About Us Advertise with us Be a Reporter E-Paper

ವಿವಾಹ್

ಬಾರೋ, ಒಮ್ಮೆ ಬಾರೋ ಎಲ್ಲೆ ನೀನಿದ್ದರೂ….

- ಶಾರದಾ ವಗರನಾಳ

ಮನುಷ್ಯನ ಸಹಜ ಗುಣ ಪ್ರೀತಿಸೋದು. ಪ್ರತಿಯೊಬ್ಬರ ಜೀವನದಲ್ಲಿ ಒಂದು ಸಲ ಆದರೂ ಈ ಪ್ರೀತಿ ಮಾಯೆ ತರ ಕಾಡಿರುತ್ತೆ. ಕಾಡಿಲ್ಲ ಅಂದರೆ ಅವರು ಮನುಷ್ಯ ಜೀವಿಯಾಗಿರಲ್ಲ. ಯಾವುದೋ ಗ್ರಹದ ಪ್ರಾಣಿಯಾಗಿರಬಹುದು. ನನಗೂ ಬುದ್ಧಿ ಬಂದಾಗಿನಿಂದ ಪ್ರೀತಿ ಮಾಡಬೇಕು ಅನ್ನೋ ಆಸೆ ಮನದಲ್ಲಿತ್ತು. ಆದರೆ ನನ್ನ ಮನಸ್ಸಿಗೆ ಹತ್ತಿರಾಗೋ ಹುಡುಗ ನನ್ನ ಡಿಗ್ರಿ ಮುಗಿಯೋವರೆಗೂ ಸಿಗಲಿಲ್ಲ. ಡಿಗ್ರಿ ಮುಗಿದ ನಾನು ದೂರದ ಶಿವಮೊಗ್ಗಕ್ಕೆ ಓದಲು ಬಂದೆ. ಇಲ್ಲಿ ಕೂಡ ನನ್ನ ಮನಸ್ಸಿಗೆ ಇಷ್ಟವಾಗೊ ಹುಡುಗ ಒಬ್ಬ ಕೂಡ ಸಿಗಲಿಲ್ಲ. ಸೋ ನಾನು ಜಾಸ್ತಿ ತಲೆ ಕೆಡಿಸಿಕೊಳ್ಳದೆ ನನ್ನ ಪಾಡಿಗೆ ಅಭ್ಯಾಸದಲ್ಲಿ ನಿರತಳಾದೆ.

ಇನ್ನೇನು ಸೆಮಿಸ್ಟರ್ ಪರೀಕ್ಷೆಗಳು ಶುರುವಾಗಬೇಕು ಅನ್ನುವ ಹೊತ್ತಿಗೆ, ಒಂದು ದಿನ ನನ್ನ ಮೊಬೈಲ್‌ಗೆ ಒಂದು ಸಂದೇಶ ಬಂತು ಅದು ನಾನು ನಿಮ್ಮನ್ನು ತುಂಬಾ ಇಷ್ಟಪಡುತ್ತಿದ್ದೇನೆ. ಮದುವೆಯಾದರೆ ನಿಮ್ಮನ್ನೆ, ನಿಮ್ಮ ಮೌನ, ನಿಮ್ಮ ಒಳ್ಳೆತನ ನನ್ನ ಬಹುವಾಗಿ ಬಹುವಾಗಿ ಕಾಡುತ್ತಿದೆ. ಐ ಲವ್ ಯೂ ಸೋ ಮಚ್ ಅಂತ ಆ ಕ್ಷಣ ನನಗೆ ಆದ ಸಂತೋಷ ಭಯವೆಂಬುದು ಒಂದು ರೀತಿಯ ಕೇಸರಿಬಾತ್ ಉಪ್ಪಿಟ್ಟು ತಿಂದಾಗೆ ಆಯಿತು. ನನಗೆ ಪ್ರಪೋಸ್ ಹುಡುಗರು ತುಂಬಾ ಜನ ಇದಾರೆ. ಆದರೆ ಅವರೆಲ್ಲ ನೇರವಾಗಿ ಪ್ರಪೋಸ್ ಮಾಡಿದವರು ಕೆಲವರಾದರೆ, ಪತ್ರಗಳ ಮೂಲಕ ಮಾಡಿದವರು ಕೆಲವರು. ಯಾವತ್ತು ಯಾವ ಹುಡುಗನ ಬಗ್ಗೆ ತಿಳಿದುಕೊಳ್ಳಬೇಕೆಂಬ ಆಸೆ ನನಗೆ ಇರಲಿಲ್ಲ. ಮೊದಲ ಬಾರಿಗೆ ಸಂದೇಶ ಕಳುಹಿಸಿದ ಹುಡುಗನ ತಿಳಿದುಕೊಳ್ಳಬೇಕೆಂಬ ಆಸೆ ಎದೆಯಲ್ಲಿ ಹುಟ್ಟಿದ್ದು ಮಾತ್ರ ಸುಳ್ಳಲ್ಲ. ತಿಳಿದುಕೊಳ್ಳಲು ಮತ್ತೆ ಸಂದೇಶ ಬಂದ ಮೊಬೈಲ್ ನಂಬರಿಗೆ ಕರೆ ಮಾಡಿದರೆ ನೀವು ಕರೆ ಮಾಡಿದ ಚಂದಾದಾರರು ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ ಎಂಬ ಮರು ಉತ್ತರ ಬರುತ್ತಿತ್ತು. ಹಲವಾರು ದಿನ ಹೀಗೆ ಆಯಿತು. ಮತ್ತೆ ಒಂದು ದಿನ ನಿಮ್ಮನ್ನು ನೋಡಬೇಕು ನಿಮ್ಮ ಜೊತೆ ಮಾತಾಡಬೇಕು ಲೈಬ್ರರಿ ಹತ್ತಿರ ಬನ್ನಿ ಎಂಬ ಮೇಸೆಜ್ ಬಂತು, ಅದಕ್ಕೆ ನಾನು ಅವನ ಬಗ್ಗೆ ತಿಳಿದುಕೊಳ್ಳಬೇಕು ಅಂತ ಓಕೆ ಅಂದೆ. ಆ ಕಡೆಯಿಂದ ಟೈಮಿಂಗ್ ಕೂಡ ಫಿಕ್ಸ್ ಆಯಿತು.

ನಾನು ಸುಮ್ಮನೆ ಯಾರೋ ಆಟ ಆಡಿಸುತ್ತಿದ್ದಾರೆ ಆದರೂ ಅವರ ಬಗ್ಗೆ ತಿಳಿದುಕೊಳ್ಳಲೆಬೇಕು ಅಂತ ಸರಿಯಾದ ಟೈಮಿಂಗ್ ಹೋದೆ. ಮಜ ಏನು ಗೊತ್ತಾ ಅಲ್ಲಿ ಯಾರು ಇರಲಿಲ್ಲ. ಕಾದೆ ಕಾದೆ ಒಂದು ಗಂಟೆ ಕಳೆದೆ ಹೋಯಿತು ಆ ಹುಡುಗ ಬರಲಿಲ್ಲ. ನಾನು ಹೊರಡಬೇಕು ಅನ್ನುವಷ್ಟರಲ್ಲಿ ಮತ್ತೆ ಆ ನಂಬರಿನಿಂದ ಬಂದಿದ್ದಕ್ಕೆ ತುಂಬಾ ಥ್ಯಾಂಕ್‌ಸ್, ಅಲ್ಲಿ ಹತ್ತಿರದಲ್ಲಿ ನಿಮಗೋಸ್ಕರ ಏನೋ ತಗೊಳಿ ಪ್ಲೀಸ್ ನಾನು ನಿಮ್ಮನ್ನು ನೋಡ್ತಾ ಇದೀನಿ ಅಂತ ಹೇಳಿದರು. ಹುಡುಕಾಡಿದೆ ಸ್ವಲ್ಪ ಸಮಯದ ನಂತರ ಒಂದು ಗಿಫ್‌ಟ್ ಸಿಕ್ಕಿತು. ಸೋ ನಾನು ಥ್ಯಾಂಕ್‌ಸ್ ಅಂತ ಬರೆದು ಅದರ ಮೇಲೆ ಒಂದು ಚಾಕೋಲೇಟ್ ಇಟ್ಟು ಮೆಸೇಜ್ ಮಾಡಿದೆ. ನಿಮಗೋಸ್ಕರ ನಾನು ಇಲ್ಲಿ ಎನೋ ಇಟ್ಟಿದಿನಿ ಪ್ಲೀಸ್ ತಗೊಳ್ಳಿ ಅಂತ ಇಟ್ಟು ದೂರದಲ್ಲಿ ಮರದ ಹಿಂದೆ ಅಡಗಿ ಕುಳಿತೆ ಆದರೆ ಆ ಕಡೆಯಿಂದ ಮತ್ತೆ ಮೆಸೆಜ್ ಬಂತು ನೀವು ಆ ನನ್ನ ಕಳ್ಳನ ತರ ನೋಡಬೇಡಿ ಪ್ಲೀಸ್ ಹೋಗಿ ಮತ್ತೆ ನಾನು ನಿಮಗೆ ಸಿಗುತ್ತೇನೆ ಎಂದು ಆ ಕಡೆಯಿಂದ ಉತ್ತರ ಬಂತು.

ಬಂದು ಗಿಫ್ಟ್ ಓಪನ್ ಮಾಡಿ ನೋಡಿದರೆ ಒಂದು ಲೆಟರ್ ಮತ್ತು ನೆಪೋಲಿಯನ್‌ರವರ ಥಿಂಕ್ ಆಂಡ್ ಗ್ರೋ ರಿಚ್ ಪುಸ್ತಕವಿತ್ತು. ಆ ಲೆಟರ್ ಓಪನ್ ಮಾಡಿದ ತಕ್ಷಣ ನಾನು ಕಳೆದು ಹೋಗೋ ತರ ಮಾಡಿದ ಆ ಮೊದಲ ಲೈನ್, ಇಷ್ಟೊಂದು ಗೌರವಿಸಿ ಪ್ರೀತಿಸಿ, ಪುಸ್ತಕ ನೀಡಿದ ಆ ವ್ಯಕ್ತಿ ಎಷ್ಟು ದೊಡ್ಡ ಮನಸ್ಸಿನವಾಗಿರಬೇಕು ಎಂಬ ಯೋಚನೆ ನನ್ನ ಕಾಡಲು ಶುರು ಮಾಡಿದೆ. ಆ ಮೊದಲ ವಾಕ್ಯ ಏನೂ ಗೊತ್ತಾ ನನ್ನ ಹೃದಯವೆಂಬ ವೀಣೆಯ ಮೀಟಿದ ಸಾಹುಕಾರ್ತಿ, ಈ ಹೃದಯದರಸಿ ನೀ ನನ್ನ ಪ್ರೀತಿಯ ಒಪ್ಪದಿದ್ದರು ಪರವಾಗಿಲ್ಲ. ಆದರೆ ನೀ ತುಂಬಾ ಇಷ್ಟು ಪಟ್ಟು ಓದುವ ಕೆಲಸ ಬಿಡಬೇಡ. ಓದಿ ನೀನು ದೊಡ್ಡ ವ್ಯಕ್ತಿಯಾಗಿ ಬೆಳೆ. ನಿನ್ನ ನಾನು ಮೊದಲ ಬಾರಿಗೆ ನೋಡಿದ್ದು ನೀನು ಎದೆಗೆ ಬಿದ್ದ ಅಕ್ಷರ ಪುಸ್ತಕ ನಿನ್ನ ಪರಿ ಕಂಡು ನಾ ದಂಗಾಗಿ ಹೋದೆ. ಆ ಸುಂದರ ಮೀನಿನಂತ ವಿಶಾಲ ಕಣ್ಣುಗಳಲ್ಲಿ ಎಲ್ಲ ತಿಳಿದುಕೊಳ್ಳಬೇಕೆಂಬ ಆ ತುಡಿತ ನಿನ್ನ ಕಣ್ಣ ಹೊಳಪಿನಲ್ಲಿ ಕಾಣುತ್ತಿತ್ತು.

ನೀನು ಪುಸ್ತಕ ಓದುವಷ್ಟು ಕಾಲ ನಾನು ನಿನ್ನ ಕಣ್ಣುಗಳನ್ನೆ ನೋಡುತ್ತಿದ್ದೆ. ಆದರೆ ನಿನಗೆ ಅದವ್ಯಾದರ ಪರಿವೆಲ್ಲದೆ ಓದುವುದರಲ್ಲಿ ತಲ್ಲಿನಳಾಗಿದ್ದೆ. ಓದು ಮುಗಿದ ನಂತರ ಕೆಳಗೆ ಹೋಗಿ ನೆಪೋಲಿಯನ್ ರವರ ಪುಸ್ತಕ ಇದೆಯಾ ಅಂತ ಕೇಳಿದೆ ಅದಕ್ಕೆ ಅವರು ಆ ತರ ಪುಸ್ತಕ ತರಿಸುವುದಿಲ್ಲ. ಎಂಬ ಉತ್ತರ ಕೇಳಿ ನೀವು ನಿರಾಸೆ ಭಾವನೆಯಿಂದ ಹೋದಿರಿ. ನಂತರ ನಾನು ಆ ಪುಸ್ತಕವನ್ನು ಆನ್ ಲೈನ್ ನಲ್ಲಿ ತರಿಸಿ ಓದಿದೆ. ನಿಜಕ್ಕೂ ನಿಮಗೆ ತುಂಬಾ ಥ್ಯಾಂಕ್ಸ್ ಹೇಳಿ ಈ ಪುಸ್ತಕವನ್ನು ನಿಮಗೆ ಕೊಡೊಣ ಅಂತ ನಿಮ್ಮ ನಂಬರ್ ಹೇಗೋ ಕಲೆಕ್‌ಟ್ ಮಾಡಿ ಮೇಸೆಜ್ ಮಾಡಿದೆ. ಆದರೆ ನಿಮ್ಮ ಆ ವಿಶಾಲ ಕಣ್ಣುಗಳಲ್ಲಿನ ನೂರು ಭಾವನೆಗಳನ್ನು ಒಮ್ಮೆಲೆ ತೋರಿಸುವ ನಿಮ್ಮ ಕಣ್ಣಗಳನ್ನು ಎದುರಿಸುವ ಶಕ್ತಿ ನನಗಿಲ್ಲ. ಯಾವತ್ತೊ ದಿನ ನಿಮ್ಮ ಮುಂದೆ ಬಂದೆ ಬರುತ್ತೇನೆ. ಬೇಜಾರು ಮಾಡ್ಕೊಬೇಡಿ. ಪ್ಲೀಸ್ ಕ್ಷಮಿಸಿ ಬಿಡಿ. ಇಂತಿ ನಿಮ್ಮ ಕಣ್ಣು ದೃಷ್ಟಿ ಎದುರಿಸಲಾರವ.

ಅವನ್ಯಾರು ಎಂದು ತಿಳಿಯುವ ಹಂಬಲ ಜಾಸ್ತಿಯಾಗಿ ದಿನ ಆ ನಂಬರಿಗೆ ಕಾಲ್ ಮಾಡುವೆ. ಆದರೆ ಆ ಕಡೆಯಿಂದ ಯಾವ ಉತ್ತರವಿಲ್ಲ. ಆ ಕಡೆಯಿಂದ ಕೊನೆದಾಗಿ ನೀವು ಚೆನ್ನಾಗಿ ಓದಿ, ಒಳ್ಳೆಯ ಭವಿಷ್ಯ ನಿಮಗಿದೆ. ನಿಮ್ಮನ್ನು ಕೊನೆಯವರೆಗೂ ನಾನು ಪ್ರೀತಿಸಿ ಗೌರವಿಸುತ್ತೆನೆ. ಎಂಬ ಮೇಸೆಜ್ ಬಂದಾಗ ನನ್ನ ಹೃದಯ ಪಾಡಿಗೆ ತಾನು ಬಿಕ್ಕಳಿಸಿ ಅಳುತ್ತಿರುವುದು ಜಗತ್ತಿನ ಪರಿವೆಗೆ ಬರಲಿಲ್ಲ. ಇದನ್ನು ಓದಿಯಾದರು ನಿಮ್ಮ ದರ್ಶನ ಮಾಡಿಸಿ. ಪ್ಲೀಸ್….

Tags

Related Articles

Leave a Reply

Your email address will not be published. Required fields are marked *

Language
Close