About Us Advertise with us Be a Reporter E-Paper

ವಿವಾಹ್

ಹೆಂಗಳೆಯರ ಹೃದಯ ಕದಿಯೋ ಚೋರ ಯಾರು?

ಸಾಗರ್

ಜೀವನದಲ್ಲಿ ಸೂಕ್ತ  ಪಡೆಯುವುದು ಕಷ್ಟದ ಸಂಗತಿ. ಆದರೆ ಅಂಥವರ ಮಧ್ಯೆಯೂ ನಮಗಿಷ್ಟವಾಗುವವರ ಕೈಹಿಡಿದು, ನಮ್ಮ ಇಷ್ಟಾನಿಷ್ಟಗಳಿಗೆ ಒಪ್ಪಿಗೆ ಸೂಚಿಸುವಂಥ ಜತೆಗಾರರು ಸಿಕ್ಕಿದರೆ ಹೇಗಿರಬೇಡ? ಅದು ಹೇಗೆ ಅಂತ ತಲೆ ಕೆಡಿಸಿಕೊಂಡಿದ್ದರೆ ಅದಕ್ಕೆ ವಿಜ್ಞಾನ ಉತ್ತರ ನೀಡುತ್ತಿದೆ. ಅದರಲ್ಲೂ ಗಂಡಸರಿಗೆ ಇದರಿಂದ ಸಾಕಷ್ಟು ಉಪಯೋಗವಾಗುವ ಸಾಧ್ಯತೆಗಳಿವೆ ಎನ್ನುತ್ತಿದ್ದಾರೆ ಸಂಶೋಧಕರು. ತಮಗಿಷ್ಟವಾದ ಹೆಣ್ಣನ್ನು ಆಕರ್ಷಿಸಲು ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ಖಂಡಿತವಾಗಿಯೂ ಉಪಯೋಗವಿದೆ ಎನ್ನುತ್ತಾರೆ.

ಕೆಂಪು ವರ್ಣದಲ್ಲಿದೆ ಸೆಳೆಯುವ ಗುಣ

ಕೆಂಪು ಬಣ್ಣದ ಬಟ್ಟೆ ತೊಟ್ಟವರು  ಎದ್ದು ಕಾಣುತ್ತಾರೆ. ಇದರ ಜತೆಯಲ್ಲಿ ಮಹಿಳೆಯರ ಮನಸ್ಸಿನಲ್ಲೂ ಅಚ್ಚಳಿಯದೆ ಉಳಿಯುತ್ತದೆ ಎನ್ನುತ್ತಾರೆ ಸಂಶೋಧಕರು. ಕೆಂಪಿನಂಥ ಗಾಢ ಬಣ್ಣದ ಉಡುಗೆ ತೊಡುವುದನ್ನು ಮಹಿಳೆ ಯರೂ ಇಷ್ಟಪಡುತ್ತಾರೆ. ಈ ಕುರಿತಂತೆ ಚೀನಾ, ಇಂಗ್ಲೆಂಡ್, ಜರ್ಮನಿ, ಅಮೆರಿಕಾ ಮೊದಲಾದ ದೇಶಗಳಲ್ಲಿ ಸಮೀಕ್ಷೆ ಕೈಗೊಂಡಿದ್ದು, ಅದರ ಮೂಲಕ ಬೇರೆ ಬಣ್ಣದ ಉಡುಗೆ ಹಾಕಿಕೊಂಡಿದ್ದಕ್ಕಿಂತ ಕೆಂಪು ಬಣ್ಣದ ಟೀ-ಷರ್ಟ್ ಹಾಕಿ ಕೊಂಡ ಪುರುಷರು ಮಹಿಳೆಯರನ್ನು ಆಕರ್ಷಿಸಿದ್ದರು ಎಂದು ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಡೇಟಿಂಗ್ ಎಕ್‌ಸ್ಪರ್ಟ್‌ಗಳೂ ತಮ್ಮ  ವ್ಯಕ್ತಪಡಿಸಿದ್ದು, ಕೆಂಪು ವರ್ಣವು ಹೆಣ್ಣು ಮಕ್ಕಳನ್ನು ಸೆಳೆಯುತ್ತದೆ ಎಂದು ತಿಳಿಸಿದ್ದಾರೆ.

ಪ್ರತಿಷ್ಠೆ ಕಾಪಾಡಿಕೊಳ್ಳುವುದು

ಹೆಣ್ಣು ಮಕ್ಕಳಿಗೆ ಕನಸು, ಆಸೆ ಜಾಸ್ತಿ. ಹೀಗಾಗಿ ಅವರು ತಮಗಿಂತ ಹೆಚ್ಚು ಆಸ್ತಿ ಹೊಂದಿರುವವರನ್ನು ಮದುವೆ ಯಾಗಿ ಜೀವನ ನಡೆಸಲು ಇಚ್ಛಿಸುತ್ತಾರೆಂಬುದು ಸರ್ವ ವಿಧಿತ. ಅದರರ್ಥ ಶೋಕಿ ಮಾಡಿಕೊಂಡು ಓಡಾಡುವವರು ಹೆಂಗಸರ ಆಕರ್ಷಣೆಯ ಕೇಂದ್ರಬಿಂದುಗಳು ಎಂಬುದು ತಪ್ಪಲ್ಲ. ನೀಟ್ ಆಗಿ ಬಟ್ಟೆ ತೊಟ್ಟು, ಅತ್ಯುತ್ತಮವಾದ ಕಾರ್ ಅಥವಾ ಬೈಕ್‌ನಲ್ಲಿ ಓಡಾಡುವವರು, ದುಬಾರಿ ಅಪಾರ್ಟ್  ಮೆಂಟ್‌ಗಳಲ್ಲಿ  ಪುರುಷರನ್ನು ಹೆಚ್ಚು ಮಹಿಳೆ ಯರು ಇಷ್ಟಪಡುತ್ತಾರೆ ಎನ್ನುವುದು ಸಂಶೋಧನೆಗಳಿಂದ ತಿಳಿದುಬಂದಿದೆ.

ಸಾಹಸಪ್ರವೃತ್ತಿಯ ಆಟಗಳು

ಸಾಹಸಿಗಳು ಎಲ್ಲರಿಗೂ ಅಚ್ಚುಮೆಚ್ಚು. ತಮ್ಮ ಪರಿಧಿಯ ಹೊರಗೆ ನಿಂತು, ಸಾಮಾನ್ಯರಿಗಿಂತ ಸ್ವಲ್ಪ ಭಿನ್ನವಾಗಿ ಯೋಚಿಸಿ, ಅಪಾಯಗಳಿಗೆ ಹೆದರದೆ ಮುನ್ನುಗ್ಗುವ ವ್ಯಕ್ತಿತ್ವ ಹೊಂದಿರುವ ಗಂಡಸರನ್ನು ಹೆಂಗಸರು ಇಷ್ಟಪಡುತ್ತಾರೆ. ಮಾನವನ ಪೂರ್ವಜರಲ್ಲಿ ಈ ಗುಣ ಅಧಿಕವಾಗಿತ್ತು ಎಂಬುದನ್ನು ಮರೆಯುವಂತಿಲ್ಲ. ಬೇಟೆಯಾಡುವ ಪ್ರವೃತ್ತಿ ಮಾನವನ ರಕ್ತದಲ್ಲೇ ಇದೆ. ಹೀಗಾಗಿ ರಿಸ್‌ಕ್ ತೆಗೆದುಕೊಂಡು ಮುನ್ನುಗ್ಗುವ ವ್ಯಕ್ತಿತ್ವ ಇರುವ ಗಂಡಸರು ಹೆಣ್ಣು  ಆಕರ್ಷಿಸುವುದು ಸಹಜ. ಅನಾದಿ ಕಾಲದಂತೆ ಈಗ ಬೇಟೆ ಯಾಡದಿದ್ದರೂ, ಅಪಾಯಕಾರಿ ಆಟಗಳಾದ ಮೌಂಟೇನ್ ಬೈಕಿಂಗ್, ಪರ್ವತಾರೋಹಣ, ಸಮುದ್ರದಾಳಕ್ಕೆ ಸ್ಕೂಬಾ ಡೈವ್ ಮಾಡುವುದು, ಬಂಜಿ ಜಂಪಿಂಗ್, ಇತ್ಯಾದಿ ಮಾಡು ವವರೊಂದಿಗೆ ಪ್ರೀತಿಯಲ್ಲಿ ಬೀಳುತ್ತಾರಂತೆ ಎಂಬುದು ಅಲಾಸ್ಕಾ ವಿಶ್ವವಿದ್ಯಾಲಯದ ಸಂಶೋಧಕರ ಅಭಿಪ್ರಾಯ.

ಮಖಕ್ಕೆ ಗಡ್ಡದ ಹೊದಿಕೆ

ಕೆಲವರ ಮುಖಕ್ಕೆ ಗಡ್ಡ ಹೊಂದಿಕೆಯಾಗುತ್ತದೆ. ಮತ್ತೆ ಹಲವರಿಗೆ ಆಗುವುದಿಲ್ಲ. ಆದರೆ ಗಡ್ಡ ಬಿಡುವುದೂ ಕೂಡ ಸಂಗಾತಿಯನ್ನು ಆಕರ್ಷಿಸುವ ಮತ್ತೊಂದು ವಿಧಾನ ಎಂಬುದು ಸಂಶೋಧನೆಗಳಿಂದ ತಿಳಿದುಬಂದಿದೆ.  ಜೇನು ಗೂಡು ಕಟ್ಟಿದಂತೆ ಗಡ್ಡ ಬಿಡುವವರಿದ್ದರೆ ಅಂಥವರನ್ನು ಹೆಣ್ಣುಮಕ್ಕಳು ಇಷ್ಟಪಡುತ್ತಾರಂತೆ! ಅಲ್ಲದೆ ಸಮೀಕ್ಷೆಗಳಲ್ಲಿ ಕ್ಲೀನ್ ಶೇವ್, ಸ್ವಲ್ಪ ಗಡ್ಡ ಬಿಡುವುದು, ಸಿಕ್ಕಾಪಟ್ಟೆ ದಪ್ಪವಾಗಿ ಗಡ್ಡ ಬಿಡುವವರಲ್ಲಿ ಯಾರು ಹೆಚ್ಚು ಆಕರ್ಷಣೀಯವಾಗಿ ಕಾಣಿಸುತ್ತಾರೆ ಎಂದು ನೋಡಿದಾಗ ಹೆಚ್ಚು ಗಡ್ಡ ಬಿಟ್ಟವರು ಮಹಿಳೆಯರಿಗೆ ಅಚ್ಚುಮೆಚ್ಚಾಗಿ ದ್ದರಂತೆ. ಯಾಕೆಂದರೆ ಗಡ್ಡ ಬಿಡುವುದು ಪ್ರಬುದ್ಧತೆ ಮತ್ತು ಪೌರುಷತ್ವವನ್ನು ತೋರಿಸುತ್ತದೆ. ಜತೆಯಲ್ಲಿ ಪುರುಷರ ಪ್ರಾಬಲ್ಯ ಹಾಗೂ ಆಕ್ರಮಣಶೀಲತೆಯನ್ನು ಹೊರಹಾಕು ತ್ತದೆ ಎಂದು ಅವರು ಕಂಡುಕೊಂಡರು.

ಹೆಂಗಸರು ಸದೃಡ ದೇಹದ ಗಂಡಸರನ್ನು ಇಷ್ಟಪಡುತ್ತಾರೆ. ಈ ಕುರಿತು ಈಗಾಗಲೇ ಸಾಕಷ್ಟು ಸಮೀಕ್ಷೆ, ಸಂಶೋಧನೆ ಗಳೂ ನಡೆದಿವೆ. ಅದರಲ್ಲೂ ಹೆಣ್ಣು ಮಕ್ಕಳು ಜಿಮ್‌ಗೆ ಹೋಗುವ, ರನ್ನಿಂಗ್, ವರ್ಕೌಟ್ ಮಾಡುವ ಪುರುಷರನ್ನು ತಮ್ಮ ಬಾಳ ಸಂಗಾತಿ ಮಾಡಿಕೊಳ್ಳಲು ಬಯಸುತ್ತಾರೆ. ಅದರ ಬದಲಾಗಿ ಸೋಮಾರಿಯಂತೆ, ಕೃಷವಾದ ಶರೀರ ಇಟ್ಟುಕೊಂಡವರನ್ನು ಅಷ್ಟಾಗಿ ಗಮನಿಸುವುದಿಲ್ಲ ಎಂದು ತಿಳಿದುಬಂದಿದೆ. ಇದು ಕೇವಲ ಇಂದಿನ ಸಂಶೋಧನೆಗಳಲ್ಲ. ಬದಲಾಗಿ ಪೂರ್ವಿಕರಲ್ಲೂ ಕೂಡ ಮಹಿಳೆಯರು ಸದೃಢ ಕಾಯದ ಅಥವಾ ಹೋರಾಟ  ಸಾಮರ್ಥ್ಯ ಹೊಂದಿರುವ ಗಂಡಸರನ್ನು ಆರಿಸಿಕೊಳ್ಳುತ್ತಿದ್ದರಂತೆ. ಹೀಗಾಗಿ ಜಟ್ಟಿಯಂತೆ ಕಾಣುವ ಗಂಡಸರನ್ನು ಹೆಂಗಸರು ಬಯಸುವುದು ತಪ್ಪಲ್ಲ ಎನ್ನುತ್ತಾರೆ ಸಂಶೋಧಕರು.

ಹಾಸ್ಯ ಗುಣ ಹೊಂದಿರುವವರು

ಯಾವುದೇ ಸಂಬಂಧವೂ ದೀರ್ಘಕಾಲ ಬಾಳಿಕೆ ಬರಬೇಕಾ ದರೆ ಅಲ್ಲಿ ಸ್ನೇಹ ಗಟ್ಟಿಮುಟ್ಟಾಗಿರಬೇಕು. ಅಂದರೆ ಅವರಿ ಬ್ಬರ ನಡುವೆ ಒಳ್ಳೆಯ ಹಾಸ್ಯಮಯ ಮಾತುಕತೆಗಳು ನಡೆ ಯುತ್ತವೆ ಎಂಬುದು ಸತ್ಯ. ನಗು ಸಂಬಂಧವನ್ನು ಜೀವಂತ ವಾಗಿರಿಸುತ್ತದೆ. ಅದರ ಜತೆಯಲ್ಲಿ ಮಹಿಳೆಯರು ನಗುವ ಹಾಗೂ ಪರರನ್ನು ನಗಿಸುವ ಪುರುಷರನ್ನು ತಮ್ಮ  ಇರಬೇಕೆಂದು ಆಶಿಸುತ್ತಾರೆ. ಅಂದರೆ ಸಾಹಸಪ್ರವೃತ್ತಿಯೋ ಅಥವಾ ಮುಖದ ತುಂಬ ಗಡ್ಡವೋ ಇಲ್ಲದಿದ್ದರೂ ನಗಿಸುವ ಮನಸ್ಸು, ಮಂದಸ್ಮಿತ ಮುಖ ಇದ್ದರೆ ಹೆಂಗಳೆಯರ ಹೃದಯ ಕದಿಯೋದು ಸುಲಭವಂತೆ!

ಸಮಾನಮನಸ್ಕರನ್ನು ಆರಿಸಿ

ಹೊರ ನೋಟ ಹೇಗಿದೆ ಎನ್ನುವುದಷ್ಟೇ ಅಂತಿಮವಲ್ಲ. ಅಲ್ಲದೆ ಜೀವನದಲ್ಲಿ ಇದೊಂದೇ ಪ್ರಮುಖ ಅಂಶವೂ ಅಲ್ಲ. ಸಂಬಂಧ ಸುಂಧುರವಾಗಿರಲು ಸಮಾನ ಮನಸ್ಕರು, ಆಕರ್ಷಣೆ, ಅಭಿರುಚಿ ಹೊಂದಾಣಿಕೆಯಾಗುವಂತಿರುವುದು ಪ್ರಮುಖವಾಗುತ್ತದೆ. ಕಲ್ಪನಾ ಲೋಕ ಎಷ್ಟೋ ದೊಡ್ಡದಿ ದ್ದರೂ ವಾಸ್ತವ ಅದಕ್ಕಿಂತಲೂ ಭಿನ್ನವಾಗಿರುತ್ತದೆ. ಹೀಗಾಗಿ ನಿಮಗೆ  ವ್ಯಕ್ತಿತ್ವದಲ್ಲಿ ಒಂದಷ್ಟು ದೋಷ ಗಳಿದ್ದರೂ ಅದನ್ನು ಪಕ್ಕಕ್ಕೆ ಸರಿಸಿ, ಅವರ ಆಸಕ್ತಿ, ಅಭಿರುಚಿ ಯನ್ನು ಪ್ರೋತ್ಸಾಹಿಸಿದರೆ ಸಂಬಂಧ ಹೊಸ ರೂಪ ಪಡೆದು ಕೊಳ್ಳುತ್ತದೆ.

Tags

Related Articles

Leave a Reply

Your email address will not be published. Required fields are marked *

Language
Close