About Us Advertise with us Be a Reporter E-Paper

Breaking Newsದೇಶಪ್ರಚಲಿತ

ಭಾರತೀಯ ಕ್ರಿಕೆಟ್‌ ತಂಡಕ್ಕೆ ವಾಜಪೇಯಿ ನೀಡಿದ್ದ ಬ್ಯಾಟ್‌ನಲ್ಲಿ ಬರೆದಿದ್ದೇನು?

ದೆಹಲಿ: ಇಂದು ಸಂಜೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮಾಜಿ ಪ್ರಧಾನಿ ಭಾರತ ರತ್ನ ಆಟಲ್‌ ಬಿಹಾರಿ ವಾಜಪೇಯಿ ವಿಧಿವಶರಾಗಿದ್ದಾರೆ.

ಬಹುಮುಖ ಪ್ರತಿಭೆಯಾಗಿದ್ದ ಅವರು, ಸಜ್ಜನ ರಾಜಕಾರಣಿ ಹಾಗೂ ಉತ್ತಮ ಸಂಸದೀಯ ಪಟು ಕೂಡ ಆಗಿದ್ದರು. ಉತ್ತಮ ಮಾತುಗಾರನಾಗಿದ್ದ ಅವರು ಹಿಂದಿಯಲ್ಲಿ ಹಲವು ಕವಿತೆಗಳನ್ನು ರಚಿಸಿದ ಕವಿಯೂ ಹೌದು. ಶಾಯರಿ ಹಾಗೂ ಕವನಗಳ ಮೂಲಕ ಮಾತಿನಲ್ಲಿ ಮೋಡಿ ಮಾಡುತ್ತಿದ್ದ ಅವರು, ಒಮ್ಮೆ ಪ್ರಧಾನಿಯಾಗಿದ್ದಾಗ ಭಾರತ ತಂಡಕ್ಕೆ ಬ್ಯಾಟ್‌ ಒಂದನ್ನು ಉಡುಗೊರೆಯಾಗಿ ನೀಡಿದ್ದರು. ಯಾಕೆ ನೀಡಿದ್ದರು? ಯಾವಾಗ ನೀಡಿದ್ದರು? ಅದರಲ್ಲಿ ಬರೆದಿದ್ದೇನು? ಇಲ್ಲಿದೆ ವಿವರ

2004 ರ‍ಲ್ಲಿ ಭಾರತ ಕ್ರಿಕೆಟ್‌ ತಂಡ, ಪಾಕಿಸ್ತಾನಕ್ಕೆ ಸರಣಿ ಆಡಲು ಹೋಗುವ ಮುನ್ನ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿಯವರನ್ನು ಭೇಟಿ ಮಾಡಿತು. ಈ ಸಂದರ್ಭ ನಾಯಕ ಸೌರವ್‌ ಗಂಗೂಲಿಗೆ “ಖೇಲ್‌ ಹೀ ನಹೀ, ದಿಲ್‌ ಭೀ ಜೀತಿಯೇ- ಶುಭ್‌ ಕಾಮ್ನಾಯೆ ( ಆಟ ಮಾತ್ರವಲ್ಲ ಹೃದಯಗಳನ್ನು ಗೆದ್ದು ಬನ್ನಿ- ಶುಭವಾಗಲಿ) ಎಂದು ಬರೆದಿದ್ದ ಬ್ಯಾಟ್‌ ಅನ್ನು ಉಡುಗೊರೆಯಾಗಿ ನೀಡಿದ್ದರು.

ಈ ಸೆರಣಿಯಲ್ಲಿ ಭಾರತ ಏಕದಿನ ಸರಣಿಯನ್ನು 3-2 ಹಾಗೂ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ಜಯಭೇರಿ ಬಾರಿಸಿ ಇತಿಹಾಸ ನಿರ್ಮಾಣ ಮಾಡಿತ್ತು.

ತಾವು ಪ್ರಧಾನಿಯಾಗಿದ್ದ ವೇಳೆ, ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಳ್ಳಲು ಹಲವು ಬಾರಿ ಮಾತುಕತೆ ನಡೆಸಿದ್ದರು. ಆಟಗಾರರಲ್ಲೂ ಶಾಂತಿಯ ಸಂದೇಶ ನೀಡುವ ಮೂಲಕ  ಹೃದಯ ಗೆದ್ದಿದ್ದರು ವಾಜಪೇಯಿ.

Tags

Related Articles

Leave a Reply

Your email address will not be published. Required fields are marked *

Language
Close