About Us Advertise with us Be a Reporter E-Paper

ವಿವಾಹ್

ಮದುವೆ ಏಕಾಗಬೇಕು?

ಸ್! ಜಗತ್ತಿನ ಅತೀ ಜಟಿಲ ಪ್ರಶ್ನೆಗಳನ್ನು ಕೆದಕುತ್ತಾ ಹೊರಟಾಗ, ಮೊಟ್ಟೆ ಮೊದಲಾ, ಕೋಳಿ ಮೊದಲಾ? ಬೀಜ ಮೊದಲಾ, ಗಿಡ ಮೊದಲಾ…? ಇಂತಹುಗಳ ಸಾಲಿಗೆ ಇನ್ನೊಂದು ಪ್ರಶ್ನೆ ಬಂದು ಸೇರುತ್ತದೆ. ಅದೇ ಜನ ಏಕೆ ಮದುವೆ ಮಾಡಿಕೊಳ್ಳುತ್ತಾರೆ?!’

ಒಂದು ಗಂಡು ಒಂದು ಹೆಣ್ಣಿಗೆ ಪ್ರಕೃತಿ ಸಹಜವಾಗಿ ಒಬ್ಬರಿಗೆ ಇನ್ನೊಬ್ಬರ ಅವಶ್ಯಕತೆ ಇರುತ್ತದೆ. ಸದ್ಯದ ಪರಿಸ್ಥಿತಿಯನ್ನೊಮ್ಮೆ ನೋಡಿದರೆ ಸಾಧಾರಣವಾಗಿ ಮದುವೆಗೆ ರೀತಿಯ ನಿಜವಾದ ಕಾರಣವಿರದೇ ಇರುವುದು ಖೇದಕರ ಸಂಗತಿ. ಈಗ ಮದುವೆಯೆಂಬುದು ಸಭ್ಯ ಸಮಾಜದ ಒಂದು ಸಂಪ್ರದಾಯವಾಗಿದೆ. ಮದುವೆಯ ವಿಚಾರವಾಗಿ ಹಲವರಲ್ಲಿ ಚರ್ಚಿಸಿದಾಗ ಸಿಕ್ಕ ಅಭಿಪ್ರಾಯಗಳು, ಆಲೋಚನಾ ಲಹರಿಗಳು ನಿಜಕ್ಕೂ ನನ್ನನ್ನು ದಂಗಾಗಿಸಿದವು! ಅವುಗಳಲ್ಲಿ ಕೆಲವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ಒಳ್ಳೆಯ ಉದ್ಯೋಗದಲ್ಲಿದ್ದ ನನ್ನ ಸ್ನೇಹಿತನೊಬ್ಬ ಹೇಳಿದ, ನನ್ನ ಮದುವೆ ಬಾಲ್ಯದಲ್ಲಿಯೇ ಆಗಿಹೋಯಿತು. ಆದ್ದರಿಂದ ಅದರ ಎಲ್ಲ ಹೊಣೆಗಾರಿಕೆಯು ನನ್ನ ತಂದೆ ತಾಯಿಯ ಮೇಲಿದೆ. ಎರಡನೇಯ ಸ್ನೇಹಿತನಿಗೆ ತನ್ನ ಸೌಂದರ್ಯದ ಬಗ್ಗೆ ಬಹಳ ಗರ್ವವಿತ್ತು. ಕಾರಣದಿದಾಂಗಿಯೇ ಅವನ ಮದುವೆ ಅಂತ ಜಂಬದಿಂದ ಕೊಚ್ಚಿಕೊಳ್ಳುತ್ತಿದ್ದ. ಮತ್ತೊಬ್ಬ ಸ್ನೇಹಿತ ತನ್ನ ಮದುವೆಯ ಕುರಿತು ಹೇಳಿದ್ದು ಹೀಗೆ, ‘ನಾನು ವಾಸ ಮಾಡುವ ಮನೆಯ ಪಕ್ಕದಲ್ಲಿ ಒಬ್ಬರು ಶ್ರೀಮಂತರು ವಾಸವಾಗಿದ್ದರು. ಅವರಿಗೆ ಒಬ್ಬಳೇ ಮಗಳು. ಸಲುಗೆಯಿಂದ ಅವರನ್ನು ಹಚ್ಚಿಕೊಂಡು ಮದುವೆ ಮಾಡಿಕೊಂಡು ಬಿಟ್ಟೆಎಂದ. ವ್ಯಕ್ತಿ ಅಧಿಕಾರಿಯಾಗಿದ್ದು ಸಾಕಷ್ಟು ಆಸ್ತಿಯನ್ನು ಸಂಪಾದಿಸಿದ್ದರು. ಅವರಿಗೆ ತಮ್ಮ ಸಂಪತ್ತು ನೋಡಿಕೊಳ್ಳಲು ಒಬ್ಬ ವಾರಸುದಾರ ಬೇಕಾಗಿದ್ದ. ಏಕೆಂದರೆ ಅವರಿಗೆ ಮಗನಿರಲಿಲ್ಲ. ಹೀಗಾಗಿ ಇವನನ್ನು ತಮ್ಮ ಮನೆಯ ಅಳಿಯನನ್ನಾಗಿ ಆಸ್ತಿಯ ಉಸ್ತುವಾರಿ ನೋಡಿಕೊಳ್ಳಲು ನೇಮಿಸಿಬಿಟ್ಟಿದ್ದರು. ದುರದೃಷ್ಟವೆಂದರೆ, ಅವನಿಗೆ ಐದು ಹೆಣ್ಣು ಮಕ್ಕಳು. ಗಂಡು ಸಂತಾನವಿರಲಿಲ್ಲ. ಹೀಗಾಗಿ ಪ್ರತಿದಿನವೂ ಇದಕ್ಕೆಲ್ಲ ಕಾರಣ ನೀವೇಎಂದು ಹೆಂಡತಿಯ ಬಳಿ ಬೈಸಿಕೊಳ್ಳುತ್ತಾನೆ. ಗಂಡನನ್ನು ಗೋಳು ಹೊಯ್ದುಕೊಂಡರೆ ಅವಳಿಗೆ ಏನೋ ಒಂದು ರೀತಿಯ ಮಾನಸಿಕ ನೆಮ್ಮದಿ.

ನನ್ನ ಇನ್ನೊಬ್ಬ ಗೆಳೆಯನ ಕುಟುಂಬದಲ್ಲಿ ಮುಂದಿನ ನಾಲ್ಕು ತಲೆಮಾರು ಕುಳಿತು ತಿಂದರೂ ಕರಗದಷ್ಟು ಆಸ್ತಿ ಇತ್ತು. ಹೀಗಾಗಿ ಆಸ್ತಿ ಕರಗಿಸುವ ವಿಧಾನವೇ ತಿಳಿಯದೆ ಆತ ಸಪ್ತಪದಿ ತುಳಿದನಂತೆ! ಮೈಸೂರಿನಲ್ಲಿ ನನ್ನ ಮತ್ತೊಬ್ಬ ಗೆಳೆಯನಿದ್ದಾನೆ. ಆತ ಆರಂಕಿಯ ಸಂಬಳ ಬರುವ ಸಾಫ್‌ಟ್ವೇರ್ ಕಂಪೆನಿಯಲ್ಲಿ ಕೆಲಸ. ಮದುವೆಯ ಕುರಿತು ಅವನ ವರಸೆಯೇ ಬೇರೆ. ಬ್ಯಾಚುಲರ್ ಆಗಿದ್ದಾಗ ಕಂಪನಿಯ ಎಲ್ಲ ಸಹೋದ್ಯೋಗಿಗಳು ಮದುವೆ ಯಾವಾಗ ಸರ್?’ ಎಂದು ದಿನವೂ ಕಾಡುತ್ತಿದ್ದರಂತೆ. ಅವರೆಲ್ಲರ ಕಾಟ ತಪ್ಪಿಸಿಕೊಳ್ಳಲು ಆತ ಹಸೆಮಣೆ ಏರಿಬಿಟ್ಟನಂತೆ. ‘ಈಗ ನೆಮ್ಮದಿಯಿಂದ ಇದ್ದೀನಪ್ಪಾಎಂದು ನಿಟ್ಟುಸಿರು ಬಿಡುತ್ತಾನೆ! ಮತ್ತೊಬ್ಬ ಗೆಳೆಯ ತನ್ನ ಅರ್ಧ ಜೀವನ ಪೂರ್ತಿ ಇತರರ ಮದುವೆ ಸಮಾರಂಭಗಳಿಗೆ ಹೋಗುವುದು, ಉಡುಗೋರೆ ಕೊಡುವುದೇ ಕೆಲಸವಾಗಿತ್ತು. ಇದುವರೆಗೂ ಮದುವೆ ಯಾಕಾಗಿಲ್ಲ ಎಂಬ ನೆಂಟರಿಸ್ಟರ, ಸ್ನೇಹಿತರ, ಪರಿಚಯದವರ ಪ್ರಶ್ನೆಗಳಿಗೆ ತತ್ತರಿಸಿ, ಕೊನೆಗೆ ಬೇಸತ್ತು ವೈವಾಹಿಕ ಜೀವನಕ್ಕೆ ಕಾಲಿಟ್ಟುಬಿಟ್ಟ!

ಹೀಗೆ ನಾನು ಅವರಿವರ ಮದುವೆಯ ಅನಿವಾರ್ಯತೆ ಬಗ್ಗೆ ವಿಚಾರಿಸಿದ ಕೆಲವು ಸ್ವಾರಸ್ಯಕರ ಹೇಳಿಕೆಗಳನ್ನು ರೀತಿ ಸಂಕ್ಷಿಪ್ತವಾಗಿ ಪಟ್ಟಿ ಮಾಡಿರುವೆ. ಓದಿ. ಒಮ್ಮೆ ನಕ್ಕು ಬಿಡಿ, ಇಲ್ಲವೇ ಗಂಭಿರವಾಗಿ ಯೋಚಿಸಿ! ಹೇಗಿರಬೇಕೆಂಬುದು ನಿಮಗೇ ಬಿಟ್ಟಿದ್ದು!

Tags

Related Articles

Leave a Reply

Your email address will not be published. Required fields are marked *

Language
Close