About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಅಭಿವೃದ್ಧಿಗೆ ಸರಕಾರ ಸಿದ್ಧ, ರಾಜ್ಯ ಒಡೆಯುವ ಮಾತು ಆಡದಿರಿ: ಪರಮೇಶ್ವರ್

5 ವರ್ಷಗಳಲ್ಲಿ ಹಂತಹಂತವಾಗಿ ಉತ್ತರ ಕರ್ನಾಟಕ ಅಭಿವೃದ್ಧಿ

ಬೆಂಗಳೂರು: ಉತ್ತರ ಕರ್ನಾಟಕ ಅಭಿವೃದ್ಧಿಗೆ ನಮ್ಮ ಸರಕಾರ ಬದ್ಧವಾಗಿದೆ. ಅದಕ್ಕಾಗಿ ನಾವು ವಿಭಿನ್ನ ರೀತಿ ತೋರುವುದಿಲ್ಲ. ಕರ್ನಾಟಕ ಒಡೆಯುತ್ತೇವೆ, ಮತ್ತೊಂದು ಕರ್ನಾಟಕ ಮಾಡುತ್ತೇವೆ ಎನ್ನುವುದು ಸರಿಯಲ್ಲ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ರಾಜಕೀಯ ಪಕ್ಷ ಅದು ಬಿಜೆಪಿಯಾಗಲೀ ಬೇರೆಯದೇ ಪಕ್ಷವಾಗಲಿ ರಾಜಕೀಯಕ್ಕಾಗಿ ರಾಜ್ಯವನ್ನೇ ಒಡೆಯ ಬಾರದು. ಕರ್ನಾಟಕ ಏಕೀಕರಣದ ಇತಿಹಾಸವನ್ನು ಎಲ್ಲರೂ ಅರಿಯಬೇಕು. 5 ವರ್ಷಗಳಲ್ಲಿ ಹಂತಹಂತವಾಗಿ ಉತ್ತರ ಕರ್ನಾಟಕ ಅಭಿವೃದ್ಧಿಗೆ ಮುಂದಾಗುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸರಕಾರ ಸಿದ್ಧ ಎಂದು ತಿಳಿಸಿದರು.

ಯಾವುದೇ ವಿಭಿನ್ನ ನೀತಿಗೆ ನಾವು ಹೋಗುವುದಿಲ್ಲ. ಈ ಹಿಂದಿನ ಸರಕಾರಗಳು ಅವರದ್ದೇ ಆದ ಕೆಲಸಗಳನ್ನು ನಿರ್ವಹಿಸಿವೆ. ನಾವು ಸಹ ಅದನ್ನು ಮುಂದುವರಿಸುತ್ತಿದ್ದೇವೆ. ಮುಂದಿನ ಐದು ವರ್ಷಗಳಲ್ಲಿ ಅಭಿವೃದ್ಧಿ ಮಾಡುತ್ತೇವೆ ಎಂದು ತಿಳಿಸಿದರು.

ರಾಜ್ಯ ಒಡಕು ಸಲ್ಲ
ನಾವೆಲ್ಲರೂ ಒಟ್ಟಾಗಿ ಇರುವ ಬಗ್ಗೆ ಗಮನ ಹರಿಸಬೇಕು. ರಾಜಕೀಯಕ್ಕಾಗಿ ಬಿಜೆಪಿಯಾಗಲಿ ಅಥವಾ ಬೇರೆ ಪಕ್ಷಗಳಾಗಲಿ ಬಳಸಿಕೊಳ್ಳಬಾರದು ಎಂದು ಡಿಸಿಎಂ ಮನವಿ ಮಾಡಿದರು.

ಬಂದ್ ವಿಫಲ
ಉತ್ತರ ಕರ್ನಾಟಕದಲ್ಲಿ ಕರೆ ನೀಡಿದ್ದ ಬಂದ್ ವಿಫಲವಾಗಿದೆ. ಅಲ್ಲಲ್ಲಿ ಬಂದ್ ಮಾಡಿದ್ದರೂ ಅದು ಯಶಸ್ವಿಯಾಗಿಲ್ಲ. ಅಭಿವರದ್ಧಿಗಾಗಿ ಸರಕಾರ ಇರುವುದು, ನಮ್ಮ ಸರಕಾರ ಅದಕ್ಕೆ ಬದ್ಧವಾಗಿದೆ. ಭಿನ್ನತೆ ನಾವು ಮಾಡುವುದಿಲ್ಲ. ಈವರೆಗು ಬಂದಂತಹ ಎಲ್ಲಾ ಸರಕಾರಗಳು ಅಭಿವೃದ್ಧಿಗೆ ಆದ್ಯತೆ ನೀಡಿವೆ.

ಎಸ್.ಎಮ್. ಕೃಷ್ಣ ಸಿಎಂ ಆಗಿದ್ದಾಗ ಸಮಿತಿ ರಚಿಸಿದ್ದರು. ಸಮಿತಿಯ ವರದಿ ಅನ್ವಯ ಅನುದಾನ ನೀಡುವ ಕೆಲಸ ಮಾಡಲಾಗುತ್ತಿವೆ. ಮುಂದಿನ 5 ವರ್ಷಗಳಲ್ಲಿ ಅಭಿವೃದ್ಧಿಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Tags

Related Articles

Leave a Reply

Your email address will not be published. Required fields are marked *

Language
Close