About Us Advertise with us Be a Reporter E-Paper

ವಿವಾಹ್

ನಾವು ಮದುವೆಗಾಗಿ ಪೂರ್ಣ ಬೆತ್ತಲಾಗಿದ್ದೆವು !

ಶ್ರೀ

ಒಬ್ಬಂಟಿಯಾಗಿದ್ದ ಬಾಳು ಬೇಜಾರು ಅಂತ ಆದಾಗ ಮದುವೆ ಯಾಗೋಣ ಅನ್ನಿಸಿತು. ಇದರರ್ಥ ನನಗೆ ಯಾರದ್ದೋ ಮೇಲೆ ಸಿಕ್ಕಾಪಟ್ಟೆ  ಪ್ರೀತಿಯಾಗಿದೆ ಅಂತಾಗಲಿ, ಸಂಗಾತಿಯ ಜತೆ ಸಾಮರಸ್ಯದ ಬಾಳ್ವೆ ನಡೆಸುವ ಉದ್ದೇಶವಾಗಲಿ, ಅಥವಾ ಮದುವೆಯ ಮದರಂಗಿಯ ಸಂಭ್ರಮ ಕಣ್ಗಳಲ್ಲಿ ತುಂಬಿ ಕೊಳ್ಳುವ ಆಸೆಯಾಗಲಿ ಇರಲಿಲ್ಲ. ಕಪೋಲಕಲ್ಪಿತ ಭ್ರಮಾಲೋಕ ದಲ್ಲಿ ಮುಳುಗಿಹೋಗಿರಲಿಲ್ಲ. ಮತ್ತು ಮದುವೆ ಎಂಬ ಬಂಧನ ನೀಡುವ ಹುಸಿ ವಿಶ್ವಾಸಗಳು, ಆಶ್ವಾಸನೆಗಳ ಮದ ತಲೆಗೇರಿರಲಿಲ್ಲ. ಜೀವನದ ಸತ್ಯ, ನೈಜತೆಗಳ ಅರಿವಿತ್ತು. ಹೀಗಾಗಿಯೇ ಮದುವೆ ಯಾಗೋಣ ಎಂಬ ನಿರ್ಧಾರಕ್ಕೆ ಬಂದಿದ್ದೆ. ಅದಕ್ಕೂ ನನ್ನದೇ ಆದ ಕಾರಣಗಳಿದ್ದವು.

ನನಗೀಗ ನಲವತ್ತರ ಅಂಚು. ಮೊದಲ  ಎರಡೇ ವಸಂತಕ್ಕೆಲ್ಲ ಕೋಗಿಲೆ ಹಾಡು ನಿಲ್ಲಿಸಿಬಿಟ್ಟಿದೆ. ನನ್ನೆಲ್ಲ ಗೆಳೆಯರು, ಗೆಳತಿಯರು, ಸಂಬಂಧಿಕರು ಮದುವೆಯಾಗಿ (ಅವರ ಅರ್ಥದಲ್ಲಿ) ಸುಖೀ ಸಂಸಾರ ನಡೆಸುತ್ತಿದ್ದಾರೆ. ಸಮಾಜದ ದೃಷ್ಟಿಯಲ್ಲೂ ನಾನು ಒಬ್ಬಂಟಿ. ಮಾನಸಿಕವಾಗಿ ಎಷ್ಟೇ ಗಟ್ಟಿಯಿದ್ದರೂ ಅದು ಗಣನೆಗೆ ಬರುವುದಿಲ್ಲವಲ್ಲ! ಹೀಗಾಗಿ ನನ್ನ ಹಳೆಯ ಸ್ನೇಹಿತನೊಬ್ಬನ ಜತೆ ಮತ್ತೆ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದೆ. ಅದೇನು ತೀರಾ ಸಾಂಪ್ರದಾಯಿಕವಾಗಿಯೇನಲ್ಲ. ಅವನೂ ವಿಧುರ. ನಾಲ್ಕೈದು ವರ್ಷದ ಚಿಕ್ಕ ಮಗುವಿದೆ.

ಈ ಮದುವೆ ಇಬ್ಬರಿಗೂ ಆಸರೆಯಾಗುತ್ತದೆ. ಖಡಕ್ ಕಾನೂನು  ಮನೆಯೊಳಗೂ ಹಾಗೇ ಇರಬೇಕು, ಹೀಗೇ ಇರಬೇಕು, ಅಂತೆಲ್ಲ ಕಟ್ಟಳೆಗಳನ್ನು ಇಬ್ಬರೂ ಹಾಕಿಕೊಂಡಿಲ್ಲ. ಭಾವ ನಾತ್ಮಕವಾಗಿ ಸಮ್ಮತಗೊಂಡ ರೊಮ್ಯಾಂಟಿಕ್ ರಿಲೇಷನ್‌ಶಿಪ್ ಇಟ್ಟು ಕೊಳ್ಳುವ ಬದಲು ಪರಸ್ಪರ ನಂಬಿಕೆಯ ನೆಲೆಗಟ್ಟಿನ ಮೇಲೆ ಒಮ್ಮತ ದಿಂದ ರೂಪಿಸಿದ ಸಂಬಂಧವದು. ಅಂದರೆ ಇದು ಪಕ್ಕಾ ಕಮರ್ಷಿ ಯಲ್. ಅದರಲ್ಲಿ ಏನೂ ಮುಚ್ಚುಮರೆ ಇಟ್ಟುಕೊಂಡಿರಲಿಲ್ಲ.

ಮುದುವೆಯಾಗುವ ವೇಳೆಯಲ್ಲಿ ನಾವಿಬ್ಬರೂ ಕೈಲಿ ಸಮ್ಮತಿ ಪತ್ರವನ್ನು ಹಿಡಿದಿದ್ದೆವು. ಅದರ ಜತೆಯಲ್ಲಿ ಹೆಲ್‌ತ್ ಇನ್ಷುರೆನ್‌ಸ್, ಕಾರ್ ಪೇಮೆಂಟ್, ತೆರಿಗೆ ಕಟ್ಟುವ  ಬ್ಯುಸಿನೆಸ್‌ನ ಖರ್ಚು ವೆಚ್ಚಗಳು, ಸಾಮಾಜಿಕ ಭದ್ರತೆ, ನಮ್ಮಿಬ್ಬರ ಸಾಲ- ಆದಾಯ, ಇತ್ಯಾದಿಗಳೆಲ್ಲ ಪತ್ರದಲ್ಲಿ ನಮೂದಾಗಿತ್ತು. ಇಬ್ಬರೂ ಇಬ್ಬರಿಗೂ ಸಹಾಯ ಮಾಡಬೇಕೆಂಬ ಕರಾರು ಕೂಡ ಇತ್ತು. ಇಬ್ಬರ ಮಧ್ಯೆಯೂ ಯಾವುದೇ ಮುಚ್ಚುಮರೆ ಇರಲಿಲ್ಲ.

ಕಾನೂನು ಪ್ರಕಾರ ನಮ್ಮಿಬ್ಬರ ಆದಾಯ, ಖರ್ಚು-ವೆಚ್ಚಗಳು ಎಲ್ಲವನ್ನೂ ಪರಸ್ಪರ ಹಂಚಿಕೊಂಡಿದ್ದೆವು. ಯಾಕೆಂದರೆ ನಾಳೆ ನಾನೂ ಇಷ್ಟು ದುಡಿಯುತ್ತೇನೆ.  ಪಾಲು ಕೊಡು, ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಬೇಕು, ಹುಟ್ಟುವ ಮಕ್ಕಳ ಲಾಲನೆ-ಪಾಲನೆಗೆ ಅಂತೆಲ್ಲ ಮೊದಲೇ ಲೆಕ್ಕಾಚಾರ ಹಾಕಿ ಯಾವುದೇ ತೊಂದರೆಗಳಾಗದಂತೆ ಇಬ್ಬರೂ ಒಂದೇ ಸೂರಿನಡಿ ನೆಲೆ ನಿಲ್ಲಲು ತೀರ್ಮಾನಿಸಿದ್ದು.

ಆದರೆ ಜಗತ್ತಿನಲ್ಲಿ ಯಾವುದೇ ಜೋಡಿಯಾದರೂ ಮದುವೆಗೆ ಮೊದಲೇ ಇಷ್ಟೆಲ್ಲ ಸತ್ಯಗಳನ್ನು ಪರಸ್ಪರ ಹಂಚಿಕೊಂಡು ಬಾಳ ಸಂಗಾತಿಗಳಾಗಿದ್ದಾರೆ ಎಂಬುದನ್ನು ಅರಗಿಸಿಕೊಳ್ಳಲು ಕಷ್ಟವಾಗಬಹುದು. ಇದನ್ನು ಸೋಗಲಾಡಿತನ ಎನ್ನಬಹುದು. ಇದು ನಮ್ಮಿಬ್ಬರಿಗೂ ಸಮ್ಮತವಾಗಿತ್ತು. ಪ್ರಾಕ್ಟಿಕಲ್ ಆಗಿ ನೋಡಿದರೆ ನಾವಿಬ್ಬರೂ ನಮ್ಮಿಬ್ಬರ ಮಧ್ಯೆ ಯಾವುದೇ  ಎಲ್ಲವನ್ನೂ ತೆರೆದಿಟ್ಟುಕೊಂಡಿದ್ದೆವು. ಜಗತ್ತಿನ ಹೆಚ್ಚಿನ ಗಂಡ-ಹೆಂಡತಿಯರಂತೆ ವಿರುದ್ಧ ದಿಕ್ಕುಗಳಾಗಿ ಒಂದೇ ಗೂಡಿನೊಳಗೆ ಬಾಳುವುದಕ್ಕಿಂತ ಇದು ಉತ್ತಮವಾದದ್ದು ಅಂತ ಇಬ್ಬರಿಗೂ ಅನ್ನಿಸಿತ್ತು. ಹಾಗನ್ನುವುದಕ್ಕಿಂತ, ನಮ್ಮಿಬ್ಬರ ಬದುಕು ಅದನ್ನು ಕಲಿಸಿತ್ತು ಎನ್ನುವುದು ಸೂಕ್ತ.

ರಿಯಾಲಿಟಿ ಏನಪ್ಪಾ ಎಂದರೆ ಜಗತ್ತಿನಲ್ಲಿ ತಲತಲಾಂತರಗಳಿಂದ ನಡೆದು ಬರುತ್ತಿರುವ ಮದುವೆಯ ಹಿಂದೆ ಪ್ರಾಯೋಗಿಕ ರೀತಿ ರಿವಾಜುಗಳಿರುತ್ತವೆ. ಆದರೆ ಹೆಚ್ಚಿನವರು ಅದನ್ನು ಒಪ್ಪಿಕೊಳ್ಳುವುದಿಲ್ಲ, ಅದರ ಬಗ್ಗೆ ಎಲ್ಲರೆದುರು ಮಾತನಾಡಲೂ ಹಿಂಜರಿಯುತ್ತಾರೆ. ನೀವು ಸಂಗಾತಿಯನ್ನು ಪ್ರೀತಿಸಲೇಬೇಕು; ಇಬ್ಬರೂ ಒಂದೇ ಹಾಸಿಗೆಯಲ್ಲಿ  ಬೇರೆಯವರ ಕಣ್ಣಲ್ಲಿ ಆದರ್ಶ ದಂಪತಿಗಳಂತೆ ಬಾಳ್ವೆ ನಡೆಸಬೇಕು.. ಹೀಗೆ ಅದರ ಪಟ್ಟಿ ಬೆಳೆಯುತ್ತದೆ. ಎಷ್ಟು ಜನ ಈ ಆದರ್ಶ ದಂಪತಿಯಂತೆ ಬದುಕಿದ್ದಾರೆ ಎಂಬುದು ಯಕ್ಷ ಪ್ರಶ್ನೆ. ಅದಕ್ಕಾಗಿಯೇ ನಾವಿಬ್ಬರೂ ತೆರೆದ ಪುಸ್ತಕದಂತೆ ಒಬ್ಬರೆದುರು ಮತ್ತೊಬ್ಬರು ಬೆತ್ತಲಾಗಿದ್ದು. ಇಷ್ಟೆಲ್ಲ ನಮ್ಮ ಪೋಷಕರಿಗೆ ಅರ್ಥವಾಗುತ್ತಾ?

ಹೆಚ್ಚಿನ ದೇಶಗಳಲ್ಲಿ ಅರೇಂಜ್ ಮ್ಯಾರೇಜ್ ಲೀಗಲ್ ಆಗಿದೆ. ಇಂಥ ಹೆಚ್ಚಿನ ಮದುವೆಗೆ ಪ್ರಮುಖ ಕಾರಣ ಗ್ರೀನ್ ಕಾರ್ಡ್ ಪಡೆಯಬಹುದೆಂಬುದಾಗಿರುತ್ತದೆ. ನಾನು ಜನರ ತೀರ್ಮಾನವನ್ನು ಪ್ರಶ್ನಿಸುತ್ತಿಲ್ಲ. ಆದರೆ  ವಿವರಿಸುತ್ತಿದ್ದೇನೆ. ಭಾವನಾತ್ಮಕ ಕಾರಣಗಳಿಗೆ ಮದುವೆಗಳು ನಡೆಯುವ ಬದಲು ಪ್ರಾಕ್ಟಿಕಲ್ ಅಂಶಗಳೇ ಮುಖ್ಯವಾಗಿರುತ್ತವೆ ಎಂಬುದು ನಿಜ. ಇವೆಲ್ಲವನ್ನು ನಾನು ಅರಿತಿದ್ದು ನನ್ನ ಮೊದಲ ಮದುವೆ ಮುರಿದು ಬಿದ್ದ ಸಮಯದಲ್ಲಿ. ಕೋರ್ಟ್, ಲಾಯರ್, ಡೈವೋರ್ಸ್ ಅಂತೆಲ್ಲ ಅಲೆದಾಡುವಾಗಿ ಜನ ಮದುವೆಯನ್ನು ಯಾಕೆ ಆಗುತ್ತಾರೆ ಎಂಬ ಸತ್ಯದ ಅರಿವಾಯಿತು. ಹೀಗಾಗಿ ಹತ್ತು ವರ್ಷಗಳ ಬ್ರೇಕ್ ಕೊಟ್ಟು ಈಗ ಎರಡನೇ ಮದುವೆಗೆ ಸಜ್ಜಾಗಿದ್ದು. ಅದು ಪಕ್ಕಾ ಕಮರ್ಷಿಯಲ್ ಎಲಿಮೆಂಟ್‌ಸ್ ಇಟ್ಟುಕೊಂಡು. ಅಂದರೆ ಯಾವುದೇ ಭಾವನಾತ್ಮಕ  ಬಲಿಯಾಗದೆ ಹಣಕಾಸಿನ ಹಿನ್ನೆಲೆಯಲ್ಲಿ ಸಪ್ತಪದಿ ತುಳಿದದ್ದು. ಇಂಥ ಮದುವೆ ಎಲ್ಲರ ಬಾಳಿನಲ್ಲೂ ನಡೆಯೋದಿಲ್ಲ. ಆದರೆ ಹೀಗೆಲ್ಲ ಆಗಿದ್ದಕ್ಕೂ ಸರಿಯಾದ ಕಾರಣಗಳಿರುತ್ತವೆ ಎಂಬುದು ನನಗೆ ಈಗ ಅರ್ಥವಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close