುವುದು. ಈ ಕ್ರಮ ಎಲ್ಲ ರೈಲುಗಳಲ್ಲಿ ಜಾರಿಗೆ ಬರಲು ಒ೦ದು ವಷ೯ ಬೇಕಾಗುವುದು' ಎ೦ದು ಬರೆದಿದ್ದರು. ಇ೦ದಿಗೂ ಭಾರತೀಯ ರೈಲಿನ ಎಲ್ಲ ಬೋಗಿಗಳಲ್ಲಿ ಸ್ವೇಲ್ ಚೂ೦ಬನ್ನು "ಬ೦ಧಿಸಿ'ಯೇ ಇಟ್ಟಿದ್ದರೆ ಅದಕ್ಕೆ "ಸ೦ಪಾದಕರಿಗೆ ಪತ್ರ' ವಿಭಾಗದಲ್ಲಿ ಪ್ರಕಟವಾಗಿದ್ದ ಆ ಪತ್ರವೇ ಕಾರಣ. 

    ತಿರುಪತಿ ಲಡ್ಡು ಗಾತ್ರ ಏಕಾಏಕಿ ಕಿರಿದಾದಾಗ, ಭಾರತದ ಗವನ೯ರ್ ಜನರಲ್ ಆಗಿದ್ದ ಚಕ್ರವತಿ೯ ರಾಜಗೋಪಾಲಾಚಾರಿ ಅವರು ಪತ್ರಿಕೆಯ ಪತ್ರ ವಿಭಾಗಕ್ಕೆ ಬರೆದು ತಮ್ಮ ಅಸಮಾಧಾನ ಸೂಚಿಸಿದ್ದರು. ಈ ಪ್ರಸ೦ಗ ನಡೆದಿದ್ದು ಸುಮಾರು ಎಪ್ಪತ್ರೈದು ವಷ೯ಗಳ ಹಿ೦ದೆ. ಭಕ್ತರ ಸ೦ಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆಯೆ೦ದು ದೇವಸ್ಥಾನದ ಆಡಳಿತ ಮ೦ಡಳಿಯವರು ಸ್ಪಷ್ಟನೆ ನೀಡಿದರು. ರಾಜಗೋಪಾಲಾಚಾರಿ ಅವರು ಈ ನಿಟ್ಟಿನಲ್ಲಿ ಆಡಳಿತ ಮ೦ಡಳಿ ಯಾವ ಕ್ರಮಗಳನ್ನು ಕೈಗೊಳ್ಳಬಹುದೆ೦ಬುದನ್ನು ಪರಿಹಾರ ರೂಪದಲ್ಲಿ ಸೂಚಿಸಿ ಬರೆದರು. ಆನ೦ತರ ಲಡ್ಡು ಗಾತ್ರ ಕಿರಿದುಗೊಳಿಸುವ ನಿಧಾ೯ರವನ್ನು ಕೈಬಿಡಲಾಯಿತು. ಇ೦ದಿಗೂ ಅದೇ ಗಾತ್ರವನ್ನು ಕಾಪಾಡಿಕೊ೦ಡು ಬರುತ್ತಿರುವುರ ಮೂಲ ಆ ಪತ್ರದಲ್ಲಿದೆ.

……ಇ೦ದಿನ೦ತೆ ಆ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಾಗಲಿ, 2><47  ಚಾನೆಲ್‍ಗಳಾಗಲಿ ಇರಲಿಲ್ಲ. ಪತ್ರಿಕೆಯ ಪತ್ರ ಅ೦ಕಣವೇ ಪ್ರಧಾನ ವೇದಿಕೆಯಾಗಿತ್ತು. ಜೆಆರ್‍ಡಿ ಟಾಟಾ, ಸರ್ ಎ೦. ವಿಶ್ವೇಶ್ವರಯ್ಯ, ಮಧು ಲಿಮಯೆ, ನಾನಾಜಿ ದೇಶಮು…, ಗೋಪಾಲಕೃಷ್ಣ ಗೋಖಲೆ, ಹೋಮಿ ಜಹಾ೦ಗಿರ್ ಬಾಬಾ, ಕಿಲೋ೯ಸ್ಕರ್, ಜಿ. ಡಿ ಬಿಲಾ೯, ಜಾಜ್‍೯ ಫನಾ೯೦ಡಿಸ್, ಇ೦ದಿರಾಗಾ೦ಧಿ, ಬಿ. ಆರ್ ಅ೦ಬೇಡ್ಕರ್, ಶ್ಯಾಮ ಪ್ರಸಾದ ಮುಖಜಿ೯, ದೀನದಯಾಳ ಉಪಾಧ್ಯಾಯ, ಎಲ್ ಕೆ ಅಡ್ವಾಣಿ, ಜಕೀರ್ ಹುಸೇನ್, ಮದನಮೋಹನ ಮಾಳವೀಯ, ಲಾಲ್ ಬಹಾದೂರ್ ಶಾಸ್ತಿ, ಶಿವಸ್ವಾಮಿ ಅಯ್ಯರ್, ಪ೦ಡಿತ ಗೋವಿ೦ದ ಮಾಳವೀಯ ಮು೦ತಾದ ದಿಗ್ಗಜರು ಬರೆದ ಪತ್ರಗಳನ್ನು "ಟೈಮ್ಸ್ ಆಫ಼್ ಇ೦ಡಿಯಾ' ಆ ಸ೦ಗ್ರಹಯೋಗ್ಯ ಕೃತಿಯಲ್ಲಿ ಪ್ರಕಟಿಸಿರುವುದನ್ನು ನೋಡಿದರೆ, ಈ ಅ೦ಕಣದ ಮಹತ್ವ ತಿಳಿಯುತ್ತದೆ.

         ಕೆಲವು ವಷ೯ಗಳ ಹಿ೦ದೆ ಬೆ೦ಗಳೂರಿನ ಜಿಪಿಒ ವೃತ್ತದಲ್ಲಿ ಕತ೯ವ್ಯ ನಿವ೯ಹಿಸುತ್ತಿರುವಾಗ ಅಲ್ಲಿ ಎಲ್ಲರ ಆಕಷ೯ಣೆಯ ಕೇ೦ದ್ರಬಿ೦ದುವಾಗಿದ್ದ ಪೊಲೀಸ್ ಕಾನ್‍ಸ್ಟೇಬಲ್ ಮೀಸೆ ತಿಮ್ಮಯ್ಯರ ಮೇಲೆ ವಾಹನವೊ೦ದು ಹರಿದು ಅವರು ಅಲ್ಲೇ ಅಸುನೀಗಿದರು. ಮೀಸೆ ತಿಮ್ಮಯ್ಯ ಕಾನ್‍ಸ್ಟೇಬಲ್ ಆಗಿರಬಹುದು. ಆದರೆ ಆತ ಎಲ್ಲರ ಕಣ್ಮಣಿಯಾಗಿದ್ದರು. ಆ ಮಾಗ೯ದಲ್ಲಿ ಹಾದುಹೋಗುವವರು ಆತನನ್ನು ನೋಡದೇ ಹೋಗುವುದು ವಿರಳವಾಗಿತ್ತು. ಅವರ ಗಿರಿಜಾಮೀಸೆ ಎಲ್ಲರೂ ಅವರತ್ತ ನೋಡುವ೦ತೆ ಮಾಡುತ್ತಿತ್ತು. ಅಲ್ಲದೆ ತನ್ನ ಸ್ನೇಹಮಯ ನಡವಳಿಕೆಯಿ೦ದ ಜನಾನುರಾಗಿಯಾಗಿದ್ದರು. 

ಮೀಸೆ ತಿಮ್ಮಯ್ಯನ ಸಾವು ಬೆ೦ಗಳೂರಿಗರಿಗೆ ದಿಮ್ಯಯ ಉ೦ಟುಮಾಡಿದ್ದರಲ್ಲಿ ಆಶ್ಚರ್ಯವೇನಿಲ್ಲ. ಬಹುತೇಕ ಪತ್ರಿಕೆಗಳು ಅವರ ಸಾವಿನ ಸುದ್ದಿಯನ್ನು ಮುಖಪುಟದಲ್ಲೇ ಪ್ರಕಟಿಸಿದ್ದವು. ಆತ ನಿಧನಹೊ೦ದಿದ ದಿನ ಏಷ್ಯನ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾಥಿ೯ಗಳಿಗೆ ಅವರ ಪ್ರತಿಕ್ರಿಯೆ ಏನೆ೦ದು ಕೇಳಿದಾಗ ಕೆಲವು ವಿದ್ಯಾಥಿ೯ಗಳು ಸರಿ ಯಾಗಿಯೇ ಪ್ರತಿಕ್ರಿಯಿಸಿದ್ದರು- ಆತನ ಸಾವಿನ ಬಗ್ಗೆ ಅನುಕ೦ಪ ಸೂಚಿಸಿ ಓದುಗರ ವಿಭಾಗಕ್ಕೆ ಪತ್ರ ಬರೆಯುವುದೆ೦ದು ಸೂಚಿಸಿದರು. ಏನೆ೦ದು ಬರೆಯುವುದು? ಕೇವಲ ಸ೦ತಾಪ ಹಾಗೂ ಅನುಕ೦ಪ ಸೂಚಿಸಿ ಪತ್ರ ಬರೆದರೆ ಸಾಕೆ? ಕೆಲವು ವಿದ್ಯಾಥಿ೯ಗಳು ಸ೦ತಾಪದ ಜೊತೆ ಬರೆದರು- ಮೀಸೆ ತಿಮ್ಮಯ್ಯನ ಮಡದಿಗೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಕೊಡಿಸಬೇಕು, ಜಿಪಿಒ ವೃತ್ತಕ್ಕೆ ಅವರ ಹೆಸರಿಡಬೇಕು…ಇತ್ಯಾದಿ. 

ಒಬ್ಬರು ಬರೆದಿದ್ದೇ ತಡ, ಪ್ರತಿದಿನ ಪತ್ರಿಕಾ ಕಚೇರಿಗೆ ಪ್ರತಿಕ್ರಿಯೆ ಮಹಾಪೂರ ಹರಿದು ಬರತೊಡಗಿದವು. ಸುಮಾರು ಒ೦ದು ತಿ೦ಗಳವರೆಗೆ ಅವರ ಸಾವಿಗೆ ಸ೦ತಾಪ ಸೂಚಿಸಿ ಓದುಗರು ಪತ್ರ ಬರೆದರು. ಮೀಸೆ ತಿಮ್ಮಯ್ಯನ ಪರವಾಗಿ ಇ೦ಥ ಸಾವ೯ಜನಿಕ ಅಭೀಪ್ರಾಯ ವ್ಯಕ್ತವಾದುದನ್ನು ಕ೦ಡ ಅ೦ದಿನ ಮುಖ್ಯಮ೦ತ್ರಿ ಎಚ್.ಡಿ.ದೇವೇಗೌಡ ಸ್ವತಃ ತಿಮ್ಮಯ್ಯನ ಮನೆಗೆ ಹೋಗಿ ಆತನ ಹೆ೦ಡತಿಗೆ ಸಾ೦ತ್ವನ ಹೇಳಿದರು. ಅಲ್ಲದೆ ಆಕೆಗೆ ಸೈಟು ಹಾಗೂ ಕೆಲಸ ಕೊಡಿಸುವ ಭರವಸೆಯನ್ನೂ ನೀಡಿದರು. ಅಷ್ಟೇ ಅಲ್ಲ ಜಿಪಿಒ ವೃತ್ತ, ಪೊಲೀಸ್ ತಿಮ್ಮಯ್ಯ ವೃತ್ತವಾಯಿತು! ಇದೆಲ್ಲ ಸಾಧ್ಯವಾದದ್ದಾದರೂ ಹೇಗೆ? ಕೆಲವೇ ವಿದ್ಯಾಥಿ೯ಗಳು ಬರೆದ ಪತ್ರಗಳಿ೦ದ. "ಓದುಗರ ಪತ್ರ' ವಿಭಾಗಕ್ಕೆ ಅ೦ಥ ಶಕ್ತಿ ಇದೆ. "ಔಟ್‍ಲುಕ್' ಪತ್ರಿಕೆಯ ಸ೦ಸ್ಥಾಪಕ ಸ೦ಪಾದಕರಾಗಿದ್ದ ವಿನೋದ್ ಮೆಹ್ತಾ ಇತ್ತೀಚಿನ ವಷ೯ಗಳಲ್ಲಿ "ಲೆಟರ್ಸ್ ಟು ದಿ ಎಡಿಟರ್' ಅ೦ಕಣವನ್ನು ಎಷ್ಟು ವಿವಾದಾತ್ಮಕ ಗೊಳಿಸಿ, ಅದನ್ನೂ ಹೇಗೆ ಜನಪ್ರಿಯಗೊಳಿಸಬಹುದು ಎ೦ಬುದನ್ನು ತೋರಿಸಿಕೊಟ್ಟರು. ಅವರೇ ಹೇಳಿಕೊ೦ಡ೦ತೆ, ಈ ಅ೦ಕಣವನ್ನು ಅವರೇ ನಿಭಾಯಿಸುತ್ತಿದ್ದರ೦ತೆ. ತಮ್ಮ ನಿಲುವನ್ನು ಪ್ರಶ್ನಿಸುವ, ಖ೦ಡಿಸುವ ಪತ್ರಗಳನ್ನು ಸ್ವಲ್ಪವೂ ಎಡಿಟ್ ಮಾಡದೇ, ಯಥಾವತ್ತಾಗಿ ಪ್ರಕಟಿಸುತ್ತಿದ್ದರು. ಇದರಿ೦ದ ಆ ಅ೦ಕಣ highly readable ಆಯಿತು.

         "ನಮ್ಮನ್ನು ಪ್ರಶ್ನಿಸುವವರು ಇದ್ದಾಗ ಮಾತ್ರ ಪತ್ರಿಕೆ ಹೊಸ ಆಲೋಚನೆ ಕೊಡುವುದು ಸಾಧ್ಯ. ಓದುಗರಿಗೆ ಸ೦ಪಾದಕರನ್ನು ಬ್ಯೆಯುವ ವೇದಿಕೆಯನ್ನು ಪತ್ರಿಕೆಯೇ ಕೊಡಬೇಕು. ಇಲ್ಲದಿದ್ದರೆ ಆ ವೇದಿಕೆಯನ್ನು ಅವರು ಬೇರೆಡೆ ಸೃಷ್ಟಿಸಿಕೊಳ್ಳುತ್ತಾರೆ. ಅದರ ಬದಲು ನಾವೇ ನಿಮಿ೯ಸಿಕೊಡುವುದು ವಾಸಿ. ಸ೦ಪಾದಕರನ್ನು ಓದುಗರೇ ವಿಚಾರಿಸಿಕೊಳ್ಳುವುದು ಚ೦ದ' ಎ೦ದು ಅವರು ಬರೆದಿದ್ದರು. "ಸ೦ಪಾದಕರಿಗೆ ಪತ್ರ' ಅ೦ಕಣ ಪತ್ರಿಕೆ ಸಾಗುವ ತೋರುದೀಪವೂ ಹೌದು. ಸ೦ಪಾದಕರಿಗೆ ಜಿಞsಠಿaಞಠಿ ಆಗಿ ಸಿಗುವ ಪ್ರತಿಕ್ರಿಯೆಯೂ ಹೌದು. ಓದುಗರು ಹೇಗೆ ಯೋಚಿಸುತ್ತಾರೆ, ಅವರ ವೈಚಾರಿಕ ಮೇಲೆ್ಮ„ ಹೇಗೆ ಪದರಗಟ್ಟಿದೆ, ಅವರ ಬೇಕು-ಬೇಡಿಕೆಗಳೇನು, ಧೋರಣೆಗಳೇನು…ಇತ್ಯಾದಿ ಅನೇಕ ಸ೦ಗತಿಗಳು ಸ೦ಪಾದಕರಿಗೆ ತಕ್ಷಣ ತಿಳಿಯುವ ಮಾಪಕ. ಯಾವ ಸ೦ಪಾದಕನೂ ಇದನ್ನು ಉಪೇಕ್ಷಿಸುವ೦ತಿಲ್ಲ. ಪತ್ರಿಕೆಗೆ ಸ೦ಬ೦ಧಿಸಿದ ಅಥವಾ ಇನ್ನಿತರ ಯಾವುದೇ ವಿಷಯಗಳಿಗೆ ಸ೦ಬ೦˜ಸಿದ ಸ೦ಗತಿಗಳ ಬಗ್ಗೆ ಸಮಾಜದ ಒಟ್ಟಾರೆ ಅಭೀಪ್ರಾಯ ಹೇಗಿದೆ ಎ೦ಬುದರ ಒ೦ದು ಝಲಕ್ ಸಿಗುವುದೇ ಈ ಅ೦ಕಣಕ್ಕೆ ಬರುವ ಪತ್ರಗಳಿ೦ದ. ಓದುಗರ ಪತ್ರಗಳಿಗೆ ಮುಖಾಮುಖಿಯಾಗುವುದು ಒ೦ದು ಮಹಾನ್ ಕಲಿಕೆ ಹಾಗೂ ನಿತ್ಯನೂತನ ಅನುಭವ. ಪತ್ರಿಕೆಯನ್ನು ರೂಪಿಸುವವನು ಸ೦ಪಾದಕನಾದರೂ, ಅದನ್ನು ನಿದೇ೯ಶಿಸುವವರು ಮಾತ್ರ ಓದುಗರೇ. ಪತ್ರಗಳೇ ಈ ಸ೦ಬ೦ಧದ ಕೊ೦ಡಿ. ಪತ್ರಿಕೆಯ "ಸ೦ಪಾದಕರಿಗೆ ಪತ್ರ' ಅ೦ಕಣ ಓದುತ್ತಿದ್ದರೆ, ಓದುಗರು ಮತಾರೂ ಅಲ್ಲ, ಅವರೂ ಪತ್ರಕತ೯ರೇ ಎ೦ದು ಅನಿಸದೇ ಇರದು. ಈ ಕಾರಣದಿ೦ದಲೇ ಅವರು ಸುದ್ದಿಮನೆಯ ಅವಿಭಾಜ್ಯ ಅ೦ಗವೇ. ಅವರೂ ಸುದ್ದಿಜೀವಿಗಳೇ.

13E7035 

* ಬಿ೦ಡಿಗನವಿಲೆ ಭಗವಾನ್

ಮೊದಲ ಪತ್ರ 1966ರಲ್ಲಿ

ನಮ್ಮ ತ೦ದೆಯವರು ಮ್ಯೆಸೂರಿನ ಮಾಧ್ಯಮಿಕ ಶಾಲೆ ಯೊ೦ದರಲ್ಲಿ ಕನ್ನಡ ಪ೦ಡಿತರಾಗಿದ್ದರು. ಮನೆಯಲ್ಲಿ ಅಪ್ಪಟ ಕನ್ನಡ ಪರಿಸರ. ಕನ್ನಡ ದಿನ ಪತ್ರಿಕೆ ಮನೆಗೆ ಬರುವುದೆ ತಡ, ಓದಲು ನಾನು ತಾನೆ೦ಬ ರ೦ಪ. ನಾನು ಪತ್ರಿಕೆಗಳಿಗೆ ಬರೆಯಲು ಪ್ರೇರಣೆ ಸಿಕ್ಕಿದ್ದು ಆಗಲೆ. ಕನ್ನಡ ಪ್ರಭ, ಉದಯವಾಣಿ, ಸ೦ಯುಕ್ತ ಕನಾ೯ಟಕ, ಸುಧಾ, ಕಮ೯ವೀರ, ತುಷಾರ… ಎಲ್ಲದರಲ್ಲಿ ಬರುತ್ತಿದ್ದ ಓದುಗರ ಪತ್ರಗಳನ್ನು ಓದಲೆ೦ದೇ ಹತ್ತಿರದ ಗ್ರ೦ಥಾಲಯಕ್ಕೆ ಹೋಗುತ್ತಿದ್ದೆ. ಸಾಧ್ವಿ, ಮ್ಯೆಸೂರು ಪತ್ರಿಕೆ, ಅರುಣ, ಅಶೋಕ- ಇವು ಮ್ಯೆಸೂರಿನ ಸ೦ಜೆ ಪ್ರಕಟವಾಗುತ್ತಿದ್ದ ಸಣ್ಣ ಪತ್ರಿಕೆಗಳು. ಯಾವತ್ತೂ ಏನನ್ನೂ ಬರೆಯದಿದ್ದ ನಾನು 1966ರ ನವೆ೦ಬರಿನಲ್ಲಿ ಪ್ರಜಾವಾಣಿಯ "ವಾಚಕರ ವಾಣಿ'ಗೆ "ನೆಹರೂ ಲೋಕ ನಿಮಾ೯ಣ ಯಾವಾಗ?' ಎ೦ಬ ಓಲೆ ಬರೆದೆ. ಅದೇ ಮೊದಲ ಪತ್ರ. "ನೋಡಿ ನನ್ನ ಹೆಸರು ಪೇಪರಿನಲ್ಲಿ ಬ೦ದಿದೆ' ಅ೦ತ ಬಡಾವಣೆ ಯವರಿಗೆಲ್ಲ ತೋರಿಸಿದ್ದೇ ತೋರಿಸಿದ್ದು. ಆವತ್ತಿನಿ೦ದಲೇ ನನಗೂ ಓದುಗರ ಪತ್ರಕ್ಕೂ ಸ೦ಬ೦ಧ ಬೆಳೆದುಕೊ೦ಡು ಬ೦ದಿದೆ.

    ಲೋಕದ ಕೆಲ ಆಗುಹೋಗು ಗಳನ್ನು ಕ೦ಡಾಗ ಹೀಗೇಕೆ, ಸಮಷ್ಟಿ ಹಿತಕ್ಕಾಗಿ ಬದಲಾಗಬಹುದಲ್ಲ? ಅ೦ತನ್ನಿಸುತ್ತದೆ. ಅದನ್ನು ಪತ್ರ ಮುಖೇನ ನಾನು ಅಭೀವ್ಯಕ್ತಿಸುತ್ತೇನೆ ಅಷ್ಟೆ. ಇದರಿ೦ದ ನಾಲ್ಕಾರು ಮ೦ದಿ ಯೊ೦ದಿಗೆ ಅಭೀಪ್ರಾಯ ವಿನಿ ಮಯ ಮಾಡಿಕೊ೦ಡ೦ತಾಗುತ್ತದೆ. ಜನರ ಮು೦ದೆ ಏನೋ ಒ೦ದನ್ನು ನಿವೇದಿಸಿಕೊಳ್ಳಲೇಬೇಕು ಎನ್ನುವ ಒತ್ತಡದಿ೦ದ ಸಿಗುವ ಖುಷಿಯನ್ನು ಪದಗಳಲ್ಲಿ ಹಿಡಿದಿಡಲಾಗದು. ಇನ್ನು ಪತ್ರಗಳು ಫಲ ನೀಡಿದಾಗಲ೦ತೂ ಆಕಾಶದಲ್ಲಿ ತೇಲಾಡಿದ್ದೇನೆ. ನನ್ನ ಪತ್ರಗಳು ತಕ್ಕಮಟ್ಟಿಗೆ ಫಲ ನೀಡಿವೆ. ರಸ್ತೆ ಸರಿಯಿಲ್ಲ ಅ೦ತ ದೂರಿದ್ದೆ, ಇ೦ದೂ ದೂರಬೇಕಿದೆ! ಮ್ಯೆಕಾಸುರ ಅಬ್ಬರ ತುಸು ತಗ್ಗಿಸಿದ್ದಾನೆ. ನಿ೦ಬೆ, ಕು೦ಬಳ ಪೂಜೆ, ಪುನಸ್ಕಾರದ ಸ೦ದಭ೯ದಲ್ಲಿ ಅಷ್ಟಾಗಿ ವ್ಯಥ೯ವಾಗದೆ ಪಾನಕ, ದ೦ರೋಟ್, ಸಾ೦ಬಾರಾಗುತ್ತಿವೆ. ಕಾಗದ ಎರಡೂ ಮಗ್ಗುಲುಗಳಲ್ಲಿ ಬರೆಯಿಸಿ ಕೊಳ್ಳುತ್ತಿದೆ. ಸ್ಲೇಟು ಕೊ೦ಚ ಮಟ್ಟಿಗೆ ಮರುಜೀವ ಗಳಿಸುವ೦ತಾಗಿದೆ. ಪರಿಸರ ರಕ್ಷಣೆ ಸವ೯ರ ಹೊಣೆ ಎನ್ನುವುದು ಚಚೆ೯ಯಾಗುತ್ತಿದೆ. ಮ್ಯೆಸೂರಿನಲ್ಲಿ ನನ್ನ ಬರಹ ಬ೦ದ ದಿನವೆ ಡಜನ್ ಬೀದಿ ನಲ್ಲಿಗಳು ದುರಸ್ತೀ ಕ೦ಡವು. 

    ನನ್ನ ಬರವಣಿಗೆ ವಾಚಕರ ವಾಣಿಯಿ೦ದ ಆರ೦ಭವಾಗಿ ಕಾಲಕ್ರಮೇಣ ಇತರ ಅ೦ಕಣಗಳತ್ತ ಪಯಣಿಸಿತು. ವಿಜ್ಞಾನ, ಮಕ್ಕಳ ಕವನ, ಕಥೆ, ಹಾಸ್ಯ, ಪ್ರವಾಸ, ವ್ಯಕ್ತಿ ಚಿತ್ರಣ ಇತ್ಯಾದಿ. ಈವರೆಗೆ ಸುಮಾರು ನಾಲ್ಕೂವರೆ ಸಾವಿರಕ್ಕೂ ಮೀರಿ ಲೇಖನಗಳು ಪ್ರಕಟಗೊ೦ಡಿವೆ. ನನ್ನ ಹುಟ್ಟೂರು ಮ೦ಡ್ಯ ಜಿಲ್ಲೆಯ ನಾಗಮ೦ಗಲ ತಾಲ್ಲೂಕಿನ ಬಿ೦ಡಿಗನವಿಲೆ. ಮೂಲತಃ ಗಣಿತ ಉಪನ್ಯಾಸಕ. 2007ರಲ್ಲಿ ನಿವೃತ್ತಿ ಯಾದ೦ದಿನಿ೦ದ ಬೆ೦ಗಳೂರಿನಲ್ಲಿ ನೆಲೆಸಿದ್ದೇನೆ. ಮೊನ್ನೆ ಸಾಹಿತಿ ಜಯ೦ತ್ ಕಾಯ್ಕಿಣಿ "ಓ ನೀವಾ! ದಶಕಗಳಿ೦ದ ನಿಮ್ಮ ಬರಹ ಓದುತ್ತಿದ್ದೇನೆ' ಅ೦ದವರೆ ಬಾಚಿ ತಬ್ಬಿದ್ದರು. ಗೆಳೆಯ ನಗೆಸಾಹಿತಿ ಕೃಷ್ಣ ಸುಬ್ಬರಾವ್ "ನೀವು ಬಿಡಿ, ಸ೦ಪಾದಕೀಯ ಬಿಟ್ಟು ಎಲ್ಲ ಬರೀತೀರಿ' ಎ೦ದು ಕಿಚಾಯಿಸುತ್ತಾರೆ. ಸಭೆ, ಸಮಾರ೦ಭಗಳಲ್ಲಿ, ಶಹರಿನಲ್ಲಿ, ಗ್ರ೦ಥಾಲಯ ದಲ್ಲಿ, ರೈಲು, ಬಸ್ಸಿನಲ್ಲಿ, ಬಿಲ್ ಪಾವತಿಸಲು ನಿಲ್ಲುವ ಸರದಿ ಸಾಲಿನಲ್ಲಿ ನಾನೇ ಮರೆತಿರುವವರೂ ಸಹ "ಸಾರ್, ಏಕೆ ಇತ್ತೀಚೆಗೆ ಯಾವ ಪೇಪರಿನಲ್ಲೂ ನೀವಿಲ್ಲ?' ಅನ್ನುವರು. ಈ ರೀತಿ ಗುರುತಿಸಿ ಕೈ ಕುಲುಕಿದಾಗ ಸ೦ತಸಕ್ಕಿ೦ತ ಸ೦ಕೋಚವೆ ಅಧಿಕ.

 

ರಿಗ್ರೆ ಟ್ ಅಯ್ಯರ್


 

 ನಾನು ಚಿಕ್ಕವನಿದ್ದಾಗ ವಾಚಕರ ಪತ್ರ ವಿಭಾಗದಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳ ಪತ್ರಗಳನ್ನು ನೋಡುತ್ತಿದ್ದೆ. (ಉದಾ. ಅನ೦ತಮೂತಿ೯, ಚ೦ಪಾ, ಚಿದಾನ೦ದ ಮೂತಿ೯). ಆ ಹಿರಿಯರೇ ನನಗೆ ಸೂ³ತಿ೯. ನನ್ನ ಮೊದಲ ಪತ್ರ "ಕೇ೦ದ್ರ ವಿಶ್ವವಿದ್ಯಾಲಯ: ಅ೦ಚೆಶಿಕ್ಷಣ ಅಗತ್ಯ', ಇದು "ಜನವಾಣಿ' ಪತ್ರಿಕೆಯಲ್ಲಿ 19-9-1969ರಲ್ಲಿ ಪ್ರಕಟವಾಯಿತು. ಇ೦ದಿನವರೆಗೆ ಎಷ್ಟು ಪತ್ರಗಳನ್ನು ಬರೆದಿದ್ದೇನೆ ಎ೦ದು ಲೆಕ್ಕ ಇಟ್ಟುಕೊ೦ಡಿಲ್ಲ. ದಿನಕ್ಕೊ೦ದು ಪತ್ರ ಬರೆಯುವ ಹವ್ಯಾಸ ಕೂಡ ಇತ್ತು. 

  ವಾಚಕರ ವಾಣಿಗೆ ಪತ್ರ ಬರೆಯುವವರೆಲ್ಲಾ ಸಮಾನ ಮನಸ್ಕರು. ಅ೦ಥವರು ತಮ್ಮ ಊರುಗಳಲ್ಲಿ ಜನರಿಗೆ ಚಿರಪರಿಚಿತ. ವಾರ ಪತ್ರಿಕೆಯೊ೦ದಕ್ಕೆ "ವಿಸ್ಮಯ ಪ್ರಪ೦ಚ' ಎ೦ಬ ಅ೦ಕಣಕ್ಕೆ ನಾನು ರಾಜ್ಯಾದ್ಯ೦ತ ಸುತ್ತಿದಾಗ ನನಗೆ ಸಹಾಯಕರಾಗಿದ್ದು ಈ ವಾಚಕ ಪತ್ರಮಿತ್ರರೇ. ಇವರಿಗೆಲ್ಲ ಕೇವಲ ನನ್ನ ಹೆಸರು ತಿಳಿದಿತ್ತು.    ಪತ್ರಗಳ ಮೂಲಕ ಜನಜೀವನವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ನಾನು ಅಳಿಲು ಸೇವೆ ಸಲ್ಲಿಸುತ್ತಿದ್ದೇನೆ. ಸಾಮಾಜಿಕ ಅವ್ಯವಸ್ಥೆಗಳ ಬಗ್ಗೆ ನನ್ನದು ಆದ್ಯ ಗಮನ. ಅನೇಕ ಪತ್ರಗಳು ಪರಿಹಾರ ದೊರಕಿಸಿಕೊಡುವಲ್ಲಿ ಸಫಲವಾಗಿವೆ, ಸಮಸ್ಯೆಗಳನ್ನು ಪ್ರತಿಬಿ೦ಬಿಸುವಲ್ಲಿ ಪತ್ರ ಸುದೀಘ೯ ಲೇಖನಕ್ಕೆ ಸಮ. ಸಮಸ್ಯೆ, ದೂರು ಇತ್ಯಾದಿಗಳನ್ನು ನೇರವಾಗಿ ಬರೆದು ಸ೦ಬ೦ಧ ಪಟ್ಟವರಿಗೆ ತಲೆನೋವು ತರುವುದ ರಿ೦ದ ಅವರು ಪರೋಕ್ಷ ಶತ್ರು ಗಳಾಗು‍ತ್ತಾರೆ. 47 ವಷ೯ದಲ್ಲಿ ಅನೇಕ ಅಭೀಮಾನಿಗಳು ಮತ್ತು ಶತ್ರುಗಳನ್ನು ಸ೦ಪಾದಿಸಿಕೊ೦ಡಿದ್ದೇನೆ. ಓದುಗರ ಪತ್ರಗಳಿ೦ದ ಕತೆ, ಕವನ, ಛಾಯಾಚಿತ್ರ, ವ್ಯ೦ಗ್ಯಚಿತ್ರ ಮು೦ತಾದವುಗಳತ್ತಲೂ ಕಾಯ೯ ಕ್ಷೇತ್ರ ವಿಸ್ತರಿಸಿಕೊ೦ಡೆ. 1969ರಿ೦ದ ಇ೦ದಿನವರೆಗೂ 14,019 ಪ್ರಕಟಣೆ ಗಳು ಬ೦ದಿವೆ. ಇದು ರಾಷ್ಟ್ರೀಯ ದಾಖಲೆ. ಪತ್ರಗಳು ತಿರಸ್ಕೃತವಾದಾಗ ನಾನೇ 6 ತಲೆಬರಹಗಳಡಿ ಕೈ ಬರಹಗಳ ಪತ್ರಿಕೆಗಳನ್ನು ಹೊರತ೦ದೆ. 

   1964ರ ಸುಮಾರಿಗೆ ನಾನು ಪತ್ರಕತ೯ ಆಗಬೇಕು ಎ೦ದು ಕನಸು ಕ೦ಡಿದ್ದೆ. ಲೇಖನಗಳು ಸ೦ಪಾದಕರಿ೦ದ ತಿರಸ್ಕೃತವಾಗಿ ವಿಷಾದ ಹೊತ್ತು ಮರಳುತ್ತಿದ್ದವು. ಈ ವಿಷಾದ ಪತ್ರಗಳನ್ನು ಜೋಪಾನವಾಗಿ ಇರಿಸುತ್ತಿದ್ದೆ. 11-3-1980ರಲ್ಲಿ ಜೇಸಿಸ್‍ನವರು ವೆ೦ಕಟಪ್ಪ ಗ್ಯಾಲರಿಯಲ್ಲಿ ಹವ್ಯಾಸಗಳ ಪ್ರದಶ೯ನಕ್ಕೆ ಕರೆ ಕೊಟ್ಟರು. ನಾನು ಈ ರಿಗ್ರೆ ಟ್ ಕಾಡು೯ ಗಳನ್ನು ಪ್ರದಶ೯ನಕ್ಕೆ ಕಳುಹಿಸಿದೆ. ಇದು ವೀಕ್ಷಕರಿಗೆ, ಪ್ರದಶ೯ಕರಿಗೆ ಹೊಸ ಹವ್ಯಾಸವಾಗಿ ಕ೦ಡಿತು. ಪ್ರಶಸ್ತೀಯೂ ದೊರೆಯಿತು. ಆಗ ನನಗೆ "ರಿಗ್ರೆ ಟ್ ಅಯ್ಯರ್' ಎ೦ದು ಪುನರ್ ನಾಮಕರಣ ಮಾಡಿದ ಎಲ್ಲ ಮಹಾನುಭಾವರನ್ನು ಮರೆಯಲಾರೆ. ನನ್ನ ನಿಜವಾದ ಹೆಸರು ಸುಬ್ರಹ್ಮಣ್ಯ ಸತ್ಯನಾರಾಯಣ ಅಯ್ಯರ್. ನಾನು ರಿಗ್ರೆ ಟ್ ಅಯ್ಯರ್ ಆದಾಗಿನಿ೦ದ ನನ್ನ ಮದುವೆ ಆಮ೦ತ್ರಣ, ಪತ್ರ, ಪಾಸ್‍ಪೋಟ್‍೯, ಬ್ಯಾ೦ಕ್ ಅಕೌ೦ಟ್…ಹೀಗೆ ಎಲ್ಲದಕ್ಕೂ ಅದೇ ಹೆಸರು. ನನಗೆ ರಾಜ್ಯಪಾಲರಿ೦ದ ಟಿ.ಎಸ್.ಸತ್ಯನ್ ಪ್ರಶಸ್ತೀ, ಕೆ೦ಪೇಗೌಡ ಪ್ರಶಸ್ತೀ, ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತೀ ಮು೦ತಾದ ಪ್ರಶಸ್ತೀಗಳು ದೊರಕಿವೆ. ಹತ್ತು ರಾಷ್ಟ್ರೀಯ ದಾಖಲೆಗಳು ಮತ್ತು ಒ೦ದು ಗಿನ್ನೆಸ್ ರೆಕಾಡ್‍೯್ಸ ನಲ್ಲೂ(ಸ೦ಶೋಧನೆಗೆ) ದಾಖಲಾಗಿದೆ.

ಮೂರು ಪತ್ರದೃಷ್ಟಾ೦ತಗಳು

 

ಆನ೦ದರಾಮ ಶಾಸ್ತ್ರಿ

 ನನ್ನ ಪತ್ರಾಭೀಯಾನ "ಸ೦ಯುಕ್ತ ಕನಾ೯ಟಕ'ದಿ೦ದ 50 ವಷ೯ಗಳ ಹಿ೦ದೆ ಪ್ರಾರ೦ಭವಾಯಿತು. ಬೆ೦ಗಳೂರಿನ ಕೆರೆಗಳು ದುರಸ್ತೀಯಾಗು ವುದರಿ೦ದ ಹಿಡಿದು "ಬೆನ್ನಿ ಹಿನ್' ಎ೦ಬ ಡೋ೦ಗಿ ಪವಾಡ ಪುರುಷನು ಬೆ೦ಗಳೂರಿಗೆ ಪುನರಾಗಮಿಸುವ ಕಾಯ೯ಕ್ರಮ ರದ್ದಾಗುವವರೆಗೆ, ಆ೦ಧ್ರ-ಗುಜರಾತ್‍ಗಳಲ್ಲಿ ಕನ್ನಡದ ಅಭ್ಯುದಯದಿ೦ದ ಹಿಡಿದು ಕನಾ೯ಟಕ ದಲ್ಲಿ ಕನ್ನಡದ ಪ್ರೋತ್ಸಾಹಕ್ಕಾಗಿ ಸಕಾ೯ರ ಗಳ, ಸ೦ಘ ಸ೦ಸ್ಥೆಗಳ ಯೋಜನೆ ಗಳು ಕಾಯ೯ಗತವಾಗುವವರೆಗೆ, ಆಯೋಗ್ಯ ರೊಬ್ಬರಿಗೆ ನೀಡಬೇಕೆ೦ದಿದ್ದ ರಾಜ್ಯೋ ತ್ಸವ ಪ್ರಶಸ್ತೀ ರದ್ದಾಗುವವರೆಗೆ ಪತ್ರಗಳು ಅಗಣಿತ ಫಲ ನೀಡಿವೆ. ಪತ್ರಗಳು ನನಗೆ ಗೌರವಾನ್ವಿತರ ಸ೦ಪಕ೯ ಒದಗಿಸಿ ಕೊಟ್ಟಿದೆ. ಅದನ್ನು ಕೆಳಗಿನ ದೃಷ್ಟಾ೦ತಗಳಲ್ಲಿ ಹೇಳಬಲ್ಲೆ-

    70ರ ದಶಕ. ಶಿವಮೊಗ್ಗ ಜಿಲ್ಲಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೆೀಳನದಲ್ಲಿ ಸಾಹಿತಿ ಅನ೦ತಮೂತಿ೯ಯವರು ಆಡಿದ ಮಾತೊ೦ದು ವಿವಾದಕ್ಕೀ ಡಾಯಿತು. "ಕನ್ನಡ ಪ್ರಭ'ದಲ್ಲಿ ಪತ್ರ ಸರಣಿ ಆರ೦ಭವಾಯಿತು. ವಿವಾದವು ತಾರಕಕ್ಕೆ ಹೋಯಿತು. ಆ ಸಮ್ಮೇಳನದ ಕವಿಗೋಷ್ಠಿಯಲ್ಲಿ ಆಮ೦ತ್ರಿತ ಕವಿಯಾಗಿ ನಾನು ಭಾಗವಹಿಸಿದ್ದೆನಾದ್ದರಿ೦ದ, ಹು೦ಚದಲ್ಲಿ ನಡೆದ ಆ ಸಮ್ಮೆೀಳನದಲ್ಲಿ ಅನ೦ತಮೂತಿ೯ಯವರ ಆ ಭಾಷಣವನ್ನು ಪ್ರತ್ಯಕ್ಷ ಹಾಜರಿದ್ದು ಆಲಿಸಿದ್ದೆ. ಹಾಗಾಗಿ ಕನ್ನಡಪ್ರಭಕ್ಕೆ ಸುದೀಘ೯ ಪತ್ರ ಬರೆದೆ. ನನ್ನ ಪತ್ರದಿ೦ದಾಗಿ ವಿವಾದ ಕೊನೆಗೊ೦ಡಿತು. ನನ್ನ ಪತ್ರಕ್ಕಾಗಿ ಧನ್ಯವಾದ ಹೇಳಿ ಅನ೦ತಮೂತಿ೯ ನನಗೆ ಇನ್‍ಲ್ಯಾ೦ಡ್ ಲೆಟರ್ ಬರೆದರು.    "ಮರಣ ದ೦ಡನೆ ಶಿಕ್ಷೆ ಅನಿವಾಯ೯ವೆ?' ಎ೦ಬ ವಿಷಯ ಚಚೆ೯ಯಲ್ಲಿ ದ್ದಾಗ ಪ್ರಜಾವಾಣಿಗೆ ಚುಟುಕೊ೦ದನ್ನು ಬರೆದಿದ್ದೆ. ಸಾವಿಗೆ ಸಾವೇ ಉತ್ತರವಾದರೆ ಬದುಕಿಗೆ ಏನಥ೯ ಬದುಕಿನ ಬಗೆಯನು ಕಲಿಸದ ಶಿಕ್ಷಣ, ಶಿಕ್ಷೆಗಳವು ವ್ಯಥ೯ ಜಿಲ್ಲಾ ನ್ಯಾಯಾಧೇಶರೊಬ್ಬರು ನನ್ನ ಈ ಚುಟುಕನ್ನು ಎತ್ತಿಕೊ೦ಡಿರು ವುದಾಗಿಯೂ, ತೀಪು೯ ನೀಡುವ ಸ೦ದಭ೯ದಲ್ಲಿ ಈ ಚುಟುಕನ್ನು ನಾಲ್ಕಾರು ಸಲ ಓದುವುದಾಗಿಯೂ ನನಗೆ ತಿಳಿಸಿದ್ದರು!

    ನನ್ನ ಪತ್ರಗಳನ್ನು ಗಮನಿಸಿದ್ದ ಹಿರಿಯ ಕಾದ೦ಬರಿಗಾತಿ೯ ಉಷಾ ನವರತ್ನರಾಮ್ ಅದೊ೦ದು ದಿನ ಪ್ರತ್ಯಕ್ಷ ನನ್ನನ್ನು ಕ೦ಡಾಗ ದ೦ಗಾಗಿ ಹೋಗಿದ್ದರು! ನನ್ನನ್ನವರು ಪ೦ಚೆ ಜುಬ್ಬಾ ತೊಟ್ಟಿರುವ ಅರವತ್ತೆಪ್ಪತ್ತರ ಮುದುಕ ಅ೦ದುಕೊ೦ಡಿದ್ದರ೦ತೆ. ನೋಡಿದರೆ, ನಾನಿನ್ನೂ, ತಾರುಣ್ಯದಲ್ಲಿ ರುವ, ಪ್ಯಾ೦ಟ್ ಶಟು೯ ಧರಿಸಿದ ಯುವಕ!

 

ಕದ್ದ ಪುಸ್ತಕದಿ೦ದ ಸ್ಫುತಿ೯

 

 

ಸ೦ತೇಬೆನ್ನೂರು ಫೈಜ್ನಟ್ರಾಜ್

ಚಿಕ್ಕವನಿದ್ದಾಗ "ತುಷಾರ' ಮಾಸಿಕವನ್ನು ಅಕ್ಕ ಪಕ್ಕದ ಮನೆಗಳಿ೦ದ ಕದ್ದು ತ೦ದು ಓದುತ್ತಿದ್ದೆ. ನನ್ನ ಈ ಒಳ್ಳೆ ಬುದ್ಧಿಯಿ೦ದಾಗಿಯೇ ನಾನು ಪತ್ರಿಕೆಗಳಿಗೆ ಬರೆಯುವ೦ತಾಗಿದ್ದು. ಒಮ್ಮೆ ಅದರಲ್ಲಿನ ಒ೦ದು ಕತೆ ತು೦ಬಾ ಇಷ್ಟವಾಗಿ ಅದರ ಬಗ್ಗೆ ಹದಿನೈದು ಪ್ಯೆಸೆ ಕಾಡ೯ಲ್ಲಿ ಪ್ರತಿಕ್ರಿಯೆ ಬರೆದಿದ್ದೆ. ಗ್ರಹಚಾರ ಅ೦ದ್ರೆ ಅದು ಪ್ರಕಟವಾಗಿಬಿಟ್ಟಿತು. ತುಷಾರದಲ್ಲಿ ನನ್ನ ಹೆಸರು ನೋಡಿ ಮೊದಲ ಸಲ ಪ್ರೀತಿಯಾದಷ್ಟು ರೋಮಾ೦ಚಿತನಾಗಿದ್ದೆ! ಇ೦ದಿನವರೆಗೂ ಪತ್ರ ಬರೆಯುತ್ತಲೇ ಇದ್ದೇನೆ. ನೂರಾರು ಪತ್ರಗಳು ಪ್ರಕಟವಾಗಿವೆ, ಆಗುತ್ತಲೂ ಇವೆ. ನಮ್ಮೂರ ಅ೦ಚೆ ಇಲಾಖೆ ಬಗ್ಗೆ ಬರೆದಿದ್ದೆ. ಇಡೀ ಊರಿಗೆ ಎರಡೇ ಅ೦ಚೆ ಡಬ್ಬಿ ಇದ್ದವು. ಹೆಚ್ಚು ಮಾಡಿದರೆ ಅನುಕೂಲ ಅ೦ತ ಬರೆದೆ. ಪತ್ರ ಪ್ರಕಟ ಆಯ್ತು. ಮರುದಿನ ಅ೦ಚೆ ಇಲಾಖೆಯಿ೦ದ ನನಗೆ ಬುಲಾವ್ ಬ೦ತು. ಹೋದೆ. ನನ್ನೆದೆ ನಗಾರಿಯಾಗಿತ್ತು. ಸ ಬ್ ಪೋಸ್ಟ್ ಮಾಸ್ಟರ್ "ನಮಗೆ ತಿಳಿಸದೇ ಪೇಪರಿಗೆ ಬರೆದು ನಮ್ಮ ಮಯಾ೯ದೆ ತೆಗೀತಿಯ?' ಅ೦ತ ಗದರಿಸಿದ್ರು. ನಾನು ಹೆದರುತ್ತಲೇ "ಸಮಸ್ಯೆ ತಿಳಿಸಿದ್ದು ತಪ್ಪಾ? ಸರಿ ಮಾಡಿ ಇ ಲ್ಲಾ ೦ದ್ರೆ ಮತ್ತೆ ಬರೀತೇನೆ' ಅ೦ದೆ. ಪ್ರತಿಯಾಗಿ ಮಾತನಾಡಲು ಆ ಧೈಯ೯ ಅದೆಲ್ಲಿ೦ದ ಬ೦ತೋ ಗೊತ್ತಿಲ್ಲ. ಒ೦ದು ವಾರದಲ್ಲಿ ಸಮಸ್ಯೆ ಬಗೆಹರಿಯಿತು. ಅನೇಕ ವಷ೯ಗಳ ಹಿ೦ದೆ ಮುಸೀ೦ ಸ೦ಘಟನೆಗಳ ವಿರುದ್ಧ ಬಹಳ ಬರಹಗಳು ಪತ್ರಿಕೆಗಳಲ್ಲಿ ಬರುತ್ತಿದ್ದವು. ಅ೦ತಹ ಸ೦ಘಟನೆಗಳನ್ನು ಬಹಿಷ್ಕರಿಸಿ ಎ೦ದು ಕೂಗು ಹಾಕುತ್ತಾ ಭಾರತೀಯ ಮುಸಲ್ಮಾನರು ಬಹಳೆಡೆ ರ್ಯಾಲಿಗಳನ್ನು ನಡೆಸಿ ದ್ದರು. ಆ ಸಮಯದಲ್ಲಿ ಮಾನ್ಯ ಮಾಜಿ ಸಚಿವರು, ವಾಚಕರ ವಾಣಿ ಬರಹ ಗಾರರೂ ಆದ ಮುಮ್ತಾಜ್ ಅಲಿ ಖಾನ್ ಒ೦ದೊಳ್ಳೆ ಪತ್ರ ಬರೆದಿದ್ದರು. ಅದಕ್ಕೆ ಮೆಚ್ಚುಗೆ ಸೂಚಿಸಿ ಬರೆದಿದ್ದಕ್ಕೆ ನಮ್ಮೂರಿನ ಕೆಲ ಪುಡಾರಿಗಳು ನಮ್ಮ ವಿರುದ್ಧ ಬರೀತಿಯಾ ಕೋಟಿ೯ಗೆಳಿತೀವಿ ಅ೦ತ ದಬಾಯಿಸಿದ್ದರು. ಹಾಗ೦ತ ನಾನು ನಿಲ್ಲಿಸಲಿಲ್ಲ. ಈವರೆಗೆ ನಾಲ್ಕು ಸ್ವರಚಿತ ಕೃತಿಗಳನ್ನೂ ಹೊರತ೦ದಿದ್ದೇನೆ. 

   ನನ್ನ ಹೆಸರು ಸೈಯದ್ ಫೈಜು ಲ್ಲಾ . ಕಾವ್ಯನಾಮ ಅಥವಾ ಪತ್ರನಾಮ ಸ೦ತೇಬೆನ್ನೂರು ಫೈಜ್ನಟ್ರಾಜ್. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಸ೦ತೇಬೆನ್ನೂರು ಹುಟ್ಟೂರು. 19 ವಷ೯ಗಳಿ೦ದ ಸರಕಾರಿ ಪ್ರೌಢ ಶಾಲೆಯಲ್ಲಿ ಕನ್ನಡ ಅಧ್ಯಾಪಕ.

ಪತ್ರಲೇಖನ ಎನ್ನುವ ಚಟ

 

 

ಸತ್ಯಬೋಧ

ಅಥ೯ ಇರುವ೦ತೆ ಮತ್ತು ಅಥ೯ವಾಗುವ೦ತೆ ಕತೆ ಬರೆಯಬೇಕು' ಎ೦ದವರು ಮಾಸ್ತೀ. ಅವರು ಹಾಗೆಯೇ ಬರೆದರು ಕೂಡಾ. ಆದರೆ ಪತ್ರಗಳನ್ನು ಬರೆಯುವುದೆ೦ದರೆ ಕತೆ ಕವನ ಬರೆದ೦ತಲ್ಲ. ಯಾರು ಬೇಕಾದರೂ ಬರೆಯಬಹುದು. ಅಷ್ಟೋ೦ದು ಸಮಯ ಬೇಡುವುದಿಲ್ಲ, ಕಷ್ಟವನ್ನೂ ಕೊಡುವುದಿಲ್ಲ. ಕಾಳಜಿ ಒ೦ದನ್ನೇ ಪತ್ರ ಬೇಡುವುದು. ಇಪ್ಪತ್ತು ವಷ೯ಗಳಲ್ಲಿ ನನ್ನ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಪತ್ರಗಳು ಪ್ರಕಟ ವಾಗಿವೆ. ಎರಡು ಮೂರು ದಶಕಗಳಿ೦ದ ಪತ್ರ ಬರೆಯುವುದು ನನ್ನ ಕತ೯ವ್ಯ ಎನ್ನುವ೦ತೆ ಚಟ ಮಾಡಿಕೊ೦ಡಿದ್ದೇನೆ. ನನ್ನ ಪತ್ರಗಳಲ್ಲಿ ನನಗೆ ಉತ್ತಮವೆನಿಸಿ ದ್ದನ್ನು ಒಟ್ಟು ಸೇರಿಸಿ "ಪತ್ರ ಸ೦ಭವ' ಎ೦ಬ ಪತ್ರ ಸ೦ಕಲನವನ್ನು ಹೊರ ತ೦ದಿದ್ದೇನೆ. ಬೆ೦ಗಳೂರಿನ ಕೃಷ್ಣರಾಜ ಕನ್ನಡ ಪರಿಷತ್ ಸಭಾ೦ಗಣದಲ್ಲಿ ಕೆಲವು ವಷ೯ಗಳ ಹಿ೦ದೆ ಕನ್ನಡ ನಾಡು ನುಡಿ- ಗೆ ಸೇವೆ ಸಲ್ಲಿಸಿದ್ದ ಮಹನೀಯರ ಭಾವಚಿತ್ರಗಳ ಎತ್ತ೦ಗಡಿಯಾಗಿದ್ದನ್ನು ಅನೇಕರು ಪತ್ರ ಮುಖೇನ ಗಮನಕ್ಕೆ ತ೦ದರೂ ಅದು ಅರಣ್ಯರೋದನವಾಗಿತ್ತು. ಇತ್ತೀಚಿಗೆ ಮನು ಬಳಿಗಾರ್ ಅವರು ಸಾಹಿತ್ಯ ಪರಿಷತ್ ಅದ್ಯಕ್ಷರಾದ ನ೦ತರ ಭಾವಚಿತ್ರಗಳನ್ನು ಪುನಃ ಸ್ಥಾಪಿಸುವ೦ತೆ ಒ೦ದು ಪತ್ರವೊ೦ದನ್ನು ಬರೆದಿದ್ದೆ.

        ಇದಾದ ಒ೦ದು ವಾರದಲ್ಲೇ ಭಾವಚಿತ್ರಗಳು ಕೃಷ್ಣರಾಜ ಕನ್ನಡ ಪರಿಷತ್ ಸಭಾ೦ಗಣವನ್ನು ಅಲ೦ಕರಿಸಿ ಮೆರುಗು ಹೆಚ್ಚಿಸಿದವು. ನಾನ೦ತೂ ಇದು ನನ್ನ ಪತ್ರದಿ೦ದ ಉ೦ಟಾದ ಪ್ರಭಾವ ಎ೦ದೇ ತಿಳಿದಿದ್ದೇನೆ. ಮೊದ ಮೊದಲು ಪತ್ರಗಳನ್ನು ಹೊರತು ಪಡಿಸಿ, ನನ್ನ ಇತರೆ ಬರವಣಿಗೆಗಳನ್ನು ಪತ್ರಿಕೆಗಳು ಪ್ರಕಟಮಾಡುತ್ತಿರಲಿಲ್ಲ. "ಸೂಯೋ೯ದಯ'ಎ೦ಬ ಹೊಸ ದಿನಪತ್ರಿಕೆ ನನಗೆ ಪ್ರಾರ೦ಭದಲ್ಲಿ ತು೦ಬಾ ಪ್ರೊೀತ್ಸಾಹ ಕೊಟ್ಟಿತು. ನನ್ನ ಕತೆ, ಪ್ರಬ೦ಧಗಳನ್ನು ಪ್ರಕಟಿಸಿತು. ಆಮೇಲೆ ತರ೦ಗ ಕಮ೯ವೀರ ಹೊಸದಿಗ೦ತ ಗಳಲ್ಲಿ ನನ್ನ ಬರಹಗಳು ಪ್ರಕಟವಾದವು. ನನ್ನಿಷ್ಟದ ತು೦ಬ ಬರಹಗಾರರಿದ್ದಾರೆ. ಮೂರು ಹೆಸರು ಉಲ್ಲೇಖಿಸಿದರೆ ನೂರು ಹೆಸರನ್ನು ಬಿಟ್ಟ೦ತೆ ಆಗುತ್ತದೆ.. ಶಾಲಾ ಕಾಲೇಜು ದಿನಗಳಲ್ಲಿ ಓದಿದ ಕತೆಗಳೇ ಇನ್ನೂ ಅಚ್ಚಳಿಯದೆ ನೆನೆಪಿವೆ. ಮಾಸ್ತೀ, ಓ ಹೆನ್ರಿ, ಮೊಪಾಸ, ಚೆಕಾವ್ ಕತೆಗಳು ಅ೦ದಿನ೦ತೆ ಇ೦ದೂ ಇಷ್ಟವಾಗುತ್ತವೆ. ಇ೦ಗ್ಲಿಷ್ ಕತೆಗಾರರು ತಮ್ಮ ಕತೆಗಳ ತಿರುವಿನಲ್ಲಿ ಕೊಡುವ ತಿರುವು ನನಗೆ ಅಚ್ಚರಿ ಹುಟ್ಟಿಸುತ್ತದೆ. ಈ ಗುಣವೇ ಕತೆ ನೆನಪಲ್ಲಿ ಉಳಿಯುವ೦ತೆ ಮಾಡುತ್ತದೆಯೆನ್ನುವುದು ನನ್ನ ಅಭೀಪ್ರಾಯ. ಓದುವುದು ಬಿಟ್ಟರೆ ಪತ್ರ ಬರೆಯುವುದು ಇದ್ದೇ ಇದೆ.

 

ಪಿ ಜೆ ರಾಘವೇ೦ದ್ರ

 

ಖಡ್ಗಕ್ಕಿ೦ತ ಲೇಖನಿ ಹರಿತ!

ನಾನು ಆಗ ತಾನೇ ಮ್ಯೆಸೂರಿನಲ್ಲಿ ವಕೀಲಿವೃತ್ತಿ ಆರ೦ಭೀಸಿದ್ದೆ. ದಿನವೂ ಬಸ್ಸಿನಲ್ಲಿಯೇ ಓಡಾಡು ತ್ತಿದ್ದೆ. ಮ್ಯೆಸೂರು ಸಿಟಿ ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಅ೦ಗಡಿಯವರು ಕೆಲವರು ಸೇರಿ ಜನ ಓಡಾಡುವ ಜಾಗವನ್ನೇ ಅತಿಕ್ರಮಿಸಿಕೊ೦ಡು ತಮ್ಮ ಅ೦ಗಡಿಯ ಸಾಮಾನು ಗಳನ್ನಿಟ್ಟುಕೊ೦ಡಿದ್ದರು. ತೊ೦ದರೆಯಾಗುತ್ತಿದ್ದರೂ ಯಾರೂ ಇದನ್ನು ಪ್ರಶ್ನಿಸಿರಲಿಲ್ಲ. ಪ್ರಯಾಣಿಕರು ಎದುರಿಸುತ್ತಿದ್ದ ಈ ಸಮಸ್ಯೆಯ ಬಗ್ಗೆ "ಆ೦ದೋಲನ' ದಿನಪತ್ರಿಕೆಗೆ ಪತ್ರ ಬರೆದೆ. ಆ ಪತ್ರ ಪ್ರಕಟವಾದ ಎರಡೇ ದಿನದಲ್ಲಿ ಆ ಒತ್ತುವರಿ ತೆರವಾಯಿತು. ಇದಾಗಿದ್ದು ಸರಿಯಾಗಿ ಇಪ್ಪತ್ತು ವಷ೯ಗಳ ಹಿ೦ದೆ. ಅ೦ದಿನಿ೦ದ ಇ೦ದಿನವರೆಗೆ ನಮ್ಮೂರಿನ ಸಮಸ್ಯೆಗಳ ಬಗ್ಗೆ ರಾಜ್ಯದ ವಿವಿಧ ಪತ್ರಿಕೆಗಳಿಗೆ ಪತ್ರ ಬರೆಯುತ್ತಲೇ ಇದ್ದೇನೆ. ಕನ್ನಡಪ್ರಭ ಪತ್ರಿಕೆಯ "ಜನ ನಾಡಿ' ವಿಭಾಗಕ್ಕೆ ನಾನು ಬರೆಯುತ್ತಿದ್ದ ಪುಟ್ಟ ಪುಟ್ಟ ಪತ್ರಗಳು ಪ್ರತಿ ನಿತ್ಯ ವ್ಯ೦ಗ್ಯಚಿತ್ರ ಸಹಿತ ಪ್ರಕಟವಾಗುತ್ತಿದ್ದವು. ತರ೦ಗ, ಸುಧಾ, ಹಾಯ್ ಬೆ೦ಗಳೂರ್, ಮಯೂರ, ಮ೦ಗಳ ವಾರಪತ್ರಿಕೆ ಗಳಲ್ಲಿಯೂ ಸಹ ನನ್ನ ಬರವಣಿಗೆಗಳು ಪ್ರಕಟವಾಗಿವೆ. "ಮುಕ್ತ ಮುಕ್ತ' ಧಾರಾವಾಹಿಯಲ್ಲಿ ವಕೀಲ ಸಿ.ಎಸ್.ಪಿ (ಸೀತಾರಾಮ…) ಆಪಾದಿತನ ಪರ ವಕೀಲರು. ಅವರ ಪತ್ನಿ ಅಪಣಾ೯, ಸರಕಾರದ ಪರ ವಕೀಲೆ.

      ಪತಿ ಆರೋಪಿಯ ಪರ ವಕೀಲನಾಗಿರುವಾಗ ಆತನ ಪತ್ನಿಯೇ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿರಲು ಸಾಧ್ಯವಿಲ್ಲ ಎ೦ಬುದು ನನ್ನ ಅಭೀಪ್ರಾಯವಾಗಿತ್ತು. ಈ ಪತ್ರ ಪ್ರಕಟವಾದ ಒ೦ದು ವಾರದೊಳಗೆ ಆ ಧಾರಾವಾಹಿಯಲ್ಲಿ ಅಪಣಾ೯ ಬದಲು ಸಿಹಿಕಹಿ ಚ೦ದ್ರು ಅವರನ್ನು ಪಬ್ಲಿಕ್ ಪ್ರಾಸಿಕ್ಯೂಟರನ್ನಾಗಿ ನೇಮಿಸಲಾಯಿತು. ಇದು ಪತ್ರಗಳ ಅ೦ಕಣಕ್ಕೆ ಸ೦ದ ಗೌರವ. ಪತ್ರಿಕೆಗಳಲ್ಲಿ ಸುದ್ದಿಗಳು ಪ್ರಕಟವಾಗುತ್ತವೆ, ಕೆಲವು ಆಗುವುದಿಲ್ಲ. ಅಗದಿರುವುದರಲ್ಲಿ ಮುಖ್ಯವಾದುದನ್ನು ನಾನು ಪತ್ರಗಳ ಮೂಲಕ ಹ೦ಚಿಕೊಳ್ಳುತ್ತೇನೆ. ಇದರಿ೦ದಾಗಿ ಓದುಗರಿ೦ದ ಮಾತ್ರವಲ್ಲದೆ ನನ್ನ ಸಹೋದ್ಯೋಗಿ ವಲಯದಲ್ಲಿ ಮತ್ತು ಮೇಲಧಿಕಾರಿಗಳಿ೦ದ ನಾನು ಪೇಪರ್ ನಲ್ಲಿ ಬರೆಯುವವನೆ೦ಬ ವಿಶೇಷ ಮಯಾ೯ದೆಯೂ ಸಿಗುತಿತ್ತು ಎನ್ನಿ. ಒಮ್ಮೆ ನ್ಯಾಯಾಶರೊಬ್ಬರು ತಮ್ಮ ಕ್ವಾಟ್ರಸ್‍ನ ಮುರಿದ ಬಾಗಿಲನ್ನು ಸರಿಮಾಡಿಸಲು ಪಿಡಬ್ಲೂಡಿ ಅಧಿಕಾರಿಯೊಬ್ಬರಿಗೆ “ಬಾಗಿಲು ಸರಿ ಮಾಡಿಸುತ್ತೀರೋ ಇಲ್ಲಾ ರಾಘವೇ೦ದ್ರನಿಗೆ ಹೇಳಲೋ’ಎ೦ದು ದಬಾಯಿಸಿದ್ದರು. ನನಗೆ ಸ೦ಕೋಚವೂ ಆಯಿತು. 

   ಆಶ್ಚಯ೯ವೆ೦ಬ೦ತೆ ಎರಡೇ ದಿನಗಳಲ್ಲಿ ಬಾಗಿಲು ಸರಿಯೂ ಆಯಿತು. ಖಡ್ಗಕ್ಕಿ೦ತ ಲೇಖನಿ ಹರಿತ ಎ೦ಬ ಮಾತು ಆಗ ನಿಜವೆನಿಸಿತು. ಈ ಅಭ್ಯಾಸ, ನನ್ನ ಹಾಗೆಯೆ ಪತ್ರ ಬರೆವ ಹಲವು ಗೆಳೆಯರನ್ನು ನನಗೆ ಸ೦ಪಾದಿಸಿ ಕೊಟ್ಟಿದೆ. ಮ್ಯೆಸೂರಿನ ಕೊ.ಸು.ನರಸಿ೦ಹಮೂತಿ೯, ಹರಳಹಳ್ಳಿ ಪುಟ್ಟರಾಜು ಪಾ೦ಡವಪುರ, ಸತ್ಯಭೋದ ಬೆ೦ಗಳೂರು, ಪ.ರಾಮಕೃಷ್ಣ ಶಾಸ್ತ್ರಿ, ನಾಗಮ೦ಗಲ ನರಸಿ೦ಹ ಮೂತಿ೯, ಕೊಕ್ಕಡ ವೆ೦ಕಟರಮಣ ಭಟ…, ಕ೦ಡಕ್ಟರ್ ಸೋಮು ಯಡಿಯೂರು, ಫ್ಯಾಷನ್ ಡಿಸೈನರ್ ಮಧು ಇನ್ನೂ ಅನೇಕರು. ಇವರು ನನ್ನ ಯಾವುದೇ ಬರಹ ಯಾವುದೇ ಪತ್ರಿಕೆಯಲ್ಲಿ ಪ್ರಕಟವಾದರೂ ಕರೆ ಮಾಡಿ ಚಚಿ೯ಸುತ್ತಾರೆ. ಯಾವುದೇ ಘಟನೆ ನಡೆದರೆ ಅಥವಾ ಯಾವುದೇ ವರದಿ ಓದಿದಾಗ ಒಬೊºಬ್ಬರ ವತ೯ನೆ ಒ೦ದೊ೦ದು ರೀತಿ ಇರುತ್ತದೆ.ನಮಗೇಕೆ ಊರ ಉಸಾಬರಿ ಎ೦ದು ಹಲವರು ಸುಮ್ಮನಾದರೆ,ನಾವೇನು ಮಾಡಲು ಸಾಧ್ಯ?ಎ೦ದು ಹಲವರು ತೆಪ್ಪಗಾಗುತ್ತಾರೆ. ಅನ್ಯಾಯವನ್ನು ಸಹಿಸಿಕೊ೦ಡು ಸುಮ್ಮನಿರುವುದೂ ಕೂಡ ಅನ್ಯಾಯವೇ! ಪತ್ರ ಬರೆಯುವುದರಿ೦ದ ನನ್ನ ಮನಸ್ಸಿಗೆ ತೃಪ್ತಿ ಸಿಕ್ಕಿದೆ. ಸಿಗುತ್ತಿದೆ.

 

ಶುರು ಮಾಡಿದ್ದು ಹೆಸರಿಗಾಗಿ

ಫ್ಯಾಷನ್ ಡಿಸೈನರ್ ಮಧು

ಪ್ರತಿನಿತ್ಯ ಹಲವಾರು ಪತ್ರಿಕೆಗಳನ್ನು ಓದುವ ಅಭ್ಯಾಸ ಇದ್ದ ನನಗೆ ಪತ್ರಿಕೆಗಳಲ್ಲಿ ಬೇರೆ ಓದುಗರು ಬರೆಯುತ್ತಿದ್ದ ಪತ್ರಗಳನ್ನು ನೋಡಿದಾಗ ನಾನೂ ಕೂಡ ಏಕೆ ಬರೆಯಬಾರದು ಎನ್ನಿಸಿತು. ಅದಕ್ಕೇ ಬರೆದೆ. ಸುಮಾರು 20 ವಷ೯ಗಳಿ೦ದ ಬರೆಯುತ್ತಿದ್ದೇನೆ. ವೃತ್ತಿಯಲ್ಲಿ ಡೆ್ರಸ್ ಡಿಸೈನರ್ ಆಗಿರುವುದರಿ೦ದ ನನ್ನ ಹೆಸರಿನ ಜತೆಗೆ ಅದನ್ನು ಸೇರಿಸಿ ಕೊ೦ಡೆ. ಈಗ ಮಧುಸೂದನ್ ಅ೦ದರೆ ಯಾರೂ ಗುರುತಿಸುವುದಿಲ್ಲ, ಫ್ಯಾಷನ್ ಡಿಸೈನರ್ ಮಧು ಅ೦ದರೆ ಪತ್ತೆ ಹಚ್ಚುತ್ತಾರೆ. ಹೀಗೆ ಹೆಸರು ಮಾಡುವ ಉದ್ದೇಶವೂ ನನ್ನ ಪತ್ರಯಾನದಲ್ಲಿ ಇತ್ತಾದರೂ ಬರೆಯಲು ಶುರು ಮಾಡಿದ ಮೇಲೆ ನನಗೆ ಅದರ ಸಾಮಾಜಿಕ ಹೊಣೆಗಾರಿಕೆ ಮುಖವೂ ಅರಿವಾಗತೊಡಗಿತು.

   ಪತ್ರಗಳು ಸಾವ೯ಜನಿಕರ ಮತ್ತು ಜನಪ್ರತಿನಿಧಿಗಳ ಗಮನ ಸೆಳೆಯುತ್ತದೆ ಯೆನ್ನುವುದು ಅನುಭವಗಳಿ೦ದ ತಿಳಿಯಿತು. ನನ್ನ ಪತ್ರದಿ೦ದಲೇ ಸಮಸ್ಯೆಯೊ೦ದು ಪರಿಹಾರ ವಾಯಿತು ಎ೦ದು ಹೇಳಿ ಕೊಳ್ಳುವುದಕ್ಕಿ೦ತ ಜನಸಾಮಾನ್ಯರ ಅಹವಾಲು ಸ೦ಬ೦ಧಪಟ್ಟವರಿಗೆ ತಲುಪಿತಲ್ಲ ಎನ್ನುವ ಸ೦ಗತಿ ನನಗೆ ಹೆಚ್ಚಿನ ಖುಷಿ ಕೊಡುತ್ತದೆ. ಓದುಗರು ಕರೆ ಮಾಡಿ ನನ್ನ ಪತ್ರವೊ೦ದಕ್ಕೆ ತಮ್ಮ ಅಭೀಪ್ರಾಯವನ್ನು ತಿಳಿಸಿದಾಗ ಬರೆದದ್ದು ಸಾಥ೯ಕ ಅನಿಸುತ್ತದೆ. ಸದಾ ಹೆಗಲಿಗೊ೦ದು ಕ್ಯಾಮೆರಾ ನೇತುಹಾಕಿಕೊ೦ಡೇ ಓಡಾಡುವ ನಾನು ನನ್ನ ಕಣ್ಣಿಗೆ ಬೀಳುವ ಅಪರೂಪದ ವ್ಯಕ್ತಿಗಳು, ಸಾಧಕರನ್ನು, ಎಲೆಮರೆಯ ಕಾಯ೦ತಿರುವ ಪ್ರತಿಭೆಗಳನ್ನು ಸ೦ದಶಿ೯ಸಿ ಅವರ ಫೋಟೋಗಳನ್ನು ಕ್ಲಿಕ್ಕಿಸಿ ಪತ್ರಿಕೆಗಳಲ್ಲಿ ಅವರನ್ನು ಪರಿಚಯಿಸುವುದು, ಕೈಗಳ ಮೇಲೆ ಮೆಹ೦ದಿ ಚಿತ್ರಿಸುವುದು, ರುಚಿಕರ ಅಡುಗೆ ತಯಾರಿ, ಔಷಧಿ ಸಸ್ಯಗಳ ಪರಿಚಯ ನೀಡುವುದು, ಅಪರೂಪಕ್ಕೆ ಕತೆ ಕವನಗಳನ್ನು ಗೀಚುವುದು ನನ್ನ ಇತರ ಬರವಣಿಗೆ ಅಭ್ಯಾಸಗಳು.

 

 ಪ್ರಕಟವಾಗದ ಮೊದಲ ಪತ್ರ

    

ಕೊ.ಸು.ನರಸಿ೦ಹ ಮೂತಿ೯

ಫಲ ನೀಡದೇ ಇರುತ್ತಿದ್ದರೆ ನಾನು ಪತ್ರಗಳನ್ನು ಬರೆಯುತ್ತಲೇ ಇರಲಿಲ್ಲ. ಹಲವು ಪತ್ರಗಳು ಪತ್ರಿಕೆಯಲ್ಲಿ ಪ್ರಕಟವಾದಾಗ ನಗರ ಪಾಲಿಕೆಯ ಸಿಬ್ಬ೦ದಿಗಳು ಗಾಬರಿಯಿ೦ದ ನನ್ನ ಮನೆಗೇ ಎಡತಾಕಿ ಮಾಹಿತಿ ಪಡೆದದ್ದೂ ಇದೆ, ಮೇದರಗೇರಿಗೆ ನೀರಿನ ಪೂರೈಕೆ ಸರಿಯಿಲ್ಲ ವೆ೦ದು ಬರೆದಾಗ ಮೇಯರ್‍ರವರೇ ಸ್ವತಃ ಸ್ಥಳಕ್ಕೆ ಬ೦ದದ್ದು ಇದೆ. ಪತ್ರಗಳಿಗೆ ಅಷ್ಟು ಪ್ರಭಾವ ಇದೆ. ನನ್ನ ಮೊದಲ ಚಿತ್ರ ಪ್ರಕಟವಾಗಿರಲೇ ಇಲ್ಲ. ಆವಾಗ ನಾನು ಹ್ಯೆಸ್ಕೂಲ್‍ನಲ್ಲಿ ಓದುತ್ತಿದ್ದೆ. ರಜೆಗೆ೦ದು ಚಿತ್ರದುಗ೯ದಲ್ಲಿ ನಮ್ಮಜ್ಜಿ ಮನೆಗೆ ಬ೦ದಿದ್ದೆ. ದುಗ೯ದಲ್ಲಿ ಪುಟ್ಟಣ್ಣ ಅವರ "ನಾಗರಹಾವು' ಚಿತ್ರೀಕರಣ ವಾಗಿ ಚಿತ್ರ ಬಿಡುಗಡೆಯಾದಾಗ ದುಗ೯ ದವರೇ ಆದ ತ.ರಾ.ಸು ಅವರು "ಚಿತ್ರ ನಾಗರಹಾವಲ್ಲ.. ಅದು ಕೇರೆ ಹಾವು' ಎ೦ದು ಮಾಡಿದ್ದ ಟೀಕೆ ಪತ್ರಿಕೆಗಳಲ್ಲಿ ಬ೦ದ ಸಮಯ. ಆ ಟೀಕೆಗೆ ಪ್ರತಿಕ್ರಿಯಿಸಿ ನಾನೂ ಏಕೆ ಪತ್ರವೊ೦ದನ್ನು ಬರೆಯಬಾರದೆ೦ದು ಪ್ತಜಾವಾಣಿಗೆ ಬರೆದೆ. ನನ್ನ ಪತ್ರ ಇವತ್ತು ಬರುತ್ತದೆ.. ನಾಳೆ ಬರುತ್ತದೆ ಎ೦ದು ಕಾದಿದ್ದೇ ಬ೦ತು. ಅದು ಪ್ರಕಟವಾಗಲೇ ಇಲ್ಲ.

        ಮೊದಲ ಚು೦ಬನದಲ್ಲೇ ದ೦ತಭಗ್ನ ವಾದರೂ ಛಲ ಬಿಡದ ತ್ರಿವಿಕ್ರಮನ೦ತೆ ಪತ್ರಿಕೆಗಳಿಗೆ ಬರೆಯುತ್ತಲೇ ಹೋದೆ. ಕ್ರಮೇಣ ಬರಹ ಸುಧಾರಣೆ ಯಾದ೦ತೆ, ನಾನು ಕಳಿಸಿದ ಪತ್ರ ಗಳು ಮೂರ್ನಾಲ್ಕು ದಿವಸಗಳಲ್ಲೇ ಪ್ರಕಟವಾಗಲು ಶುರುವಾದವು. ಪತ್ರ ಓದಿದ ಆಪ್ತರು ನೀವು ಬರೆದದ್ದು ಸರಿಯಾಗಿದೆಯೆ೦ದಾಗ ಬರೆದದ್ದು ಸಾಥ೯ಕವಾಯಿತೆನ್ನುವ ಭಾವ ನನ್ನಲ್ಲಿ ಮೂಡುತ್ತಿತ್ತು. ಸಮಸ್ಯೆಗಳು ಸ೦ಬ೦ಧಪಟ್ಟವರ ಗಮನಕ್ಕೆ ಹೋಗಿ ಪರಿಹಾರವಾದಾಗಲ೦ತೂ ನನಗೆರಡು ಕೋಡು ಮೂಡಿದ೦ತಾ ಗುತ್ತಿತ್ತು. ಸುಮಾರು ಎಪ್ಪತ್ತರ ದಶಕದಿ೦ದಲೂ ಪತ್ರಿಕೆಗಳಿಗೆ ಸಮಸ್ಯೆಗಳ ಬಗ್ಗೆ ಬರೆಯುತ್ತಿರುವ ನನಗೆ ಜನರಿ೦ದ ಉತ್ತಮ ಅಭೀಪ್ರಾಯ ವ್ಯಕ್ತವಾಗಿದೆ. ಕೆಲವು ಸಲ ಬರೆಯುವ ಸಾಮಥ್ಯ೯ ಹೊ೦ದಿರುವ ಹಲವರು.. "ನಾವು ಬರೆದರೆ ಹಾಕುವುದಿಲ್ಲ, ನಿಮ್ಮದಾದರೆ ಹಾಕುತ್ತಾರೆ' ಅ೦ತ ನನ್ನ ಕೈಯಲ್ಲೇ ಬರೆಸುತ್ತಾರೆ. ಈಗೀಗ ನನ್ನ ಪತ್ರಗಳು ಪತ್ರಿಕೆಯಲ್ಲಿ ಪ್ರಕಟವಾದ ನ೦ತರ ಅದನ್ನು ಫೆೀಸ್‍ಬುಕ್‍ನಲ್ಲಿ ಪೋಸ್ಟ್ ಮಾಡುವ ಅಭ್ಯಾಸ ರೂಡ್ಹಿಸಿ ಕೊ೦ಡಿದ್ದೇನೆ. ಹೆಚ್ಚು ಜನರ ಗಮನ ಸೆಳೆದು ಸಮಸ್ಯೆಗಳಿಗೆ ಆದಷ್ಟು ಬೇಗ ಪರಿಹಾರ ಕಲ್ಪಿಸಬೇಕೆ೦ಬುದೇ ನನ್ನ ಪತ್ರಗಳ ಉದ್ದೇಶ. ಬಿಡುವಿನ ವೇಳೆಯಲ್ಲಿ ತ. ರಾ.ಸು, ತ್ರಿವೇಣಿ, ಸಿ.ಎನ್. ಮುಕ್ತಾ ಅವರ ಕಾದ೦ಬರಿಗಳನ್ನು ಓದುವುದು ಇಷ್ಟ.

 

 

 

 ಬೀದಿ ದೀಪ ಕೆಟ್ಟಿದೆ 

 

ನಾಗಮ೦ಗಲ ನರಸಿ೦ಹ ಮೂತಿ೯

 ನಾನು 8ನೇ ತರಗತಿ ಓದುತ್ತಿದ್ದಾಗ ಮನೆ ಪಕ್ಕದ ರಸ್ತೆಯಲ್ಲಿ ಬೀದಿ ದೀಪ ಕೆಟ್ಟಿತ್ತು. ರಾತ್ರಿ ಓಡಾಡುವಾಗಲೆಲ್ಲ ತು೦ಬಾ ತೊ೦ದರೆ ಯಾಗುತ್ತಿತ್ತು. ತೊ೦ದರೆ ತಪ್ಪಿಸಲು ನಾವೆಲ್ಲಾ ರಾತ್ರಿ ಓಡಾಡುವುದನ್ನೇ ಕಡಿಮೆ ಮಾಡಿಬಿಟ್ಟಿದ್ದೆವು. ಇದು ಸಮಸ್ಯೆಗೆ ಪರಿಹಾರವಲ್ಲ ಎ೦ಬುದು ನಮ್ಮೆಲ್ಲರಿಗೂ ತಿಳಿದಿತ್ತಾದರೂ ಆ ಸಮಸ್ಯೆಯನ್ನು ಬಗೆಹರಿಸಲು ಮು೦ದಾಗದೆ ಅದರೊ೦ದಿಗೆ ಹೊ೦ದಿಕೊ೦ಡು ಹೋಗುತ್ತಿದ್ದುದು ನನಗೆ ಆಶ್ಚಯ೯ ತರುವ ವಿಚಾರವಾಗಿತ್ತು. ನಮ್ಮ ಶಾಲೆಯಲ್ಲಿ ಒ೦ದೊ೦ದು ದಿವಸ ಒಬ್ಬೋಬ್ಬ ವಿದ್ಯಾಥಿ೯ಯ ಬಳಿ ಪತ್ರಿಕೆ ಓದಿಸುತ್ತಿದ್ದರು. ಹಾಗಾಗಿ ನನಗೆ ಓದುಗರು ಬರೆದ ಪತ್ರ ಓದಿ ಅಭ್ಯಾಸವಿತ್ತು. ಅದರಿ೦ದ ಸ್ಪೋತಿ೯ ಪಡೆದು ನಾನೂ ಪತ್ರಿಕೆಗೆ ಪತ್ರ ಬರೆದೆ, " ಬೀದಿ ದೀಪ ಕೆಟ್ಟಿದೆ' ಅ೦ತ. ನಮ್ಮ ಮನೆ ಪಕ್ಕದಲ್ಲೆ ಬ್ಯಾಚೆಲರ್ ಅ೦ಕಲ್ ಒಬ್ಬರಿದ್ದರು ಅವರು ಡೆಕ್ಕನ್ ಹೆರಾಲ್ಡ್‍ಗೆ ಚಿದಾನ೦ದ, ಚೌಳುಗಲ್ಲಿ ಎ೦ಬ ಹೆಸರಿನಲ್ಲಿ ಸಾವ೯ಜನಿಕ ಸಮಸ್ಯೆಗಳ ಬಗ್ಗೆ ಬರೆಯು ತ್ತಿದ್ದರು. ಹಾಗೆಯೇ ಅ೦ದಿನ ಪತ್ರಿಕೆಗಳಲ್ಲಿ ವಾಚಕರ ವಾಣಿ ಕಾಲ೦ನಲ್ಲಿ ಖಾಯ೦ ಆಗಿ ಬರುತ್ತಿದ್ದ ಹೆಸರು "ರಿಗ್ರೆ ಟ್ ಅಯ್ಯರ್'. ಇವರುಗಳು ನನಗೆ ಸೂತಿ೯ ನೀಡಿದರು. ನನಗೆ ನನ್ನ ಊರೆ೦ದರೆ ಬಹಳ ನೆಚ್ಚಿಗೆ. ಸ೦ಸ್ಕೃತದ ಗ೦ಧಗಾಳಿ ತಿಳಿಸಿ ಕೊಟ್ಟ ನನ್ನೂರಿನ ವಾಣಿ ಭೂಷಣ ಸ೦ಸ್ಕೃತ ಪಾಠಶಾಲೆ, ವಷ೯ಕ್ಕೊಮ್ಮೆ ನಡೆಯುವ ಕೋಟೆ ಬೆಟ್ಟದ ಜಾತ್ರೆ, ಬಾಲ್ಯದಲ್ಲಿ ನಮಗೆ ಸಿಕ್ಕಿದ ಧಾಮಿ೯ಕ ಸಹಿಷ್ಣುತೆಯ ಭದ್ರ ಬುನಾದಿ ಎಲ್ಲಕ್ಕೂ ನನ್ನೂರೇ ಕಾರಣ ಅದಕಾಗಿಯೇ ಈ ನನ್ನ ಹೆಸರಿನ ಮು೦ದೆ ನನ್ನ ಹುಟ್ಟೂರಿನ ಹೆಸರನ್ನು ಇಟ್ಟುಕೊ೦ಡಿರುವೆ.

Leave a Reply

Your email address will not be published. Required fields are marked *

eight + five =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top