About Us Advertise with us Be a Reporter E-Paper

ಅಂಕಣಗಳು

ಇಸ್ಲಾಮಿಕ್ ಸ್ಟೇಟ್ ಆರಂಭವಾಗಿದ್ದು ಯಾರ ಕಾಲದಲ್ಲಂತೆ?!

ಳೇ ಮೈಸೂರು ಭಾಗದಲ್ಲಿ ಒಂದು ಗಾದೆ ಮಾತಿದೆ. ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಅಂತ. ಮಾತೆಂಬುದು ಅದೆಷ್ಟು ಮುಖ್ಯವೆಂದರೆ, ಒಂದೇಟು ಹೊಡೆದರೆ ಎಲ್ಲ ಮರೆಯಬಹುದು ಹಾಗೂ ಮಾನ, ಮರ್ಯಾದೆ ಉಳಿಸಿಕೊಳ್ಳಬಹುದು. ಆದರೆ ಮೂಳೆಯೇ ಇಲ್ಲದ ನಾಲಗೆ ಆಡಿದ ಮಾತುಗಳಿಗೆ ಸ್ನೇಹಗಳು, ಸಂಬಂಧಗಳು, ದೇಶಿಯ ಸಂಬಂಧಗಳು, ಅಂತಾರಾಷ್ಟ್ರೀಯ ಸಂಬಂಧಗಳೇ ಹಾಳಾಗಿ ಹೋಗಿವೆ. ಮಾತುಗಳಿಂದ ಆಗುವ ಅನಾಹುತವಿದೆಯಲ್ಲ,ಅದನ್ನು ಸರಿಪಡಿಸುವುದು ಮಾತ್ರ ಅಸಾಧ್ಯ.

ನಾನು ಯಾಕೆ ಮಾತಿನ ವಿಷಯವನ್ನು ಇಷ್ಟು ಗಂಭೀರವಾಗಿ ಹೇಳುತ್ತಿದ್ದೇನೆಂದರೆ, ಇತ್ತೀಚೆಗೆ ನಮ್ಮ ರಾಷ್ಟ್ರದ ವಂಶಪಾರಂಪರ‌್ಯ ರಾಜಕಾರಣದ ಈಗಿನ ಕುಡಿಯೆಂದೇ ಪ್ರಸಿದ್ಧಿ ಪಡೆದಿರುವ ರಾಹುಲ್ ಗಾಂಧಿಯವರು ಇತ್ತೀಚೆಗೆ ಜರ್ಮನಿಯಲ್ಲಿ ಮಾಡಿದ ಭಾಷಣವು ಇಡೀ ದೇಶವೇ ತಲೆ ತಗ್ಗಿಸುವಂತೆ ಮಾಡಿತು. ರಾಜಕೀಯ ಲಾಭಕ್ಕಾಗಿ ತನ್ನ ಹೆಸರಿನಲ್ಲಿ ಗಾಂಧಿ ಹೆಸರನ್ನು ಮಾತ್ರಕ್ಕೆ ಏನೋ, ಇಡೀ ದೇಶವನ್ನು ಇವರ ವಂಶಸ್ಥರೇ ಉದ್ಧಾರ ಮಾಡುವ ರೀತಿಯಲ್ಲಿ ಮಾತಾಡಿದ್ದಾರೆ.

ಕಾಂಗ್ರೆಸ್‌ನ ಪ್ರಧಾನಿ ಅಭ್ಯರ್ಥಿ ಸ್ವಯಂ ಘೋಷಿತ ದೇವಮಾನವನಂತೆ, ತಾನೇ ಮುಂದಿನ ಪ್ರಧಾನಿಯೆಂಬಂತೆ ಜರ್ಮನಿಯಲ್ಲಿ ಬಾಯಿಗೆ ಬಂದಂತೆ ಮಾತಾಡಿದ್ದಾರೆ. ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಪ್ರಧಾನಿಯೊಬ್ಬರಿಗೆ ಇರಬೇಕಾದ ಕನಿಷ್ಠ ಗುಣಲಕ್ಷಣಗಳು ರಾಹುಲ್‌ಗಾಂಧಿಯವರಲ್ಲಿ ಇವೆಯೇ? ಮನುಷ್ಯನಿಗೆ ಅದ್ಯಾರು ಸಂಭಾಷಣೆ ಬರೆದುಕೊಡುತ್ತಾರೋ ಗೊತ್ತಿಲ್ಲ. ವಿದೇಶಗಳಲ್ಲಿ ಭಾರತದ ಮಾನಮರ್ಯಾದೆ ಹರಾಜು ಹಾಕುವಂತೆ ಮಾತನಾಡುತ್ತಿದ್ದಾರೆ.

ಒಂದು ಆಡುವ ಮುನ್ನ ಅದರ ಆಳ, ಅರ್ಥ ತಿಳಿದು ಆಡಬೇಕೆಂಬ ಕನಿಷ್ಠ ಜ್ಞಾನವೆಂಬುದು ಇರಬೇಕಲ್ಲವೇ? ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷಗಳೇ ಕಳೆದರೂ, ಇದುವರೆಗೂ ಭಾರತದ ವಿರೋಧ ಪಕ್ಷದ ನಾಯಕರೊಬ್ಬರು ವಿದೇಶಗಳಲ್ಲಿ ರೀತಿಯ ಮಾತುಗಳನ್ನು ಹಿಂದೆಂದೂ ಆಡಿರಲಿಲ್ಲ. ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿಕೊಂಡವರ ಮಾತುಗಳಿಗೆ ಸ್ವಲ್ಪವಾದರೂ ತೂಕವಿರಬೇಕು. ಆದರೆ ರಾಹುಲ್‌ಗಾಂಧಿಯ ಮಾತುಗಳು ಕೇವಲ ಗಾತ್ರದಲ್ಲಿ ಮಾತ್ರ ಕಾಣುತ್ತದೆಯೇ ಹೊರತು ಮಾತಿನಲ್ಲಂತೂ ಎಳ್ಳಷ್ಟು ಪ್ರಬುದ್ಧತೆ ಇಲ್ಲವೆನ್ನುವುದು ಅವರ ತಳಬುಡವಿಲ್ಲದ, ಆಧಾರವಿಲ್ಲದ ಸಾಬೀತಾಗುತ್ತದೆ. ಭಾರತದಲ್ಲಿ ಉದ್ಯೋಗ ಸಿಗದ ಯುವಕರು ಐಸಿಸ್ಎನ್ನುವ ಉಗ್ರಸಂಘಟನೆ ಸೇರುತ್ತಿದ್ದಾರೆ ಎಂದು ಹೇಳುತ್ತಾರಲ್ಲ! ಇವರ ಮಾತುಗಳಿಗೆ ನಿಜವಾದ ರಾಷ್ಟ್ರಭಕ್ತನ ರಕ್ತ ಯಾವ ರೀತಿ ಕುದಿಯುತ್ತಿರಬೇಡ ತುಸು ಯೋಚಿಸಿ. ಮಹಾತ್ಮ ಗಾಂಧಿಯೆಂಬ ಪುಣ್ಯಾತ್ಮನನ್ನು ಇದೇ ದಕ್ಷಿಣ ಆಫ್ರಿಕಾ ಸರಕಾರವು ವರ್ಣಭೇದ ನೀತಿಯ ವಿರುದ್ಧ ಮಾತನಾಡಲು ಕರೆಸಿತ್ತು. ಅಂತಹ ಕಪ್ಪು ಜನಗಳ ನಾಡಿನಲ್ಲಿ ಹೋಗಿ ಭಾಷಣ ಮಾಡಿ, ಅದರ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡು ವಿಶ್ವ ವಿಖ್ಯಾತಿ ಪಡೆದ ಪುಣ್ಯಾತ್ಮನ ಹೆಸರನ್ನು ಹೆಸರಿಗೆ ಅಂಟಿಸಿಕೊಂಡು ರೀತಿಯ ತಲೆಬುಡವಿಲ್ಲದ ಮಾತುಗಳನ್ನಾಡುವುದು ಸರಿಯಲ್ಲ. ಭಾಷಣವನ್ನು ಕೇಳಿದ ಪತ್ರಿಕೆಗಳು ಅದರ ವಿವರಣೆಯನ್ನು ನೀಡುವಾಗ, ‘ಮಿ.ಗಾಂಧಿಎಂತಲೇ ಕರೆಯುತ್ತಾರೆ. ಅಂತಹ ಸಮಯದಲ್ಲಿ ದೇಶಕ್ಕೆ ಅವಮಾನವಾಗುವಂತಹ ರೀತಿಯ ಹೇಳಿಕೆಗಳನ್ನು ನೀಡಿದರೆ, ಮಹಾತ್ಮ ಗಾಂಧಿಗೆ ಅವಮಾನ ಮಾಡಿದ ಹಾಗೆಯೇ ತಾನೆ? ನರೇಂದ್ರ ಮೋದಿಯನ್ನು ಹೇಗಾದರೂ ಮಾಡಿ ಶತಾಯ ಗತಾಯ ಪ್ರಧಾನಿ ಪಟ್ಟದಿಂದ ಕೆಳಗಿಳಿಸಬೇಕೆಂದು ನಿರ್ಧರಿಸಿರುವ ಈತನಿಗೆ ಕೀಳುಮಟ್ಟದ ರಾಜಕೀಯದಿಂದ ಏನೂ ಸಿಗುವುದಿಲ್ಲ. ನಮ್ಮ ದೇಶದ ಮರ್ಯಾದೆ ಹರಾಜಾಗುತ್ತಿದೆಯಷ್ಟೆ.

2006ರಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ಎಂಬ ಸಂಘಟನೆ ಶುರುವಾಗಿದ್ದು 2014 ಹೊತ್ತಿಗೆ ಭಯೋತ್ಪಾದಕ ಸಂಘಟನೆಯು ತನ್ನ ನೆಲೆಯನ್ನು ಸಿರಿಯಾ, ಇರಾಕ್, ಸೌದಿ ಅರೇಬಿಯ, ರಷ್ಯಾ, ಜೋರ್ಡಾನ್, ಲೆಬೆನಾನ್, ಮೊರಾಕೋ, ಪಾಕಿಸ್ತಾನ, ಫ್ರಾನ್‌ಸ್ ದೇಶಗಳೆಲ್ಲಲ್ಲ ಆಳವಾಗಿ ವಿಸ್ತರಿಸಿತು. 2006ರಿಂದ 2014ರಲ್ಲಿ ಈತನು ಅಧ್ಯಕ್ಷನಾಗಿರುವ ಕಾಂಗ್ರೆಸ್ ಸರಕಾರವೇ ತಾನೆ ಕೇಂದ್ರದಲ್ಲಿ ಅಧಿಕಾರದಲ್ಲಿ ಆಡಳಿತ ನಡೆಸುತ್ತಿದ್ದುದು? ಹಾಗಾದರೆ ಮಟ್ಟದ ಐಸಿಸ್ ಸೇರ್ಪಡೆಗೆ ಯಾರು ಕಾರಣ ಹೇಳಿ. ಇಷ್ಟಾದರೂ ಸಾಮಾನ್ಯ ಜ್ಞಾನ ಇಲ್ಲವೇ ತಮಗೆ?

ರಾಹುಲ್ ಗಾಂಧಿ ಹೇಳುವ ಮಾತು ಹೇಗಿದೆಯೆಂದರೆ, ಐಸಿಸ್ ಸಂಸ್ಥಾಪಕ ಅಬುಬಕರ್ ಅಲ್ ಬಗ್ದಾದಿ ಇಲ್ಲೇ ನಮ್ಮ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಸ್ರಾಳು ಗ್ರಾಮದಲ್ಲಿ ಹುಟ್ಟಿ ಬೆಳೆದು ಕೆಲಸ ಸಿಗದೇ ಐಸಿಸ್ ಶುರು ಮಾಡಿದ ರೀತಿಯಲ್ಲಿದೆ. ಅಷ್ಟೇ ಯಾಕೆ, ಭಟ್ಕಳದ ರಕ್ತಸಿಕ್ತ ಅಧ್ಯಾಯದ ರೂವಾರಿ ಯಾಸೀನ್ ಭಟ್ಕಳ್ ಹತ್ತನೆ ತರಗತಿ ಫೇಲಾಗಿ 2005ರಲ್ಲಿ ದುಬೈಗೆ ಹಾರಿ 2007ರಲ್ಲಿ ಇಂಡಿಯನ್ ಮುಜಾಹಿದ್ದೀನ್ಎಂಬ ಸಂಘಟನೆಯನ್ನು ಸ್ಥಾಪಿಸಿದ ಯುವಕ. ಈತನು ಮಾಡಿದ ಭಯೋತ್ಪಾದಕ ಕೃತ್ಯಗಳಾದ, ಅಹಮದಾಬಾದ್ ಬಾಂಬ್‌ಸ್ಫೋಟ, 2010ರಲ್ಲಿ ಬೆಂಗಳೂರು ಬಾಂಬ್ ಸ್ಫೋಟ, 2012ರಲ್ಲಿ ಪುಣೆ ಬಾಂಬ್ ಸ್ಫೋಟಗಳು ಆಗಿದ್ದು ರಾಹುಲ್‌ಗಾಂಧಿಯವರ ಸರಕಾರದ ಅವಧಿಯಲ್ಲಿಯೇ ಹೊರತು ನರೇಂದ್ರ ಮೋದಿಯವರ ಸರಕಾರದ ಅವಧಿಯಲ್ಲಲ್ಲ. ಪಾಪ ಯಾಸೀನ್ ಭಟ್ಕಳ ತಾನು ಭಯೋತ್ಪಾದಕ ಸಂಘಟನೆಯನ್ನು ಸ್ಥಾಪಿಸುವ ಬದಲು, ರಾಹುಲ್ ಗಾಂಧಿಯವರ ಬಳಿ ಒಂದು ಕೆಲಸ ಕೇಳಿದ್ದರೆ, ಕೊಡಿಸುತ್ತಿದ್ದರು ಅನಿಸುತ್ತಿದೆ.

ನಮ್ಮ ದೇಶದ ಯುವಕರಿಗೆ ಬಡತನವಿರಬಹುದು, ಮಜಾ ಮಾಡಲು ಹಣವಿಲ್ಲದಿರಬಹುದು ಹೋಗಲು ಆಗದಿರಬಹುದು ಹಾಗಂತ ಕೆಲಸ ಸಿಗಲಿಲ್ಲವೆಂಬ ಕಾರಣಕ್ಕೆ ಭಯೋತ್ಪಾದಕ ಸಂಘಟನೆಯಲ್ಲಿ ಸೇರಿ ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿ ಭಯೋತ್ಪಾದಕರಾಗುವುದಿಲ್ಲ. ಒಂದು ಹೊತ್ತು ಬೇಕಾದರೆ ಉಪವಾಸವಿದ್ದರೂ ಮರ್ಯಾದೆಯ ಜೀವನವನ್ನು ನಡೆಸುತ್ತಾರೆಯೇ ಹೊರತು, ರಾಷ್ಟ್ರದ್ರೋಹದ ಕೆಲಸಕ್ಕೆ ಕೈಹಾಕುವುದಿಲ್ಲ. ಮನುಷ್ಯ ಹೇಳುವ ಪ್ರಕಾರ ಯಾರಾದರೂ ಒಬ್ಬ ಭಯೋತ್ಪಾದಕನು ಮುಂದೆ ಬಂದು, ತಾನು ನಿರುದ್ಯೋಗ ಸಮಸ್ಯೆಯಿಂದ ಭಯೋತ್ಪಾದಕನಾದೆ ಎಂದು ಹೇಳಲಿ ನೋಡೋಣ? ನೋ ಛಾನ್‌ಸ್. ಇಲ್ಲವೇ ಇಲ್ಲ ಬಿಡಿ.

2008 ಮುಂಬೈ ದಾಳಿಯ ಸಿಕ್ಕುಹಾಕಿಕೊಂಡ ಅಜ್ಮಲ್ ಕಸಬ್ ಒಬ್ಬ ಪಾಕಿಸ್ತಾನಿಯೇ ಹೊರತು ನಮ್ಮವನಲ್ಲ. ದಾಳಿಯು ನಡೆದದ್ದು ಸಹ ಇವರ ಸರಕಾರದ ಕಾಲಘಟ್ಟದಲ್ಲಿಯೇ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಹಿಂದುಳಿದ ವರ್ಗದವರಿಗೆ ಕೆಲಸ ನೀಡದಿದ್ದರೆ ಅವರೂ ಸಹ ಐಸಿಸ್ ಸೇರಬಹುದೆಂಬ ವಿಷಯವನ್ನು ಪ್ರಸ್ತಾಪಿಸಿದ ರಾಹುಲ್ ಗಾಂಧಿ, ಒಬ್ಬನಾದರೂ ಹಿಂದುಳಿದ ವರ್ಗಕ್ಕೆ ಸೇರಿದ ಯುವಕಯುವತಿಯರು ಉಗ್ರರಾಗಿರುವ ಉದಾಹರಣೆಯನ್ನು ನೀಡಲಿ ನೋಡೋಣ. ಗಾಳಿಯಲ್ಲಿ ಗುಂಡು ಹಾರಿಸುವುದೆಂದರೆ ಇದೇ ತಾನೆ?

ರಾಹುಲ್ ಗಾಂಧಿ ತನ್ನ ಭಾಷಣದ ಪ್ರಾರಂಭದಲ್ಲಿ ಹಿಂದಿನ ಭಾರತವು ಕೇವಲ ಹಳ್ಳಿಗಳ ರಾಷ್ಟ್ರವಾಗಿತ್ತು. ನಾವು ಅಧಿಕಾರಕ್ಕೆ ಬಂದಮೇಲೆ ಹಳ್ಳಿಗಳನ್ನು ನಗರಗಳಾಗಿ ಅಭಿವೃದ್ಧಿ ಮಾಡಿದ್ದೇವೆಂದು ಹೇಳುತ್ತಾರೆ. ಮಾತಿಗೆ ಅದೆಷ್ಟು ನಗಬೇಕೋ ತಿಳಿಯುವುದಿಲ್ಲ. ತಾನು ಹಾಗೂ ತನ್ನ ತಾಯಿ ಸ್ಪರ್ಧಿಸುತ್ತಿರುವ ರಾಯ್‌ಬರೇಲಿ ಹಾಗೂ ಅಮೇಥಿಯಲ್ಲಿ ಇಂದಿಗೂ ಜನರಿಗೆ ಓಡಾಡಲು ಸರಿಯಾಗಿ ರಸ್ತೆಗಳಿಲ್ಲ, ಬಸ್ ಸೌಕರ್ಯಗಳಿಲ್ಲ, ಅಲ್ಲಿನ ಯುವಕರಿಗೆ ಮಾಡಲು ಕೆಲಸವಿಲ್ಲ, ಹಣವಿಲ್ಲ, ಆರೋಗ್ಯವೂ ಇಲ್ಲ. ಹೀಗಿರುವಾಗ ಯಾವ ಮುಖ ಇಟ್ಟುಕೊಂಡು ಮಾತನ್ನಾಡಿದರೋ ತಿಳಿಯುತ್ತಿಲ್ಲ.

ಉತ್ತರ ಪ್ರದೇಶವೆಂದರೆ ಜನರು ಅಲ್ಲಿಗೆ ಹೋಗಲು ಸ್ವಲ್ಪ ಹಿಂಜರಿಯುತ್ತಾರೆ. ಅಲ್ಲಿನ ಕಾನೂನು ಅವ್ಯವಸ್ಥೆ, ಬಡತನ, ನಿರುದ್ಯೋಗ, ಗೂಂಡಾಗಿರಿ, ಅನಾರೋಗ್ಯ ಅಷ್ಟೇ ಯಾಕೆ ಪರೀಕ್ಷೆಯಲ್ಲಿ ಎಲ್ಲರಿಗೂ ಕಾಣುವ ಹಾಗೆ ಕಾಪಿ ಹೊಡೆಯುವ ರಾಜ್ಯವಿದು. ಇವರು 70ವರ್ಷಗಳಲ್ಲಿ ಮಾಡಿದ ಅಭಿವೃದ್ಧಿಯೆಂದರೆ ಇದೇನಾ? ತೀರಾ ಇತ್ತೀಚೆಗಷ್ಟೇ ದೇಶದ ಪ್ರತಿಯೊಂದು ಹಳ್ಳಿಗಳಿಗೆ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗಿದೆ. ಇವರು ಎಪ್ಪತ್ತು ವರ್ಷಗಳಲ್ಲಿ ಆಡಳಿತದಲ್ಲಿ ಮಾಡಿದ್ದಾದರೂ ಏನು? ಮಾತು ಮಾತಿಗೂ ದಲಿತರ ದೌರ್ಜನ್ಯವೆಂಬ ರಾಜಕೀಯ ಮಾತನಾಡುವ ಆಸಾಮಿ, ಇಷ್ಟು ದಲಿತರಿಗೆ ಮಾಡಿದ್ದಾದರೂ ಏನು? ಇಂದಿಗೂ ದಲಿತರ ನೋವು ತಪ್ಪಿಲ್ಲ. ಇಂದಿಗೂ ದಲಿತರ ಮೇಲಿನ ದಾಳಿಗಳು ಕಮ್ಮಿಯಾಗಿಲ್ಲ. ಇದೇನಾ ಇವರು ಎಪ್ಪತ್ತು ವರ್ಷಗಳಲ್ಲಿ ಮಾಡಿದ ಸಾಧನೆ? ಸಂವಿಧಾನದಲ್ಲಿ ದಲಿತರಿಗೆ ಕಾಳಜಿ ತೋರುವಂತೆ ತಾವೇ ಮಾಡಿದ್ದಾರೇನೋ ಎಂಬಂತೆ ಮಾತನಾಡುವ ಇವರಿಗೆ ತಿಳಿಯಲಿ, ದಲಿತರ ಪರ ಹೋರಾಡಿ, ಅವರ ಹಕ್ಕುಗಳನ್ನು ಅವರಿಗೆ ನೀಡುವಂತೆ ಮಾಡಿದ್ದು ಬಿ.ಆರ್. ಅಂಬೇಡ್ಕರ್. ಇದೇ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಹೀನಾಯವಾಗಿ ಸೋಲಿಸುವಂತೆ ಮಾಡಿದ್ದು ಯಾರೆಂಬುದು ಇಡೀ ಜಗತ್ತಿಗೆ ತಿಳಿದಿರುವ ನಮ್ಮ ರಾಜ್ಯದಲ್ಲಿಯೇ ತೆಗೆದುಕೊಳ್ಳಿ ಪರಮೇಶ್ವರನಂತಹ ದಲಿತ ನಾಯಕರನ್ನು ಮುಖ್ಯಮಂತ್ರಿಯಾಗಲು ಯಾಕೆ ಬಿಡಲಿಲ್ಲ ಮಿ.ರಾಹುಲ್ ಗಾಂಧಿ?

1947ರಲ್ಲಿ ಒಂದು ಡಾಲರ್‌ಗೆ ಒಂದು ರುಪಾಯಿ ಇತ್ತು. 2014ರಲ್ಲಿ 1 ಡಾಲರ್‌ಗೆ 62ರು. ಆಯಿತು. ಅಮೆರಿಕ ಹಾಗೂ ಭಾರತವು ಎಲ್ಲ ದೃಷ್ಟಿಕೋನದಲ್ಲೂ ಒಂದೇ ರೀತಿಯಾಗಿದ್ದವು. ಈಗ ಅಮೆರಿಕ ಎಲ್ಲಿದೆ, ಭಾರತ ಎಲ್ಲಿದೆ? ಇದು ಇವರ ವಂಶಪಾರಂಪರ‌್ಯ ರಾಜಕಾರಣವು ಮಾಡಿರುವ ಅಭಿವೃದ್ಧಿ. ಇವರು ಸರಿಯಾದ ರೀತಿಯ ಆಡಳಿತ ನೀಡಿದ್ದರೆ, 1991ರಲ್ಲಿ ನಾವು ಯಾಕೆ ಲಂಡನ್‌ನಲ್ಲಿ ಅಡವಿಟ್ಟು ಸಾಲವನ್ನು ತಂದು ದೇಶವನ್ನು ನಡೆಸಬೇಕಿತ್ತು? ಇದೇನಾ ಇವರ ಅಭಿವೃದ್ಧಿಯ ಮಂತ್ರ?

1947 ರಿಂ 1991 ಅವಧಿಯಲ್ಲಿ ಹಾಗಾದರೆ ಮಾಡಿದ್ದಾದರೂ ಏನೆಂಬುದನ್ನು ಮೊದಲು ತಿಳಿದುಕೊಂಡು ನಂತರ ಮಾತನಾಡಲಿ. ಸಾಲ ಮಾಡಿ ನಮ್ಮ ದೇಶದ ಮಾನ ಹರಾಜು ಹಾಕಿದ್ದು ಯಾರು ಹಾಗಾದರೆ. ದೇಶವನ್ನು ಅಂತಹ ಹೀನಾಯ ಸ್ಥಿತಿಗೆ ತಂದಿದ್ದು ಟ್ರಾನ್‌ಸ್ಫಾರ್ಮೇಶನ್ ಅಲ್ಲವೇ?

ಮಾತುಮಾತಿಗೂ ಚೀನಾ 24 ಘಂಟೆಯಲ್ಲಿ 50,000 ಉದ್ಯೋಗವನ್ನು ಸೃಷ್ಟಿಸುತ್ತಿದೆಯೆಂದು ಹೇಳುವ ಇವರಿಗೆ ಅವರ ಅವಧಿಯಲ್ಲಿ ಅಂದರೆ 2004 2014ರವರೆಗೆ ಭಾರತದಲ್ಲಿ ಎಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತಿದ್ದವು ಎಂಬ ಲೆಕ್ಕದ ಬಗ್ಗೆ ತಿಳಿದಿದೆಯೇ? ಕೇವಲ 2014-2018 ವರೆಗೆ ಮಾತ್ರ ಭಾರತದಲ್ಲಿ 24 ಘಂಟೆಯಲ್ಲಿ 450 ಉದ್ಯೋಗಗಳು ಸೃಷ್ಟಿಯಾಗಲು ಶುರುವಾಯಿತೇ? ಇವರ ಲೆಕ್ಕದ ಪ್ರಕಾರ ಕಳೆದ ನಾಲ್ಕು ವರ್ಷಗಳಲ್ಲಿ ಭಾರತದಲ್ಲಿ ಕೇವಲ 6,57,000 ಉದ್ಯೋಗಗಳು ಸೃಷ್ಟಿಯಾಗಿವೆ. ಹಾಗಾದರೆ ಇವರದ್ದೇ ಸರಕಾರವು ಕರ್ನಾಟಕದಲ್ಲಿ 2013-2018 ನಡುವಿನಲ್ಲಿ ವರ್ಷಕ್ಕೆ ಸುಮಾರು 10ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆಯೆಂದು ಚುನಾವಣಾ ಪ್ರಚಾರದಲ್ಲಿ ಹೇಳಿತ್ತಲ್ಲ ಅದು ಏನು?

1981ರಲ್ಲಿ ಚೀನಾ ಭಾರತವು ಎಲ್ಲ ರೀತಿಯಿಂದಲೂ ಸಮಬಲದಿಂದ ಕೂಡಿದ್ದವು. ಆದರೆ 2014 ಹೊತ್ತಿಗೆ ಚೀನಾದ ಆರ್ಥಿಕತೆ ಎಲ್ಲಿ, ಭಾರತದ ಆರ್ಥಿಕತೆ ಎಲ್ಲಿ? ಇಷ್ಟೊಂದು ಅಧೋಗತಿಗೆ ತಳ್ಳಿದವರು ಯಾರು ಸ್ವಾಮಿ? ಅವಧಿಯಲ್ಲಿ ಅತಿ ಹೆಚ್ಚು ಆಡಳಿತ ನಡೆಸಿದ ಕೀರ್ತಿ ತಮ್ಮ ಪಕ್ಷದ್ದೇ ತಾನೆ? ಚೀನಿಯರು ಒಲಿಂಪಿಕ್‌ಸ್ನಲ್ಲಿ ಚಿನ್ನದ ಬೇಟೆಯಾಡಲಾರಂಭಿಸಿದರು, ನೀವು ಇದ್ದ ಚಿನ್ನವನ್ನು ಅಡವಿಟ್ಟು ಸಾಲ ತರಲು ಪರದೇಶಕ್ಕೆ ಹೊರಟಿರಿ.

ಒಂದೆಡೆ ನಿರುದ್ಯೋಗ ಎನ್ನುತ್ತೀರಿ, ಇನ್ನೊಂದೆಡೆ ಉದ್ಯೋಗ ಖಾತ್ರಿ ಯೋಜನೆಯನ್ನು ನಾವು ಎನ್ನುತ್ತೀರಿ, ನಿಮಗೆ ಇದು ತಿಳಿದಿರಲಿ, ಹಳ್ಳಿಗಳಲ್ಲಿ ಇಂದು ಕಳೆ ಕೀಳಲು, ಅಡಕೆ ಕೀಳಲು, ಹೊಂಡ ತೆಗೆಯಲು, ತೋಟದಲ್ಲಿ ಕೆಲಸ ಮಾಡಲು ಆಳುಗಳು ಸಿಗುತ್ತಿಲ್ಲ. ಕೂಲಿ ನೀಡುತ್ತೇನೆಂದರೂ ಜನ ಸಿಗುತ್ತಿಲ್ಲ. ಇದು ತಾವು ಮಾಡಿರುವ ಉದ್ಯೋಗ ಖಾತ್ರಿಯ ಬದಲಾವಣೆ. ಇದಕ್ಕೆ ಯಾರು ಹೊಣೆ ತಾವೇ ತಾನೆ? ಇದೇ ಉದ್ಯೋಗ ಖಾತ್ರಿಯಡಿ ನಡೆಯುತ್ತಿದ್ದ ಅವ್ಯವಹಾರವನ್ನು ತಡೆಗಟ್ಟಿ ನೇರವಾಗಿ ಅಕೌಂಟ್‌ಗಳಿಗೆ ಹಣ ಕಳಿಸುವ ಸೌಲಭ್ಯದಿಂದ 80,000ಕೋಟಿ ರುಪಾಯಿಯಷ್ಟು ಹಣವನ್ನು ಉಳಿಸಿದ್ದು ನರೇಂದ್ರ ಸರಕಾರ. ಇದರ ಬಗ್ಗೆ ಮಾತನಾಡಲು ತಮ್ಮ ನಾಲಗೆಗೆ ಸಮಯವಿಲ್ಲವೇ?

ಆದಿವಾಸಿಗಳ ಅಭಿವೃದ್ಧಿಯ ಬಗ್ಗೆ ಇಂದು ಮಾತನಾಡುವ ರಾಹುಲ್ ಗಾಂಧಿಗೆ ತಮ್ಮದೇ ಸರಕಾರವು ಇಷ್ಟು ವರ್ಷ ದೇಶವನ್ನಾಳಿದರೂ ಈಶಾನ್ಯ ಭಾಗದ ರಾಜ್ಯಗಳಾದ ಮೇಘಾಲಯ, ನಾಗಾಲೆಂಡ್, ತ್ರಿಪುರ, ಅಸ್ಸಾಂ, ಮಿಜೋರಾಂಗಳಿಗೆ ಮಾಡಿದ್ದಾದರೂ ಏನು? ಒಂದು ರೈಲ್ವೆ ಸಂಪರ್ಕ ಕಲ್ಪಿಸಲು ಎಪ್ಪತ್ತು ವರ್ಷಗಳು ಬೇಕಾಯಿತು. ಒಂದು ವಿಮಾನ ನಿಲ್ದಾಣವನ್ನು ನಿರ್ಮಿಸಲು ಎಪ್ಪತ್ತು ವರ್ಷಗಳು ಬೇಕಾಯಿತು. ಬಾಂಗ್ಲಾದೇಶಿ ನುಸುಳುಕೋರರನ್ನು ಅಸ್ಸಾಂನಿಂದ ಹುಡುಕಲು ಎಪ್ಪತ್ತು ವರ್ಷ ಸರಿಯಾದ ರಸ್ತೆಯನ್ನು ಮಾಡಲು ಎಪ್ಪತ್ತು ವರ್ಷ ಬೇಕಾಯಿತು. ಹಾಗಾದರೆ ಇದೇನಾ ಇವರ ಅಪ್ಪ, ತಾತ, ಅಜ್ಜಿ, ಮುತ್ತಾತ ಈಶಾನ್ಯ ರಾಜ್ಯದ ಆಧಿವಾಸಿಗಳಿಗೆ ನೀಡಿದ ್ಟ್ಞ್ಛಟ್ಟಞಠಿಜಿಟ್ಞ?

ಮಾತು ಮಾತಿಗೂ ಅಲ್ಪಸಂಖ್ಯಾತರ ಅಭಿವೃದ್ಧಿ ಬಗ್ಗೆ ಮಾತನಾಡುವ ಇವರಿಗೆ ಮುಸ್ಲಿಂ ಹೆಣ್ಣು ಮಕ್ಕಳ ಮೇಲಿನ ಕನಿಕರವೇನಾದರೂ ಇದ್ದೀತೆ? ಮೂರು ಬಾರಿ ಮದುವೆಯಾಗಿ, ಕೇವಲ ಮೂರು ಸೆಕೆಂಡಿನಲ್ಲಿ ವಿಚ್ಛೇದನ ನೀಡುವಂತಹ ಕಾನೂನನ್ನೇ ಏಕೆ ಸರಿಪಡಿಸಲಿಲ್ಲ? ಅಲ್ಪಸಂಖ್ಯಾತರ ಅಭಿವೃದ್ಧಿಯೆಂದರೆ ಏನು? ಕೇವಲ ಅಕ್ಕಿ, ಬೇಳೆ, ಬಟ್ಟೆಬರೆ, ಮಂಚ ನೀಡುವುದೇ? ಜೀವನವನ್ನು ಹಾಳು ಮಾಡಿ, ಊಟ, ಬಟ್ಟೆ ಕೊಟ್ಟರೇನು ಪ್ರಯೋಜನ? ಇದು ಮನುಷ್ಯನ ಅಲ್ಪಸಂಖ್ಯಾತ ವರ್ಗಗಳ ಮಹಿಳೆಯರ ಮೇಲಿನ ಕಾಳಜಿ.

ಜನೌಷಧಿ ಕೇಂದ್ರದಲ್ಲಿ ದಲಿತರು, ಅಲ್ಪಸಂಖ್ಯಾತರು, ಮೇಲ್ವರ್ಗದವರೆಂಬ ವ್ಯತ್ಯಾಸವಿಲ್ಲದೆ ಎಲ್ಲರಿಗೂ ಒಂದೇ ರೀತಿಯ ಕಡಿಮೆ ಬೆಲೆಯ ಔಷಧವನ್ನು ನೀಡುತ್ತಿರುವುದು ರಾಹುಲ್ ಗಾಂಧಿಯವರಿಗೆ ಕಾಣುತ್ತಿಲ್ಲವೇ? ಮುದ್ರಾ ಯೋಜನೆಯಡಿ ಅತಿಹೆಚ್ಚು ಸಾಲ ಪಡೆದವರು ದಲಿತರು, ಅಲ್ಪಸಂಖ್ಯಾತರೇ. ಹಾಗಾದರೆ ಇವರ ಉದ್ಧಾರವಾಗಲಿಲ್ಲವೇ? ದಲಿತ ಹೆಣ್ಣುಮಕ್ಕಳು ಹಳ್ಳಿಗಳಲ್ಲಿ ಇಂದು ಬ್ಯೂಟಿ ಪಾರ್ಲರ್‌ಗಳನ್ನು ನೆರವಾದದ್ದು ಇದೇ ಯೋಜನೆ. ಕರಾವಳಿಯ ಹಲವಾರು ಹಳ್ಳಿಗಳಲ್ಲಿ ಮೆಳಲ್ಲಿಯೇ ಕುಳಿತು, ಮೀನು, ಮಾಂಸಗಳ ಖಾದ್ಯಗಳನ್ನು ತಯಾರು ಮಾಡಿ ಹೋಟೆಲ್‌ಗಳಿಗೆ ಸರಬರಾಜು ಮಾಡುವಂತೆ ಸಾಲ ನೀಡಿದ್ದು ಇದೇ ಮುದ್ರಾ ಯೋಜನೆ.

ದಲಿತ, ಅಲ್ಪಸಂಖ್ಯಾತರನ್ನು ಜನಧನ್ ಯೋಜನೆಯಡಿ ಬ್ಯಾಂಕಿಂಗ್ ವ್ಯವಸ್ಥೆಗೆ ತಂದದ್ದು 2014-2018 ಮಧ್ಯೆಎಂಬುದರ ಕುರಿತು ರಾಹುಲ್ ಮಾತನಾಡಲಿ. ಆಯುಷ್ಮಾನ್ ಯೋಜನೆಯಡಿ 5ಲಕ್ಷ ರುಪಾಯಿ ವಿಮೆಯನ್ನು 10ಕೋಟಿ ಕುಟುಂಬಗಳಿಗೆ ನೀಡುತ್ತಿರುವವರಲ್ಲಿ ದಲಿತರು, ಅಲ್ಪಸಂಖ್ಯಾತರ ಸಂಖ್ಯೆ ಎಷ್ಟಿದೆ ಎಂಬುದರ ಸಾಮಾನ್ಯ ಜ್ಞಾನವೇನಾದರೂ ಅವರಿಗೆ ಇಂದು ನಾಲ್ಕು ವರ್ಷಗಳಲ್ಲಿ ಹಳ್ಳಿಗಳಲ್ಲಿ ಕಟ್ಟಿರುವ ಶೌಚಾಲಯಗಳೇನಾದರೂ ಅಂಬಾನಿ, ಅದಾನಿ, ನೀರವ್ ಮೋದಿ, ವಿಜಯಮಲ್ಯ ಬಳಸುತ್ತಿದ್ದಾರಾ? ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ನಂತರ ಶೌಚಾಲಯ ನಿರ್ಮಿಸಿಕೊಡಬೇಕಾದ ಪರಿಸ್ಥಿತಿಗೆ ತಲುಪುವಂತೆ ದೇಶವನ್ನು ಅಧೋಗತಿಗೆ ತಳ್ಳಿದವರು ಯಾರು?

ಭಾಷಣದ ಕೊನೆಯಲ್ಲಿ ರಾಹುಲ್ ಗಾಂಧಿ ಆಡಿದ ಮತ್ತೊಂದು ಮಾತು ಅದು ಸತ್ಯಹರಿಶ್ಚಂದ್ರನ ತುಂಡಿನಂತಿತ್ತು. ಕಾಂಗ್ರೆಸ್ ಪಕ್ಷವು ದೇಶದ ಅಭಿವೃದ್ಧಿಯಲ್ಲಿ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡಿತ್ತಂತೆ. ತನ್ನ ಪಕ್ಷದಲ್ಲಿಯೇ ಯಾರನ್ನೂ ಸರಿಯಾಗಿ ಬೆಳೆಯಲು ಬಿಡಲಿಲ್ಲ. ದೇಶವನ್ನು ಸಮಾನವಾಗಿ ಹೇಗೆ ತಾನೆ ಕೊಂಡೊಯ್ಯುತ್ತಾರೆ? ಚಿನ್ನವನ್ನು ಅಡವಿಟ್ಟು , ಸಾಲ ಮಾಡಿ ದೇಶದ ಆರ್ಥಿಕತೆಯೇ ಹಳ್ಳಕ್ಕೆ ಬಿದ್ದಾಗ ಅದರಿಂದ ಹೊರಬರಲು ಪಿ.ವಿ.ನರಸಿಂಹರಾವ್ ತರಹದ ನಾಯಕರು ಬೇಕಿತ್ತು. ಆದರೆ ಇದೇ ನರಸಿಂಹರಾವ್ ಅವರು ನಿಧನರಾದಾಗ, ಅವರನ್ನು ಯಾವ ರೀತಿ ನಡೆಸಿಕೊಂಡಿತೆಂಬುದನ್ನು ಇಡೀ ದೇಶವೇ ನೋಡಿತ್ತು. ಮುತ್ತಾತ, ತಾತ, ಅಜ್ಜಿ ಅಮ್ಮಂದಿರಿಂದಲೇ ಆಡಳಿತ ನಡೆಸಿಕೊಂಡು ಬಂದಂತಹ ವಂಶದ ಕುಡಿಯಾದ ರಾಹುಲ್‌ಗಾಂಧಿಯವರು ಎಲ್ಲರನ್ನೂ ಒಟ್ಟಿಗೆ ನಡೆಸಿಕೊಂಡು ಹೋಗುವ ಪ್ರವೃತ್ತಿ ತಮ್ಮ ಪಕ್ಷದ್ದು ಎಡಗಡೆ ಇದ್ದ ಹೃದಯ ಬಲಕ್ಕೆ ಬಂದಂತಾಯಿತು.

ತಮ್ಮ ಪಕ್ಷದಲ್ಲಿಯೇ ಸರಿಯಾದ ಆಂತರಿಕ ಪ್ರಜಾಪ್ರಭುತ್ವವಿಲ್ಲ. ಒಂದೇ ವಂಶದ ಕುಡಿಗಳೇ ಇಂದಿಗೂ ದೇಶವನ್ನಾಳುತ್ತಿದ್ದಾರೆ. ಇಂತಹ ಸರ್ವಾಧಿಕಾರದ ಧೋರಣೆ ಇಟ್ಟುಕೊಂಡು, ಮೋದಿಯನ್ನು ಸರ್ವಾಧಿಕಾರಿ ಎನ್ನಲು ರಾಹುಲ್ ಗಾಂಧಿಗೆ ಯಾವ ನೈತಿಕತೆಯೂ ಇಲ್ಲ ಹಾಗಾದರೆ ಕಾಂಗ್ರೆಸ್ ಪಕ್ಷದಲ್ಲಿ ಬೇರೆ ನಾಯಕರುಗಳು ಇಲ್ಲವೇ ಅಥವಾ ಇದ್ದರೂ ಯಾರೂ ಯಾಕೆ ಇದರ ವಿರುದ್ಧ ಧ್ವನಿ ಎತ್ತುತ್ತಿಲ್ಲವೋ ಅರ್ಥವಾಗುತ್ತಿಲ್ಲ. ಭಾರತದಲ್ಲಿ ಮಾತ್ರ ಜನರು ರಾಹುಲ್‌ಗಾಂಧಿಯನ್ನು ನಗುತ್ತಿದ್ದರು. ಈಗ ಜಗತ್ತೇ ಅದು ಹಾಗಿರಲಿ ಅವರು ಭಾರತದ ಮಾನಮರ್ಯಾದೆಯನ್ನು ಹರಾಜು ಹಾಕುತ್ತಿರುವುದು ಮಾತ್ರ ನಾಚಿಕೆಗೇಡಿನ ಸಂಗತಿ.

Tags

Related Articles

Leave a Reply

Your email address will not be published. Required fields are marked *

Language
Close