Thursday, 28th March 2024

ಪ್ರಧಾನಿ ನರೇಂದ್ರ ಮೋದಿ ಧಾರ್ಮಿಕ, ಸಾಂಸ್ಕೃತಿಕ ದೇಶ ಕಟ್ಟಿದ್ದಾರೆ

ಇಂಡಿ: ಕೇಂದ್ರದಲ್ಲಿ ಬಿ.ಜೆ.ಪಿ ಅಧಿಕಾರಕ್ಕೆ ಬಂದರೆ ಧಾರ್ಮಿಕ ,ಸಾಂಸ್ಕೃತಿಕ ದೇಶ ಕಟ್ಟುತ್ತೇವೆ ಎಂಬ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೇಳಿರುವ ಹಾಗೇ ರಾಮಜನ್ಮಭೂಮಿ ಹಾಗೂ ಕಾಶಿ,ಕೇದಾರ ಜೀಣೋದ್ದಾರ ಮಾಡುವ ಮೂಲಕ ಭಾರತ ಜಗತ್ತಿನಲ್ಲಿಯೇ ವಿಶ್ವಗುರುವಾಗಿಸಿದ್ದಾರೆ ಎಂದು ಬಿ.ಜೆ.ಪಿ ಜಿಲ್ಲಾಧ್ಯಕ್ಷ ರಾಜಶೇಖರ ಕೊಚಬಾಳ ಹೇಳಿದರು.

ಸಿಂದಗಿ ರಸ್ತೆಯ ಶ್ರೀಶಾಂತೇಶ್ವರ ಮಂಗಲ ಕಾರ್ಯಾಲಯದ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಅವರು ಗುಜರಾತ ಚುನಾವಣೆ ಇತಿಹಾಸ ನಿರ್ಮಾಣ ಮಾಡಿದೆ, ಕಾಂಗ್ರೆಸ್ ಹೇಳ ಹೆಸರಿಲ್ಲದೆ ವಿರೋಧ ಪಕ್ಷ ಇಲ್ಲದಂತಾಗಿದೆ. ಕಳೆದ ಕೋವಿಡ್ ಸಂದರ್ಬದಲ್ಲಿ ಇಡೀ ವಿಶ್ವ ತಲ್ಲಣಗೊಂಡಾಗ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದ ಜನತೆಯ ಜೀವ ರಕ್ಷಣೆಗಾಗಿ ೩ ಬಾರಿ ಕೋವಿಡ್ ಲಸಿಕೆ ಹಾಕಿಸಿ ೧೩೦ ಕೋಟಿ ದೇಶದ ಜನರ ಪ್ರಾಣ ರಕ್ಷಣೆ ಮಾಡಿದ್ದಾರೆ.ಕಾಶ್ಮೀರ ೩೭೦ ರದ್ದು ಮಾಡುವುದು ನಮ್ಮ ಪೂರ್ವಜರ ಕನಸಾಗಿತ್ತು ಇಂದು ರದ್ದು ಮಾಡಿ ಭಯ ಮುಕ್ತವಾತಾವರಣ ನಿರ್ಮಾಣ ಮಾಡಿದ್ದು ಬಿಜೆಪಿಯ ಸಾಧನೆ.

ಕೃಷಿ ಸಮ್ಮಾನ ಯೋಜನೆ ಪ್ರತಿ ವರ್ಷ ರೈತರ ಖಾತೆ ೧೦ ಸಾವಿರ ನೇರ ಜಮಾ ಮಾಡಿರು ವದು, ಭಾಗ್ಯಲಕ್ಷಿö್ಮÃ ಯೋಜನೆ, ರೈತರಿಗೆ ಶೂನ್ಯ ಬಡ್ಡಿದರ ಸಾಲ,ಕೂಲಿ ಕಾರ್ಮಿಕ ಮಕ್ಕಳಿಗೆ ರೈತ ವಿಧ್ಯಾನಿಧಿಯೋಜನೆ ಹೀಗೆ ಅನೇಕ ಯೋಜನೆಗಳ ಜಾರಿಗೆ ತಂದಿರುವುದೇ ಬಿಜೆಪಿ ಸರಕಾರ ಈ ಯೋಜನೆಗಳು ಪ್ರತಿ ಹಳ್ಳಿಹಳ್ಳಿಗಳಿಗೆ ಹೋಗಿ ಸಾಮಾನ್ಯ ಜನರಿಗೆ ತಿಳಿಸಿಬೇಕು. ೬೦ ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಜಾತಿ,ಧರ್ಮದ ರಾಜಕಾರಣ ಮಾಡಿ ದೇಶ ಒಡೇದಾಳಿದ್ದಾರೆ. ಬರುವ ೨೦೨೩ರಲ್ಲಿ ಇಂಡಿ ವಿಧಾನ ಸಭಾ ಮತಕ್ಷೇತ್ರದಲ್ಲಿ ಕೂಡಾ ಬಿ.ಜೆ.ಪಿ ಪಕ್ಷದ ಅಭ್ಯರ್ಥಿ ಶಾಸಕರಾಗುವುದು ಸೂರ್ಯ,ಚಂದ್ರರಷ್ಠೇ ಸತ್ಯ ಎಂದರು.

ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ ಮಾತನಾಡಿ ಭಾರತೀಯ ಜನತಾ ಪಕ್ಷದ ಜೀವಾಳ ಕಾರ್ಯಕರ್ತರು. ಅಧಿಕಾರ, ಅಂತಸ್ತುಗಾಗಿ ದುಡಿಯಬೇಡಿ ಬಿ.ಜೆ.ಪಿ ಪಕ್ಷ ಹಾಗೂ ನರೇಂದ್ರ ಮೋದಿಜೀ ಕೈಬಲಪಡಿಸಿ, ಟೀಕೇಟ ಯಾರಿಗೆ ಸಿಗಲಿ ನಮ್ಮ ಸಿದ್ದಾಂತ ಒಂದೇ ಬಿಜೆಪಿ ಗೆಲ್ಲಿಸುವುದಾಗಿರಲಿ, ಸ್ವಾರ್ಥ,ಸ್ವಹಿತಾಶಕ್ತಿ ಬಿಟ್ಟು ಬರುವ ಚುನಾವಣೆ ಆತ್ಮಸ್ಥೆರ್ಯೆದಿಂದ ಎದುರಿಸಿ ಬಿಜೆಪಿ ಅಧಿಕಾರಕ್ಕೆ ತರೋಣ ಎಂದರು.

ಕಳೆದ ಯಡಿಯೂರಪ್ಪನವರ ಅವಧಿಯ ಯೋಜನೆಗಳು ನಾನೇ ಮಾಡಿರುವೆ ಎಂದು ಶಾಸಕರ ಹೇಳುತ್ತೀರುವುದು ಶೋಭೆಯಲ್ಲ. ನೀರಾವರಿ ಯೋಜನೆಗಳಿಗೆ ಬಿಜೆಪಿ ಸರಕಾರದ ಮುಖ್ಯ ಮಂತ್ರಿ ಬಸವರಾಜ ಬೋಮ್ಮಾಯಿ ಹಾಗೂ ಸಂಸದ ರಮೇಶ ಜಿಗಜಿಣಗಿ, ಸಚಿವರಾದ ಗೋವಿಂದ ಕಾರಜೋಳ ಇವರಿಗೆ ಸಲ್ಲುತ್ತದೆ. ಕಬ್ಬು ಬೆಳೆದ ರೈತರು ಸಂಕಷ್ಟದಲ್ಲಿದ್ದಾರೆ ಪ್ರತಿಟನ್ ಕಬ್ಬಿಗೆ ೩ ಸಾವಿರ ರೂ. ಕೊಟ್ಟು ಪುಣ್ಯಕಟ್ಟಿಕೊಳ್ಳಿ ಜಾತಿ.ಧರ್ಮದ ಹೆಸರಿನಲ್ಲಿ ನೀವು ರಾಜಕಾರಣ ಮಾಡುವುದು ಬಿಡಿ ಜನರು ಜಾಗೃತರಾಗಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ಹರಿಹಾಯ್ದರು.

ಬಾಕ್ಸ: ವೀರಾವೇಶದಿಂದ ಮಾತನಾಡಿ ಚುನಾವಣೆ ೨-೩ ದಿನ ಬಂದಾಗ ಪಲಾಯನ ಮಾಡುವುದು ಭೀನ್ನರಾಗ ಮಾಡುತ್ತಾರೆ ಇಂತಹ ಕುಹಕುತನ ಬಿಟ್ಟು ಬಿಡಿ. ಇದರಿಂದ್ದ ಸಾಮಾನ್ಯ ಕಾರ್ಯಕರ್ತರು ಮುಜಗರಕ್ಕೆ ಒಳಗಾಗಿ ಭವಿಷ್ಯ ಹಾಳುಮಾಡಿ ಕೊಂಡಿದ್ದಾರೆ ನಮ್ಮ ಪಕ್ಷದಲ್ಲಿ ವರಿಷ್ಠರು ಟೀಕೇಟ ಯಾರಿಗೆ ಕೋಡಲಿ ಒಗ್ಗಟ್ಟಿನಿಂದ ಚುನಾವಣೆ ಏದುರಿಸಿ, ಬಕೀಟ್ ಹಿಡಿಯುವ ದಂಧೆ ಬಿಡಿ ಎಂದು ಖಾರವಾಗಿ ನುಡಿದರು.

ಬಿ.ಜೆ.ಪಿ ಪ್ರಕೋಷ್ಠ ಮುಖಂಡ ಅನೀಲ ಜಮಾದಾರ, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕೀವುಡೆ, ಶೀಲವಂತ ಉಮರಾಣಿ, ಎಸ್.ಎ ಪಾಟೀಲ ಮಾತನಾಡಿದರು. ಸಿದ್ದಲಿಂಗ ಹಂಜಗಿ, ಮುತ್ತು ದೇಸಾಯಿ, ಅನೀಲ ಜಮಾದಾರ . ಹಣಮಂತರಾಯಗೌಡ ಪಾಟೀಲ, ಶ್ರೀಶೈಲಗೌಡ ಬಿರಾದಾರ, ಯಲ್ಲಪ್ಪ ಹದರಿ, ವಿಜಯಲಕ್ಷಿö್ಮÃ ರೂಗಿಮಠ ವೇದಿಕೆಯಲ್ಲಿದ್ದರು.

ದೆವೇಂದ್ರ ಕುಂಬಾರ, ಅನುಸುಯ್ಯಾ ಮದರಿ,ಶಾಂತು ಕಂಬಾರ , ಸುನಂದಾ ಗಿರಣಿವಡ್ಡರ್, ಸಂಜು ದಶವಂತ, ಶ್ರೀನಿವಾಸ ಕಂದಗಲ್, ಅಶೋಕಗೌಡ ಬಿರಾದಾರ,ಮಲ್ಲು ಗುಡ್ಲ, ರವಿ ವಗ್ಗೆ ಭೀಮರಾಯಗೌಡ ಪಾಟೀಲ, ರಮೇಶ ಧರೇನವರ್, ಶ್ರೀದೇವಿ ಕುಲಕರ್ಣಿ, ಗೌರಮ್ಮಾ ನಾವಿ, ರಾಜಶೇಖರ ಯರಗಲ್ಲ, ದೀಶಾ ನಾದ, ಕವಿತಾ ತಳ್ಳೋಳ್ಳಿ, ಮಂಗಲಾ ಮಠ, ಬಸಮ್ಮಾ ಮರಡಿ, ಅರ್ಚನಾ ಗಡ್ಡಡಗಿ ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರು ಮುಖಂಡರು ಉಪಸ್ಥಿತರಿದ್ದರು.

error: Content is protected !!