About Us Advertise with us Be a Reporter E-Paper

ಅಂಕಣಗಳು

ಶಿಕ್ಷಕರ ದಿನಾಚರಣೆ ಯಾವ ಸುಖಕ್ಕಾಗಿ?!

ಆಕ್ರೋಶ: ಉಪಮನ್ಯು, ಹವ್ಯಾಸಿ ಬರಹಗಾರ

ನನ್ನ ವಿಚಾರವಿಷ್ಟೇ, ಈ ರಾಜ್ಯದಲ್ಲಿ ಮೇಷ್ಟ್ರುಗಳ ಸ್ಥಿತಿ  ಎಂಬುದನ್ನು ಹೇಳುವುದು. ಮೊದಲ ಸ್ಥಾನದಲ್ಲಿರಬೇಕಾದ ಶಿಕ್ಷಕ ಇಂದು ಈ ವ್ಯವಸ್ಥೆಯಲ್ಲಿ ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾನೆ. ಸರಕಾರಗಳಂತೂ ಶಿಕ್ಷಕರನ್ನು ನಡೆಸಿಕೊಳ್ಳುತ್ತಿರುವ ರೀತಿ ಶಿಕ್ಷಕ ಕುಲಕ್ಕೆ ಒಂದು ಅವಮಾನಕರ ವಿಷಯ. ವ್ಯವಸ್ಥೆಯ ಈ ಅಟಾಟೋಪಗಳಿಂದ ಶಿಕ್ಷಕ ಇಂದು ತನ್ನ ಗೌರವವನ್ನು ಕಳೆದುಕೊಂಡಿದ್ದಾನೆ. ಶಿಕ್ಷಕ ದಿನಾಚರಣೆಯಲ್ಲಿಯೂ ಪ್ರತಿವರ್ಷ ಅವೇ ಮಾತುಗಳೇ. ಶಿಕ್ಷಕರನ್ನು ಹೊಗಳಿ ಕಾರ್ಯಕ್ರಮವನ್ನು ಮುಗಿಸುತ್ತಾರೆ. ಆದರೆ ವೇದಿಕೆಯಿಂದ ಕೆಳಗಿಳಿದು ಬರುತ್ತಲೇ ಅದೇ ಆ ಅವರೇ ಶಿಕ್ಷಕನಿಗೆ ನೀನು ಯಾವೂರ ದಾಸಯ್ಯ ಅನ್ನುವುದಿಲ್ಲ.

 ಅವರನ್ನು ನಿಯತ್ತಾಗಿ ಪಾಠ ಮಾಡಲು ಎಲ್ಲಿ ಬಿಟ್ಟಿದೆ? ರಾಜಕೀಯ ಪಕ್ಷಗಳು ಈ ರಾಜ್ಯದಲ್ಲಿ ಅತೀ ದೊಡ್ಡ ಸಂಖ್ಯೆಯಲ್ಲಿರುವ ಶಿಕ್ಷಕ ಸಮುದಾಯವನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿವೆ. ಅವರಿಗೆ ರಾಜಕೀಯದ ಹುಚ್ಚು ಹಚ್ಚಿಸುತ್ತದೆ. ಆಮಿಷಗಳನ್ನು ತೋರಿಸುತ್ತದೆ. ತದನಂತರ ಅವರೇ ಶಿಕ್ಷಕರು ರಾಜಕೀಯಕ್ಕೆ ಇಳಿಯುತ್ತಿದ್ದಾರೆ ಅಂತ ವರಾತ ತೆಗೆಯುತ್ತಾರೆ. ಶಿಕ್ಷಕರಿಗೆ ನೀಡಲಾಗಿರುವ ಕಾರ್ಯದ ಒತ್ತಡಗಳು ಸಾಮಾನ್ಯ ಜನತೆಯ ಅರಿವಿಗೇ ಬಂದಿಲ್ಲ. ಶಿಕ್ಷಕ ಅಂದ್ರೆ ಪಾಠ ಮಾಡದೇನೆ ಸಂಬಳ ತಗೊಳ್ಳವವರು ಅನ್ನುವ ಹಾಗೆ ಮಾಡಲಾಗಿದೆ.  ಮಾಡಲು ಕೂಡ ಆಗದಷ್ಟು ಕೆಲಸವನ್ನು ಹೊರಿಸಲಾಗಿದೆ. ಪುಸ್ತಕ, ಬಟ್ಟೆಯನ್ನು ತಲೆ ಮೇಲೆ ಹೊತ್ತುಕೊಂಡು ಹೋಗುವುದರಿಂದ ಹಿಡಿದು, ಮೇಷ್ಟ್ರು ಪೊರಕೆ ಹಿಡಿದು ನೆಲ ಕ್ಲೀನ್ ಮಾಡಬೇಕು. ಬಿಸಿಯೂಟ, ತರಬೇತಿ, ಗಣತಿ, ಚುನಾವಣೆ, ಜಯಂತಿ, ದಾಖಲೆ ನಿರ್ವಹಿಸುವುದು, ಶೌಚಾಲಯ ಕಟ್ಟಿಸು, ಬಾಲ್ಯ ವಿವಾಹ ತಡೆಯಿರಿ, ಜಾಥಾಹೋಗಿ, ಪೋಲಿಯೊ ಜಾಗೃತಿ ಹೂಡಿ ಒಂದಾ ಎರಡಾ? ಇವೆಲ್ಲದರ ಮಧ್ಯೆಯೂ ಶಿಕ್ಷಕ ತನ್ನ ವೃತ್ತಿಗೆ ನ್ಯಾಯ ಒದಗಿಸಲು ಪ್ರಯತ್ನಿಸುತ್ತಿದ್ದಾನೆ. ಅವನ ತಾಳ್ಮೆಯನ್ನು, ವೃತ್ತಿಬದ್ಧತೆಯನ್ನು ಮೆಚ್ಚಿಕೊಳ್ಳಬೇಕು. ಇಷ್ಟೆಲ್ಲಾ  ಕಾಡುವ ವ್ಯವಸ್ಥೆ ಮತ್ತು ಅದರ ಉಸ್ತುವಾರಿಕೆ ಹೊತ್ತವರು ಶಿಕ್ಷಕನ ಸಮಸ್ಯೆಗಳನ್ನು ಮಾತ್ರ ಕೇಳುವುದಿಲ್ಲ. ಕೇಳುವ ನಾಟಕ ಮಾಡಿರಬಹುದು ಅಷ್ಟೇ! ಹೋಗಲಿ, ಅವರಿಗೆ ಕೊಡುವ ಸಂಬಳವಾದರೂ ತೃಪ್ತಿದಾಯಕವಾ? ಏನೊ ಒಂದಿಷ್ಟು ವೇತನ ಶ್ರೇಣಿಯನ್ನು ಮಾಡಿ ಕೈ ತೊಳೆದುಕೊಳ್ಳುವುದು ಸರಿಯೇ? ಬೇರೆ ಇಲಾಖೆಯಲ್ಲಿ ಕೈ ತುಂಬಾ ಸಂಬಳ ಪಡೆಯುತ್ತಿರುವುದನ್ನು ನೆನಪಿಸಿದರೂ ಸರಕಾರಕ್ಕೆ ಜಾಣ ಕಿವುಡು. ಅಮಾಯಾಕ ಶಿಕ್ಷಕರನ್ನು ಕಾಡುವ ಈ ಒಂದು ಉದಾಹರಣೆಗೆ ಸಾಕು. ಕುಮಾರನಾಯ್ಕ್ ವರದಿಯಂತೆ ಶಿಕ್ಷಕರಿಗೆ ಎರಡು ವೇತನ  ನೀಡಬೇಕಾಗಿತ್ತು. ಕಾಡಿ ಬೇಡಿದಕ್ಕೆ ಒಂದು ಬಡ್ತಿ ನೀಡಲಾಯಿತು. ಅದನ್ನೂ ಕೊಟ್ಟ ಐದಾರು ತಿಂಗಳಿಗೆ ಅದು ಸರಕಾರಕ್ಕೆ ಹೊರೆಯಾಗುತ್ತದೆ ಅಂತ ಹಿಂಪಡೆದು ಅದನ್ನು ಮೂಲವೇತನದಲ್ಲಿ ವಿಲೀನ ಮಾಡಲಾಗವುದಿಲ್ಲ ಎನ್ನಲಾಯಿತು. ಪ್ರತ್ಯೇಕವಾಗಿ ಇಡಲಾಗುವುದು ಹಾಗೂ ಅದು ಹೊರೆಯಾಗುವುದು ಎರಡೂ ಒಟ್ಟಿಗೆ ಹೇಗೆ ಸಾಧ್ಯ? ರಾತ್ರೋರಾತ್ರಿ ಸಂಬಳ ಡಬಲ್ ಮಾಡಿಕೊಳ್ಳುವ ಜನಪ್ರತಿನಿಧಿಗಳಿಗೆ ಯಾವ ಹೊರೆಯೂ ಬಾಧಿಸುವುದಿಲ್ಲ.

Tags

Related Articles

Leave a Reply

Your email address will not be published. Required fields are marked *

Language
Close