ಕುತೂಹಲ ಮೂಡಿಸಿದ ಪುನೀತ್ ಭೇಟಿ..!

Posted In : ಸಿನಿಮಾ ಸಮಾಚಾರ

ವರನಟ ರಾಜ್‌ಕುಮಾರ್ ಹಾಗೂ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಕುಟುಂಬಕ್ಕೂ ದಶಕಗಳ ಸಂಬಂಧವಿದೆ. ಎರಡೂ ಕುಟುಂಬದವರೂ ಸದಾ ಒಬ್ಬರನೊಬ್ಬರು ಭೇಟಿ ಮಾಡುತ್ತಿರುತ್ತಾರೆ. ಕಾರ್ಯಕ್ರಮಗಳಿಗೆ ಬಂದು ಹೋಗುತ್ತಾರೆ.

 

ಇದಕ್ಕೆ ಸಾಕ್ಷಿ ಇತ್ತೀಚೆಗೆ ಶಿವಣ್ಣ ಅಭಿನಯದ ‘ಟಗರು’ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಚಿರಂಜೀವಿ ಅಳಿಯ ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್ ಬಂದು ಹೋಗಿದ್ದು. ಅದೇ ವೇದಿಕೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಗೂ ರಾಜ್ ಕುಟುಂಬದ ಸದಸ್ಯರೆಲ್ಲರೂ ಇದ್ದರು. ಅದಾಗಿ ಕೆಲವೇ ದಿನಗಳಲ್ಲಿ ಪುನೀತ್ ಮತ್ತೊಮ್ಮೆ ಸಿರೀಶ್ ನಟಿಸುತ್ತಿರುವ ಸಿನಿಮಾದ ಸೆಟ್‌ಗೆ ಭೇಟಿ ನೀಡಿದ್ದಾರೆ.

 

 

ಇದು ಸಾಕಷ್ಟು ಕುತೂಹಲ ಕೆರಳಿಸಿದೆ. ಅಲ್ಲದೆ ಟಗರು ಟೀಸರ್ ಬಿಡುಗಡೆಯ ವೇದಿಕೆಯಲ್ಲಿ ಮಾತನಾಡಿದ್ದ ಸಿರೀಶ್, ‘ಕನ್ನಡದ ಚಿತ್ರಗಳಲ್ಲಿ ನಟಿಸುವ ಆಸೆ ಇದೆ. ಶಿವರಾಜ್‌ಕುಮಾರ್ ಅಥವಾ ಪುನೀತ್ ರಾಜ್‌ಕುಮಾರ್ ಜೊತೆ ಡೆಬ್ಯೂ ಮಾಡಬೇಕೆಂದುಕೊಂಡಿದ್ದೇನೆ’ ಎಂದಿದ್ದರು. ಹೀಗಾಗಿ ಈ ಭೇಟಿಯ ಹಿಂದೆ, ‘ಒಕ ಕ್ಷಣಂ’ ಚಿತ್ರದಲ್ಲಿ ಪವರ್‌ಸ್ಟಾರ್ ಅಭಿನಯಿಸುತ್ತಾರಾ? ಎಂಬ ಗುಮಾನಿಯೂ ಹುಟ್ಟಿಕೊಂಡಿದೆ.

 

ಸದ್ಯ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸುತ್ತಿರುವ ‘ಒಕ ಕ್ಷಣಂ’ ನಾಯಕ ಸಿರೀಶ್, ಕಳೆದ ಭಾನುವಾರ ಕನ್ನಡದ ನಟಿಯರು ಆಯೋಜಿಸಿದ್ದ ಬಟ್ಟೆ ಮಾರಾಟ ಸ್ಥಳಕ್ಕೆ ವಿಸಿಟ್ ಮಾಡಿ ಹಲವು ನಟಿಯರ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದರು. ಕಳೆದೆರಡು ವಾರಗಳಿಂದ ತೆಲುಗು ಚಿತ್ರದ ಶೂಟಿಂಗ್ ಬೆಂಗಳೂರು ಸುತ್ತಮುತ್ತ ನಡೆಯುತ್ತಿದೆ.

ಇಡೀ ತಂಡ ನಗರದಲ್ಲಿ ಬೀಡುಬಿಟ್ಟಿದೆ. ಈ ವೇಳೆಯಲ್ಲಿ ಪುನೀತ್ ಶೂಟಿಂಗ್ ಸ್ಪಾಟ್‌ಗೆ ವಿಸಿಟ್ ಮಾಡಿ ನಿರ್ದೇಶಕರು ಹಾಗೂ ತಂಡಕ್ಕೆ ಶುಭ ಕೋರಿದ್ದಾರೆ. ಇಬ್ಬರು ನಟರ ಭೇಟಿಯ ಚಿತ್ರಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Leave a Reply

Your email address will not be published. Required fields are marked *

5 × 5 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top