About Us Advertise with us Be a Reporter E-Paper

ದೇಶ
Trending

ವ್ಯಾಟ್ಸಾಪ್ ಜಾಸ್ತಿ ಬಳಕೆ ಮಾಡಿದ್ದಕ್ಕೆ ಮದುವೆನೇ ಮುರಿದುಬಿತ್ತು..!

ಲಖನೌ: ಯುವತಿಯೊಬ್ಬಳು ವ್ಯಾಟ್ಸಾಪ್ ಅತಿ ಹೆಚ್ಚಾಗಿ ಬಳಸುತ್ತಾಳೆ ಎಂಬ ಕಾರಣವೊಡ್ಡಿ ವರ ಮದುವೆ ರದ್ದುಗೊಳಿಸಿರುವ ಘಟನೆ ಉತ್ತರಪ್ರದೇಶದ ಅಮರೋಹಾ ಜಿಲ್ಲೆಯಲ್ಲಿ ನಡೆದಿದೆ.

ಮದುವೆಯ ದಿನದಂದೆ ಈ ಘಟನೆ ನಡೆದಿದೆ. ಸೆಪ್ಟೆಂಬರ್ 5ರಂದು ವರ-ವಧು ಹಸೆಮಣೆ ಏರಬೇಕಿತ್ತು. ವಧುವಿನ ಕಡೆಯವರು ವರನ ಕಡೆಯವರಿಗಾಗಿ ಕಾಯುತ್ತಿದ್ದರು. ಆದರೆ ಸಂಜೆಯಾದರೂ ಬಾರದ ಹಿನ್ನೆಲೆಯಲ್ಲಿ ಆತಂಕಗೊಂಡು ವಧುವಿನ ಸಹೋದರ ಕರೆ ಮಾಡಿದ್ದಾರೆ. ಈ ವೇಳೆ ಮದುವೆ ರದ್ದು ಮಾಡಿರುವುದಾಗಿ ವರನ ತಂದೆ ತಿಳಿಸಿದ್ದಾರೆ. ಅಲ್ಲದೆ ಅವಳು ವ್ಯಾಟ್ಯಾಪ್ ಅತಿ ಹೆಚ್ಚು ಬಳಸುತ್ತಾಳೆ. ಅಲ್ಲದೆ ಅವಳನ್ನ ಮದುವೆಯಾಗಬೇಕಾದರೆ 65 ಲಕ್ಷ ರೂ. ವರದಕ್ಷಿಣಿ ನೀಡಬೇಕು ಎಂದು ಪಟ್ಟು ಹಿಡಿದಿದ್ದ ಎಂದು ವಧುವಿನ ಕುಟುಂಬಸ್ತರು ಆರೋಪಿಸಿದ್ದಾರೆ.

ಇನ್ನು ಘಟನೆ ಕುರಿತಂತೆ ವಧುವಿನ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close