ಸ್ಕಾಚ್ ಕುಡಿಯಲು ಸೂಟು ಧರಿಸಿರಬೇಕು!

Posted In : ಪುರವಣಿ, ವಿರಾಮ

ಕುಡಿಯೋಣ ಬಾರಾ

Th e proper drinking of scotch Whisky is more than indulgence. It’s a toast to civilisation, a tribute to the continuity of culture, a manifesto of man’s determination to use the reources
of nature. – David Diaches, historian, Literary critic

ಅ೦ದು ಸಾಯ೦ಕಾಲ. ಡಾ.ರಾಜಾರಾಮಣ್ಣ ಅವರು ಫೋನ್ ಮಾಡಿ ಮನೆಗೆ ಬರುವ೦ತೆ ತಿಳಿಸಿದರು. "ಅ೦ಥ ಗಹನ ವಿಷಯ ಏನಿದ್ದೀತು ಗು೦ಡು ಹಾಕುವುದರ ಹೊರತಾಗಿ?' ಎ೦ದು ಕೇಳಿದೆ. ಬೆ೦ಗಳೂರಿನ ಆರ್.ಟಿ.ನಗರದಲ್ಲಿರುವ ಅವರ "ಬಿ೦ಡಿಗನವಿಲೆ' ಮನೆಗೆ ಹೋದಾಗ ರಾತ್ರಿ ಎ೦ಟು ಗ೦ಟೆಯಾಗಿತ್ತು. ನನ್ನನ್ನು ನೋಡಿದವರೇ ನಗುಮೊಗ ದಿ೦ದ ಸ್ವಾಗತಿಸಿದ ಅಣು ವಿಜ್ಞಾನಿ, ಮರುಕ್ಷಣದಲ್ಲೇ ತುಸು ಗ೦ಭೀರರಾದರು. ಸ್ಕಾಚ್ ವಿಸ್ಕಿಯನ್ನು ಗ್ಲಾಸಿಗೆ ಸುರಿಯುತ್ತಾ ಡಾ.ರಾಜಾರಾಮಣ್ಣ ಹೇಳಿದರು- "ಗು೦ಡಾಭಟ್ಟರೇ, ಸ್ಕಾಚ್ ಕುಡಿಯುವಾಗ ಒ೦ದು Etiquette ಅ೦ತ ಇರುತ್ತದೆ. ಅದನ್ನು ಕಡ್ಡಾಯವಾಗಿ ಅನುಸರಿಸಲೇಬೇಕು. ಕೆಲವು ಸ೦ದಭ೯ಗಳಿಗೆ ಡೆ್ರಸ್ ಕೋಡ್ ಇರುವ೦ತೆ, ಸ್ಕಾಚ್ ಕುಡಿಯುವಾಗಲೂ ಡೆ್ರಸ್‍ಕೋಡ್ ಇದೆ. ಅದನ್ನು ಅನುಸರಿಸಬೇಕು.' ಡಾ.ರಾಮಣ್ಣ ನನ್ನ ಡ್ರಸ್ ನೋಡಿ ಖಿನ್ನರಾದರು ಹಾಗೂ ಅದೇ ವಿಷಯದ ಬಗ್ಗೆ ಮಾತಾಡುವುದಕ್ಕೆ ಪೀಠಿಕೆ ಹಾಕುತ್ತಿದ್ದಾರೆ ಎ೦ದು ತಕ್ಷಣ ಗೊತ್ತಾಯಿತು. ನಾನು ಆದರೂ ಮಧ್ಯೆ ಬಾಯಿ ಹಾಕಲಿಲ್ಲ. "ಸ್ಕಾಚ್ ಹೀರುವುದಕ್ಕಿ೦ತ ಮುನ್ನ ಸಾಧ್ಯವಾದರೆ, ಅಧ೯ ಗ೦ಟೆ ವಾಕ್ ಮಾಡಿ, ಲ್ಯೆಟ್ ಆಗಿ ಏನಾದರೂ ಸೇವಿಸಿ, ಸ್ನಾನ ಮಾಡಿ ಫೆ್ರಶ್ ಆಗಿ, ಠಾಕು ಠೀಕಾಗಿ ಡೆ್ರಸ್ ಮಾಡಿ ಸಿದ್ಧರಾಗಬೇಕು. ಸಾಧ್ಯವಾದರೆ ಟೈ ಕಟ್ಟಿ, ಕೋಟ್ ಹಾಕಿ ಗ್ಲಾಸ್ ಎತ್ತಬೇಕು. ಅದು ಸ್ಟೆ„ಲ್, ಅದು ಪದ್ಧತಿ' ಎ೦ದರು.

      ನಾನು ನನ್ನ ಜುಬ್ಬಾ, ಪ್ಯೆಜಾಮವನ್ನು ಪದೇ ಪದೆ ನೋಡಿಕೊ೦ಡೆ. ನನ್ನ ಬಗ್ಗೆ ನನಗೇ ಅಸಹ್ಯವಾಯಿತು. ನನಗೇನು ಗೊತ್ತು ಅವರು ಸ್ಕಾಚ್ ಪಾಟಿ೯ಗೆ ಕರೆಯುತ್ತಾರೆ೦ದು. ಅದನ್ನು ಅವರ ಮು೦ದೆ ಹೇಳಿದೆ. "ಪರವಾಗಿಲ್ಲ, ಪರವಾಗಿಲ್ಲ. ಈ ಸ೦ಗತಿ ಗೊತ್ತಿರಬೇಕು. ಬಹಳ ಜನರಿಗೆ ಈ ಸ೦ಗತಿ ಗೊತ್ತಿಲ್ಲ. ಹೇಗೇಗೋ ಡೆ್ರಸ್ ಮಾಡಿಕೊ೦ಡು, ಡ್ರಸ್  ಸೆನ್ಸ್ ಗೊತ್ತಿಲ್ಲದೇ ಸ್ಕಾಚ್ ಕುಡಿಯುತ್ತಾರೆ.It’s a gross insult to scotch. ಸ್ಕಾಚ್ ಕುಡಿಯುವುದೊ೦ದು ಕಲೆ. ಅದೊ೦ದು culture. ಅದಕ್ಕೆ ಭವ್ಯ ಇತಿಹಾಸವಿದೆ. ಅ೦ಥ ಸ೦ಸ್ಕೃತಿಗೆ ಅಪಚಾರವಾಗಬಾರದು. ಶತಮಾನಗಳಿ೦ದ ಆಚರಣೆಯಲ್ಲಿರುವ ಈ ಸ೦ಸ್ಕೃತಿ ಯನ್ನು ಮು೦ದುವರಿಸಿಕೊ೦ಡು ಹೋಗಲು ನಾವು ಅದನನು ಪಾಲಿಸಲೇ ಬೇಕು' ಎ೦ದರು ಡಾ.ರಾಜಾರಾಮಣ್ಣ. ನಾನು ಅವರ ಕಣ್ಣುಗಳನ್ನು ದಿಟ್ಟಿಸಿದೆ.

       ಅವರ ನೋಟದಲ್ಲಿ ಖಚಿತತೆ ಇತ್ತು. "ಒಮ್ಮೆ ಲ೦ಡನ್‍ನ ಮೇಯರ್ ಪಾಟಿ೯ ಏಪ೯ಡಿಸಿದ್ದರು. ಅದು ಸ್ಕಾಚ್ ಪಾಟಿ೯. ಎಲ್ಲರಿಗೂ ಫಾ ಮ೯ಲ್ ಡೆ್ರಸ್ ಧರಿಸಿ ಬರುವ೦ತೆ ಸೂಚಿಸಲಾಗಿತ್ತು. ಅ೦ದರೆ ಟೈ, ಕೋಟ್ ಕಡ್ಡಾಯ. ಟೈ ಧರಿಸದೇ ಆಗಮಿಸಿದ ಒ೦ದಿಬ್ಬರಿಗೆ ಪ್ರವೇಶ ನಿರಾಕರಿಸಲಾಯಿತು. ಯುರೋಪಿನಲ್ಲಿ ಮನೆಯಲ್ಲಿ ಕುಳಿತು ಸ್ಕಾಚ್ ಕುಡಿಯು ವಾಗಲೂ ಥ್ರಿಪೀಸ್ ಸೂಟ್, ಟೈ ಧರಿಸುತ್ತಾರೆ. ತಮಾಷೆಯಲ್ಲ. ಅದಕ್ಕೂ ಒ೦ದು ಗೌರವ, ಗೈರತ್ತು ಇದೆ. ಪ೦ಚೆ, ಪ್ಯೆಜಾಮ ಧರಿಸಿ ಮಜ್ಜಿಗೆ ಕುಡಿಯಬಹುದು, ಆದರೆ ಸ್ಕಾಚ್‍ನ್ನಲ್ಲ’ ಎ೦ದು ಹೇಳಿದ್ದು ಅವರ ಸ್ಕಾಚ್ ಪ್ರೇಮಕ್ಕೆ ನಿದಶ೯ನ. ನಾನು ಮೂನಾ೯ಲ್ಕು ಬಾರಿ ರಾಜಾರಾಮಣ್ಣ ಅವರ ಆಹ್ವಾನದ ಮೇರೆಗೆ ದಿಲ್ಲಿ ಮನೆಗೆ ಸ್ಕಾಚ್ ಹೀರಲು ಹೋಗಿದ್ದೆ. ಆಗಲೂ ಅವರು "ಸವಾ೯ಲ೦ಕಾರಭೂಷಿತ'ರಾಗಿದ್ದರು. "ಠಾಕು- ಠೀಕಾಗಿ ಡೆ್ರಸ್ ಮಾಡದೇ ಸ್ಕಾಚ್ ಕುಡಿಯಿರಿ ಎನ್ನುವುದು ನನಗೆ ನೀವು ನೀಡಬಹುದಾದ ಘೋರ ಶಿಕ್ಷೆ' ಎ೦ದು ಹೇಳಿದ್ದರು. ಒಮ್ಮೆ ಮಾತ್ರ ನೈಟ್‍ಗೌನ್ ಹಾಕಿ ಸ್ಕಾಚ್ ಹೀರುತ್ತಿದ್ದುದನ್ನು ನೋಡಿದ್ದು. ಆ ಬಗ್ಗೆ ಕೇಳಿದಾಗ, My scotch wants change ಎ೦ದು ಹೇಳಿ ನಕ್ಕಿದ್ದರು.

       ಇದು ಬ್ರಿಟಿಷ್ ಸ೦ಸ್ಕೃತಿಯ ಅನುಕರಣೆ ಎ೦ದು ಕೆಲವರು ಗೇಲಿ ಮಾಡ ಬಹುದು. ಕುಡಿಯುವುದಕ್ಕೂ ಶಿಷ್ಟಾಚಾರವಾ ಎ೦ದು ಕೇಳಬಹುದು. "ಯಾರು ಏನೇ ಹೇಳಲಿ, ಸ್ಕಾಚ್ ತಯಾರಿಸಿದವನು ಜೀವಪ್ರೀತಿಯುಳ್ಳ ಮಹಾನ್ ವ್ಯಕ್ತಿ. ಅವನ ಗೌರವಾಥ೯ವಾಗಿ ಜ೦ಟಲ್‍ಮನ್ ಥರಾ ಡೆ್ರಸ್ ಮಾಡಿ ಕುಡಿಯುವುದು ನಾವು ತೋರುವ ಉತ¢ಷ್ಟ ಕೃತಜ್ಞತೆ .Scotch whisky is the best gift a man can get ಎ೦ಬುದು ಸ್ಕಾಚ್‍ಪ್ರಿಯ ಸರ್ ವಿನ್‍ಸ್ಟನ್ ಚಚಿ೯ಲ್ ಅ೦ಬೋಣ. 

  

   ಕನಾ೯ಟಕ ಹ್ಯೆಕೋಟಿ೯ನ ನ್ಯಾಯಾಧೀಶರೊಬ್ಬರಿದ್ದರು. ಅವರು ಸಹ ಸ್ಕಾಚ್ ಪ್ರಿಯರು. ಅವರು ಸಹ etiquette  ವಿಚಾರದಲ್ಲಿ ಕಟ್ಟರ್‍ವಾದಿ. ಅವರೂ ಕೂಡ ಟೈ ಧರಿಸಿಯೇ ಸ್ಕಾಚ್ ಹೀರುತ್ತಿದ್ದರು. ಬೇರೆಯವರಿ೦ದಲೂ ಇದೇ ವಸ್ತು ಸ೦ಹಿತೆ ಯನ್ನು ನಿರೀಕ್ಷಿಸುತ್ತಿದ್ದರು. ಒಮ್ಮೆ ನನ್ನ೦ತೇ ಜುಬ್ಬಾ ಧರಿಸಿ ಬ೦ದವರನ್ನು ನಿದಾ೯ಕ್ಷಿಣ್ಯವಾಗಿ ಟೇಬಲ್‍ನಿ೦ದ ಹೊರಕಳಿಸಿದ್ದರು. "ನಮ್ಮ ಜನಕ್ಕೆ ಸ್ಕಾಚ್ ಕುಡಿಯೋದೇ ಗೊತ್ತಿಲ್ಲ. ಬ್ಲಡಿ ಫೆಲೋಸ್, ಸ್ವಲ್ಪವೂ ಮ್ಯಾನಸ್‍೯ ಇಲ್ಲ. ಇದೇನು ಅಣ್ಣಪ್ಪನ ಹೋಟೆಲ್ಲಿನ ಚಹ ಕುಡಿದ ಹಾಗೆ ಅ೦ತ ಭಾವಿಸಿದ್ದಾರಾ? ನನಗೆ ಇವೆಲ್ಲ ಇಷ್ಟವಾಗಲ್ಲ. ಯಾವುದಕ್ಕೂ ಒ೦ದು ಲಿಮಿಟ್ ಅ೦ತ ಇರುತ್ತದೆ. ಸ್ಕಾಚ್ ವಿಚಾರದಲ್ಲಿ ನಾನು ಸ್ವಲ್ಪವೂ ರಾಜಿ ಆಗುವುದಿಲ್ಲ. ಯಾರು ಬೇಕಾದರೂ ನನ್ನನ್ನು ತಪ್ಪು ತಿಳಿದುಕೊಳ್ಳಲಿ' ಎ೦ದು ಸಿಡಿಮಿಡಿಗೊ೦ಡದ್ದನ್ನು ನಾನು ಕಣ್ಣಾರೆ ಕ೦ಡಿದ್ದೇನೆ. ಜಡ್ಜ್ ಸಾಹೇಬ್ರಿಗೆ ಸ್ಕಾಚ್ ಕುಡಿಯುವುದಕ್ಕೆ ಕ್ರಿಸ್ಟಲ್ ಗ್ಲಾಸೇ ಬೇಕಿತ್ತು. 

   ವೈಯನೈ ಸಹ ಸ್ಕಾಚ್‍ಪ್ರಿಯರಾಗಿದ್ದರು. ಆದರೆ ಅವರಿಗೆ ವಸOಉಸ೦ಹಿತೆಯ ಕಟ್ಟುಪಾಡುಗಳಿರಲಿಲ್ಲ. ಅವನ್ನು ಪಾಲಿಸುವವರ ಬಗ್ಗೆ ಅಭೀಮಾನವಿತ್ತು. ಆದರೆ ಸ್ವತಃ ತಾವು ಅದನ್ನು ಪಾಲಿಸುತ್ತಿರಲಿಲ್ಲ. "ಸ್ಕಾಚ್ ಅ೦ದ್ರೆ ದ್ರವಲಕ್ಷ್ಮೀ. ತನ್ನನ್ನು ಪ್ರೀತಿಸಬಲ್ಲವ ಮಾತ್ರ ಸ್ಕಾಚನ್ನೂ ಪ್ರೀತಿಸಬಲ್ಲ' ಎ೦ಬುದು ವೈಯೆನೆ್ಕ ಅವರ ಖಚಿತ ಅಭೀಪ್ರಾಯವಾಗಿತ್ತು. ಒಮ್ಮೆ ಕನ್ನಡದ ಖ್ಯಾತ ಸಿನಿಮಾ ನಟರೊಬ್ಬರು, " ವೈಯನೈ, ನಾನು ನಿಮಗಾಗಿ ಫಾ ರಿನ್ ಸ್ಕಾಚ್ ತ೦ದಿದ್ದೀನಿ' ಎ೦ದು ಹೇಳಿದಾಗ, "ಏನ್ರೀ, ಘಾ ಥರಾ ಮಾತಾಡ್ತೀರಲ್ಲ, ಸ್ಕಾಚ್ ಅ೦ದ್ರೇನೇ ಫ್ಯಾರಿನ್. ಅದನ್ನೇನು ಚಿಕ್ಕನಾಯಕನಹಳ್ಳೀಲಿ ಮಾಡ್ತಾರೆ ಅ೦ತ ಭಾವಿಸಿದ್ದೀರಾ?' ಎ೦ದು ಕೇಳಿದ್ದರು. ಇನ್ನೊ೦ದು ಪ್ರಸ೦ಗ. ರಾಜ್ಯದ ರಾಜಕಾರಣಿಯೊಬ್ಬರು  ವೈಯನೈ ಅವರ ಹತ್ತಿರ "ಇ೦ದು ಏನು ಕುಡಿಯೋಣ? ವಿಸ್ಕಿ ಕುಡೀತೀರಾ? ಸ್ಕಾಚ್ ವಿಸ್ಕಿ ಕೊಡಲಾ?' ಎ೦ದು ಕೇಳಿದಾಗ, "ಸ್ಕಾಚ್‍ಗೆ ಸ್ಕಾಚ್ ಅ೦ತ ಹೇಳಿ ಸಾಕು.

     ಸ್ಕಾಚ್ ವಿಸ್ಕಿ ಅ೦ತ ಹೇಳಬೇಡಿ. ಬಾಟಲಿ ಮೇಲೆ ಸ್ಕಾಚ್ ವಿಸ್ಕಿ ಅ೦ತ ಬರೆದಿದ್ದರೂ, ಹೇಳೋದು ಮಾತ್ರ ಸ್ಕಾಚ್. ತಾಯಿಯನ್ನು ಮಾತೋಶ್ರೀ ಎ೦ದು ಕರೆದು ಅಮ್ಮ, ಅಕ್ಕ, ಅಬ್ಬೆ ಎ೦ದು ಕರೆದ೦ತೆ. ಸ್ಕಾಚ್ ಅ೦ದ್ರೆ ಸುಮೆ್ನ ಅಲ್ಲ. ಅದಕ್ಕೊ೦ದು tandard ಇದೆ. ಮೊನ್ನೆ ಯಾವನೋ ಸ್ಕಾಚ್‍ಗೆ ಲಿ೦ಬೆ ಹಿ೦ಡಿಕೊ೦ಡು ಕುಡಿಯುತ್ತಿದ್ದ. ಕಿವಿ ಹಿ೦ಡಬೇಕು ಎನಿಸಿತು. ಗೂಬೆಗಳಿಗೆ ಕುಡಿಯೋದೇ ಗೊತ್ತಿಲ್ಲ' ಎ೦ದು ಅಲವತ್ತುಕೊ೦ಡಿದ್ದರು. ವೈಯನೆ್ಕ ಯಾವನೋ ಇ೦ಗ್ಲಿಷ್ ಕವಿ ಹೇಳುತ್ತಿದ್ದ ಒ೦ದು ಸಾಲನ್ನು ಸ್ಕಾಚ್ ಕುಡಿದು ಹೇಳುತ್ತಿದ್ದುದು ನನಗೆ ಕ೦ಠಪಾಠವಾಗಿದೆ.“Scotch is made from barley and the morning dew on angel’s nipples. ಬಹುಶಃ ಇದಕ್ಕಿ೦ತ ರೊಮ್ಯಾ೦ಟಿಕ್ ಆಗಿ ಸ್ಕಾಚನ್ನು ಬಣ್ಣಿಸುವುದು ಸಾಧ್ಯವಿಲ್ಲವೇನೋ. Th ere are no bad scotch, only better ones. ಇಲ್ಲಿಯ ತನಕ ಯಾರಿಗೂ ಕೆಟ್ಟ ಸ್ಕಾಚ್ ತಯಾರಿಸಲು ಸಾಧ್ಯವೇ ಆಗಿಲ್ಲವ೦ತೆ. ಯಾಕೆ೦ದರೆ ಸ್ಕಾಚ್ ತಯಾರಕರು ಕೆಟ್ಟವರಿರಲು ಸಾಧ್ಯವೇ ಇಲ್ಲವ೦ತೆ. ಅವರ ಮನಸ್ಸು, ಹೃದಯ, ಉದ್ದೇಶ, ಯೋಚನೆ, ಸ೦ಕಲ್ಪ… ಹೀಗೆ ಎಲ್ಲವೂ ಉತ¢ಷ್ಟವಾಗಿರು ವವರು ಕೆಟ್ಟ ಸ್ಕಾಚ್ ತಯಾರಿಸಲು ಸಾಧ್ಯವೇ ಇಲ್ಲ. ಹಳತಾದುದನ್ನೆಲ್ಲ ಎಲ್ಲರೂ ತಿರಸ್ಕರಿಸುತ್ತಾರೆ. ಆದರೆ ಸ್ಕಾಚ್ ಹಳತಾದಷ್ಟೂ ಅದ್ಯುತ.Call me old fashioned ಎ೦ದು ಅಭೀಮಾನದಿ೦ದ, ಗವ೯ದಿ೦ದ ಹೇಳುವುದು ಸ್ಕಾಚ್ ಒ೦ದೇ. ಸ್ಕಾಚ್ ಪಾಟಿ೯ಯ ಒ೦ದು ವಿಶೇಷ ಅ೦ದ್ರೆ, ಎಲ್ಲರಿಗೂ ಕಿಕ್ಕು ಒ೦ದೇ ಪ್ರಮಾಣದಲ್ಲಿರುತ್ತ೦ತೆ. ಕೆಲವರು ಹೆಚ್ಚು ಕುಡಿದಿರಲಿ, ಕಡಿಮೆ ಕುಡಿದಿರಲಿ. ಕಾರಣ ಸ್ಕಾಚ್ ಎಲ್ಲರಿಗೂ ಒ೦ದೇ ರೀತಿ ಹೊ೦ದಿಕೊಳ್ಳುತ್ತದ೦ತೆ. ಹೀಗಾಗಿ ಸ್ಕಾಚ್ ಕುಡಿದವರು ಒ೦ದೇ ರೀತಿ ವತಿ೯ಸುತ್ತಾರ೦ತೆ. ಇದು ಎಷ್ಟು ನಿಜವೋ ಗೊತ್ತಿಲ್ಲ. ಆದರೆ ಸ್ಕಾಚ್ ಬಗ್ಗೆ ಇ೦ಥದ್ದೊ೦ದು ಅನಿಸಿಕೆಯ೦ತೂ ಇದೆ. ಒ೦ದು ಅ೦ಶವ೦ತೂ ನಿಜ.

    ಅದೇನೆ೦ದರೆ ಸ್ಕಾಚ್ ಕುಡಿದವರೆಲ್ಲ ತಾವು ಮಹಾನ್ ಬುದ್ಧಿವ೦ತರ೦ತೆ ಪೋಸ್ ಕೊಡುತ್ತಾರೆ. ಇ೦ಗ್ಲಿಷ್ ಚೆನ್ನಾಗಿ ಬರದವರೂ, ಆ ಭಾಷೆಯಲ್ಲಿ ಮಾತಾಡಲು ಪ್ರಯತ್ನಿಸುತ್ತಾರೆ ಹಾಗೂ ಆ ಪ್ರಯತ್ನವನ್ನು ಮು೦ದುವರಿಸು ತ್ತಾರೆ. ಸ್ಕಾಚ್ ಕುಡಿದವರಿಗೆ ನಶೆ ಏರುವುದಿಲ್ಲವ೦ತೆ. ಅವರ ಬುದ್ಧಿಮತ್ತೆಯೇ ಏರು ತ್ತದ೦ತೆ ಎ೦ಬ ಮಾತಿದೆ. ಇದನ್ನು ವೈನ್ ಕುಡಿಯುವವರು ಒಪ್ಪದಿರಬಹುದು. ಆದರೆ ಎರಡರ ರುಚಿ ನೋಡಿದ ನನ್ನ೦ಥವರು ಸ್ಕಾಚ್ ಕಡೆಗೆ "ವಾಲು'ವುದೇ ಹೆಚ್ಚು. ಸ್ಕಾಚ್‍ನ ಕಿಕ್ಕು ದಪ್ಪವಾಗಿರುವುದನ್ನು ವೈನ್ ಕುಡಿಯುವವರೂ ಒಪ್ಪುತ್ತಾರೆ. ಸ್ಕಾಚ್ ಕುಡಿಯುವವರಿಗೆ ಒ೦ದು ಮೇಲರಿಮೆ ಇರುತ್ತದ೦ತೆ. ಅದೇನೆ೦ದರೆ ತಾನು ಗು೦ಡುಗಳ ಪ್ಯೆಕಿ ಅತಿ ಶೆ್ರೀಷ್ಠ ಹಾಗೂ ದುಬಾರಿಯಾದುದನ್ನೇ ಕುಡಿಯುತ್ತಿದ್ದೇನೆ ಎ೦ಬ ಸಣ್ಣ ಪೊಗರು ಇರುತ್ತದ೦ತೆ. ಸ್ಕಾಚ್‍ಗಳಲ್ಲಿ ಹಲವು ವಿಧಗಳಿರಬಹುದು, ಆದರೆ ಸ್ಕಾಚ್ ಕುಡಿಯುವವರೆಲ್ಲರೂ ತಾವು ಒ೦ದೇ "ಲೀಗ್'ಗೆ ಸೇರಿದವರು ಎ೦ದು ಭಾವಿಸುತ್ತಾರೆ. ಸ್ಕಾಚ್‍ನ ಒ೦ದು ವಿಶೇಷ ಗುಣವೇ ಇದು. ಆದರೆ ಗು೦ಡುಗಲಿಗಳು ಇದನ್ನು ಒಪ್ಪುವುದಿಲ್ಲ. ಅದು ಬೇರೆ ಮಾತು. ಅದೇನೇ ಇರಲಿ, ಸ್ಕಾಚ್ ಈ ಜಗತ್ತಿನ ಮಹತ್ವದ ಕ್ಷಣಗಳಿಗೆ ಸಾಕ್ಷಿ ಯಾಗಿರುವುದ೦ತೂ ನಿಜ. ಮನುಷ್ಯನಿರುವ ತನಕ ಸ್ಕಾಚ್ ಇದ್ದೇ ಇರುತ್ತದೆ. ಕಾರಣ ಗ೦ಡಸು ಎಷ್ಟು ಹೊತ್ತು ಅ೦ತ ಹೆಣ್ಣಿನ ಜತೆ, ಹೆಣ್ಣು ಗ೦ಡಿನ ಜೊತೆ ಇರಲು ಸಾಧ್ಯ? ಸ್ಕಾಚ್ ಜತೆ ಇರುವಷ್ಟು ಕಾಲ ಅವರ್ಯಾರೂ ಬೇಕಿಲ್ಲ. ಅದಾದ ನ೦ತರವೇ ಅವರು ಬೇಕು ಎ೦ದೆನಿಸುವುದು. ಅಷ್ಟರಮಟ್ಟಿಗೆ ಸ್ಕಾಚ್ ಸುರಕ್ಷಿತ ಅ೦ತರ ಕಾಪಾಡುತ್ತದೆ.


ಗು೦ಡಾಭಟ್ಟ​

Leave a Reply

Your email address will not be published. Required fields are marked *

ten − one =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

 

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

Back To Top