About Us Advertise with us Be a Reporter E-Paper

ವಿ +

ಎಲ್ಲೇ ಇರಿ.. ಹೇಗೇ ಇರಿ.. Cool ಆಗಿರಿ

- ಶ್ರೀಪಾದ ಕವಲಕೋಡು

‘ಮನವೆಂಬ ಮರ್ಕಟವ ಹಿಡಿದಿಡಲು ಸಾಧ್ಯವೇ’ ಎಂದು ಸಾಧಕರು ಸದಾ ಕೇಳುತ್ತಾರೆ. ಅಂದರೆ ಮನಸ್ಸು ಮಂಗನಂತೆ. ಒಂದೆಡೆ ನಿಲ್ಲುವುದಿಲ್ಲ. ಬದಲಾಗಿ ಇಲ್ಲಿಂದ ಎಲ್ಲೆಲ್ಲಿಗೋ ಬರುತ್ತದೆ. ದೈಹಿಕವಾಗಿ ನಾವಿಲ್ಲೇ ಇದ್ದರೂ ಮನಸ್ಸು ಮಾತ್ರ ಹಿಮಾಲಯದಾಚೆ ತಲುಪಿರುತ್ತದೆ. ಅಲ್ಲದೆ ಮನಸ್ಸಿನ ಭಾವನೆಗಳಿಗೆ ತಕ್ಕಂತೆ ಮಾನವನ ವರ್ತನೆಗಳೂ ಇರುತ್ತವೆ ಎಂದು ಇತ್ತೀಚಿನ ಸಂಶೋದನೆಗಳ ಮೂಲಕ ಅರಿಯಲಾದ ಸತ್ಯ. ಅದು ಇವತ್ತಿನ ಬದುಕಿಗೆ ನೇರವಾದ ಸಂಬಂಧ ಇರುತ್ತದೆ. ನಾವು ಯಶಸ್ವಿಯಾಗಬೇಕಿದ್ದರೆ ಮನಸ್ಸೆಂಬ ಮರ್ಕಟಕ್ಕೆ ಮೂಗುದಾರ ಹಾಕಬೇಕು. ಇದು ನಾವು ಹೇಳುವ ಮಾತಲ್ಲ. ಬದಲಾಗಿ ಸಾಧಕರ ಬದುಕನ್ನು ವಿಮರ್ಶಿಸಿದರೆ ಎಲ್ಲವೂ ನಿಚ್ಚಳ.

ಭಾವನೆಗಳನ್ನು ಹಿಡಿತದಲ್ಲಿಟ್ಟುಕೊಳ್ಳುವುದು, ಪರಿಸ್ಥಿತಿ ವಿಕೋಪಕ್ಕೆ ಹೋದ ಸಂದರ್ಭದಲ್ಲೂ ಸಣ್ಣ ಪುಟ್ಟ ಘಟನೆಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸದಿರುವುದೂ ಯಶಸ್ವೀ ಜೀವನದ ಸೂತ್ರಗಳಲ್ಲೊಂದು. ಅಂದರೆ ಕೂಲ್ ಆ್ಯಂಡ್ ಕಾಮ್ ಆಗಿ ವ್ಯವಹರಿಸುವುದು ಜಂಟಲ್‌ಮೆನ್‌ಗಳ ರೀತಿ ನೀತಿ ಎಂದೂ ವಿಶ್ಲೇಷಿಸಲಾಗುತ್ತದೆ. ಹೀಗೆ ಸಂಭಾವಿತನಂತೆ ಬದುಕುವುದು ಎಲ್ಲರಿಗೂ ಸಿದ್ಧಿಸುವುದಿಲ್ಲ. ಆದರೆ ಅದನ್ನು ಕಲಿಯಬಹುದಂತೆ ಎಂಬುದು ಇತ್ತೀಚಿನ ಸಂಶೋಧನೆಗಳಲ್ಲಿ ಕಂಡ ಸತ್ಯ. ಶೇ. 90ರಷ್ಟು ಟಾಪ್ ಪರ್ಫಾರ್ಮರ್‌ಗಳು ತಮ್ಮ ಒತ್ತಡದ ಭಾವನೆಗಳನ್ನು ಹಿಡಿತದಲ್ಲಿ ಇಟ್ಟುಕೊಂಡು ಸಮಾಜದ ಎದುರಿನಲ್ಲಿ ಸಮಾಧಾನ ಚಿತ್ತರಾಗಿ ಇರುತ್ತಾರೆ ಎಂದು ಹೇಳಿದ್ದಾರೆ. ಮುಖ್ಯವಾಗಿ ಭಾವನೆಗಳನ್ನು ನಿಯಂತ್ರಣದಲ್ಲಿಡುವ ಮತ್ತು ಹೊರಗೆ ಹರಿಬಿಡುವ ಕೆಲಸ ಮಾಡುತ್ತದೆ. ಯಾವ ಸಂದರ್ಭದಲ್ಲಿ ಹೇಗೆ ವರ್ತಿಸಬೇಕು ಎಂದು ಮೆದುಳಿಗೆ ಮಾರ್ಗದರ್ಶನ ನೀಡುವ ಕೆಲಸವನ್ನು ಮನಸ್ಸಿನ ಮೂಲಕ ಮಾಡುವುದನ್ನು ಅಭ್ಯಾಸ ಮಾಡುವುದು ಯಶಸ್ವಿ ಜೀವನಕ್ಕೆ ಸಹಾಯಕ.

ಹಾಗಿದ್ದರೆ ಸುಖ, ಸಂತೋಷದಲ್ಲಿ ಜೀವನ ನಡೆಸಲು ಅಗತ್ಯವಾದ ಒಂದಷ್ಟು ಸಲಹೆಗಳನ್ನೂ ಮನಃಶಾಸ್ತ್ರಜ್ಞರು ಹಾಗೂ ಸಂಶೋಧಕರು ಸೂಚಿಸಿದ್ದಾರೆ. ಅವುಗಳನ್ನು ನಮ್ಮ ಬದುಕಿನಲ್ಲಿ ನಿಯಮಿತವಾಗಿ ಪಾಲಿಸುವುದರಿಂದ ಸದಾ ಸಮಾಧಾನ ಚಿತ್ತರಾಗಿ ಇರುವುದಲ್ಲದೆ, ನಾವಿರುವ ಕ್ಷೇತ್ರದಲ್ಲಿ ಗೆಲುವು, ಸಫಲತೆಯನ್ನೂ ಹಾಗಿದ್ದರೆ ಅವುಗಳೇನು ನೋಡೋಣ:

*ಇರುವಂತೆಯೇ ಸ್ವೀಕಾರ
ಒಮ್ಮೆ ಸಮಾಧಾನ ಚಿತ್ತರಾಗಿ ಕುಳಿತುಕೊಂಡು ನಾವು ಯಾವೆಲ್ಲ ಅಂಶಗಳಲ್ಲಿ ಮುಂದಿದ್ದೇವೆ, ಆತ್ಮವಿಶ್ವಾಸದಿಂದ ಮಾಡುವ ಕಾರ್ಯಗಳಾವುವು ಎಂದು ಅವಲೋಕಿಸಬೇಕು. ಅಂದರೆ ಎಲ್ಲವೂ ಸರಿಯಾಗಿದ್ದೇ ಆಗಿರಬೇಕು ಎಂದೇನಿಲ್ಲ. ಹೀಗೆ ಮಾಡುವುದರಿಂದ ನಮ್ಮ ಮೂಡ್ ಸಕಾರಾತ್ಮಕವಾಗಿ ಯೋಚಿಸಲು ಪ್ರಾರಂಭಿಸುತ್ತದೆ. ಜತೆಯಲ್ಲಿ ಶೇ. 23ರಷ್ಟು ಒತ್ತಡ ಉಂಟುಮಾಡುವ ಹಾರ್ಮೋನ್‌ಗಳನ್ನು ನಿಯಂತ್ರಿಸುತ್ತದೆ. ಅಲ್ಲದೆ, ಇತರರ ದೈನಂದಿನ ಕೆಲಸ ಕಾರ್ಯಗಳನ್ನು ಪ್ರಶಂಸಿಸುವುದರಿಂದ ನಮ್ಮ ಮೂಡ್, ಸಾಮರ್ಥ್ಯ ಹಾಗೂ ದೈಹಿಕ ಕಾರ್ಯಕ್ಷಮತೆಯಲ್ಲೂ ಕಂಡು ಬಂದಿದೆ ಎಂದು ಸಂಶೋಧನೆಗಳಲ್ಲಿ ತಿಳಿದುಬಂದಿದೆ.

* ‘ಹೀಗ್ಯಾಕೆ?’ ಎಂದು ಕೇಳುವುದಿಲ್ಲ
ಬೇರೆಯವರು ಮಾಡಿದ ಕೆಲಸವನ್ನು ‘ಹೀಗ್ಯಾಕೆ?’ ಎಂದು ಪ್ರಶ್ನಿಸಲು ಪ್ರಾರಂಭಿಸಿದರೆ ಅದು ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತಾಗುತ್ತದೆ. ಅಲ್ಲದೆ ಮಾನಸಿಕ ಒತ್ತಡ ಹೆಚ್ಚಲೂ ಕಾರಣವಾಗುತ್ತದೆ. ಪ್ರತಿಯೊಬ್ಬರ ಬದುಕಿನಲ್ಲೂ ಏರಿಳಿತಳಿರುತ್ತವೆ. ಹೆಚ್ಚಿನ ಸಂದರ್ಭಗಳಲ್ಲಿ ಅದು ಯಾಕಾಯಿತು ಎಂದೇ ಚರ್ಚಿಸುತ್ತಾ ಕಾಲ ಕಳೆದರೆ ಬದುಕು ಮುಂದುವರಿಯುವುದಿಲ್ಲ. ಅಂದರೆ ನಾವು ಸರಿಯಾದ ವಿಷಯಗಳ ಮೇಲೆ ಫೋಕಸ್ ಮಾಡುತ್ತಿಲ್ಲ ಎಂದರ್ಥ. ಹಾಗಿದ್ದಾಗ ಮುಂದೇನು ಎನ್ನುವುದರ ಕಡೆ ಗಮನಹರಿಸುವುದರಿಂದ ಒತ್ತಡ ನಮ್ಮ ಹಿಡಿತದಲ್ಲಿರುತ್ತದೆ. ಪ್ರತಿಯೊಂದು ಘಟನೆಗೂ ‘ಹೀಗ್ಯಾಕೆ? ಎಂದು ಪ್ರಶ್ನಿಸುವ ಗುಣವನ್ನು ಸಮಾಧಾನ ಚಿತ್ತರಾಗಿರುವ ವ್ಯಕ್ತಿಗಳು ಕೈಬಿಟ್ಟಿರುವುದನ್ನು ಗಮನಿಸಬಹುದು.

*ಸಕಾರಾತ್ಮಕ ಆಲೋಚನೆ ಮಾಡುವುದು
ಸದಾ ಸಕಾರಾತ್ಮಕ ಆಲೋಚನೆ ಮಾಡುವುದರಿಂದ ಜೀವನದಲ್ಲಿ ನಾವಂದುಕೊಂಡಿದ್ದನ್ನು ಸಾಧಿಸಲು ಸಾಧ್ಯ. ಜತೆಯಲ್ಲಿ ಒತ್ತಡದ ಬದುಕಿಗೆ ಮುಕ್ತಿಯನ್ನೂ ಹಾಡಬಹುದು. ಅಂದರೆ ಮೆದುಳಿಗೆ ನಮ್ಮ ಸುತ್ತಲೂ ನಡೆಯುವ ಸಕಾರಾತ್ಮಕ ವಿಚಾರಗಳನ್ನು ಅವಲೋಕಿಸುವಂತೆ ಉದ್ದೇಶಪೂರ್ವಕವಾಗಿ ಸೂಚನೆ ನೀಡಬೇಕು. ಇದು ಹೇಳಿದಷ್ಟು ಸುಲಭವಲ್ಲ. ಜೀವನದಲ್ಲಿ ಎಲ್ಲವೂ ಸರಿ. ಅದೇ ಪರಿಸ್ಥಿತಿಗಳು ವಿಕೋಪಕ್ಕೆ ಹೋದಾಗ ಹೇಗೆ ಯೋಚಿಸುತ್ತೇವೆ ಎನ್ನುವುದು ನಮ್ಮ ಮನಸ್ಥಿತಿಯನ್ನು ಪರೀಕ್ಷಿಸುತ್ತದೆ. ಅಂದರೆ ಜೀವನದ ಯಾವುದೇ ಘಟ್ಟದಲ್ಲಾದರೂ, ಒಳ್ಳೆಯ ಅಥವಾ ಸಕಾರಾತ್ಮಕ ಘಟನೆಗಳನ್ನು ನೆನಪಿಸಿಕೊಳ್ಳುತ್ತಿದ್ದರೆ ಪ್ರಸ್ತುತದಲ್ಲಿಯೂ ಒಳಿತೇ ಆಗುತ್ತದೆ. ಅದನ್ನೇ ಯಶಸ್ವಿ ಉದ್ಯಮಿಗಳು ಮಾಡುವುದು.

*ಇದ್ದಕ್ಕಿದ್ದಂತೆ ಕಳೆದು ಹೋಗುವುದು
ಹೌದು, ಸದಾ ಒತ್ತಡದಲ್ಲಿ ಜೀವನ ನಡೆಸುತ್ತಿರುವವರಿಗೆ ಹೊಸ ಆಲೋಚನೆಗಳು ಹುಟ್ಟುವುದಿಲ್ಲ. ಅಲ್ಲದೆ ಬದುಕೂ ಹಿನ್ನಡೆಯಲು ಪ್ರಾರಂಭಿಸಿರುತ್ತದೆ. ಆದ್ದರಿಂದ ನಮಗಿರುವ ಒತ್ತಡದ ಬದುಕಿಗೆ ಒಂದಷ್ಟು ದಿನ ವಿರಾಮವಿಟ್ಟು ಬ್ರೇಕ್ ತೆಗೆದುಕೊಳ್ಳಬೇಕು. ಯಾರಿಗೂ ಸಿಗದಂಥ ಜಾಗಗಳಿಗೆ ಹೋಗಿ ಬರುವುದು, ಸ್ನೇಹಿತರೊಂದಿಗೆ ತಿರುಗಾಡುವುದು, ಅಥವಾ ದೈನಂದಿನ ಕೆಲಸಗಳನ್ನು ಬದಿಗಿಟ್ಟು ಹೊಸ ಹೊಸ ಕಾರ್ಯಗಳಿಗೆ ಮುಂದಾಗುವುದು ಮಾನಸಿಕವಾಗಿಯೂ ಹೊಸತನವನ್ನು ನೀಡುತ್ತದೆ.

*ಸೂಕ್ತ ವಿಶ್ರಾಂತಿ
ಮಾನಸಿಕ ನೆಮ್ಮದಿಯನ್ನು ಹೆಚ್ಚಿಸಲು ಹಾಗೂ ಒತ್ತಡದ ಪ್ರಮಾಣವನ್ನು ಕಡಿಮೆ ಮಾಡಲು ನಿದ್ದೆ ತೀರಾ ಉಪಯುಕ್ತ. ದಿನಕ್ಕೆ ಆರರಿಂದ ಎಂಟು ಗಂಟೆಗಳ ನಿದ್ದೆಯು ಮೆದುಳಿನ ಕಾರ್ಯಕ್ಷಮತೆಯೂ ವೃದ್ಧಿಸುತ್ತದೆ. ನಿದ್ದೆಯ ಸಮಯದಲ್ಲಿ ಮೆದುಳು ರೀಚಾರ್ಜ್ ಆಗುವುದಲ್ಲದೆ, ಎದ್ದ ಬಳಿಕ ಹೊಸ ತೆರೆದುಕೊಳ್ಳುವಂತೆ ಮಾಡುತ್ತದೆ. ಅಂದರೆ ನಮ್ಮ ಮನಸ್ಸಿನ ಸ್ವನಿಯಂತ್ರಣ, ಏಕಾಗ್ರತೆ, ನೆನಪಿನ ಶಕ್ತಿಯನ್ನು ಅಧಿಕಗೊಳಿಸುವ ಕೆಲಸ ನಿದ್ದೆಯಿಂದ ಲಭಿಸುತ್ತದೆ. ಅದೇ ನಿದ್ದೆ ಕಡಿಮೆಯಾದಲ್ಲಿ ಇವೆಲ್ಲವೂ ಕುಂಠಿತವಾಗುವುದಲ್ಲದೆ ಮಾನಸಿಕ ಒತ್ತಡವೂ ಹೆಚ್ಚಾಗುತ್ತದೆ.

*ನಕಾರಾತ್ಮಕ ಯೋಚನೆ ಬೇಡ
ಜೀವನದಲ್ಲಿ ಮುಂದೆ ಬರಬೇಕೆಂದಿದ್ದರೆ ಮಾಡಬೇಕಾದ ಮುಖ್ಯ ಕೆಲಸಗಳಲ್ಲಿ ಇದೂ ಒಂದು. ನಮ್ಮೊಂದಿಗೆ ನಾವು ಮಾತನಾಡಿಕೊಳ್ಳುವ ಸಂದರ್ಭ ಬಂದಾಗ ಯಾವುದೇ ಕಾರಣಕ್ಕೂ ನಕಾರಾತ್ಮಕ ಆಲೋಚನೆಗಳನ್ನು ಒಳ ಬಿಟ್ಟುಕೊಳ್ಳಬೇಡಿ. ಅದು ನಮ್ಮ ಮನಸ್ಸಿನ ಮೇಲೆ ಕೆಟ್ಟ ಪರಿಣಾಮಗಳನ್ನು ಅಂದರೆ ನಕಾರಾತ್ಮಕ ಆಲೋಚನೆಗಳ ಪ್ರಮಾಣ ಹೆಚ್ಚಿದಷ್ಟೂ ದೇಹದ ಅಧಿಕ ಶಕ್ತಿಯು ಅದಕ್ಕೆ ವ್ಯಯವಾಗುತ್ತದೆ. ಹಾಗೊಂದು ವೇಳೆ ನಕಾರಾತ್ಮಕ ಆಲೋಚನೆಗಳು ಅಧಿಕವಾಗಿ ಬರುತ್ತಿದ್ದಲ್ಲಿ ಮಾಡುತ್ತಿರುವ ಕೆಲಸವನ್ನು ಬಿಟ್ಟು ಏನು ಯೋಚಿಸುತ್ತಿದ್ದೀರೋ ಅದನ್ನು ಅಕ್ಷರ ರೂಪಕ್ಕಿಳಿಸಿ. ಕೆಲ ಹೊತ್ತಿನ ಬಳಿಕ ಮನಸ್ಸು ಸಮಸ್ಥಿತಿಗೆ ಬರುತ್ತದೆ. ಹಾಗೇನಾದರೂ ಮುಂದೇನೂ ಆಗದು ಎಂದು ಅಕ್ಷರಗಳಲ್ಲಿ ಕಾಣಿಸುತ್ತಿದ್ದರೆ, ಇದು ಕೇವಲ ಮನಸ್ಸಿನ ಡಿಫೆನ್‌ಸ್ ಮೋಡ್ ಆಗಿರುತ್ತದೆ. ಅಂದರೆ ಪರಿಸ್ಥಿತಿಯನ್ನು ಸೂಕ್ತವಾಗಿ ಅವಲೋಕಿಸಿ ನಿರ್ಧಾರ ತೆಗೆದುಕೊಳ್ಳುವ ಬದಲು ಆಲೋಚನೆಗಳ ಮೂಲಕ

ಮನಸ್ಸಿನ ಒತ್ತಡವನ್ನು ವೃದ್ಧಿಸುತ್ತಿರುತ್ತದೆ.
ಹೀಗಾಗಿ ಬದುಕಿನಲ್ಲಿ ಯಶಸ್ವಿಯಾಗಬೇಕೆಂದಿದ್ದೆ ಮೇಲೆ ಹೇಳಿದ ಅಂಶಗಳನ್ನು ಬಿಟ್ಟು ಯಾವಾಗಲೂ ಸಕಾರಾತ್ಮಕ ಆಲೋಚನೆಗಳಲ್ಲಿ, ಕೆಲಸಗಳಲ್ಲಿ ತೊಡಗಿಸಿಕೊಳ್ಳಿ. ಬದುಕನ್ನು ಸುಂದರವಾಗಿಸಿಕೊಳ್ಳಿ.

Tags

Related Articles

Leave a Reply

Your email address will not be published. Required fields are marked *

Language
Close