About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಎಚ್‌ಎಂಟಿಗೆ ವಿದಾಯ, ಇಸ್ರೋಗೆ ಸ್ವಾಗತ

ಎಚ್‌ಎಂಟಿಯ 109 ಎಕರೆ ಜಾಗ ಇಸ್ರೋಗೆ ಹಸ್ತಾಂತರ

ತುಮಕೂರು: ವಿಶ್ವಮಟ್ಟದಲ್ಲಿ ಕಲ್ಪತರು ನಾಡನ್ನು ಗುರುತಿಸುವಂತೆ ಮಾಡಿದ್ದ ಎಚ್‌ಎಂಟಿ ಕಾರ್ಖಾನೆಯ 109 ಎಕರೆ ಜಾಗವನ್ನು ಅಧಿಕೃತವಾಗಿ ಇಸ್ರೋಗೆ ಹಸ್ತಾಂತರಿಸುವ ಮೂಲಕ ಎಚ್‌ಎಂಟಿಗೆ ಭಾವಪೂರ್ಣ ವಿದಾಯ, ಇಸ್ರೋಗೆ ಹೃದಯ ಸ್ಪರ್ಶಿ ಸ್ವಾಗತವನ್ನು ನೀಡಲಾಯಿತು.

1980ರ ದಶಕದಲ್ಲಿ ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿದ್ದ ಎಚ್‌ಎಂಟಿಯ ಗತವೈಭವ ಇದೀಗ ಇತಿಹಾಸದ ಪುಟ ಸೇರಿದೆ. ತೀವ್ರ ನಷ್ಟದ ಕಾರಣದಿಂದಾಗಿ 2016ರಲ್ಲಿ ಬಾಗಿಲು ಮುಚ್ಚಿದ್ದ ಎಚ್.ಟಿ.ಎಂ ಸಂಸ್ಥೆ ಕೇವಲ ನೆನಪಾಗಿ ಉಳಿದಿದೆ. ಇದೀಗ ಈ ಜಾಗದಲ್ಲಿ ಮತ್ತೊಂದು ಗತವೈಭವ ಮೆರೆಯುವ ಸೂಚನೆಗಳು ಗೋಚರಿಸುತ್ತಿವೆ. ಇಸ್ರೋ ಕೇಂದ್ರಕ್ಕೆ 1194.21 ಕೋಟಿ ರು. ನೀಡಿ ಎಚ್.ಎಂ.ಟಿ. ಭೂಮಿಯನ್ನು ಖರೀದಿಸಿತ್ತು.

ನಗರದ ಎಚ್‌ಎಂಟಿ ಜಾಗದಲ್ಲಿ ಶನಿವಾರ ನಡೆದ ವೈಭವಯುತ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಈ ಜಾಗವನ್ನು ಇಸ್ರೋಗೆ ಹಸ್ತಾಂತರಿಸುವ ಮತ್ತೆ ತುಮಕೂರು ವಿಶ್ವಮಟ್ಟದಲ್ಲಿ ಖ್ಯಾತಿ ಪಡೆಯುವ ಸೂಚನೆ ದೊರೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, 1978ರಲ್ಲಿ ಲಕ್ಕಪ್ಪ ಸಂಸದರಾಗಿದ್ದಾಗ ಎಚ್‌ಎಂಟಿ ಕಾರ್ಖಾನೆ ಆರಂಭಿಸುವಲ್ಲಿ ಬಹಳ ಪ್ರಯತ್ನ ನಡೆಸಿದ್ದರು. ಇದರಿಂದಾಗಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾದವು. ಆದರೆ ಕೇಂದ್ರ ಸರಕಾರ 2016ರಲ್ಲಿ ಕಾರ್ಖಾನೆ ನಷ್ಟ ಹೊಂದಿದ್ದರಿಂದ ಮುಚ್ಚಲಾಗಿತ್ತು.

ಇಸ್ರೋ ಸ್ಯಾಟ್‌ಲೈಟಿಗೆ ಬಳಕೆ ಅಗುವ ಉಪಕರಣಗಳನ್ನು ಇಲ್ಲಿ ಉತ್ಪಾದನೆ ಮಾಡಲಿರುವುದು ಹೆಮ್ಮೆಯ ಸಂಗತಿಯಾಗಿದೆ. ತುಮಕೂರು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. 25 ಸಾವಿರ ಪ್ರಯಾಣಿಕರು ಪ್ರತಿ ದಿನ ರೈಲಿನಲ್ಲಿ ಚಲಿಸುತ್ತಾರೆ. ಪೀಣ್ಯದಿಂದ ತುಮಕೂರಿಗೆ ಮೆಟ್ರೊ ವಿಸ್ತರಿಸುವಂತೆ ಈಗಾಗಲೇ ಪ್ರಸ್ತಾವನೆ ಬಂದಿದೆ ಎಂದರು.

ಕೈಗಾರಿಕಾ ಸಚಿವ ಎಸ್.ಅರ್ ಶ್ರೀನಿವಾಸ್ ಮಾತನಾಡಿ, ನಾನು ಎಸ್‌ಎಸ್‌ಎಲ್‌ಸಿ ವ್ಯಾಸಂಗದ ನಂತರ ಎಚ್‌ಎಂಟಿ ಕಾರ್ಖಾನೆಯ ಕೆಲಸ ಬಯಸಿದ್ದೆ ಆದರೆ ದೊರೆಯಲಿಲ್ಲ. ಅಂದಿನ ಸಂಸದ ಲಕ್ಕಪ್ಪನವರ ಹೋರಾಟದ ಫಲವಾಗಿ ತುಮಕೂರಿಗೆ 6 ಎಂಜಿನಿಯರ್ ಕಾಲೇಜುಗಳು ಬಂದಿದ್ದವು. ಎಚ್‌ಎಎಲ್ ಕಾರ್ಖಾನೆ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದೆ ಈ ಬಗ್ಗೆ ಸಂಸದರು ಗಮನ ಹರಿಸಬೇಕು. ಈಗ ಇಸ್ರೋ ಬಂದಿರುವುದರಿಂದ ವಿಶ್ವ ಪ್ರಸಿದ್ದಿ ಪಡೆಯಲಿದೆ ಎಂದರು.

ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತಾನಾಡಿ, ಇಸ್ರೋ ತುಮಕೂರಿಗೆ ಬಂದಿರುವುದು ಭಾವನಾತ್ಮಕ ವಿಚಾರ. ಆದರೆ, ಎಚ್‌ಎಂಟಿಗೆ ವಿದಾಯ ಹೇಳುತ್ತಿರುವುದು ದುಃಖದ ಸಂಗತಿಯಾಗಿದೆ. ಇಸ್ರೋ ಆರಂಭವಾಗುವುದರಿಂದ 3ರಿಂದ 5 ಸಾವಿರ ಹುದ್ದೆ ಸೃಷ್ಟಿಯಾಗಲಿವೆ. ಇದರಿಂದಾಗಿ ತುಮಕೂರು ವಿಶ್ವದ ಭೂಪಟದಲ್ಲಿ ಕಾಣಿಸುತ್ತದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ, ಸಚಿವ ಅರುಣ್ ಜೇಟ್ಲಿ, ಸೇರಿದಂತೆ ಇತರರು ನಮಗೆ ಸಹಕರಿಸಿದ ಪರಿಣಾಮವೇ ಎಚ್‌ಎಂಟಿ ಕಾರ್ಖಾನೆ 109 ಎಕರೆ ಭೂಮಿ ಖಾಸಗಿಯವರ ಪಾಲಾಗದೆ ಇಸ್ರೋಗೆ ನೀಡುವಲ್ಲಿ ಯಶಸ್ವಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್.

ಐತಿಹಾಸಿಕ ಕಾರ್ಯಕ್ರಮದಲ್ಲಿ ಇಸ್ರೋ ಅಧಿಕಾರಿಗಳು, ಎಚ್‌ಎಂಟಿಯಲ್ಲಿ 40 ಕಾಲ ಸೇವೆ ಸಲ್ಲಿಸಿದ್ದ ನೌಕರರು, ಮಾಜಿ ಶಾಸಕ ರಫೀಕ್ ಅಹಮದ್, ಜಿಲ್ಲೆಯ ಜನಪ್ರತಿನಿಧಿಗಳು ಇದ್ದರು.

Tags

Related Articles

Leave a Reply

Your email address will not be published. Required fields are marked *

Language
Close