About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಮುಝಫ್ಫರ್‌ಪುರ ಆಶ್ರಯ ಗೃಹಕ್ಕೆ ಹಣ ನೀಡುತ್ತಿರುವುದು ಯಾರು? ಸುಪ್ರೀಂ ಪ್ರಶ್ನೆ

ದೆಹಲಿ: ಲೈಂಗಿಕ ಅಪರಾಧ ಕುರಿತಂತೆ ದೇಶದ ಗಮನ ಸೆಳೆದಿರುವ ಮುಝಫ್ಫರ್‌ಪುರದ ಆಶ್ರಯ ಗೃಹ  ನಡೆಸಲು ಹಣ ನೀಡುತ್ತಿರುವುದು ಯಾರು ಎಂದು ಸುಪ್ರೀಂ ಕೋರ್ಟ್ ಪ್ರಶ್ನಸಿದೆ.

ಬಿಹಾರದ ಮುಝಫ್ಫರ್‌ಪುರದ ಆಶ್ರಯ ಮನೆಯಲ್ಲಿ ನಡೆದ ಲೈಂಗಿಕ ಅಪರಾಧದ ಪಕ್ರರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್, ಈ ಕುರಿತು ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡಿದೆ. ಈ ಕಾಂಡದ ಕುರಿತು ಬಿಹಾರ ಸರಕಾರ ಹಾಗು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಿವರಣೆಯನ್ನು ಸುಪ್ರೀಂ ಕೋರಿದೆ.

ದೇಶಾದ್ಯಂತ ಎನ್‌ಜಿಓಗಳು ನಡೆಸುತ್ತಿರುವ ಇಂಥ ಆಶ್ರಯ ಗೃಹಗಳಲ್ಲಿ ಸುದೀರ್ಘ ಕಾಲದಿಂದಲೂ ಕಾನೂನಿನ ಇತಿಮಿತಿಗಳ ದುರ್ಬಳಕೆ ಮಾಡಿಕೊಳ್ಳುವ ಪರಿಪಾಠ ಬೆಳೆದುಬಂದಿದೆ ಎಂದಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಈ ಪಿಡುಗನ್ನು ರಾಜ್ಯದಿಂದ ಕಿತ್ತೊಗೆಯುವುದಾಗಿ ತಿಳಿಸಿ, ರಾಜ್ಯದಲ್ಲಿರುವ ಎಲ್ಲ ಆಶ್ರಯ ಮನೆಗಳನ್ನೂ ಸರಕಾರದ ಹಿಡಿತಕ್ಕೆ ತೆಗೆಉಕೊಳ್ಳುವುದಾಗಿ ತಿಳಿಸಿದ್ದಾರೆ.

ಪ್ರಕರಣದ ಕುರಿತು ಸಿಬಿಐ ತನಿಖೆಯನ್ನು ಮುನ್ನಡೆಸುವಂತೆ ಪಟನಾ ಹೈಕೋರ್ಟ್‌‌ಗೆ ಬಿಹಾರ ಸರಕಾರ ಕೋರಿದ್ದು, ತ್ವರಿತಗತಿಯಲ್ಲಿ ನ್ಯಾಯ ಒದಗಿಸಲು ವಿಶೇಷ ನ್ಯಾಯಾಧೀಶರ ನೇಮಕ ಮಾಡಲು ಕೋರಿತ್ತು.

ಬ್ರಜೇಶ್‌ ಠಾಕೂರ್‌ ಎಂಬಾತನು ನಡೆಸುತ್ತಿರುವ ಎನ್‌ಜಿಓಗೆ ಸೇರಿದ ಆಶ್ರಯ ಗೃಹದಲ್ಲಿ 30ಕ್ಕೂ ಹೆಚ್ಚು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವಾಗಿದೆ ಎಂದು ಟಾಟಾ ಸಾಮಾಜಿಕ ವಿಜ್ಞಾನ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಪತ್ತೆಯಾಗಿತ್ತು.

ರಾಜ್ಯದ ಆಶ್ರಯ ಮನೆಗಳ ಕುರಿತು ಅಧ್ಯಯನ ನಡೆಸಿದ್ದ ಟಾಟಾ ಸಂಸ್ಥೆ, ಸರಕಾರಕ್ಕೆ ಸಲ್ಲಿಸಿದ್ದ ತನ್ನ ವರದಿಯಲ್ಲಿ, ಮುಝಫ್ಫರ್‌‌‌ಪುರ ಆಶ್ರಯ ಗೃಹದ ಹೆಣ್ಣು ಮಕ್ಕಳು ತಮ್ಮ ಮೇಲೆ ಅತ್ಯಾಚಾರವಾಗುತ್ತಿದೆ ಎಂದು ಆಪಾದಿಸಿದ್ದಾಗಿ ಹೇಳಿತ್ತು.

ಘಟನೆ ಸಂಬಂಧ ಬ್ರಜೇಶ್‌ ಠಾಕೂರ್‌ ಸೇರಿ 11 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಆಶ್ರಯ ಗೃಹದ 42 ಮಕ್ಕಳ ಪೈಕಿ 34 ಮಂದಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಅವರ ಮೇಲೆ ಮಾಡಲಾದ ವೈದ್ಯಕೀಯ ಪರೀಕ್ಷೆ ಖಾತ್ರಿ ಪಡಿಸಿತ್ತು.

Tags

Related Articles

Leave a Reply

Your email address will not be published. Required fields are marked *

Language
Close