ವಿಶ್ವವಾಣಿ

ಜಾಗತೀಕರಣವನ್ನು ಬಿಟ್ಟು ರಾಷ್ಟ್ರೀಕರಣದ ಕಡೆಗೆ ಎದ್ದಿದೆ ಅಲೆ!

ಜಾಗತೀಕರಣ ಅಥವಾ ಗ್ಲೋಬಲೈಸೇಶನ್ ಎನ್ನುವ ಪದ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಕೆಲವು ವರ್ಷಗಳ ಹಿಂದೆ ಎಲ್ಲರ ಬಾಯಲ್ಲಿ ಬರುತ್ತಿದ್ದ ವಿಷಯವಿದು. ಯಾರನ್ನು ಕೇಳಿದರೂ ನಾವು ಗ್ಲೋಬಲ್ ಅಂತಲೇ ಹೇಳುತ್ತಿದ್ದರು. ಹಲವಾರು ಉದ್ದಿಮೆದಾರರ ವೆಬ್‌ಸೈಟ್‌ಗಳು, ವಿಸಿಟಿಂಗ್ ಕಾರ್ಡ್‌ಗಳ ಹೆಸರುUಳಲ್ಲಿಯೂ ಈ ಗ್ಲೋಬಲ್ ಪದ ರಾರಾಜಿಸುತ್ತಿತ್ತು. ಪ್ರಪಂಚದಲ್ಲಿನ ಹಲವಾರು ರಾಷ್ಟ್ರಗಳು ತಮ್ಮಲ್ಲಿನ ಉತ್ಪನ್ನಗಳು, ಕೆಲಸಗಳು ಸಾಮಾಜಿಕ ಚಟುವಟಿಕೆಗಳನ್ನು ರ- ಮಾಡಿ, ತಾವೇ ಮುನ್ನುಗ್ಗಬೇಕೆಂಬ ಹುಮ್ಮಸ್ಸಿನಲ್ಲಿದ್ದವು. ಚೀನಾವಂತೂ ಜಗತ್ತಿನ ಸಕಲ ರಾಷ್ಟ್ರಗಳಿಗೆ ತನ್ನ ಉತ್ಪನ್ನಗಳನ್ನು ರ- ಮಾಡಿ, ಹಿರಿಯಣ್ಣ ಅಮೆರಿಕವನ್ನು ಹಿಂದಿಕ್ಕುವ ದಿಕ್ಕಿನಲ್ಲಿ ಸಾಗುತ್ತಿತ್ತು. ಇದರ ಜತೆಗೆ ಐರೋಪ್ಯ ಒಕ್ಕೂಟಗಳು ಇದೇ ರೀತಿಯ ರೇಸಿನಲ್ಲಿದ್ದವು. ತಾನೇ ನಂಬರ್ ಒನ್ ಆಗಬೇಕೆಂದಿದ್ದ ಹುಮ್ಮಸ್ಸಿನಲ್ಲಿ ಚೀನಾವು ತನ್ನಲ್ಲಿನ ನೈಸರ್ಗಿಕ ಸಂಪನ್ಮೂಲಗಳನ್ನೆಲ್ಲ ನಿಧಾನವಾಗಿ ಬರಿದು ಮಾಡತೊಡಗಿತು. ಇದರಿಂದ ಪ್ರತಿವರ್ಷವೂ ಈ ದೇಶ ಹಲವಾರು ನೈಸರ್ಗಿಕ ವಿಪತ್ತುಗಳನ್ನು ಎದುರಿಸಬೇಕಾಯಿತು, ಇಂದಿಗೂ ಎದುರಿಸುತ್ತಲೇ ಇದೆ.

ಇದೆಲ್ಲ ಯಾರ ಪುರುಷಾರ್ಥಕ್ಕೆ ಮಾಡಿದರೋ ಆ ಉದ್ದೇಶವೇನೋ ಈಡೇರಿತು. ಆದರೆ ಅದು ಹಲವು ಕಾಲ ಉಳಿಯಲೇ ಇಲ್ಲ. ಜಗತ್ತು ಎಷ್ಟು ವಿಚಿತ್ರವೆಂದರೆ, ಎಲ್ಲರೂ ಜಾಗತೀಕರಣದೆಡೆಗೆ ಮುನ್ನುಗ್ಗುತ್ತಿರುವಾಗ, ಅದು ಅವರಿಗೇ ಮತ್ತೆ ಶಾಪವಾಗುತ್ತದೆಂಬುದನ್ನು ಯಾರೂ ಊಹಿಸಲೇ ಇಲ್ಲ. ಚೀನಾದ ಒಟ್ಟಾರೆ ರಫ್ತಿನಲ್ಲಿ ಶೇ.೨೨%ರಷ್ಟು ಅಮೆರಿಕ ದೇಶದ ಪಾಲು. ದಶಕಗಳಿಂದ ಇದನ್ನೇ ಮಾಡುತ್ತ ಬಂದಂತಹ ಚೀನಾ, ಅಮೆರಿಕದ ನೆಲದಲ್ಲಿ ಹಲವಾರು ನಿರುದ್ಯೋಗಗಳನ್ನು ಸೃಷ್ಟಿಸಿತು. ಎಷ್ಟೇ ಆಗಲಿ ಒಂದು ದೇಶವು ಮತ್ತೊಂದು ದೇಶದ ಆಮದಿನ ಮೇಲೆ ಅವಲಂಬಿತವಾಗಿರುವಾಗ ಅಲ್ಲಿನ ಸ್ಥಳೀಯ ಉದ್ದಿಮೆದಾರರಿಗೆ ಹೊಡೆತ ಬೀಳುವುದಂತೂ ಗ್ಯಾರಂಟಿ. ಇದನ್ನು ಬಂಡವಾಳವನ್ನಾಗಿ ಮಾಡಿಕೊಂಡು ಅಽಕಾರ ಚುಕ್ಕಾಣಿ ಹಿಡಿದ ಡೊನಾಲ್ಡ್ ಟ್ರಂಪ್, ತಾನು ಹೇಳಿದಂತೆಯೇ ಚೀನಾದ ಹಲವಾರು ವಸ್ತುಗಳ ಮೇಲೆ ಆಮದು ನಿರ್ಬಂಧವನ್ನು ಹೇರತೊಡಗಿದ್ದಾರೆ. ಅದೇ ವಸ್ತುಗಳನ್ನು ತನ್ನಲ್ಲಿಯೇ ಉತ್ಪಾದಿಸಲು ಅಮೆರಿಕ ನಿರ್ಧರಿಸಿದೆ.

‘ಲೆಟ್ಸ್ ಮೇಕ್ ಅಮೆರಿಕ ಗ್ರೇಟ್ ಅಗೈನ್’ ಎಂಬ ಘೋಷ ವಾಕ್ಯದೊಂದಿಗೆ  ಶುರು ಮಾಡಿದ ಪ್ರಚಾರವು ಇಂದು ನಿಜ ಆಗುವತ್ತ ಸಾಗಿದೆ. ಈಗಾಗಲೇ ನಮ್ಮಿಂದ ಆಮದು ಮಾಡಿಕೊಳ್ಳುತ್ತಿದ್ದ ಹಲವಾರು ಕೆಲಸಗಳನ್ನು ಹಿಂಬಾಗಿಲಿನಿಂದ ತಡೆಯುವ ಪ್ರಯತ್ನ ಮಾಡಿ, ತನ್ನ ದೇಶದ ಜನರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿವೆ. ನಿಮಗೆಲ್ಲ ತಿಳಿದಿರುವಂತೆ ‘ವಿಸಾ’ ನೀತಿಯನ್ನು ಈಗಾಗಲೇ ಕಠಿಣಗೊಳಿಸುವಂತಹ ಕಾರ್ಯಗಳು ಭರದಿಂದ ಸಾಗಿವೆ. ಅಮೆರಿಕದಲ್ಲಿ ನೆಲೆಸಿರುವಂತಹ ಎಷ್ಟೋ ಭಾರತೀಯರು, ಎಲ್ಲಿ ತಾವು ಭಾರತಕ್ಕೆ ಬಂದರೆ, ವಾಪಸ್ಸು ಅಮೆರಿಕಕ್ಕೆ ಹೋಗಲು ಆಗುವುದಿಲ್ಲವೋ ಎಂದು ತಿಳಿದು ಅಲ್ಲಿಯೇ ನೆಲೆಸಿದ್ದಾರೆ. ಅಪ್ಪ-ಅಮ್ಮನ ಮುಖವನ್ನು ಹಲವಾರು ವರ್ಷಗಳಿಂದ ನೋಡಲಾಗದೇ ಅಲ್ಲಿಯೇ ಇದ್ದಾರೆ. ಇದೆಂಥ ಭಂಡ ಪ್ರೇಮವೋ ತಿಳಿದಿಲ್ಲ.

ಜಾಗತೀಕರಣದಿಂದ ರಾಷ್ಟ್ರೀಕರಣದ ಕಡೆಗಿನ ವಾಲುವಿಕೆ ಕೇವಲ ಈ ದೇಶಗಳಿಗೆ ಮಾತ್ರ ಸೀಮಿತವಲ್ಲ. ಭಾರತದಲ್ಲಿಯೂ ಹಲವಾರು ಬದಲಾವಣೆಗಳು ಈ ನಿಟ್ಟಿನಲ್ಲಿ ನಡೆಯುತ್ತಲೇ ಇವೆ. ‘ಪತಂಜಲಿ’ ಉತ್ಪನ್ನಗಳ ಬಳಕೆ ಕಳೆದ ನಾಲ್ಕು ವರ್ಷಗಳಲ್ಲಿ ಎಷ್ಟು ಹೆಚ್ಚಾಗಿದೆಯೆಂದರೆ, ಜನರ ಮನಸ್ಸಿನಲ್ಲಿ ಅದು ನಮ್ಮ ಉತ್ಪನ್ನವೆಂಬ ಅಂಶ ಬಹಳ ಆಳವಾಗಿ ಬೇರೂರಿದೆ. ‘ಲಕ್ಸ್’ ಇದ್ದ ಜಾಗದಲ್ಲಿ ಪತಂಜಲಿ ಸೋಪುಗಳು ಬಂದಿವೆ. ಗಾರ್ನಿಯರ್ -ಸ್‌ವಾಶ್ ಇದ್ದ ಜಾಗದಲ್ಲಿ, ಪತಂಜಲಿಯ ಅಲೋವೆರಾ ಬಂದಿದೆ. ಕೋಲ್ಗೇಟ್ ಜಾಗದಲ್ಲಿ ದಂತ ಕಾಂತಿ ಬಂದಿದೆ. ಇಷ್ಟೆ ಅಲ್ಲದೇ, ಪತಂಜಲಿಯ ಗೋಽಹಿಟ್ಟು, ಅಕ್ಕಿಹಿಟ್ಟು, ಬಿಸ್ಕತ್ತುಗಳು, ಜ್ಯೂಸ್‌ಗಳು ಹೀಗೆ ಎಲ್ಲ ವಿಭಾಗದಲ್ಲಿಯೂ ವಿದೇಶಿ ಉತ್ಪನ್ನಗಳಿಗೆ ನೇರವಾಗಿ ಸ್ಪರ್ಧೆಯೊಡ್ಡಿ ಯಶಸ್ವಿಯೂ ಆಗಿದೆ.

ಇದಕ್ಕೆಲ್ಲ ಮುಖ್ಯ ಕಾರಣ ಭಾರತೀಯರಾದ ನಮ್ಮ ಮನಸ್ಸಿನಲ್ಲಿ ರಾಷ್ಟ್ರಾಭಿಮಾನ ದಿನದಿಂದ ದಿನಕ್ಕೆ ಏರುತ್ತಲಿದೆ. ಎಲ್ಲರಿಗೂ ನಮ್ಮ ಆಯುರ್ವೇದದ ಮೇಲಿನ ನಂಬಿಕೆ ಹುಟ್ಟಿದೆ ಹಾಗೂ ವಿದೇಶಿ ಉತ್ಪನ್ನಗಳಲ್ಲಿ ಉಪಯೋಗಿಸುವ ರಾಸಾಯನಿಕಗಳು ಬೇಡ ಎನ್ನಿಸಿವೆ. ಆದರೆ  ಕೆಲವರಿಗೆ ರಾಷ್ಟ್ರಾಭಿಮಾನವೆಂಬುದು ಇನ್ನೂಮರೀಚಿಕೆಯೇ ಬಿಡಿ. ಬೇಕಾದವರನ್ನು ಓಲೈಸಲು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅವರಿಗೆ ಸ್ವತಃ ರಾಮ, ಕೃಷ್ಣ, ಅರ್ಜುನ ಬಂದರೂ ತಲೆ ನಿಲ್ಲುವುದಿಲ್ಲ. ಅಂಥವರಿಂದ ನಮ್ಮ ದೇಶಕ್ಕೆ ನಷ್ಟವೇ ಹೊರತು ಲಾಭವಂತೂ ಇಲ್ಲವೇ ಇಲ್ಲ.

ನಮ್ಮ ದೇಶದ ಯೋಗ ಪದ್ಧತಿಯನ್ನು ಇಂದು ಇಡೀ ಜಗತ್ತೇ ಒಪ್ಪುತ್ತಿದೆ. ಜಿಮ್‌ಗಳಿಗೆ ಹೋಗುವವರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಅದರಲ್ಲಿಯೂ ಮೋದಿಯವರು ಪ್ರಧಾನಮಂತ್ರಿಯಾದ ಮೇಲೆ, ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ಮುಂದಾದ ಮೇಲಂತೂ ಎಲ್ಲರೂ ಯೋಗಪಟುಗಳಾಗಿದ್ದಾರೆ. ಇದರಲ್ಲಿಯೂ ಅಷ್ಟೇ, ನಮ್ಮ ಪದ್ಧತಿಯಲ್ಲಿ ಕಂಡುಕೊಂಡಂತಹ ಅನುಭವಗಳೇ ಯೋಗವನ್ನು ಇಷ್ಟು ಪ್ರೀತಿಸಲು ಸಾಧ್ಯವಾಗಿದೆ. ಯೋಗ ಹಾಗೂ ಜಿಮ್ ನಡುವಿನ ಅಂತರವನ್ನು ಯಾರೂ ಹೆಚ್ಚು ಪ್ರಚಾರ ಮಾಡದಿದ್ದರೂ,  ಜನಗಳು ಸ್ವತಃ ತಾವೇ ರಾಷ್ಟ್ರಪ್ರೇಮದ ದೃಷ್ಟಿಯಿಂದ ಅದನ್ನು ಮನವರಿಕೆ ಮಾಡಿಕೊಂಡಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.  ಮ್ಯಾಕ್ ಡೊನಲ್ಡ್, ಪಿಟ್ಜಾ ಹಟ್, ಕೆಎ-ಸಿಗಳಂತಹ ಸ್ಥಳಗಳಲ್ಲಿಯೂ ಇತ್ತೀಚಿಗೆ ವ್ಯವಹಾರಗಳಲ್ಲಿ ಭಾರೀ ಇಳಿಮುಖವಾಗಿದೆ.

ಒಂದು ಕಾಲದಲ್ಲಿ , ಈ ಉದ್ದಿಮೆಗಳು ಭಾರತವನ್ನು ಪ್ರವೇಶಿಸಿದಾಗ, ಎಲ್ಲರೂ ಈ ಹೋಟೆಲ್‌ಗಳಿಗೆ ಹೋಗುವುದೆಂದರೆ, ಒಂದು ರೀತಿಯ ಪ್ರೆಸ್ಟೀಜ್ ಎಂದೇ ಭಾವಿಸುತ್ತಿದ್ದರು. ಆದರೆ ಇಂದು ಎಲ್ಲರಿಗೂ ತಿಳಿದಿದೆ. ಇಲ್ಲಿ ಉಪಯೋಗಿಸುವ ಬೆಣ್ಣೆ, ಮೈದಾ, ಎಣ್ಣೆ ಯಾವುವೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಕೇವಲ ರುಚಿಯನ್ನಷ್ಟೇ ಅರಿಸಿಕೊಂಡು ಹೋಗುವ ಕಾಲ ಮುಗಿಯುತ್ತಲಿದೆ. ಜನರಿಗೆ ಆರೋಗ್ಯದ ಮೇಲೆ ನಿಧಾನವಾಗಿಯಾದರೂ ಕಾಳಜಿ ಬರುತ್ತಿರುವುದರಿಂದ ಅದಕ್ಕಾಗಿಯೇ ರಾಗಿ ಮುದ್ದೆಯನ್ನು ತಿನ್ನುವವರ ಸಂಖ್ಯೆಯೂ ಹೆಚ್ಚುತ್ತಿದೆ. ಹಲವಾರು ಧಾನ್ಯಗಳಾದ ನವಣೆ, ಸಜ್ಜೆಯನ್ನು ನಗರಪ್ರದೇಶಗಳಲ್ಲಿ ತಿನ್ನುವವರ ಸಂಖ್ಯೆಯೂ ಹೆಚ್ಚಾಗಿದೆ.

ಸಿರಿಧಾನ್ಯಗಳ ಉದ್ದಿಮೆ ದಿನದಿಂದ ದಿನಕ್ಕೆ ದೊಡ್ಡದಾಗಿ ಬೆಳೆಯುತ್ತಿದೆ. ನಮ್ಮ ಅಜ್ಜಿ  ತಾತಂದಿರು ನಮಗೆ ಹೇಳಿದಾಗ ನಾವು ತಿನ್ನಲಿಲ್ಲ, ಈಗ ನೋಡಿ ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತೆ ಈಗ ರಾಷ್ಟ್ರಪ್ರೇಮ ಉಕ್ಕಿ ಹರಿಯುತ್ತಿದೆ. ಈ ಮಧ್ಯೆ ಒಂದು ಸಣ್ಣ ಉಪಕಥೆ ಹೇಳುತ್ತೇನೆ.

ಈ ಪಿಟ್ಜಾ ಎಂಬುದು, ಇಟಲಿ ದೇಶದ ರೈತ ಹೊಲದಲ್ಲಿ ಕೆಲಸ ಮಾಡಿ ಸಂಜೆ ಮನೆಗೆ ಬಂದಾಗ ಮನೆಯಲ್ಲಿ ಇದ್ದ ಮೈದಾ ಹಿಟ್ಟಿನ ಮೇಲೆ ಸ್ವಲ್ಪ ತರಕಾರಿಗಳನ್ನು ಹಾಕಿ ಬೇಯಿಸಿಕೊಂಡು ತಿನ್ನುತ್ತಿದ್ದ ಖಾದ್ಯ. ಬಡವರ ಆಹಾರ. ನಾವು ಹೇಗೆ ರಾಗಿ ಮುದ್ದೆಯನ್ನು ತಿನ್ನುತ್ತೇವೆಯೋ ಅದೇ ರೀತಿ ಅದು ಇಟಲಿ ರೈತನ ಆಹಾರವಾಗಿತ್ತು. ಆದರೆ ಯಾವಾಗ ಅದು ಅಮೆರಿಕನ್ನರ ಕೈಗೆ ಸಿಕ್ಕಿತೋ, ತಗೊಳ್ಳಿ , ಅದಕ್ಕೆ ವಿವಿಧ ಆಯಾಮಗಳನ್ನು ನೀಡಿ ವಿಶ್ವ ಪ್ರಸಿದ್ಧ ಮಾಡಿಯೇಬಿಟ್ಟರು. ಈ ಅಮೆರಿಕನ್ನರ ಕೈಲಿ ನಮ್ಮ ಮುದ್ದೆಯೇನಾದರೂ ನೂರು ವರ್ಷಗಳ ಹಿಂದೆ ಸಿಕ್ಕಿದ್ದರೆ, ಇಂದು ಪಿಟ್ಜಾ ಇದ್ದ ಜಾಗದಲ್ಲಿ ಮುದ್ದೆ ಇರುತ್ತಿತ್ತು!

ಇತ್ತೀಚಿನ ಅಮೆರಿಕದ ರಫ್ತಿನ ನಿರ್ಬಂಧವು ಕೇವಲ ಚೀನಾದಷ್ಟೇ ತಲೆಕೆಡಿಸಿಲ್ಲ, ಟರ್ಕಿ ದೇಶದ ನಿದ್ದೆಯನ್ನೂ ಕೆಡಿಸಿದೆ. ಟರ್ಕಿಯಿಂದ ಆಮದು ಮಾಡಿಕೊಳ್ಳುತ್ತಿರುವ ವಸ್ತುಗಳ ಮೇಲೆಯೂ ನಿರ್ಬಂಧ ಹೇರಿದ ಅಮೆರಿಕದ ನೀತಿಯಿಂದ ಟರ್ಕಿ ದೇಶದ ಆರ್ಥಿಕತೆಯೇ ಅಲುಗಾಡುತ್ತಿದೆ. ತನ್ನ ದೇಶದ ಕರೆನ್ಸಿಯಲ್ಲಿ ಒಂದೇ ದಿನದಲ್ಲಿ ಶೇ.೧೨ರಷ್ಟು ಇಳಿಕೆಯನ್ನು ಅದು ಕಂಡಿದೆ. ಇದು ಸಹ ಅಮೆರಿಕ ದೇಶಕ್ಕೆ ಅರ್ಥವಾದ ರಾಷ್ಟ್ರೀಕರಣದ ಪರಿಣಾಮ.

ಇತ್ತೀಚೆಗೆ ಬಯೋಮೆಟ್ರಿಕ್ ವ್ಯವಸ್ಥೆ ಎಲ್ಲೆಡೆಯೂ ಜಾರಿಯಲ್ಲಿರುವ ತಂತ್ರಜ್ಞಾನ. ನಾವು ಅದನ್ನು ಮೊದಲು ಪಾಶ್ಚಿಮಾತ್ಯರ ಅತ್ಯುತ್ತಮ ತಂತ್ರಜ್ಞಾನವೆಂದೇ ಭಾವಿಸಿದ್ದೆವು. ಆದರೆ ಸ್ವಲ್ಪ ನಿಮ್ಮ ಅಜ್ಜ ಅಜ್ಜಿಯಂದಿರ ಕಾಲಕ್ಕೆ ಹೋಗಿ ನೋಡಿ. ಅದನ್ನು ಅವರು ಹೆಬ್ಬೆಟ್ಟು ಎಂದು ಕರೆಯುತ್ತಿದ್ದರು. ಯಾವುದಾದರೊಂದು ಮುಖ್ಯವಾದ ದಾಖಲೆಗಳನ್ನು ಬರೆದ ನಂತರ ಸಹಿಯ ಜತೆಗೆ ಹೆಬ್ಬೆಟ್ಟು ಇರುತ್ತಿತ್ತು. ಇಂದು ಅದೇ ಹೆಬ್ಬೆಟ್ಟು ಸುರಕ್ಷಿತವಾದ ಮಾನದಂಡವೆಂಬುದನ್ನು ‘ಬಯೋಮೆಟ್ರಿಕ್’ ತಿಳಿಸಿದೆ. ನಾವು ಹಿರಿಯರನ್ನು ರೇಗಿಸುತ್ತಿದ್ದಂತಹ ಕಾಲವಿತ್ತು. ಆದರೆ ಇಂದು ಅದನ್ನೇ ನಾವು ಪಾಲಿಸುತ್ತಿದ್ದೇವೆ, ಬಳಸುತ್ತಿದ್ದೇವೆ. ಇಷ್ಟು ದಿನ ನಮ್ಮಲ್ಲಿನ ತಂತ್ರಜ್ಞಾನಗಳನ್ನು ತೋರ್ಪಡಿಸುವವರಿರಲಿಲ್ಲ. ಆದರೆ ಇಂದು ಬೇರೆ ಯಾರೋ ಬಂದು ತೋರಿಸಿದ ಮೇಲೆ ನಮಗೆ ಅರ್ಥವಾಗಿದೆ. ಯಾಕೆಂದರೆ ನಮ್ಮ ದೇಶದಲ್ಲಿನ ಬೇರು ಇನ್ನೂ ಹಾಳಾಗಿಲ್ಲ.

ನಮ್ಮ ತಂದೆ, ತಾಯಂದಿರಿಗೆ ನಾವು ಪ್ರೇಮ ವಿವಾಹವಾಗಿದ್ದು  ಒಂದು ದೊಡ್ಡ ಆಘಾತಕಾರಿಯ ವಿಷಯವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ನಮಗೆ ಅದು ಮಾಮೂಲಾಗಿ ಹೋಗಿದೆ. ನಮ್ಮ ಮಕ್ಕಳ ತಲೆಮಾರಿಗೆ ಏನಾಗಬಹುದು ತುಸು ಯೋಚಿಸಿ. ಅಥವಾ ರಾಷ್ಟ್ರೀಕರಣವು ವಾಪಸ್ಸು ಬಂದರೆ ಮತ್ತೆ ಹಳೆಯ ಸಾಂಪ್ರದಾಯಿಕ ಮದುವೆಗಳು ನಡೆಯುವುದರಲ್ಲಿ ಒಂದು ಚೂರೂ ಅನುಮಾನವಿಲ್ಲ.

ಅಷ್ಟೇ ಯಾಕಪ್ಪ, ಇತ್ತೀಚಿಗೆ ಬೆಂಗಳೂರಿನಲ್ಲಿ ‘ಮೈಕ್ರೋ ಬ್ರ್ಯೂಯರಿ’ಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಯಾಕೆಂದರೆ ಬೇರೆ ರಾಷ್ಟ್ರಗಳಿಂದ ಆಮದು ಮಾಡಿಕೊಂಡ ಬಿಯರ್‌ಗಳಿಗಿಂತಲೂ ನಮ್ಮ ಮುಂದೆಯೇ ತಾಜಾ ಆಗಿ ಮಾಡಿಕೊಡುವ ಬಿಯರ್‌ಗಳಿಗೆ ಅತಿ ಹೆಚ್ಚು ಬೇಡಿಕೆ ಬಂದಿದೆ. ಅಂದರೆ ಇಲ್ಲಿಯೂ ಅಷ್ಟೇ ಜನಗಳ ಅಭಿಮಾನ ಹೆಚ್ಚಿದೆ. ಕುಡಿತದಲ್ಲಿ ಸಹ ಈ ರೀತಿಯ ಸ್ವದೇಶಿ ಬೆಳವಣಿಗೆಗಳು ಹೆಚ್ಚುತ್ತಿರುವುದು ಮಾತ್ರ ಅಚ್ಚರಿಯ ಸಂಗತಿ. ಅಷ್ಟೇ ಏಕೆ, ‘ಬೀರಾ’ ಎಂಬ ಒಂದು ಸ್ವದೇಶಿ ಬಿಯರ್ ತಯಾರಿಕೆ ಆಗಿ ಕೇವಲ ನಾಲ್ಕು ವರ್ಷಗಳಷ್ಟೇ ಕಳೆದಿವೆ.

ಈ ನಾಲ್ಕು ವರ್ಷಗಳಲ್ಲಿ ಈ ಬ್ರಾಂಡ್ ಪ್ರತಿಯೊಂದು  ಬಾರ್‌ಗಳನ್ನು ಆವರಿಸಿಬಿಟ್ಟಿದೆ. ಯಾರನ್ನಾದರೂ ಕೇಳಿ, ಈ ಬಿಯರ್ ಬಗ್ಗೆ ತಿಳಿದಿರುತ್ತಾರೆ. ಇನ್ನು ಕೋಲಾ, ಪೆಪ್ಸಿಯನ್ನೇ ಸೇವಿಸುತ್ತಿದ್ದ ನಮ್ಮ ಜನ, ಇಂದು ‘ಬಿಂದು’ ಜೀರಾ ಡ್ರಿಂಕ್‌ನ ಮೊರೆ ಹೋಗಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಪುತ್ತೂರಿನವರಾದ ಈ ಕಂಪನಿಯ ಮಾಲೀಕರು ಸಿದ್ಧಪಡಿಸಿರುವ ಈ ಡ್ರಿಂಕ್ ಇಂದು ಪ್ರತಿಯೊಂದು ಅಂಗಡಿಯಲ್ಲೂ ಕೋಲಾ, ಪೆಪ್ಸಿ ತಂಪುಪಾನೀಯಗಳ ವ್ಯವಹಾರವನ್ನು ಅರ್ಧದಷ್ಟು ಹಾಳು ಮಾಡಿಬಿಟ್ಟಿದೆ.

ನಾನು ಒಂದು ಟಿವಿ ಚಾನೆಲ್‌ನಲ್ಲಿಯೂ ‘ಬಿಂದು’ವಿನ ಜಾಹೀರಾತು ನೋಡಿಯೇ ಇಲ್ಲ. ಆದರೂ ಇದು ಕೋಟ್ಯಂತರ ರುಪಾಯಿಗಳ ವ್ಯವಹಾರ ಮಾಡುತ್ತಿದೆ. ಇದೂ ಅಷ್ಟೇ, ಜಾಗತೀಕರಣದಿಂದ, ರಾಷ್ಟ್ರೀಕರಣದೆಡೆಗಿನ ಹೆಜ್ಜೆಯೇ ತಾನೇ? ಅಷ್ಟೇ ಯಾಕೆ, ಜಗತ್ತಿನಾದ್ಯಂತ ಪತ್ರಿಕೋದ್ಯಮವೂ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದರೆ, ಭಾರತದಲ್ಲಿ ಮಾತ್ರ ಬೆಳೆಯುತ್ತಲೇ ಇದೆ. ಎಷ್ಟೇ ಆನ್‌ಲೈನ್ ಪತ್ರಿಕೆಗಳು ಬಂದರೂ  ಭಾರತೀಯನ ಒಂದು ಮೈಂಡ್ ಸೆಟ್ ಅಂದರೆ ಬೆಳಗಾಗುತ್ತಲೇ ಒಂದು ಲೋಟ ಕಾಫಿಯ ಜತೆಗೆ ಒಂದು ಪತ್ರಿಕೆ ಇರಲೇಬೇಕು.

ನನ್ನ ಸ್ವಂತ ಅನುಭವವೆಂದರೆ, ನಾವು ಒಂದು ಮೊಬೈಲ್‌ನಲ್ಲಿಯೋ, ಕಂಪ್ಯೂಟರ್‌ನಲ್ಲಿಯೋ ಓದುವಾಗ, ಹಲವಾರು ವಿಷಯಗಳನ್ನು ಖಂಡಿತವಾಗಿಯೂ ಬಿಟ್ಟಿರುತ್ತೇವೆ. ಆದರೆ ಅದನ್ನು ಕೈಯಲ್ಲಿ ಹಿಡಿದು ಕಾಗದದ ಮೇಲೆ ಓದಿದಾಗ, ವಿಷಯಗಳನ್ನು ಬಿಡುವ ಸಂಖ್ಯೆಯೂ ಕಡಿಮೆ ಇರುತ್ತದೆ. ಕೇವಲ ಪತ್ರಿಕೆಯೊಂದೇ ಅಲ್ಲದೇ ಯಾವ ರೀತಿಯ ಕಾಗದದ  ಇದು ಸತ್ಯ.

ಒಂದು ವಿಚಾರದಲ್ಲಿ ಮಾತ್ರ ನಮ್ಮ ರಾಷ್ಟ್ರೀಕರಣದ ಅಭಿಮಾನದಲ್ಲಿ ಅತಿ ಹೆಚ್ಚು ತೊಂದರೆ ನೀಡುತ್ತಿರುವ ವಸ್ತು ಚಿನ್ನ. ಹೌದು, ಭಾರತದಲ್ಲಿ ಚಿನ್ನ ಎಂಬುದು ಪ್ರತಿಯೊಂದು ಮನೆಯ ಪ್ರತಿಷ್ಠೆಯ ವಸ್ತು ಹಾಗೂ ಕಷ್ಟದ ದಿನಗಳಲ್ಲಿ ಉಪಯೋಗವಾಗುವ ವಸ್ತುವೆಂದೇ ಬಿಂಬಿಸಲ್ಪಟ್ಟಿದೆ. ಆದರೆ ಪಾಶ್ಚಿಮಾತ್ಯ ದೇಶಗಳಲ್ಲಿನ ಪರಿಸ್ಥಿತಿ ಹೀಗೆ ಇಲ್ಲ. ಭಾರತವು ತನ್ನ ಪಾಲಿನ ಆಮದಿನಲ್ಲಿ ಚಿನ್ನವನ್ನು ಹೆಚ್ಚು ಆಮದಿಸುತ್ತದೆ. ಯಾಕೆಂದರೆ ಭಾರತೀಯರಿಗೆ ಚಿನ್ನದ ಮೇಲಿರುವ ಪ್ರೀತಿ!

ನಾವು ಚಿನ್ನವನ್ನು ಆಮದು ಮಾಡಿಕೊಂಡಾಗ, ಅದರ ಬೆಲೆಯನ್ನು ದೊಡ್ಡ ದೊಡ್ಡ ಚಿನ್ನದ ವ್ಯಾಪಾರಿಗಳು ಡಾಲರ್‌ನಲ್ಲಿಯೇ ಕೊಡಬೇಕು. ಇದರಿಂದಲೇ ನಮ್ಮ ರುಪಾಯಿಯ iಲ್ಯವೂ ದಿನದಿಂದ ದಿನಕ್ಕೆ ಕುಸಿಯುತ್ತಿರುತ್ತದೆ. ಯಾವಾಗ ರುಪಾಯಿಯ ಮೌಲ್ಯ ಕುಸಿಯುವುದೋ, ಆಗ ಇತರೆ ವಸ್ತುಗಳ ಆಮದು ಬೆಲೆಯೂ ಹೆಚ್ಚುತ್ತಾ ಹೋಗುತ್ತದೆ. ಆದ್ದರಿಂದ ನಮಗೆ ಆಮದಾದ ಇತರೆ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ನಾವು ನಿಜವಾಗಿಯೂ ರಾಷ್ಟ್ರಸೇವೆ ಮಾಡಬೇಕೆಂದರೆ, ಚಿನ್ನದ ಮೇಲಿನ ಆಸೆಯನ್ನು ಕಡಿಮೆ ಮಾಡಬೇಕು. ಆಗ ತಾನಾಗಿಯೇ ಇತರೆ ಆಮದಿನ ವಸ್ತುಗಳ ಮೇಲಿನ ಬೆಲೆಯೂ ಇಳಿಕೆಯಾಗುತ್ತದೆ.

ಯಾರೇ ಪ್ರಧಾನಮಂತ್ರಿಯಾಗಲಿ, ಪ್ರಜೆಗಳು ಆಸೆ ಕಡಿಮೆ ಮಾಡದ ಹೊರತು ಬೆಲೆಗಳು ಕಡಿಮೆಯಾಗುವುದಿಲ್ಲ. ಪಾಶ್ಚಿಮಾತ್ಯ ದೇಶಗಳು ಮುಂದುವರಿಯಲು ಅತಿ ಮುಖ್ಯ ಕಾರಣ ಅವರಿಗೆ ಚಿನ್ನದ ವ್ಯಾಮೋಹ ಇಲ್ಲದಿರುವುದು. ಇನ್ನು ಪೆಟ್ರೋಲಿಯಂ ಉತ್ಪನ್ನಗಳ ವಿಷಯದಲ್ಲಿ ಆಮದನ್ನು ಇಷ್ಟು ಬೇಗನೇ ಕಡಿಮೆ ಮಾಡುವುದು ಅಸಾಧ್ಯವಾಗಿರುವುದರಿಂದ ನಾವು ಬೇರೆಯವರನ್ನು ಅವಲಂಬಿಸಬೇಕಿದೆ.

ಇತ್ತೀಚೆಗೆ ರಾಜಕಾರಣದಲ್ಲಿಯೂ, ಜಾಗತೀಕರಣದಿಂದ ರಾಷ್ಟ್ರೀಕರಣದೆಡೆಗೆ ಚರ್ಚೆಗಳು ಶುರುವಾಗಿವೆ. ರಾಹುಲ್ ಗಾಂಽಯೂ ಯೋಗ ಮಾಡಲು ರೆಡಿ, ಮಮತಾ ಬ್ಯಾನರ್ಜಿಯೂ ಪತಂಜಲಿ ಉತ್ಪನ್ನಗಳನ್ನು ಬಳಸಲು ರೆಡಿ, ಕೇವಲ ಚರ್ಚುಗಳನ್ನು ಸುತ್ತುತ್ತಿದ್ದವರೆಲ್ಲ, ದೇವಸ್ಥಾನಗಳನ್ನು ಸುತ್ತುತ್ತಿದ್ದಾರೆ. ಏನೋ ಇಷ್ಟು ದಶಕಗಳ ಬಳಿಕ, ರಾಷ್ಟ್ರೀಕರಣದ ಒಲವು ಎಲ್ಲರಲ್ಲಿಯೂ ಕಂಡುಬರುವಂತೆ ತೋರುತ್ತಿದೆ. ಜಾಗತೀಕರಣದಿಂದ ಹೊರಳಿ, ರಾಷ್ಟ್ರೀಕರಣವನ್ನು ಕೇವಲ ಭಾರತ ಹಾಗೂ ಅಮೆರಿಕ ಅಷ್ಟೇ ಅಲ್ಲದೇ, ಜಗತ್ತಿನಲ್ಲಿ ಇತರೆ ರಾಷ್ಟ್ರಗಳೂ ಸಹ ಅಳವಡಿಸಿಕೊಳ್ಳುತ್ತಿವೆ.