ವಿವಿ ಪಠ್ಯದಲ್ಲಿ ಸೈನಿಕರ ಬಗ್ಗೆ ಅವಹೇಳನ: ನಿವೃತ್ತ ಸೈನಿಕರ ಖಂಡನೆ

Posted In : ರಾಜ್ಯ, ಶಿವಮೊಗ್ಗ

ಶಿವಮೊಗ್ಗ: ಮಂಗಳೂರು ವಿಶ್ವವಿದ್ಯಾಲಯದ ಪಠ್ಯದಲ್ಲಿ ಸೈನಿಕರ ಬಗ್ಗೆ ಅವಹೇಳನ ಮಾಡಿರುವ ಲೇಖನ ಅಳವಡಿಸಿರುವುದನ್ನು ಜಿಲ್ಲಾ ನಿವೃತ್ತ ಸೈನಿಕರ ಸಂಘ ಖಂಡಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಕೃಷ್ಣಾರೆಡ್ಡಿ, ಸೈನಿಕರನ್ನು ಕೆಟ್ಟದಾಗಿ ನಿರೂಪಿಸಿದ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪರ ‘ಯುದ್ಧ ಒಂದು ಉದ್ಯಮ’ ಹೆಸರಿನ ಲೇಖನ ಬಗ್ಗೆ ವಿರೋಧ ವ್ಯಕ್ತಪಡಿಸಿದರು.

ಈ ಲೇಖನವನ್ನು ವಿವಿಯ ಪ್ರಥಮ ವರ್ಷದ ಬಿಎಸ್‌ಸಿ ಮತ್ತು ಬಿಸಿಎ ಕನ್ನಡ ಪಠ್ಯದಲ್ಲಿ ಅಳವಡಿಸಿ ವಿದ್ಯಾರ್ಥಿಗಳಿಗೆ ಬೋಧಿಸುತ್ತಿರುವುದರಿಂದ ವಿದ್ಯಾರ್ಥಿಗಳ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಆರೋಪಿಸಿದರು. ಈ ಲೇಖನವನ್ನು ಪಠ್ಯವಾಗಿ ರೂಪಿಸಿದ್ದಕ್ಕೆ ಎಲ್ಲ ಸೈನಿಕರ ಮತ್ತು ಮಾಜಿ ಸೈನಿಕರ ವಿರೋಧವಿದೆ. ತಕ್ಷಣ ಪಠ್ಯ ರದ್ದುಗೊಳಿಸಬೇಕು ಎಂದರು.

Leave a Reply

Your email address will not be published. Required fields are marked *

20 + seventeen =

 
Back To Top