About Us Advertise with us Be a Reporter E-Paper

Breaking Newsದೇಶಪ್ರಚಲಿತ

ಐಡಿಯಾ-ವೊಡಾಫೋನ್‌ ವಿಲೀನ ಪ್ರಕ್ರಿಯೆ ಪೂರ್ಣ: ಕುಮಾರ್‌ ಮಂಗಳಂ ಬಿರ್ಲಾ

ದೆಹಲಿ: ಐಡಿಯಾ ಸೆಲ್ಯೂಲಾರ್‌ ಮತ್ತು ವೊಡಾಫೋನ್‌ ಇಂಡಿಯಾ ವಿಲೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈ ಮೂಲಕ  408  ಮಿಲಿಯನ್‌ ಬಳಕೆದಾರರನ್ನು ಒಳಗೊಳ್ಳುವ ಮೂಲಕ ದೇಶದ ನಂಬರ್‌ ಒನ್‌ ಟೆಲಿಕಾಂ ಕಂಪನಿಯಾಗಿದೆ.

ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಶೇ. 32.2 ಶೇರುಗಳನ್ನು ಹೊಂದಿವೆ. ದೇಶದಲ್ಲಿ ಒಂಬತ್ತು ಟೆಲಿಕಾಂ ಸಂಸ್ಥೆಗಳಿದ್ದು, ಅದರಲ್ಲಿ ನಾವು ಮೊದಲ ಸ್ಥಾನದಲ್ಲಿದ್ದೇವೆ ಎಂದು  ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಇಂದು ನಾವು ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಲೀಡಿಂಗ್‌ನಲ್ಲಿದ್ದೇವೆ. ಇದೊಂದು ಐತಿಹಾಸಿಕ ಘಟನೆಯಾಗಿದೆ. ಅಂತಾರಾಷ್ಟ್ರೀಯ ಗುಣಮಟ್ಟದ ಸೇವೆ ನೀಡಲಿದ್ದೇವೆ ಎಂದು ಆದಿತ್ಯ ಬಿರ್ಲಾ ಮತ್ತು ವೊಡಾಫೋನ್‌ ಐಡಿಯಾ ಚೇರ್ಮನ್‌ ಕುಮಾರ್‌ ಮಂಗಳಂ ಬಿರ್ಲಾ ಹೇಳಿದರು.

ಮೊದಲ ಸ್ಥಾನದಲ್ಲಿದ್ದ ಭಾರ್ತಿ ಏರ್‌ಟೆಲ್‌ 2ನೇ ಸ್ಥಾನಕ್ಕೆ ಕುಸಿದಿದೆ. ಮೂರನೇ ಸ್ಥಾನದಲ್ಲಿ ರಿಲಯನ್ಸ್‌ ಜಿಯೋ ಇದೆ. ಮುಖೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಜಿಯೋ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ತಲ್ಲಣ ಮೂಡಿಸಿತ್ತು.

Tags

Related Articles

Leave a Reply

Your email address will not be published. Required fields are marked *

Language
Close