About Us Advertise with us Be a Reporter E-Paper

ಅಂಕಣಗಳು

ನಾವು ಬಡವರಾಗಿಯೇ ಇರುವುದಿಲ್ಲಮ್ಮಾ! ಸಿರಿವಂತರಾಗುತ್ತೇವೆ!

- ಎಸ್‌. ಶಡಕ್ಷರಿ

ಹೌದು. ಬಾರ್ ಒಂದರಲ್ಲಿ ಕುಡಿಯುತ್ತಾ ಕುಳಿತಿದ್ದ ಒಬ್ಬ ಪಾಶ್ಚಾತ್ಯ ಸಂಗೀತದ ಜಗತ್ತಿಗೆ ಒಬ್ಬ ಹಾಡುಗಾರನನ್ನು ಹುಡುಕಿಕೊಟ್ಟರು! ಆ ಕುತೂಹಲಕಾರೀ ಘಟನೆ ಹೀಗಿದೆ: ಕಳೆದ ಶತಮಾನದ ಆರಂಭ ಕಾಲದಲ್ಲಿ ಅಮೆರಿಕಾದ ಶಿಕಾಗೋ ನಗರದಲ್ಲಿ ಕೋಲ್ಸ್ ಹೆಸರಿನ ಬಡ ಕುಟುಂಬವೊಂದಿತ್ತು. ಆ ಕುಟುಂಬದ ಎರಡನೆಯ ಮಗ ನ್ಯಾಟ್ ಚಿಕ್ಕಂದಿನಿಂದಲೇ ತನ್ನ ತಾಯಿಯಿಂದ ಪಿಯಾನೋ ನುಡಿಸುವುದನ್ನು ಕಲಿತ. ಆತನಿಗೆ ಏನೇನೋ ಆಟಿಕೆಗಳನ್ನು ಕೊಂಡುಕೊಳ್ಳಬೇಕೆಂಬ ಆಸೆ. ಆದರೆ ಆತನ ತಾಯಿ ತಂದೆ ಕಡುಬಡವರು. ಒಮ್ಮೆ ಆತ ಚಿಕ್ಕ ಹುಡುಗನಿದ್ದಾಗ ತಾಯಿಯನ್ನು ಏನೋ ಬೇಕೆಂದು ಆಕೆ ‘ನಾವು ಬಡವರು. ಅದನ್ನು ಪಡೆಯಲು ಸಾಧ್ಯವಿಲ್ಲ’ ಎಂದರು. ಆತ ಮತ್ತೆ ಮತ್ತೆ ಏನಾದರೂ ಕೇಳಿದಾಗಲೂ ಆಕೆ ‘ನಾವು ಬಡವರು. ಅಷ್ಟೆಲ್ಲಾ ಖರ್ಚು ಮಾಡಿ ಅವನ್ನು ಕೊಳ್ಳಲು ಸಾಧ್ಯವಿಲ್ಲ’ ಎನ್ನುತ್ತಿದ್ದರು. ಬಾಲಕ ನ್ಯಾಟ್ ಸ್ವಲ್ಪ ಯೋಚಿಸುತ್ತಿದ್ದ. ಆನಂತರ ‘ಚಿಂತಿಸಬೇಡಮ್ಮ, ನಾವು ಬಡವರಾಗಿಯೇ ಇರುವುದಿಲ್ಲ, ನಾವೂ ಸಿರಿವಂತರಾಗುತ್ತೇವೆ!’ ಎಂದು ಭರವಸೆ ನೀಡುತ್ತಿದ್ದ.

ಆತ ತನ್ನ ತಾಯಿಯಿಂದ ಪಿಯಾನೋ ನುಡಿಸುವುದನ್ನು ಚೆನ್ನಾಗಿ ಕಲಿತ. ತನ್ನ ಹನ್ನೊಂದನೆಯ ವಯಸ್ಸಿಗೆ ಬಾರುಗಳಲ್ಲಿ ಪಿಯಾನೊ ನುಡಿಸುತ್ತ ಮಾಡತೊಡಗಿದ. ಆತನಿಗೆ ಒಳ್ಳೆ ಬೇಡಿಕೆಯಿತ್ತು. ಒಬ್ಬ ಬಾರಿನ ಮಾಲೀಕ ಆತನನ್ನು ‘ಪಿಯಾನೋ ಕಿಂಗ್’ ಎಂದು ಕರೆದ. ಆತನ ಹೆಸರು ‘ನ್ಯಾಟ್ ಕಿಂಗ್ ಕೋಲ್ಸ್’ ಎಂದಾಯಿತು. ಆತನ ಬದುಕನ್ನೇ ಬದಲಿಸುವ ಆ ಘಟನೆ ಆತನ ಹದಿನಾರನೆಯ ವಯಸ್ಸಿನಲ್ಲಿ ನಡೆಯಿತು. ಮಬ್ಬು ಬೆಳಕಿನ ಬಾರಿನಲ್ಲಿ ಆತ ಪಿಯಾನೋ ನುಡಿಸುತ್ತಿದ್ದ. ಸುತ್ತ ಜನ ಕುಡಿಯುತ್ತ ಕುಳಿತಿದ್ದರು.

ಇದ್ದಕ್ಕಿದ್ದಂತೆ ಚೆನ್ನಾಗಿ ಕುಡಿದಿದ್ದ ಒಬ್ಬ ಕುಡುಕ ಆತನ ಮುಂದೆ ತೂರಾಡುತ್ತ ಬಂದು ನಿಂತ. ಆತನಿಗೆ ಹಾಡುವಂತೆ ನ್ಯಾಟ್ ಸಮಾಧಾನವಾಗಿ ತಾನು ಪಿಯಾನೋ ವಾದಕ, ಹಾಡುಗಾರನಲ್ಲವೆಂದು ಹೇಳಿದ. ಆದರೆ ಕುಡುಕ ಹಾಡಲೇಬೇಕೆಂದು ಒತ್ತಾಯಿಸಿದ. ಸಿಟ್ಟಿನಿಂದ ಕೂಗಾಡಿದ. ಬಾರಿನ ಮಾಲೀಕ ಬಂದು ಸಮಾಧಾನ ಪಡಿಸಿದರೂ ಕುಡುಕ ಕೇಳಲಿಲ್ಲ. ಗದ್ದಲವೆಬ್ಬಿಸಿದ. ಕೊನೆಗೆ ಬಾರಿನ ಮಾಲೀಕ ನ್ಯಾಟನನ್ನು ಒಂದು ಹಾಡು ಹೇಳಿಬಿಡು. ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಹೇಳಿದಾಗ, ಬೇರೆ ದಾರಿಯಿರಲಿಲ್ಲ. ನ್ಯಾಟಿಗೆ ‘ಸ್ವೀಟ್ಲೊರೈನ್’ ಎಂಬ ಹಾಡಿನ ಪದಗಳು ಗೊತ್ತಿತ್ತು. ರಾಗವೂ ಗೊತ್ತಿತ್ತು. ಏಕೆಂದರೆ ಅದನ್ನು ಆತ ಪಿಯಾನೋದಲ್ಲಿ ನುಡಿಸಿದ್ದ. ಅದನ್ನೇ ಆತ

ಆತ ಎಷ್ಟು ಚೆನ್ನಾಗಿ ಹಾಡಿದನೆಂದರೆ ಅಲ್ಲಿದ್ದವರಿಗೆಲ್ಲ ಆಶ್ಚರ್ಯವಾಯಿತು. ಸ್ವತಃ ನ್ಯಾಟನಿಗೂ ಆಶ್ಚರ್ಯವಾಯಿತು. ಅಂದಿನಿಂದ ನ್ಯಾಟ್ ಹಾಡುಗಾರನಾಗಿಬಿಟ್ಟ. ಪಿಯಾನೋ ನುಡಿಸುವುದನ್ನು ಬಿಟ್ಟ. ದಿನೇ ದಿನೇ ಜನಪ್ರಿಯತೆಯ ಮೆಟ್ಟಿಲನ್ನು ಏರುತ್ತ ಹೋದ. ಆತನ ನೂರಾರು ಗ್ರಾಮಾಫೋನ್ ರೆಕಾರ್ಡುಗಳು ಹೊರಬಂದವು. ಲಕ್ಷಲಕ್ಷ ಸಂಖ್ಯೆಯಲ್ಲಿ ಮಾರಾಟವಾಗಹತ್ತಿದವು. ರೇಡಿಯೋ, ಟೆಲಿವಿಷನ್ನುಗಳಲ್ಲಿ ಆತ ಅತಿ ದೊಡ್ಡ ತಾರೆಯಾಗಿಬಿಟ್ಟ. ಕೋಟಿಗಟ್ಟಲೆ ಹಣ ಸಂಪಾದಿಸಿದ. ಅಮೆರಿಕಾದ ಅತಿ ಬೆಲೆಬಾಳುವ ಬಡಾವಣೆಯಲ್ಲಿ ದೊಡ್ಡ ಬಂಗಲೆ ಕೊಂಡುಕೊಂಡ. ಅಮೇರಿಕದ ಅಧ್ಯಕ್ಷ ಕೆನೆಡಿಯವರೂ ಆತನನ್ನು ಸನ್ಮಾನಿಸುವಷ್ಟು ಎತ್ತರಕ್ಕೆ ಬೆಳೆದ. 1965ರಲ್ಲಿ ತನ್ನ ನಲವತ್ತೆಂಟನೆಯ ವಯಸ್ಸಿನಲ್ಲಿ ಗಂಟಲ ಕ್ಯಾನ್ಸರಿಗೆ ತುತ್ತಾಗಿ ಸಾವನ್ನಪ್ಪುವ ಹೊತ್ತಿಗೆ ಆತ ಅತ್ಯಂತ ಜನಪ್ರಿಯ ಗಾಯಕನಾಗಿದ್ದ.

ಒಬ್ಬ ಮಹಾನ್ ಗಾಯಕ ಸದಾ ಆತನ ಬಳಿಗೇ ಅಡಗಿ ಕುಳಿತಿದ್ದ. ಆದರೆ ಆತ ತನ್ನನ್ನು ಕೇವಲ ಪಿಯಾನೋ ವಾದಕನೆಂದು ಭಾವಿಸಿದ್ದ. ಆ ಕುಡುಕ ಬಾರದಿದ್ದರೆ ಆತ ಪಿಯಾನೋ ವಾದಕನಾಗಿ ಕಣ್ಮರೆಯಾಗುತ್ತಿದ್ದ!

ನಮ್ಮಲ್ಲಿ, ನಮ್ಮ ಸುತ್ತಮುತ್ತಲಿನವರಲ್ಲಿ ಯಾವ್ಯಾವ ಪ್ರತಿಭೆ ಅಡಗಿ ಕುಳಿತಿದೆಯೋ ಯಾರಿಗೆ ಗೊತ್ತು? ಪ್ರಯತ್ನಪಟ್ಟರೆ, ಅವಕಾಶ ನಾವೂ ಏನೆಲ್ಲ ಸಾಧನೆ ಮಾಡಬಹುದೋ ಯಾರಿಗೆ ಗೊತ್ತು? ಯೋಚಿಸಿ ನೋಡಿ!

Tags

Related Articles

Leave a Reply

Your email address will not be published. Required fields are marked *

Language
Close