About Us Advertise with us Be a Reporter E-Paper

ಅಂಕಣಗಳು

ಸ್ವಾಮಿ ಮಾತಿನ ಅರ್ಥವೇನು?

ಅಸ್ತಿತ್ವಕ್ಕೆ ಬಂದ ಎರಡು ತಿಂಗಳಿಂದಲೂ ಬರೀ ಗೊಂದಲ, ಅಸಮಾಧಾನ, ನಿರಾಸೆ, ಹತಾಶೆ ಮತ್ತು ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ನಾಯಕರು ತಲೆ ಕೆದರಿಕೊಂಡು ನಿಲ್ಲುವಂತೆ ಮಾಡಿದ್ದಾರೆ ಬಿಜೆಪಿ ರಾಷ್ಟ್ರೀಯ ನಾಯಕ  ಸ್ವಾಮಿ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಒಂದೇ ಒಂದು ಸೂಚನೆ ಕೊಟ್ಟರೂ ಸಾಕು ಕರ್ನಾಟಕದಲ್ಲಿ ಬಿಜೆಪಿ ಸರಕಾರ ರಚನೆ ಆಗುತ್ತದೆ ಎಂದು ಸೂಚ್ಯವಾಗಿ ಹೇಳಿರುವ ಅವರು ಕಾಂಗ್ರೆಸ್, ಜೆಡಿಎಸ್ ಮಾತ್ರವಲ್ಲದೇ ರಾಜ್ಯ ಬಿಜೆಪಿ ನಾಯಕರ ತಲೆಗೂ ಹುಳು ಬಿಟ್ಟಿದ್ದಾರೆ. ಕುಮಾರಸ್ವಾಮಿ ಕಣ್ಣೀರಿಟ್ಟಿರುವ ಹೊತ್ತಿನಲ್ಲೇ ಅವರಾಡಿರುವ ಮಾತು ಸಹಜವಾಗಿಯೇ ಮಹತ್ವ ಪಡೆದುಕೊಂಡಿದೆ.  ಈಗಿನ ಮೈತ್ರಿ ಸರಕಾರ ಹಳಿ ಮೇಲೆ ಬಂದು ನಿಲ್ಲಲು ಸರ್ಕಸ್ ಮಾಡುತ್ತಿರುವ ಹೊತ್ತಿನಲ್ಲೇ ಪರ್ಯಾಯ  ಬಗ್ಗೆ ಅವರೇಳಿರುವ ಮಾತು ಕರ್ನಾಟಕದಲ್ಲಿ ರಾಜಕೀಯ ಅಸ್ಥಿರತೆಗೆ ಸದ್ಯಕ್ಕೆ ಮುಕ್ತಿ ಸಿಗುವ ಲಕ್ಷಣಗಳಿಲ್ಲ, ಅದು ಈಗಲೇ ಮುಗಿಯುವ ಅಧ್ಯಾಯವಲ್ಲ ಎಂದು ಪರೋಕ್ಷವಾಗಿ ಸಾರಿದೆ. ಸುಬ್ರಮಣಿಯನ್  ಹೇಳಿರುವ ಪ್ರಕಾರ ಬಿಜೆಪಿ ಸರಕಾರ ಮಾಡಬೇಕಾದರೆ ಒಂದೋ ಆಪರೇಷನ್ ಕಮಲ ಆಗಬೇಕು, ಇಲ್ಲವೇ ಈಗಾಗಲೇ ಕಾಂಗ್ರೆಸ್ ಒತ್ತಡದಿಂದ ಹೈರಣಾಗಿರುವ ಜೆಡಿಎಸ್ ಜತೆ ಹೋಗಬೇಕು. ಆಪರೇಷನ್ ಕಮಲ ಸ್ವಲ್ಪ ಕಷ್ಟವೇ ಆದರೂ ಕಾಂಗ್ರೆಸ್-ಜೆಡಿಎಸ್‌ನಲ್ಲಿ ಸಾಕಷ್ಟು ಮಂದಿ ಅಧಿಕಾರ ವಂಚಿತರು ಪದವಿಗಾಗಿ ಹಪಹಪಿಸುತ್ತಿರುವುದರಿಂದ ಸಂಪೂರ್ಣ ತಳ್ಳಿಹಾಕಲಾಗದು.  ಸುಲಭವಾದದ್ದು ಎಂದರೆ ಕಾಂಗ್ರೆಸ್ ಕಿರುಕುಳದಿಂದ ಬೆಂದಿರುವ ಜೆಡಿಎಸ್ ಜತೆ ಕೈಜೋಡಿಸುವುದು. ತೃತೀಯ ರಂಗ ರಚನೆ ಬಗ್ಗೆ ತಲೆ ಕೆಡಿಸಿಕೊಂಡಿರುವ ಗೌಡರು ಇದಕ್ಕೆ ಸಮ್ಮತಿ ಕೊಟ್ಟಾರೆಯೇ ಎಂಬ ಪ್ರಶ್ನೆ ಜತೆಜತೆಗೆ ಕಾಂಗ್ರೆಸ್‌ಗೆ ಪಾಠ ಕಲಿಸಲು ಏನೂ ಬೇಕಾದರೂ ಮಾಡಬಹುದು ಎಂಬುದನ್ನು ತಳ್ಳಿಹಾಕುವಂತಿಲ್ಲ. ಅಲ್ಲಿಗೆ ಸರಕಾರ ಬೀಳುವ, ಏಳುವ ಆಟಕ್ಕೆ ಕರ್ನಾಟಕ ಸಜ್ಜಾಗಬೇಕಾಗಬಹುದು. ಅಸ್ಥಿರತೆ ಜತೆಜತೆಯಲ್ಲೇ!

Tags

Related Articles

Leave a Reply

Your email address will not be published. Required fields are marked *

Language
Close