About Us Advertise with us Be a Reporter E-Paper

ಅಂಕಣಗಳು

ತುತ್ತು ಗಂಜಿಗಾಗಿ ದೇಶವನ್ನೆ ಒತ್ತೆ ಇಡಬಲ್ಲವರು!

ಈ ದೇಶದಲ್ಲಿ ಒಬ್ಬ ಸೆಕ್ಯುರಿಟಿ ಗಾರ್ಡ್, ಆಟೋ ಚಾಲಕ, ಬಸ್ಸಿನ ನಿರ್ವಾಹಕ,  ಇಲಾಖೆಯಲ್ಲಿ ಕಾರಕೂನ ಆಗಬೇಕಾದರೆ ಅದಕ್ಕೆ ಅರ್ಹತೆ ಬೇಕು. ಸರ್ಟಿಫಿಕೇಟು ತೋರಿಸಿದ ಮೇಲೂ ಒಂದಷ್ಟು ಅರ್ಹತಾ ಪರೀಕ್ಷೆಗಳನ್ನು ಪಾಸು ಮಾಡಬೇಕು. ನೌಕರಿ ಗಿಟ್ಟಿಸಬೇಕಾದ್ದು ನಮಗೆ ಅನಿವಾರ್ಯ ಎಂಬುದು ನೌಕರಿ ಕೊಡುವವರಿಗೆ ಗೊತ್ತಾದರೆ ಮತ್ತಷ್ಟು ಸತಾಯಿಸುತ್ತಾರೆ. ಲಂಚ ಕೇಳುತ್ತಾರೆ. ನೌಕರಿ ಕೊಡಿಸುವುದಕ್ಕೂ ಮಧ್ಯದಲ್ಲೊಬ್ಬ ದಲ್ಲಾಳಿ ಹುಟ್ಟಿಕೊಳ್ಳುತ್ತಾನೆ. ದ್ರಾವಿಡ ಪ್ರಾಣಾಯಾಮ ಮಾಡಿಬಂದರೂ ನೌಕರಿ ಸಿಕ್ಕೇಸಿಗುತ್ತದೆಂಬ ಗ್ಯಾರಂಟಿಯೇನಿಲ್ಲ. ಆದರೆ ಈ ದೇಶದಲ್ಲಿ ನೀವು ಬಹಳ ಸುಲಭವಾಗಿ ಗಿಟ್ಟಿಸಬಹುದಾದ ಹುದ್ದೆಯೊಂದಿದೆ. ಅದೇ ಬುದ್ಧಿಜೀವಿ ಎಂಬ ಹುದ್ದೆ!  ಪಟ್ಟ! ಸೆಕ್ಯುರಿಟಿ ಗಾರ್ಡ್ ಆಗುವುದಕ್ಕೆ ನಿಮಗೆ ಕಟ್ಟುಮಸ್ತಾದ ದೇಹ ಇರಬೇಕಾಗುತ್ತದೆ. ಆಟೋ ಚಾಲಕನಾಗಲು ಕೈ ಕಾಲು ಕಣ್ಣುಗಳು ಸುಸ್ಥಿತಿಯಲ್ಲಿರಬೇಕಾಗುತ್ತದೆ. ಆದರೆ ಬುದ್ಧಿಜೀವಿ ಆಗಲು ಬುದ್ಧಿ ಇರಬೇಕೆಂಬುದು ಅನಿವಾರ್ಯ ಅಲ್ಲ! ಇನ್‌ಫ್ಯಾಕ್‌ಟ್, ಬುದ್ಧಿ ಇರಬಾರದು ಎಂಬುದೇ ಅದಕ್ಕಿರುವ ಅರ್ಹತೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು!

ಯಾಕೆ ಈ ಮಾತು ಹೇಳುತ್ತಿದ್ದೇನೆಂದರೆ ತೀರ ಇತ್ತೀಚೆಗೆ ಕನ್ನಡದ ವಿಶ್ವಾಸಾರ್ಹ ಪತ್ರಿಕೆಯೊಂದರಲ್ಲಿ ಆಕಾರ್ ಪಟೇಲ್ ಎಂಬ ಬುದ್ಧಿಜೀವಿಯೊಬ್ಬ ಒಂದು ಲೇಖನ ಬರೆದಿದ್ದ. ಉಪನಿಷತ್ತಿನ ಮಾತು ಹೇಳುವ  ಏನು? ಎಂಬುದು ಅದರ ಶೀರ್ಷಿಕೆ. ಅತಿಥಿಗಳು ಮನೆಗೆ ಬಂದಾಗ ನೀರು ಕೊಟ್ಟು ಉಪಚರಿಸುವ ಸಂಪ್ರದಾಯದ ಉಲ್ಲೇಖದ ಮೂಲಕ ಈತ ತನ್ನ ಬರಹ ಪ್ರಾರಂಭಿಸುತ್ತಾನೆ. ಆಮೇಲೆ, ಶ್ರೀರಾಮನ ಕಾಲದಲ್ಲೂ ಈ ಪದ್ಧತಿ ಇತ್ತು ಎಂಬುದನ್ನು ಹೇಳುತ್ತ, ಶ್ರೀರಾಮ ಕಾಡಿನಲ್ಲಿ ಯಾವುದಾದರೂ ಋಷಿಯ ಆಶ್ರಮಕ್ಕೆ ಭೇಟಿ ನೀಡಿದಾಗ ಅಥವಾ ಹಳ್ಳಿಯ ಬಡವನ ಮನೆಗೆ ಹೋದಾಗಲೆಲ್ಲ ಕುಡಿಯಲು ನೀರು ಕೊಡುವುದು ಒಂದು ಆಚರಣೆಯೇ ಆಗಿತ್ತು. ಇದು ನಮ್ಮ ಭಾರತೀಯ ಸಂಪ್ರದಾಯ. ಇದರ ಬಗ್ಗೆ  ಹೆಮ್ಮೆ ಇರಬೇಕು. ಏಕೆಂದರೆ ಜಗತ್ತಿನಲ್ಲಿ ಬೇರೆಲ್ಲಿಯೂ ಇಂಥದ್ದೊಂದು ಸಂಪ್ರದಾಯ ಇದ್ದಂತಿಲ್ಲ – ಎನ್ನುತ್ತಾನೆ. ಅಲ್ಲಿಂದ ಈತನ ಬರವಣಿಗೆ ಉಪನಿಷತ್ತುಗಳತ್ತ ಹೊರಳುತ್ತದೆ. ಅವುಗಳ ಬಗ್ಗೆ ಹೇಳುತ್ತ, ಅತಿಥಿ ದೇವೋ ಭವ ಎಂಬ ಸಾಲು ನಮಗೆ ಚಿರಪರಿಚಿತ. ಇದು ಉಪನಿಷತ್ತಿನಲ್ಲಿದೆ. ಮಾತೃ ದೇವೋ ಭವ, ಪಿತೃ ದೇವೋ ಭವ, ಆಚಾರ್ಯ ದೇವೋ ಭವ, ಅತಿಥಿ ದೇವೋ ಭವ ಎಂಬುದು ಅಲ್ಲಿನ ಪೂರ್ತಿ ಸಾಲು. ಈ ಸಾಲಿನ ಅರ್ಥ – ತಾಯಿ, ತಂದೆ,  ಮತ್ತು ಅತಿಥಿಯನ್ನು ದೇವರೆಂದು ಭಾವಿಸಬೇಕು ಎಂಬುದು. ನಾವು ಹಿಂದೂಗಳು ಎಂದು ಭಾವಿಸಿರುವ ನಮ್ಮವರು, ನಮ್ಮ ಗ್ರಂಥಗಳಲ್ಲಿ ಹೇಳಿರುವ ಈ ಸಾಲುಗಳ ನಿಜ ಅರ್ಥ ಗ್ರಹಿಸಿ, ಹಿಂದೂ ಆಗಿರುವುದರ ನೈಜ ಅರ್ಥ ಏನು ಎಂಬುದನ್ನು ತಿಳಿದುಕೊಳ್ಳಬೇಕು. ಅಸ್ಸಾಂನಲ್ಲಿ ನಡೆಯುತ್ತಿರುವ ಮತದಾನದ ಹಕ್ಕನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಇಂಥ ಯಾವುದಾದರೂ ಗೌರವ ಅಥವಾ ಕರುಣೆಯ ಭಾವ ಕಾಣಿಸುತ್ತದೆಯೇ? – ಎಂಬಲ್ಲಿಗೆ ಈ ಬುದ್ಧಿಜೀವಿಯ ಪ್ರೌಢಿಮೆ ತಾರಸ್ಥಾಯಿಯನ್ನು ಮುಟ್ಟುತ್ತದೆ! ಕೊಲರಾಡೋದಲ್ಲಿ 1945ರಲ್ಲಿ ಮೈಕ್ ಎಂಬ  ಕೋಳಿಯೊಂದು ರುಂಡವೇ ಇಲ್ಲದೆ 18 ತಿಂಗಳುಗಳ ಕಾಲ ಬದುಕಿತ್ತಂತೆ. ಅದೇನು ಮಹಾ! ಈ ದೇಶದಲ್ಲಿ, ತಲೆ ಮತ್ತು ಮಿದುಳಿನ ಅಗತ್ಯವೇ ಇಲ್ಲದೆ ಅದೆಷ್ಟೊಂದು ಜನ ಬುದ್ಧಿಜೀವಿಗಳೆಂಬ ಹಣೆಪಟ್ಟಿ ಹಚ್ಚಿಕೊಂಡು ಆರಾಮಾಗಿ ಬದುಕುತ್ತಿದ್ದಾರೆಂಬುದನ್ನು ನೀವಾದರೂ ಒಪ್ಪಿಕೊಳ್ಳುತ್ತೀರಿ ಆಕಾರ್ ಪಟೇಲನ ಅಂಕಣವೆಂಬ ಹೆಸರಿನ ಹಳಹಳಿಕೆಗಳನ್ನು ಪೂರ್ತಿಯಾಗಿ ಓದಿದರೆ! ಈತ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಎಂಬ ಎನ್‌ಜಿಓದ ಭಾರತ ಮುಖ್ಯಸ್ಥ ಬೇರೆ!

ನಮ್ಮ ಈ ದೇಶದಲ್ಲಿ ರಾಮಾಯಣ, ಮಹಾಭಾರತ, ವೇದ, ಉಪನಿಷತ್ತುಗಳನ್ನು ಯಾರು ಹೇಗೆ  ಬಳಸಿಕೊಳ್ಳಬಹುದು. ಹೇಗೂ ಬಿಟ್ಟಿ ಬಿದ್ದಿವೆಯಲ್ಲ! ನಮ್ಮ ಮಾತಿಗೆ ಪುಷ್ಟಿ ಕೊಡುವ ಸಂಗತಿಗಳು ಅಲ್ಲಿವೆಯೆಂಬುದು ಗೊತ್ತಾದರೆ ಅಲ್ಲಿನ ಸಂಸ್ಕೃತ ಶ್ಲೋಕಗಳನ್ನು ಪುಂಖಾನುಪುಂಖವಾಗಿ ಉದ್ಧರಿಸಬಹುದು. ನಮ್ಮ ನಿಲುವಿಗೆ ವಿರುದ್ಧವೆನಿಸುವ ವಿಚಾರಗಳು ಅವೇ ಪ್ರಾಚೀನ ಗ್ರಂಥಗಳಲ್ಲಿ ಬಂದಾಗ, ಅವೆಲ್ಲವೂ ಸುಳ್ಳಿನ ಬೊಂತೆ ಎಂದುಬಿಡಬಹುದು! ಬುದ್ಧಿಜೀವಿಗಳೆಂಬ ತಲೆಯಿಲ್ಲದ ಕೋಳಿಗಳ ಜೊತೆ ನೀವು ಅರ್ಧಗಂಟೆ ವಾದಿಸಿನೋಡಿ. ಅವರು ರಾಮಾಯಣ, ಮಹಾಭಾರತಗಳನ್ನು ಉಲ್ಲೇಖಿಸದೆ ಹೋದರೆ ಅವರ ಬುದ್ಧಿಜೀವಿತನಕ್ಕೇ ಅವಮಾನ! ನಮ್ಮ ದೇಶದಲ್ಲಿ ಶೋಷಣೆ ನಿರಂತರವಾಗಿ ನಡೆದುಬಂದಿದೆ. ಪುರೋಹಿತಶಾಹಿಗಳು  ಇಲ್ಲಿ ಕೆಳವರ್ಗದವರನ್ನು ಶೋಷಿಸುತ್ತಲೇ ಬಂದಿದ್ದಾರೆ. ಕರ್ಣ ಬ್ರಾಹ್ಮಣನಲ್ಲ, ಸೂತಪುತ್ರ ಎಂಬುದು ಗೊತ್ತಾಗುತ್ತಲೇ ಪರಶುರಾಮರು ಅವನಿಗೆ ಶಾಪಕೊಟ್ಟು ದೂರ ತಳ್ಳಲಿಲ್ಲವೇ? ಅವನು ಮೇಲ್ಜಾತಿಯಲ್ಲಿ ಹುಟ್ಟಿದವನಲ್ಲ, ಕೆಳವರ್ಗದವನು ಎಂಬ ಕಾರಣಕ್ಕೆ ದ್ರೌಪದಿ ಸ್ವಯಂವರದಲ್ಲಿ ಅವಮಾನಿಸಲಿಲ್ಲವೆ? ಶೂದ್ರನೆಂಬ ಕಾರಣಕ್ಕೆ ಶ್ರೀರಾಮ ಶಂಭೂಕನನ್ನು ಕೊಲ್ಲಲಿಲ್ಲವೇ? ಗರ್ಭಿಣಿ ಹೆಂಡತಿಯನ್ನು ಕಾಡಿಗೆ ಕಳಿಸುವ ಮೂಲಕ ಅದೇ ರಾಮ ಜೀವವಿರೋಧಿ ನೀತಿ ಅನುಸರಿಸಲಿಲ್ಲವೇ? ಎಂದು ಬುದ್ಧಿಜೀವಿಗಳ ವಾದಬಾಣಗಳು ಮೇಲಿಂದ ಮೇಲೆ ಎಸೆಯಲ್ಪಡುತ್ತವೆ. ಗಮನಿಸಿ, ಇಲ್ಲೆಲ್ಲ ಬುದ್ಧಿಜೀವಿಗಳು ರಾಮಾಯಣ, ಮಹಾಭಾರತಗಳನ್ನು  ಕಾವ್ಯಗಳಲ್ಲ; ನಿಜಜೀವನದಲ್ಲಿ ನಡೆದ ಸತ್ಯಘಟನೆಗಳ ಸಂಕಲನಗಳು ಎಂದೇ ಭಾವಿಸುತ್ತಾರೆ. ಅವರಿಗೆ ರಾಮ, ಕೃಷ್ಣ, ಕರ್ಣ, ಸೀತೆಯರೆಲ್ಲ ಈ ಭೂಮಂಡಲದ ಮೇಲೆ ನಡೆದಾಡಿದ, ರಕ್ತಮಾಂಸಭರಿತ ಜೀವಂತ ವ್ಯಕ್ತಿಗಳೇ ಆಗುತ್ತಾರೆ.

ಅವೆಲ್ಲ ಸತ್ಯ ಘಟನೆಗಳೇ ಆದರೆ ಅವನ್ನು ನಾವು ನಮ್ಮ ಮಕ್ಕಳಿಗೆ ಓದಿಸಬೇಕು. ರಾಮಾಯಣ, ಮಹಾಭಾರತಗಳನ್ನು ಶಾಲೆಗಳಲ್ಲಿ ಪಠ್ಯವಾಗಿ ಓದಿಸಬೇಕು ಎನ್ನಿ. ಕೂಡಲೇ ಇದೇ ಬುದ್ಧಿಜೀವಿಗಳು ರಣಚಂಡಿ ರೂಪವನ್ನು ತಾಳುತ್ತಾರೆ. ರಾಮ ಸುಳ್ಳು, ರಾಮಸೇತು ಸುಳ್ಳು, ಕೃಷ್ಣ ಸುಳ್ಳು, ಕುರುಕ್ಷೇತ್ರ ಸುಳ್ಳು  ಭಾರತೀಯವಾದ್ದೆಲ್ಲವೂ ಸುಳ್ಳಿನ ಸೌಧ ಎಂದುಬಿಡುತ್ತಾರೆ. ಕೃಷ್ಣ? ಅವನೆಲ್ಲಿದ್ದ! ಅವನು ಈ ಭೂಮಿಯಲ್ಲಿ ನಡೆದಾಡಿದ್ದು ಗೌತಮ ಬುದ್ಧ ಕಾಲವಾದ ನಂತರ! ಭಗವದ್ಗೀತೆ? ಛೆ ಛೆ ಅದೆಲ್ಲಿತ್ತು! ಅದನ್ನು ಬರೆದದ್ದು ಗೌತಮ ಬುದ್ಧನ ಕಾಲವಾದ ಮೇಲೆ. ಕ್ರಿಸ್ತಪೂರ್ವ ಮೂರನೇ ಶತಮಾನದ ಈಚೆಗೆ! ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಕ್ರಿಸ್ತಶಕ 1-2 ಶತಮಾನದಲ್ಲಿ! ಇದು ನಮ್ಮ ವಿಚಾರವಾದಿ ಎಡಪಂಥೀಯ ಇತಿಹಾಸಕಾರರ ಸ್ಪಷ್ಟಾಭಿಪ್ರಾಯ. ಸರಿ ಹಾಗಾದರೆ, ಕೃಷ್ಣ ಈ ಭೂಮಿಯಲ್ಲಿ ಅವತರಿಸಿದ್ದು ಬುದ್ಧನ ಕಾಲದ ಬಳಿಕ  ಭಾವಿಸೋಣ. ಹಾಗಾದರೆ ಕೃಷ್ಣ ಬಂದ ಮೇಲೇ ನಾಲ್ಕು ವರ್ಣಗಳು ಬಂದವು ಎಂದಾಯಿತಲ್ಲ? ಯಾಕೆಂದರೆ ತಾನೇ ಚತುರ್ವರ್ಣಗಳನ್ನು ಸೃಷ್ಟಿಸಿದೆ ಎಂದು ಅದೇ ಕೃಷ್ಣ ಗೀತೆಯಲ್ಲಿ ಹೇಳಿಕೊಂಡಿದ್ದಾನೆ. ಆದರೆ ಗೌತಮ ಬುದ್ಧ ಹಿಂದೂ ಧರ್ಮದೊಳಗಿದ್ದ ಚಾತುರ್ವರ್ಣ್ಯವನ್ನು ವಿರೋಧಿಸಿದ; ಸಿಡಿದು ಬೇರಾದ ಎಂದು ಇದೇ ಬುದ್ಧಿಜೀವಿಗಳೇ ಸಿಕ್ಕಸಿಕ್ಕ ವೇದಿಕೆಗಳಲ್ಲೆಲ್ಲ ಅರಚುತ್ತಿರುತ್ತಾರಲ್ಲ? ಅದು ಹೇಗೆ ಸಾಧ್ಯ? ಕೃಷ್ಣ ಹುಟ್ಟಿದ್ದು ಬುದ್ಧನ ನಂತರ ಎಂದಾದರೆ ಬುದ್ಧ ಹಿಂದೂ ಧರ್ಮದೊಳಗಿದ್ದ ಚಾತುರ್ವರ್ಣ್ಯವೆಂಬ ಅನಿಷ್ಟ ಪದ್ಧತಿಯ ವಿರುದ್ಧ ಹೋರಾಡಿದ  ವಾದವೇ ಮುರಿದುಬೀಳುತ್ತದಲ್ಲ? ನೀವು ಹೀಗೇನಾದರೂ ಬುದ್ಧಿಜೀವಿಗಳೆದುರು ಲಾ ಪಾಯಿಂಟ್ ಹಾಕಿದರೆ ಅವರು ಅದಕ್ಕೆ ಮತ್ತೊಂದು ಥಿಯರಿ ಕಟ್ಟುತ್ತಾರೆ. ನಿಘಂಟಿನಲ್ಲಿರುವ ನೂರಾರು ಪದಗಳನ್ನೆಲ್ಲ ಒಟ್ಟಾಗಿ ತಂದು ಶಬ್ದಜಾಲ ಹೆಣೆದು ನಿಮ್ಮನ್ನು ದಿಕ್ಕೆಡಿಸುತ್ತಾರೆ. ಅವರ ಈ ಹೊಸ ಸಿ(ರಾ)ದ್ಧಾಂತ ಮತ್ತೆ ಮತ್ತೊಂದು ಅಂಕಣದ ಹೆಸರಲ್ಲಿ ವಿಶ್ವಾಸಾರ್ಹ ಪತ್ರಿಕೆಗಳಲ್ಲಿ ಪ್ರಕಟವಾಗುತ್ತವೆ!

ಒಟ್ಟಿನಲ್ಲಿ ಇವರಿಗೆ ಬೇಕಾದ ಹಾಗೆ ಸಿದ್ಧಾಂತಗಳು. ಅವಕ್ಕೆ ಗಟ್ಟಿಯಾದ ವೈಚಾರಿಕತೆಯ ತಳಹದಿ ಇರಲೇಬೇಕೆಂಬ ನಿಯಮವೇನಿಲ್ಲ. ಆಕಾರ್ ಪಟೇಲನ ವಾದಕ್ಕೆ ಹಿಂದಿರುಗುವುದಾದರೆ ಆತನ  ನಮ್ಮ ಮನೆಗೆ ನೀರು ಕೇಳಿಕೊಂಡು ಬರುವ ಅಪರಿಚಿತರೂ ಬಾಂಗ್ಲಾ ದೇಶದಿಂದ ಅಕ್ರಮವಾಗಿ ನುಸುಳಿಬಂದು ನಮ್ಮ ದೇಶ ಸೇರಿಕೊಳ್ಳುವವರೂ ಒಂದೇ. ಆ ಅಕ್ರಮ ನುಸುಳುಕೋರರನ್ನು ಕೂಡ ನಾವು ನೀರುಬೆಲ್ಲ ಕೊಟ್ಟು ಉಪಚರಿಸಬೇಕು. ಬಂದಿರಾ? ಹದುಳವಿದ್ದಿರೇ? ಎಂದು ಉಪಚರಿಸಿ ಗಾಳಿಬೀಸಿ ಕಾಲೊತ್ತಿ ಅವರನ್ನು ನಮ್ಮ ದೇಶದಲ್ಲಿ ಬಿಟ್ಟುಕೊಳ್ಳಬೇಕು. ಕಾಶ್ಮೀರದಲ್ಲಿ ಭಯೋತ್ಪಾದಕರು ಬಂದರೇ? ಬರಲಿ! ರೋಹಿಂಗ್ಯಾ ನಿರಾಶ್ರಿತರು ಈ ದೇಶದಲ್ಲಿ ತುಂಬಿಕೊಂಡರೇ? ತುಂಬಿಕೊಳ್ಳಲಿ! ಬಾಂಗ್ಲಾ ಅಕ್ರಮ ವಲಸಿಗರು ಇಲ್ಲಿ ಡೇರೆ ಕಟ್ಟಿದರೇ? ಕಟ್ಟಲಿ!  ನಮ್ಮ ದೇಶಕ್ಕೆ ಗಡಿಬೇಲಿಗಳಿಲ್ಲ ನೋಡಿ! ವಿಶ್ವೇ ನಮ್ಮ ಕುಟುಂಬ ಎಂದು ನಮ್ಮ ಸಾಹಿತ್ಯವೇ ಸಾರಿದೆ. ಹಾಗಾಗಿ ಬರುವವರೆಲ್ಲಾ ಬರಲಿ, ಇಲ್ಲಿ ಮನೆಮಠ ಕಟ್ಟಿಕೊಂಡು ಆರಾಮಾಗಿರಲಿ. ಇಲ್ಲಿ ಅವರು ನೂರೆಂಟು ಸಮಸ್ಯೆಗಳನ್ನು ಸೃಷ್ಟಿಸಿದರೂ ಪರವಾಯಿಲ್ಲ. ಭಾರತೀಯರಿಗೇ ಉಸಿರುಗಟ್ಟುವ ವಾತಾವರಣ ಸೃಷ್ಟಿಯಾದರೂ ಪರವಾಯಿಲ್ಲ. ಇದು ಬುದ್ಧಿಜೀವಿಗಳ ಚಿಂತನೆ. ಇವರ ಪ್ರಕಾರ ಅತ್ಯಾಚಾರಿಗಳು ಕೂಡ ಮನುಷ್ಯರೇ. ಅವರಿಗೂ ಒಂದು ಹೃದಯ ಇಲ್ಲವೆ? ಅವರಿಗೆ ಕಾಮನೆ-ಬಯಕೆ ಇರಬಾರದೆ? ಅವರು ಹೆಣ್ಣುಗಳ ಮೇಲೆ ಕೈಯಿಕ್ಕಿದರೂ ಏನು  ಹಿಂದೂ ಹುಡುಗಿಯೊಬ್ಬಳನ್ನು ಭಯೋತ್ಪಾದಕರು ಅತ್ಯಾಚಾರ ಮಾಡಿ ಎಸೆದರೆ ಬುದ್ಧಿಜೀವಿಗಳು ಅದಕ್ಕೂ ಸಮರ್ಥನೆಯನ್ನು ಉಪನಿಷತ್ತುಗಳಿಂದ ಹುಡುಕಿ ತೆಗೆಯಬಲ್ಲರು!

ಭಗವದ್ಗೀತೆಯಲ್ಲಿ ಕೃಷ್ಣ ಹೇಳುವ ಮೊದಲ ಮಾತು ಏನು ಗೊತ್ತೆ? ಕ್ಲೈಬ್ಯಂ ಮಾ ಸ್ಮ ಗಮಃ ಪಾರ್ಥ ನೈತತ್ತ್ವಯ್ಯುಪಪದ್ಯತೇ  ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ ॥ ಅದರರ್ಥ – ಪಾರ್ಥ! ಷಂಡನಾಗಬೇಡ. ನಿನಗಿದು ಉಚಿತವಲ್ಲ. ಹೃದಯದಲ್ಲಿ ಮಡುಗಟ್ಟಿರುವ ತುಚ್ಛವಾದ ದೌರ್ಬಲ್ಯವನ್ನು ತ್ಯಜಿಸಿ ಯುದ್ಧಕ್ಕಾಗಿ ಎದ್ದು ನಿಲ್ಲು. ನಾವು ಯುದ್ಧ ಮಾಡಬೇಕೆ ಅಥವಾ  ಕೊಟ್ಟು ಉಪಚರಿಸಬೇಕೆ ಎಂಬುದು ಆಚೆಕಡೆಗಿರುವವನು ನಮ್ಮನ್ನು ಮುಗಿಸಲೆಂದು ಬಂದವನೋ ನಮ್ಮನ್ನು ಉದ್ಧರಿಸಲು ಬಂದವನೋ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಶತ್ರುಗಳನ್ನು ಉಪಚರಿಸಬೇಕು ಎಂದು ನಮ್ಮ ಪ್ರಾಚೀನ ಸಾಹಿತ್ಯದಲ್ಲಿ ಎಲ್ಲೂ ಹೇಳಿಲ್ಲ. ದುಷ್ಟಸ್ಯ ದಂಡಃ ಸುಜನಸ್ಯ ಪೂಜಾ – ಇದು ನಮಗೆ ಶಾಸ್ತ್ರಗಳು ಹೇಳಿಕೊಡುವ ಬುದ್ಧಿವಾದ.

ಈ ದೇಶದ ರಾಷ್ಟ್ರಪತಿಗಳಾಗಿದ್ದ ಡಾ. ಅಬ್ದುಲ್ ಕಲಾಂ, ಶಕ್ತಿವಂತ ಮಾತ್ರವೇ ಶಕ್ತಿವಂತನನ್ನು ಗೌರವಿಸಬಲ್ಲ ಎಂಬ ಮಾತನ್ನು ಸದಾ ಹೇಳುತ್ತಿದ್ದರು. ಭಾರತ ಶಕ್ತಿಯುತವಾಗಬೇಕು; ಶಸ್ತ್ರಾಸ್ತ್ರಗಳ ಸಿದ್ಧಿಯಲ್ಲಿ  ಜಗತ್ತಿನ ಉಳಿದ ದೈತ್ಯರಿಗೆ ಸಮಬಲನಾಗಿ ಹೆಗಲಿಗೆ ಹೆಗಲುಜ್ಜುವಂತೆ ನಿಂತರೆ ಮಾತ್ರ ಭಾರತವನ್ನು ಅವೂ ಗೌರವದಿಂದ ಕಾಣುತ್ತವೆ. ಇಲ್ಲವಾದರೆ ಕಚ್ಚಿದ ಇರುವೆಯನ್ನು ಕಾಲು ಹೊಸಕಿಹಾಕುವಂತೆ ಅವು ನಮ್ಮನ್ನು ಮುಕ್ಕಿಬಿಟ್ಟಾವು ಎಂಬುದು ಕಲಾಂ ಮನದಿಂಗಿತವಾಗಿತ್ತು. ಅವರು ಹೇಳುತ್ತಿದ್ದದ್ದು ಮನುಸ್ಮತಿಯ ಮಾತನ್ನು ಎಂದರೆ ನಂಬುತ್ತೀರಾ? ‘ಸರ್ವೋ ದಂಡಜಿತೋ ಲೋಕೋ ದುರ್ಲಭೋ ಹಿ ಶುಚಿರ್ನರಃ  ದಂಡಸ್ಯ ಹಿ ಭಯಾತ್ಸರ್ವಂ ಜಗದ್ಭೋಗಾಯ ಕಲ್ಪತೇ’ ಎಂಬುದು ಮನುಸ್ಮತಿಯಲ್ಲಿ ಬರುವ ಮಾತು. ಅದರರ್ಥ – ಪ್ರಪಂಚ ತಲೆಬಾಗುವುದು  ಮಾತ್ರ. ಯಾಕೆಂದರೆ ನ್ಯಾಯವಂತರಾಗಿ ಬಾಳುವವರ ಸಂಖ್ಯೆ ಚಿಕ್ಕದು. ಅಕ್ರಮ, ಮೋಸ, ದಗಾ, ದರೋಡೆ ಮಾಡುವವರ ಸಂಖ್ಯೆಯೇ ದೊಡ್ಡದು. ಅವರನ್ನೆಲ್ಲ ಹದ್ದುಬಸ್ತಿನಲ್ಲಿಡಬೇಕಾದರೆ ದಂಡಪ್ರಯೋಗ ಅನಿವಾರ್ಯ. ಮಾತ್ರವಲ್ಲ, ಹಾಗೆ ಶಿಕ್ಷೆ ಕೊಡುವ ವ್ಯವಸ್ಥೆಯೊಂದಿದೆ ಎಂಬ ಕಾರಣದಿಂದಲೇ ಜಗತ್ತು ಅಮಾಯಕರಿಗೂ ವಾಸಯೋಗ್ಯವೆನಿಸಿದೆ. ಇಲ್ಲವಾದರೆ ಅವರನ್ನು ದುಷ್ಟಕೂಟಗಳು ಮುಕ್ಕಿಬಿಡುತ್ತಿರಲಿಲ್ಲವೆ? ಈ ಮಾತುಗಳನ್ನು ಹೇಳಿದ ಮನು ಮತ್ತೂ ಮುಂದುವರಿದು ಹೇಳುತ್ತಾನೆ: ರಾಜನಾದವನು ರಾಜ್ಯದೊಳಗೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬೇಕೋ ಅವೆಲ್ಲವನ್ನೂ ಯಾವ ಸಂಕೋಚವಿಲ್ಲದೆ  ಅವನೇನಾದರೂ ದಂಡವನ್ನು – ಅರ್ಥಾತ್ ಕಾನೂನನ್ನು – ಸರಿಯಾಗಿ ಬಳಸದೇಹೋದರೆ ಇಡೀ ದೇಶದಲ್ಲಿ ನ್ಯಾಯ ನೀತಿ ನೆಮ್ಮದಿಗಳೆಲ್ಲವೂ ಹಾಳಾಗಿ ಸಂಪತ್ತು ಕಳ್ಳಕಾಕರ ಪಾಲಾಗಿ ಕೊನೆಗೆ ರಾಜ್ಯವೂ ನಶಿಸುತ್ತದೆ; ರಾಜನೂ ತನ್ನ ಪರಿವಾರಸಮೇತ ಅಳಿದುಹೋಗುತ್ತಾನೆ.

ಸಹಾಯ ಮಾಡಬೇಕು ಎಂದು ನಮ್ಮ ಧರ್ಮಗ್ರಂಥಗಳು ಹೇಗೆ ಹೇಳುತ್ತವೋ ಹಾಗೆಯೇ ಕೃತಘ್ನರನ್ನು ನಿರ್ವೋಹದಿಂದ ಪರಿಹರಿಸಬೇಕು ಎಂಬುದನ್ನೂ ಉಪದೇಶಿಸುತ್ತವೆ. ರಾಮಾಯಣದಲ್ಲಿ ‘ಕೃತಂ ನ ಪ್ರತಿಕುರ್ಯಾದ್ಯಃ ಪುರುಷಾಣಾಂ ಸ ದೂಷಕಃ’ (ಕೃತಘ್ನನಾದವನು ಅತ್ಯಂತ ನೀಚ ವ್ಯಕ್ತಿ) ಎಂಬ  ಬರುತ್ತದೆ. ತನ್ನ ರಾಜ್ಯದಲ್ಲಿ ಅನುಜರಿಗೆ ಪಾಲು ಕೊಡದೆ ಮೆರೆದ ದುರ್ಯೋಧನನನ್ನು ಪಾಂಡವರು ಮುಗಿಸದೆ ಬಿಡಲಿಲ್ಲ. ಅನ್ನ ಹಾಕಲು ಬಂದ ಸೀತೆಯನ್ನೇ ಅಪಹರಿಸಿದ ರಾವಣನಿಗೆ ಕೊನೆಗೂ ತಕ್ಕಶಾಸ್ತಿಯಾಗದೇ ಹೋಗಲಿಲ್ಲ. ಕೃತಘ್ನರನ್ನು ಹೇಗೆ ನೋಡಿಕೊಳ್ಳಬೇಕೆಂಬ ವಿಚಾರದಲ್ಲಿ ನಮ್ಮ ಶಾಸ್ತ್ರಗ್ರಂಥಗಳಾಗಲೀ ಕಾವ್ಯಗಳಾಗಲೀ ಎಲ್ಲೂ ಸಂಶಯಾತ್ಮಕವಾಗಿ ಮಾತಾಡುವುದೇ ಇಲ್ಲ. ಸ್ವತಂತ್ರ ದೇಶವೆಂಬ ಹೊಚ್ಚಹೊಸ ಮನೆ ಕಟ್ಟಿ ಕೊಟ್ಟ ಮೇಲೂ ನಮ್ಮ ಮನೆಯಂಗಳಕ್ಕೇ ಬಿಲ ತೋಡಿಕೊಂಡು ಬರುತ್ತಿರುವ ಬಾಂಗ್ಲಾ ದೇಶೀಯರನ್ನು ಹೇಗೆ ನೋಡಿಕೊಳ್ಳಬೇಕೆಂದು ನಮಗೆ ಬುದ್ಧಿಜೀವಿಗಳು  ಅಥವಾ ನಾವು ನಮ್ಮ ಪ್ರಾಚೀನ ಶಾಸ್ತ್ರಗಳೂ ಕಾವ್ಯಗಳೂ ಹಾಕಿಕೊಟ್ಟ ಮಾರ್ಗವನ್ನು ಮಾನ್ಯ ಮಾಡಬೇಕೆ?

ಯಾವುದು ದೇಶಕ್ಕೆ ಹಿತವೋ ಅದು ನಮ್ಮ ಬುದ್ಧಿಜೀವಿಗಳಿಗೆ ಮಾರಕ. ಯಾವುವೆಲ್ಲ ಈ ದೇಶವನ್ನು ಒಡೆದು ಲಗಾಡಿ ತೆಗೆಯುತ್ತವೋ ಅಂಥವೆಲ್ಲವೂ ಬುದ್ಧಿಜೀವಿಗಳಿಗೆ ಪರಮಪ್ರಿಯ, ಮಾನ್ಯ! ಇದನ್ನು ಈ ದೇಶದ ದುರಂತ ಎನ್ನಬೇಕೋ ಜಗತ್ತಿನ ದುರಂತ ಎನ್ನಬೇಕೋ ತಿಳಿಯುತ್ತಿಲ್ಲ. ಇಡೀ ಪ್ರಪಂಚವೇ ಇಂದು ನುಸುಳುಕೋರರಿಂದ ಕಂಗೆಟ್ಟಿದೆ. ಜರ್ಮನಿ, ಫ್ರಾನ್‌ಸ್, ಇಂಗ್ಲೆಂಡ್‌ಗಳಲ್ಲಿ ಇಂದು ನಿರಾಶ್ರಿತರೇ ದೇಶದ ಸಮಸ್ತ ಅಧಿಕಾರವನ್ನೂ  ತೆಗೆದುಕೊಳ್ಳುವ ಮಟ್ಟಕ್ಕೆ ಬಂದಿದ್ದಾರೆ. ಇಂಗ್ಲೆಂಡಿನ ಕೆಲವು ಭಾಗಗಳಲ್ಲಿ ಅಲ್ಲಿನ ಪೊಲೀಸರಿಗೇ ಪ್ರವೇಶವಿಲ್ಲ. ಯಾಕೆಂದರೆ ಆ ಭಾಗಗಳಲ್ಲಿ ಷರಿಯತ್ ಕಾನೂನಷ್ಟೇ ನಡೆಯುವುದು! ನಾವು ನಮಗೆ ಬೇಕಾದಂತೆ ಬದುಕುತ್ತೇವೆ, ಕೇಳುವುದಕ್ಕೆ ನೀವ್ಯಾರು ಎಂದು ಆ ದೇಶಗಳ ಆಶ್ರಯ ಕೇಳಿಕೊಂಡು ಬಂದವರೇ ಇಂದು ದನಿಯೆತ್ತರಿಸಿ ಕೇಳುತ್ತಿದ್ದಾರೆ. ನಾವು ನಿರಾಶ್ರಿತರು, ನಮಗೆ ವಿಶೇಷ ಪ್ಯಾಕೇಜ್ ಪ್ರಕಟಿಸಬೇಕು, ನಮ್ಮನ್ನು ರಾಜಮಕ್ಕಳಂತೆ ನೋಡಿಕೊಳ್ಳಬೇಕು ಎಂಬ ಅವರ ಬೇಡಿಕೆ ಈಗಾಗಲೇ ಸ್ಥಳೀಯರಿಗೆ ಉಗುಳಲಾಗದ ಬಿಸಿತುಪ್ಪದಂತೆ ಕಾಡುತ್ತಿದೆ. ಇಟೆಲಿಯಲ್ಲಿ ಬಾಂಗ್ಲಾದೇಶಿಯರು  ಅಲ್ಲಿನ ಸ್ಥಳೀಯರಿಗೆ ಸಿಗಬೇಕಿದ್ದ ಉದ್ಯೋಗಗಳೆಲ್ಲವನ್ನೂ ಕಬಳಿಸುತ್ತಿದ್ದಾರೆ. ದೇಶದ ನಾಗರಿಕರು ಕಟ್ಟುವ ತೆರಿಗೆ ದುಡ್ಡೆಲ್ಲ ಇಂಥ ನುಸುಳುಕೋರರನ್ನು, ನಿರಾಶ್ರಿತರ ಸೋಗಿನಲ್ಲಿ ಟೆಂಟು ಕಟ್ಟಿ ಬುಡ ಭದ್ರ ಮಾಡಿಕೊಳ್ಳುವವರನ್ನು ಸುಖವಾಗಿ ಸಾಕುವುದಕ್ಕೆ ಖರ್ಚಾಗುತ್ತಿದೆ. ಹಾಗಾಗಿ ಈ ದೇಶಗಳಲ್ಲಿ ನಿರಾಶ್ರಿತರ ಮೇಲೆ ನಾಗರಿಕರ ಅಸಹನೆ ಹೆಚ್ಚುತ್ತಿದೆ. ಆದರೆ ಅದಕ್ಕೆ ವ್ಯತಿರಿಕ್ತವೆಂಬಂತೆ ಆ ಅಷ್ಟೂ ದೇಶಗಳಲ್ಲಿ ನಿರಾಶ್ರಿತರ ಪರವಾಗಿ ಹೋರಾಟ ಮಾಡುವ, ದೇಶದ ಭದ್ರತೆಯ ವಿಷಯದಲ್ಲೇ ಆಟವಾಡುವ ಒಂದು ಹೊಸ ತಳಿಯೂ ಪ್ರವರ್ಧಮಾನಕ್ಕೆ ಬರುತ್ತಿದೆ.  ಬುದ್ಧಿಜೀವಿ ಚಿಂತಕರೆಂದು ಹೆಸರು. ಫ್ರಾನ್‌ಸ್, ಜರ್ಮನಿ, ಆಸ್ಟ್ರಿಯಾ, ಸ್ಪೇನ್, ಇಟೆಲಿ, ಗ್ರೀಸ್ ಮೊದಲಾದ ದೇಶಗಳಲ್ಲಿ ಇಂದು ನಿರಾಶ್ರಿತರಿಗಿಂತ ದೊಡ್ಡ ತಲೆನೋವಾಗಿರುವುದು ಬುದ್ಧಿಜೀವಿಗಳ ವರ್ಗ. ದೇಶದ ಅಸ್ಮಿತೆಗೆ ಪೆಟ್ಟು ಕೊಟ್ಟಾದರೂ ನುಸುಳುಕೋರ ಭಯೋತ್ಪಾದಕರನ್ನು ಬಿಟ್ಟಿ ಅನ್ನ ಕೊಟ್ಟು ಸಾಕಬೇಕು ಎಂದು ಈ ಬುದ್ಧಿಜೀವಿಗಳು ಬೀದಿ ಬೀದಿಗಳಲ್ಲಿ ಘೋಷಣೆ ಮೊಳಗಿಸುತ್ತಿದ್ದಾರೆ. ಅವರ ಆ ದೊಂಬರಾಟ ನೋಡಿದರೆ ನಮ್ಮ ದೇಶದ ಬುದ್ಧಿಜೀವಿಗಳ ಮೇಲೆ ಹೆಚ್ಚು ಕೋಪ ಬರಲಿಕ್ಕಿಲ್ಲ ಬಿಡಿ!

ತಿಂಗಳ ಹಿಂದೆ, ರಾಹುಲ್  ಪ್ರಧಾನಿ ಮೋದಿಯನ್ನು ಅಪ್ಪಿಕೊಂಡಾಗ ಅದಕ್ಕೆ ಪುಟಗಟ್ಟಲೇ ವ್ಯಾಖ್ಯಾನ ಮಾಡಿ ಕಾಂಗ್ರೆಸ್ ಎಂಬ ಗಂಜಿಕೇಂದ್ರಕ್ಕೆ ಬಹುಪರಾಕ್ ಹಾಕಿದ ಗಂಜಿಗಿರಾಕಿಗಳನ್ನು ಕಂಡಿದ್ದೆವು. ಈಗ ಬಾಂಗ್ಲಾ ದೇಶದ ಅಕ್ರಮ ವಲಸಿಗರ ಪರವಾಗಿ ವಾದಿಸುತ್ತ ಅದಕ್ಕಾಗಿ ಉಪನಿಷತ್ತುಗಳನ್ನೂ ರಾಮಾಯಣ ಮಹಾಭಾರತಗಳನ್ನೂ ಎಳೆದೆಳೆದು ಜಗ್ಗಾಡುತ್ತಿರುವ ಸಾಕ್ಷಿಪ್ರಜ್ಞೆಗಳನ್ನು ನೋಡುತ್ತಿದ್ದೇವೆ. ಹಾಗಾದರೆ ಮುಂದೇನು? ಬುದ್ಧಿಜೀವಿಗಳು ಬೆಂಬಲಿಸುತ್ತಿರುವ ಮಮತಾ ಬ್ಯಾನರ್ಜಿ, ಮುಲಾಯಂ ಸಿಂಗ್ ಯಾದವ್, ರಾಹುಲ್ ಘಂಡಿ, ಓವೈಸಿ ಮುಂತಾದ ಪ್ರಭೃತಿಗಳ ಕೈಗೆ ಈ ದೇಶದ ಚುಕ್ಕಾಣಿ ಕೊಟ್ಟರೆ ಹೇಗಿರಬಹುದು?  ತಮ್ಮ ಹೆತ್ತ ತಾಯಿಯರನ್ನು ಕೂಡ ತಲೆಹಿಡಿಯಬಲ್ಲ ಬುದ್ಧಿಜೀವಿಗಳು ಈ ದೇಶವನ್ನು ಮೂರುಮುಕ್ಕಾಲು ಕಾಸಿಗೆ ಭಯೋತ್ಪಾದಕರಿಗೆ ಮಾರಿಕೊಳ್ಳುವುದರಲ್ಲಿ ಯಾವ ಸಂಶಯವೂ ಇಲ್ಲ. ಛೆ! ತಟ್ಟೆಯಲ್ಲಿ ಗಂಜಿ ಗಿಟ್ಟಿಸಲು ಇಷ್ಟೊಂದು ಕೆಳಮಟ್ಟಕ್ಕೂ ಇಳಿಯಬೇಕೆ?

Tags

ರೋಹಿತ್ ಚಕ್ರತೀರ್ಥ

ಶಿಕ್ಷಣ ಕ್ಷೇತ್ರದಲ್ಲಿ ಕನ್ಸ್‌ಲ್ಟೆಂಟ್‌ ಆಗಿರುವ ಅಂಕಣಕಾರರು, ಕನ್ನಡದ ಕೆಲವೇ ಕೆಲವು ವಿಜ್ಞಾನ ಲೇಖಕರಲ್ಲಿ ಒಬ್ಬರು. ಇದುವರಗೆ ಪ್ರಕಟವಾಗಿರುವ ಗಣಿತ, ವಿಜ್ಞಾನ, ರಾಜಕೀಯ ವಿಷಯದ ಪುಸ್ತಕಗಳು ಎಲ್ಲ ವರ್ಗದ ಓದುಗರಿಗೂ ಉಪಯುಕ್ತವಾದುದು. ಇವರ ಅಂಕಣ ಚಕ್ರವ್ಯೂಹವನ್ನು ಪ್ರತೀ ಮಂಗಳವಾರ ಓದಬಹುದು.

Related Articles

Leave a Reply

Your email address will not be published. Required fields are marked *

Language
Close