About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಮಹಾರಾಷ್ಟ್ರ ಬಂದ್‌ : ಮರಾಠರ ಬೇಡಿಕೆಗಳೇನು?

ಮರಾಠರಿಗೆ ಸರಕಾರೀ ಉದ್ಯೋಗ ಹಾಗು ಯೋಜನೆಗಳಲ್ಲಿ ಮೀಸಲಾತಿ ಬೇಕೆಂದು ಕೋರಿ ಇಂದು ಮಹಾರಾಷ್ಟ್ರ ಬಂದ್‌ಗೆ ಅನೇಕ ಸಂಘಟನೆಗಳು ಕರೆ ನೀಡಿವೆ.

ಈ ಹಿಂದೆ ಸಾಕಷ್ಟು ಗಲಭೆ ನಡೆದಿದ್ದ ನವಿ ಮುಂಬಯಿಯ ಕೆಲ ಪ್ರದೇಶಗಳಲ್ಲಿ ಯಾವುದೇ ಬಂದ್‌ ಮಾಡದಿರಲು ಮರಾಠಾ ಸಂಘಟನೆಗಳು ನಿರ್ಧರಿಸಿವೆ. ಮರಾಠಾ ಸಂಘಟನೆಗಳ ಒಕ್ಕೂಟವಾದ ಸಕಲ್‌ ಮರಾಠಾ ಸಮಾಜ ಬಂದ್‌ಗೆ ಕರೆ ನೀಡಿದೆ.

ಬಂದ್‌ ಮಾಡುವ ವೇಳೆ ಅತಿರೇಖಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುವ ಅಥವಾ ಗಲಭೆಗೆ ಮುಂದಾಗುವ ಯತ್ನಗಳನ್ನು ಮಾಡದಿರಲು ಬಾಂಬೆ ಹೈಕೋರ್ಟ್ ಮನವಿ ಮಾಡಿಕೊಂಡಿದೆ.

ಬಂದ್‌ ಹಿಂದಿರುವ ಪ್ರಮುಖ ಬೇಡಿಕೆಗಳು

*ಸರಕಾರೀ ಉದ್ಯೋಗ ಹಾಗು ಶೈಕ್ಷಣಿಕ ಸಂಸ್ಥೆಗಳಲ್ಲಿ ಮರಾಠರಿಗೆ ಮೀಸಲಾತಿ ನೀಡಬೇಕೆಂದು ಕೋರಲಾಗಿದೆ.

*ರಾಜ್ಯದ ಜನಸಂಖ್ಯೆಯ ಶೇ30 ರಷ್ಟಿರುವ ಮರಾಠಾ ಸಮುದಾಯಕ್ಕೆ ಶೇ16 ರಷ್ಟು ಮೀಸಲಾತಿ ಬೇಕೆಂದು ಕೋರಲಾಗಿದೆ.

*ಮೀಸಲಾತಿ ಕಾರ್ಯಕ್ರಮವನ್ನು ಹಂತಹಂತವಾಗಿ ಅನುಷ್ಠಾನಕ್ಕೆ ತರುವುದಾಗಿ ಸರಕಾರದದಿಂದ ಭರವಸೆಬೇಕೆಂದು ಆಗ್ರಹಿಸಿರುವ ಸಂಘಟನೆಗಳು, ಈ ಕುರಿತು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಸರಕಾರದಿಂದ ಲಿಖಿತ ಭರವಸೆ ಕೇಳಿವೆ.

*ಮೀಸಲಾತಿ ಯೋಜನೆಯನ್ನು ಶೀಘ್ರ ತರುವ ನಿಟ್ಟಿನಲ್ಲಿ ಮಹಾರಾಷ್ಟ್ರ ಹಿಂದುಳಿದ ವರ್ಗಗಳ ಸಮಿತಿಯು ಸರಕಾರಕ್ಕೆ ಶಿಫಾರಸು ಸಲ್ಲಿಸಲು ಸೂಚಿಸುವಂತೆ ಬಾಂಬೆ ಹೈಕೋರ್ಟ್‌‌ ಮುಂದೆ ಪ್ರಸ್ತಾವನೆ ಇಡಲಾಗಿದೆ.

ಯಾವುದೇ ಅಹಿತಕರ ಘಟನೆಯನ್ನು ತಡೆಗಟ್ಟಲು ಸಾಕಷ್ಟು ಮುಂಜಾಗ್ರತೆ ವಹಿಸಿರುವ ಮಹಾರಾಷ್ಟ್ರ ಸರಕಾರ ಭಾರೀ ಭದ್ರತಾ ಕ್ರಮಗಳನ್ನು ಕೈಗೊಂಡಿದೆ.

ಜುಲೈ 18-27ರ ನಡುವಿನ ಅವಧಿಯಲ್ಲಿ 27,276 ಗಲಭೆ ಸಂಬಂಧಿತ ಪ್ರಕರಣಗಳು ದಾಖಲಾಗಿವೆ. 250ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಕಲ್ಲು ತೂರಾಟ ಹಾಗು ಸಾರ್ವಜನಿಕ ಆಸ್ತಿಗೆ ಹಾನಿಯುಂಟು ಮಾಡುವ ಯತ್ನಗಳು ನಡೆದಿವೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Tags

Related Articles

Leave a Reply

Your email address will not be published. Required fields are marked *

Language
Close