About Us Advertise with us Be a Reporter E-Paper

Breaking Newsರಾಜ್ಯ

ಸಾಲಮನ್ನಾಗೆ ನಾವು ಬದ್ಧ: ಪ್ರಿಯಾಂಕ್ ಖರ್ಗೆ ಸ್ಪಷ್ಟನೆ

ರಾಯಚೂರು: ಸಾಲಮನ್ನಾ ವಿಚಾರದಲ್ಲಿ ಗಿಡ ನೆಟ್ಟಿಲ್ಲ ಎಂಬ ಸಿಎಂ ಹೇಳಿಕೆಗೆ ಅಪಾರ್ಥ ಕಲ್ಪಿಸಬೇಡಿ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ರಾಯಚೂರಿನಲ್ಲಿ ಮಾತನಾಡಿದ ಅವರು ಸಾಲಮನ್ನಾ ವಿಚಾರದಲ್ಲಿ ಸ್ವಲ್ಪ ತಾಳ್ಮೆಯಿಂದಿರಬೇಕು. ಸಾಲಮನ್ನಾ ಮಾಡಲು ಭಾರಿ ಮೊತ್ತದ ಹಣ ಬೇಕಾಗುವುದರಿಂದ ಹೇಗಾದರೂ ಮಾಡಿ ಸಾಲಮನ್ನಾ ಮಾಡುತ್ತೇವೆ.

ಇನ್ನು ಪ್ರತ್ಯೇಕ ರಾಜ್ಯ ವಿಚಾರ ಸಂಬಂಧ, ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕದವರು ಕಷ್ಟಪಟ್ಟು ಒಂದಾಗಿದ್ದೇವೆ. ಹೀಗಾಗಿ ಪ್ರತ್ಯೇಕ ರಾಜ್ಯ ಬೇಕಿಲ್ಲ. ಪ್ರತ್ಯೇಕ ರಾಜ್ಯ ಕೇಳಿದವರು ರಾಜ್ಯಕ್ಕಾಗಿ ಬೆವರು ಸುರಿಸಿದವರಲ್ಲ ಎಂದು ವಾಗ್ದಾಳಿ ನಡೆಸಿದರು.

Tags

Related Articles

Leave a Reply

Your email address will not be published. Required fields are marked *

Language
Close