About Us Advertise with us Be a Reporter E-Paper

ವಿರಾಮ

ನಿಮ್ಮಲ್ಲೂ ಇರಲಿ ಚೈನೀಸ್ ಬ್ಯಾಂಬೂ ಚೈತನ್ಯ

ಮಾತು ಬಂಗಾರ

ಮಾಧ್ಯಮ ಕ್ಷೇತ್ರದಲ್ಲಿ ಇದು ನನ್ನ ಹತ್ತನೇ ವರ್ಷ. ಇನ್ನೂ ಕಾಲೇಜ್ ವ್ಯಾಸಂಗ ಮಾಡ್ತಿದ್ದೆ, ಆಗಲೇ ರೇಡಿಯೋ ಸಿಟಿ ಕೂಡ ಸೇರಿಕೊಂಡು, ಒಂದು ವರ್ಷ ಎರಡನ್ನೂ ಜೊತೆಜೊತೆಗೇ ಮಾಡಿದೆ. ಕಲಿಕೆ ಕಾಲೇಜಿನಲ್ಲಿ ಮಾತ್ರ ಅಲ್ಲದೇ, ಇಲ್ಲೂ ನಡೀತಾ ಇತ್ತು. ಏಕೆಂದರೆ ಇದು ನನ್ನ ಮೊದಲನೇ ಕೆಲಸ. ಈಗೇನೋ ಸ್ಮಾರ್ಟ್ ವರ್ಕಿಂಗ್ ಕಲಿತಿದ್ದೀನಿ, ಆದರೆ 18-19 ಗಂಟೆಗಳ ಕಾಲ ನಾನು ಕೆಲಸ ಮಾಡಿದ ದಿನಗಳೂ ಇವೆ. ಎಷ್ಟೆಲ್ಲಾ ಕಲಿತೆ ಆಗ,  ಅರ್ಥ ಮಾಡಿಕೊಂಡೆ. ಅಬ್ಬ! ಬೇಸಿಕ್‌ಸ್ ಚೆನ್ನಾಗಿ ಕಲಿತಾಗ, ಭವಿಷ್ಯ ಯಾವತ್ತೂ ಚೆನ್ನಾಗೇ ಇರುತ್ತೆ. ಆದರೆ ನಮಗೆ ಸವಾಲು ಅನ್ನೋದು ಎದುರಾಗೋದು ಯಾವಾಗ ಗೊತ್ತಾ, ನಾವು ಮತ್ತೊಬ್ಬರನ್ನ ತಯಾರು ಮಾಡಬೇಕಾಗಿ ಬಂದಾಗ. ಕೆಲವೇ ಕೆಲವು ಸಂದರ್ಭಗಳಲ್ಲಿ ಮಾತ್ರ ಆಸಕ್ತಿ ಇರೋರು, ಜೀವನದಲ್ಲಿ ಒಂದು ಗುರಿ ಅಂತಿರೋರು ಸಿಕ್ತಾರೆ, ಬಹುತೇಕ ಸಲ ಅಂಥವರು ಸಿಗೋದಿಲ್ಲ. ಎಷ್ಟೋ ಕಲಾವಿದರು ಹೇಳೋದನ್ನ ಕೇಳಿರಬಹುದು ‘ಅಯ್ಯೋ, ನಮ್ಮ ಕಾಲದಲ್ಲಿ ಹೀಗಿರಲಿಲ್ಲ, ಕಲಾ ಸರಸ್ವತಿಯನ್ನ ಒಲಿಸಿಕೊಳ್ಳೋದಿಕ್ಕೆ ನಾವು  ತಪಸನ್ನೇ ಮಾಡಿದೀವಿ, ಅದರ ಫಲವೇ ಈ ಯಶಸ್ಸು. ಆದರೆ ಇಂದಿನ ಹುಡುಗರಿಗೆ ಎಲ್ಲವೂ ತಾವು ಅಂದುಕೊಂಡ ಹಾಗೆ ಆಗಿಬಿಡಬೇಕು, ಕಷ್ಟ ಪಡದೇ ಯಶಸ್ಸು, ಹಣ, ಹೆಸರು ಎಲ್ಲಾ ಸಿಕ್ಕಿಬಿಡಬೇಕು, ಅದು ಹೇಗೆ ಸಾಧ್ಯ’ ಅಂತ. ಇದು ಎಲ್ಲಾ ಕ್ಷೇತ್ರಕ್ಕೂ ಅನ್ವಯ. ಜನ ಈಗ ಎಲ್ಲರನ್ನೂ ಹಗುರವಾಗಿ ತೊಗೋತಿದಾರೆ ಅನ್ನೋದು ಸುಳ್ಳಲ್ಲ. ಕಷ್ಟದ ಹಾದಿ ಯಾರಿಗೂ ಬೇಡ.

ಎಷ್ಟೋ ಜನ ನನ್ನ ಕೇಳಿದಾರೆ ‘ನಾನೂ ಫ್ರೀಟೈಂನಲ್ಲಿ ಆರ್‌ಜೆ ಆಗಬೇಕು ಅಂತಿದೀನಿ,  ಸ್ಟೇಷನ್‌ನಲ್ಲಿ ನನಗೊಂದು ಕೆಲಸ ಕೊಡಿಸಿಬಿಡಿ’ ಅಂತ. ಅಪ್ರೋಚೇ ಹೀಗಿದ್ದರೆ, ಇನ್ನು ಅವರ ಕೈಲಿ ಕೆಲಸ ಮಾಡಿಸಿಕೊಂಡ ಹಾಗೆ. ಕೆಲವು ಸಮಾರಂಭಗಳಲ್ಲಿ  ಫ್ಯಾಮಿಲಿ, ಫ್ರೆಂಡ್‌ಸ್ ಅಂತ ಇರ್ತಾರಲ್ಲ ‘ನಮ್ಮ ಹುಡುಗನಿಗೆ ಆ್ಯಕ್‌ಟ್ ಮಾಡೋ ಆಸೆ ಅಂತ, ನೀನು ರೇಡಿಯೋದಲ್ಲಿ ಸೆಲೆಬ್ರಿಟಿನೆಲ್ಲಾ ಇಂಟರವ್ಯೂ ಮಾಡ್ತಿರ್ತೀಯಲ್ಲ, ಹಾಗೇ ಇವನಿಗೊಂದು ಚಾನ್‌ಸ್ ಕೊಡಿಸಿಬಿಡು, ನೀನು ಚಾನ್‌ಸ್ ಕೊಡಿಸ್ತೀಯಾ ಅಂತ ಅವನಿಗೆ ಹೇಳಿಟ್ಟಿದ್ದೀನಿ’ ಅಂದಿದಾರೆ.

‘ಏ ನಿಮ್ಮ ರೇಡಿಯೋದಲ್ಲಿ ಅದ್ಯಾವುದೋ ಸಿಂಗಿಂಗ್ ಶೋ ಬರ್ತಿದ್ಯಲ್ಲ, ನನ್ನ  ಸ್ವಲ್ಪ ಪುಷ್ ಮಾಡಿ ಗೆಲ್ಲಿಸು, ನಮ್ಮ ಹುಡುಗಿ ರೇಡಿಯೋದಲ್ಲಿ ಇದ್ಗೊಂಡು, ನನಗೂ ಏನೋ ಒಂದು ಮಾಡಿದ್ಲು ಬಿಡಪ್ಪ ಅಂತ ನಾವೂ ಖುಷಿ ಪಡ್ತೀವಿ’ ಅಂದಿರೋರು ಇದಾರೆ.

ಗುರು ಶಿಷ್ಯ ಸಂಬಂಧ

ಈ ಗುರು ಶಿಷ್ಯರ ಸಂಬಂಧ, ಶಿಷ್ಯರು ಕಲಿಕೆಗೆ ತೋರಿಸೋ ಆಸಕ್ತಿ, ಎಲ್ಲವೂ ಈಗ ಬದಲಾಗಿಹೋಗಿದೆ. ಮುಂಚೆ ಗುರುಗಳು ಸಕಲ ವಿದ್ಯೆಯನ್ನೂ ಶಿಷ್ಯರಿಗೆ ಧಾರೆ ಎರೆಯೋರು, ಆದರೂ ಕೆಲವೊಂದು ಗುಟ್ಟಾದ ವಿದ್ಯೆ ನೆಚ್ಚಿನ ಶಿಷ್ಯನಿಗೆ ಮೀಸಲಾಗಿ ಇರ್ತಿತ್ತು. ಅದನ್ನ  ಈತ ಗುರುವನ್ನ ಮೀರಿಸೋ ಶಿಷ್ಯನಾಗ್ತಿದ್ದ. ಆದರೆ ಈಗ ಗುರುವನ್ನ ಮೀರಿಸೋ ಶಿಷ್ಯಂದಿರು ತೀರಾ ವಿರಳ. ಅದಕ್ಕೆ ಪ್ರಯತ್ನವೂ ನಡೆಯೋದಿಲ್ಲ, ಆಸಕ್ತಿಯೂ ಇರೋದಿಲ್ಲ. ಹಾಗಾಗಿಯೇ ಅಲ್ಲವಾ ಹಿರಿಯರು ಕಲಿತಿರೋ, ಅವರಿಗೆ ಮಾತ್ರ ತಿಳಿದಿರೋ ಎಷ್ಟೆಷ್ಟೋ ವಿಷಯಗಳು ಮರೆಯಾಗಿ ಹೋಗ್ತಿದೆ. ಬೆರಳೆಣಿಕೆಯಷ್ಟು ಮಂದಿ ಇದನ್ನ ಉಳಿಸೋ ಪ್ರಯತ್ನ ಮಾಡ್ತಿದಾರೆ, ಅಷ್ಟೇ.

ಪ್ರಪಂಚದ ಅತಿ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರತಿ ವರ್ಷ ನಂ.1 ಸ್ಥಾನ ಯಾರೇ ಪಡ್ಕೊಂಡ್ರೂ, ನಮ್ಮ ಮನಸ್ಸಲ್ಲಿ ರಿಚೆಸ್‌ಟ್ ಅಂತಿದ್ದ  ಮೊದಲು ಬರೋ  ಹೆಸರೇ ಬಿಲ್ ಗೇಟ್‌ಸ್. ಚಿಕ್ಕ ವಯಸ್ಸಲ್ಲಿ, ಬಿಲ್ ಗೇಟ್‌ಸ್ಗೆ ಓದೋ ಆಸೆ ಇದೆ ಅನ್ನೋದನ್ನ ಅರಿತು, ಪುಸ್ತಕಗಳನ್ನ ಸಜೆಸ್‌ಟ್ ಮಾಡಿ, ಅವರು ಅದನ್ನ ಓದಿದ ನಂತರ ಅದರ ಬಗ್ಗೆ ಬಿಲ್ ಗೇಟ್‌ಸ್ ವಿಮರ್ಶೆಯನ್ನ ತಾಳ್ಮೆಯಿಂದ ಕೇಳಿ, ಆ ಹುಡುಗನಲ್ಲಿನ ಆತ್ಮವಿಶ್ವಾಸವನ್ನ ಹೆಚ್ಚಿಸಿದ್ದು ಆಔಅಘೆಇಏಉ ಇಅಊಊಐಉ್ಕಉ. ನೂರು ವರ್ಷ ಬದುಕಿದ್ದ ಮಹಿಳೆ ಈಕೆ. ಸಾಯೋಕು ಮುಂಚೆ ಬಿಲ್ ಗೇಟ್‌ಸ್ ಈಕೆಯನ್ನ ‘ಗುರು’ ಅಂದಿದ್ದು ಇವರಿಗೆ ಅದೆಷ್ಟು ಸಮಾಧಾನ  ಸಂತೋಷ ಕೊಟ್ಟಿರಬೇಡ! ಹೀಗೆ ಗುರುವನ್ನ ನೆನಪಿಸಿಕೊಳ್ಳೋ ಶಿಷ್ಯಂದಿರು ಸಹ ವಿರಳವೇ. ಇದು ಬಿಲ್ ಗೇಟ್‌ಸ್ ವಿಷಯವಾದರೆ, ಜಗದ್ಗುರು ಅಂತ ಕರೆಸಿಕೊಳ್ಳೋ ಆದಿ ಶಂಕರಾಚಾರ್ಯರು ಗುರು ಅಂತ ಕರೆದಿದ್ದು – ಒಬ್ಬ ಬಡ ದಾರಿಹೋಕನನ್ನ, ಜೀವನದ ಸತ್ಯವನ್ನ ಆತನಿಂದ ಇವರು ಕಲಿತಿದ್ದು. ‘ನೀವೇ ನನ್ನ ಕಣ್ಣು ತೆರೆಸಿದ ಗುರು’ ಅಂತ ಶಂಕರಾಚಾರ್ಯರೇ ಹೇಳಿದಾರೆ. ಇನ್ನು ಬುದ್ಧನಂತಾ ಗುರುವನ್ನ ಅರ್ಥ ಮಾಡಿಕೊಳ್ಳದೆ, ಹಿಂದಿನಿಂದ ದೊಡ್ಡ ಕಲ್ಲೊಂದನ್ನ ಗುರುಗಳ ಮೇಲೆ ತಳ್ಳಿದ ಶಿಷ್ಯನ  ಕೇಳಿರಬಹುದು, ಹಾಗೇ ಜೀಸಸ್‌ನ ಕಡೇ ದಿನಗಳಲ್ಲಿ ಆತನ ಅನೇಕ ಶಿಷ್ಯಂದಿರು ಜೊತೆಯಾಗಲಿಲ್ಲ ಅನ್ನೋದನ್ನೂ ಎಲ್ಲೋ ಓದಿದ್ದೆ. ಹೀಗೆ ಎಲ್ಲ ಥರದ ಶಿಷ್ಯಂದಿರೂ ಆಗಲೂ ಇದ್ದರು, ಈಗಲೂ ಇದಾರೆ, ಮುಂದೆಯೂ ಇರ್ತಾರೆ.

ಈ ಗುರು ಶಿಷ್ಯ ಸಂಬಂಧ, ಹಾಗಾಗಿ ಎಲ್ಲಕ್ಕಿಂತ ವಿಭಿನ್ನ. ಆದರೆ ಒಳ್ಳೆ ಶಿಷ್ಯನಾಗೋದಕ್ಕೆ ಮನಸ್ಸಿದ್ದರೂ, ದಾರಿ ತೋರಿಸೋ ಒಬ್ಬ ಒಳ್ಳೆ ಗುರು ಸಿಗೋದು ಕೂಡ ಅಷ್ಟೇ ಕಷ್ಟ ಅನ್ನೋದು ಸುಳ್ಳಲ್ಲ. ಗುರು, ಅದರಲ್ಲೂ ಉತ್ತಮ ಗುರು ಸಿಕ್ಕರಲ್ಲವಾ  ದಾಸರ ಈ ಸಾಲನ್ನ ಸಾಕಾರಗೊಳಿಸೋಕ್ಕಾಗೋದು? ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’. ಇನ್ನೂ ಕೆಲವರು, ಒಳ್ಳೆ ಗುರುಗಳು ಸಿಕ್ಕರೂ, ಅದನ್ನ ಬಳಸಿಕೊಳ್ಳೋದಿಲ್ಲ ಬಿಡಿ. ಒಳ್ಳೆಯ ಗುರುವನ್ನು ಹುಡುಕಿದರೂ ಸಿಗಲಿಲ್ಲವಾ? ಆದರೂ ಕಲಿಯೋ ಆಸೆ, ಒಳ್ಳೆ ಶಿಷ್ಯನಾಗೋ ಆಸಕ್ತಿ ಇದ್ದರೆ, ಹಿರಿಯರು ಹೇಳಿರೋದನ್ನ ಮಾಡೋದಷ್ಟೆ. ದೇಶ ಸುತ್ತು, ಕೋಶ ಓದು, ತಿಳಿದವರ ಜೊತೆ ಮಾತನಾಡು ಅಥವಾ ಅವರ ಮಾತುಗಳನ್ನ ಆಲಿಸು. ಕಲಿಯೋ ಆಸಕ್ತಿ ಇರೋ ಎಲ್ಲರಿಗೂ ಯಶಸ್ಸು ಸಿಕ್ಕೇ ಸಿಗುತ್ತಾ?  ಕೇಳಿದರೆ ಹೌದು, ಆದರೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಯಶಸ್ಸು ಸಿಗುತ್ತೆ. ಒಂದೊಂದು ಸಮಯಕ್ಕೆ ಸಿಗುತ್ತೆ, ಒಂದೊಂದು ಮಟ್ಟದಲ್ಲಿ ಸಿಗುತ್ತೆ. ತಾಳ್ಮೆ ಇರಬೇಕಷ್ಟೆ. ಕಾದಷ್ಟೂ, ಯಶಸ್ಸು ತಡವಾಗಿ ಸಿಕ್ಕಷ್ಟೂ ಅದರ ಬೆಲೆ ಹೆಚ್ಚೇ ಇರುತ್ತೆ. ಕಮ್ಮಿ ಅಂತೂ ಆಗಲ್ಲ.

ಚೈನೀಸ್ ಬ್ಯಾಂಬೂ ಟ್ರೀ ಕಥೆ

ಬೇರೆ ಯಾವುದೇ ಗಿಡ ಮರದ ಹಾಗೆಯೇ ಇದಕ್ಕೂ ನೀರು, ಮಣ್ಣು, ಗಾಳಿ, ಬೆಳಕಿನ ಆರೈಕೆ ಬೇಕೇ ಬೇಕು. ಆದರೆ 365 ದಿನ, ಅಂದರೆ ಒಂದು  ಕಳೆದರೂ, ಅಲ್ಲಿ ಗಿಡ ಮೊಳಕೆಯೊಡೆಯೋ ಯಾವುದೇ ಸೂಚನೆಯೂ ಕಾಣೋದಿಲ್ಲ. ಎರಡನೇ ವರ್ಷವೂ ಅಷ್ಟೆ. ಮಣ್ಣಿನ ಮೇಲೆ ಒಂದು ಸಾಸಿವೆ ಕಾಳಷ್ಟೂ ಗಿಡ ಚಿಗುರೊಡೆಯೋದಿಲ್ಲ. ಎರಡು ವರ್ಷ ಮೂರಾಯಿತು, ಮೂರು ನಾಲ್ಕಾಯಿತು, ಯಾರಿಗೆ ತಾನೆ ಇನ್ನೂ ಈ ಗಿಡ ಬೆಳೆಯಬಹುದು ಅನ್ನೋ ನಂಬಿಕೆ ಉಳಿದಿರುತ್ತೆ, ಪೋಷಿಸೋ ತಾಳ್ಮೆಯಿರುತ್ತೆ? ಈ ನಾಲ್ಕು ವರ್ಷಗಳಲ್ಲಿ ನಾವು ನಂಬಿಕೆ, ತಾಳ್ಮೆ, ವಿಶ್ವಾಸವನ್ನ ಕಳೆದುಕೊಳ್ಳದೆ ಅದರ ಪೋಷಣೆಯನ್ನ ಮುಂದುವರಿಸಿದೀ ಐದು ವರ್ಷ ಆದ ನಂತರ ಒಂದು  ಕಾದಿರುತ್ತೆ. ಈ ಗಿಡ ಚಿಗುರೊಡೆಯುತ್ತೆ! ಅಷ್ಟೇ ಅಲ್ಲ, ಆರೇ ವಾರದಲ್ಲಿ 80 ಅಡಿ ಎತ್ತರಕ್ಕೆ ಬೆಳೆದುಬಿಡುತ್ತೆ. ಐದನೇ ವರ್ಷದ ಈ 80 ಅಡಿ ಬೆಳವಣಿಗೆಗೆ ಬೇಕಾದಷ್ಟು ಶಕ್ತಿಯುತ ಬೇರುಗಳು ಮಾತ್ರ ಭೂಮಿಯಾಳದಲ್ಲಿ, ಮೊದಲ ನಾಲ್ಕು ವರ್ಷ ಬೆಳೆಯುತ್ತಾ ಇದ್ದವು! ಈ ನಾಲ್ಕು ವರ್ಷ ತಾಳ್ಮೆಗೆಟ್ಟವರಿಗೆ, ಐದನೇ ವರ್ಷದ ಫಲ ಇಲ್ಲವಷ್ಟೇ. ಇದು ನಮಗೂ ಅನ್ವಯ. ಬೆಳವಣಿಗೆ, ಯಶಸ್ಸು, ಕಲಿಕೆ, ಗುರುವನ್ನ ಪಡೆಯೋದು ಹೀಗೆ ಜೀವನದಲ್ಲಿ ಒಳ್ಳೆಯದು ಯಾವುದೇ ಆದರೂ,  ಕಾಯೋದು ಕಷ್ಟವಾದರೂ ಕಾದಾಗ, ಅದಕ್ಕೆ ತಕ್ಕ ಪ್ರತಿಫಲ ಸಿಗುತ್ತೆ, ಆ ಯಶಸ್ಸು ನಮ್ಮ ಊಹೆಗೂ ನಿಲುಕದ್ದಾಗಿರುತ್ತೆ.

Tags

Related Articles

Leave a Reply

Your email address will not be published. Required fields are marked *

Language
Close