About Us Advertise with us Be a Reporter E-Paper

ಅಂಕಣಗಳು

ಗೊತ್ತಿಲ್ಲದ್ದನ್ನು ಗೊತ್ತಿಲ್ಲ ಎನ್ನಲು ನಮಗೇಕೆ ನಾಚಿಕೆ?

ಇತ್ತೀಚೆಗೆ ಗೆಳೆಯರೊಬ್ಬರು ಒಂದು ವಿಡಿಯೋ ಕಳಿಸಿಕೊಟ್ಟರು. ಸದ್ಗುರು ಜಗ್ಗಿ ವಾಸುದೇವ್ ಅವರ ಒಂದು ಉಪನ್ಯಾಸದ್ದು. ಜಗ್ಗಿ ಬಗ್ಗೆ ನಮಗೆಲ್ಲ ಗೊತ್ತಿದೆ. ಪಾಮರರಲ್ಲಿ ಪಾಮರರಿಂದ ಹಿಡಿದು ಸೆಲಬ್ರಿಟಿ ಬುದ್ಧಿಜೀವಿಗಳವರೆಗೆ ಎಲ್ಲರ ಜೊತೆ ಕೂತು ತತ್ತ್ವಜ್ಞಾನದ ಬಗ್ಗೆ ಆಕರ್ಷಕವಾಗಿ ಮಾತಾಡಬಲ್ಲ ಗುರು. ಪದ್ಮವಿಭೂಷಣ ಪುರಸ್ಕೃತ. ಅವರ ಹಲವು ವಿಡಿಯೋಗಳನ್ನು ನೋಡಿದ್ದೇನೆ, ಕೆಲವನ್ನು ಮೆಚ್ಚಿದ್ದೇನೆ. ಕೆಲವು ವಿಚಾರಗಳಲ್ಲಿ ಅವರ  ಯಾಕೋ ಲಾಜಿಕ್ ತಪ್ಪಿದೆ ಎಂದೂ ಅನ್ನಿಸಿದ್ದುಂಟು. ಗುಲಗಂಜಿ ಎಂದ ಮೇಲೆ ಚುಕ್ಕೆ ಇರಬೇಕಲ್ಲವೆ? ಅಂಥ ಒಂದಷ್ಟು ಮೆಚ್ಚಿಕೆಯಾಗದ ಮಾತುಗಳಿಗೆ ಧಾರಾಳವಾಗಿ ಮಾಫಿ ಕೊಟ್ಟು ಒಳ್ಳೆಯ ಮಾತುಗಳಿಗೆ ಅಹುದಹುದೆಂದು ತಲೆದೂಗಿದ್ದೇನೆ. ಆದರೆ ಮೊನ್ನೆ ಗೆಳೆಯರು ಕಳಿಸಿಕೊಟ್ಟ ವಿಡಿಯೋದಲ್ಲಿ ಜಗ್ಗಿ ಆಡಿದ ಮಾತು ಮಾತ್ರ ಹಾಸ್ಯಾಸ್ಪದವೆನಿಸುವಂಥ ಥಿಯರಿಯನ್ನೊಳಗೊಂಡಿತ್ತು.

ತಮಿಳುನಾಡಿನ ಕೆಲವು ಮನೆಗಳಲ್ಲಿ ಪಗಡೆ ಇಡಬಿಡುವುದಿಲ್ಲ. ಹಾಗೆಯೇ ಅರ್ಜುನ-ಕೃಷ್ಣರ ಗೀತೋಪದೇಶದ ಚಿತ್ರವನ್ನೂ ಮನೆಯ ಗೋಡೆಯಲ್ಲಿ ನೇತುಹಾಕುವುದಿಲ್ಲ, ಯಾಕೆ? ಎಂದು ಪ್ರೇಕ್ಷಕರೊಬ್ಬರು ಕೇಳಿದರು. ಅವರಿಗೆ  ಜಗ್ಗಿ, ಆರ್ಯ-ದ್ರಾವಿಡ ಸಿದ್ಧಾಂತಕ್ಕೆ ಹೊರಳಿಕೊಂಡರು. ಆರ್ಯರು ಭಾರತಕ್ಕೆ ಹೊರಗಿನಿಂದ ಬಂದವರು. ಅವರು ಅಲೆಮಾರಿಗಳು. ಅಲೆಮಾರಿಗಳು ಹೆಚ್ಚಾಗಿ ಮೇಲೆ ನೋಡುತ್ತಾರೆ. ಆರ್ಯರು ಆಕಾಶ ನೋಡುತ್ತಿದ್ದವರು. ಅವರು ದ್ರಾವಿಡರ ಮೇಲೆ ಆಕ್ರಮಣ ಮಾಡಿದರು. ದ್ರಾವಿಡರು ಕೆಳಗೆ ನೋಡುತ್ತಿದ್ದವರು. ಅರ್ಥಾತ್ ನೆಲವನ್ನು ಪೂಜಿಸುತ್ತಿದ್ದವರು; ರೈತರು. ಆರ್ಯರು ಮಾಡಿದ ಆಕ್ರಮಣ, ಯುದ್ಧಗಳ ನೆನಪು ಇಂದಿಗೂ ದ್ರಾವಿಡರ ಚರ್ಮದೊಳಗೆ ಅಸ್ಪಷ್ಟವಾಗಿಯಾದರೂ ಉಳಿದುಕೊಂಡಿದೆ. ಹಾಗಾಗಿ ಇಂದಿಗೂ ದ್ರಾವಿಡರಾದ ತಮಿಳರಿಗೆ ಆರ್ಯರಾದ ಉತ್ತರ ಭಾರತೀಯರ ಮೇಲೆ ಸಿಟ್ಟಿದೆ, ಆಕ್ರೋಶ  – ಎಂದರು ಜಗ್ಗಿ. ಮುಂದುವರಿದು, ಇಬ್ಬರ ಚರ್ಮಗಳನ್ನೂ ಹೋಲಿಸಿನೋಡಿ. ಅವರಿಬ್ಬರಲ್ಲಿ ಎದ್ದುಕಾಣುವ ವ್ಯತ್ಯಾಸ ಇದೆ. ಆರ್ಯರು ಬಿಳಿಯಾದರೆ ದ್ರಾವಿಡರ ಬಣ್ಣ ಕಪ್ಪು ಎಂಬ ವೈಜ್ಞಾನಿಕ ಆಧಾರವನ್ನೂ ತಮ್ಮ ಸಿದ್ಧಾಂತಕ್ಕೆ ಒದಗಿಸಿದರು!

ಈಗ ಸತ್ಯವೇನೆಂದು ನೋಡೋಣ. ಸಂಸ್ಕೃತದ ಶಬ್ದಾರ್ಥಕೋಶವಾದ ಅಮರಕೋಶದಲ್ಲಿ ಆರ್ಯ ಶಬ್ದಕ್ಕೆ ಮಹಾಕುಲ ಕುಲೀನಾರ್ಯ ಸಜ್ಜನ ಸಭ್ಯ ಸಾಧವಃ ಎಂಬ ಅರ್ಥ ಕೊಡಲಾಗಿದೆ. ಆರ್ಯವೆಂಬುದು, ಭಾರತದಲ್ಲಿ, ಎಂದೂ ಒಂದು ಜನಾಂಗವನ್ನು ಸೂಚಿಸುವ ಪದವಾಗಿರಲೇ ಇಲ್ಲ. ದಕ್ಷಿಣ ಭಾರತದಲ್ಲಿದ್ದ ತಾರೆ  ಗಂಡ ವಾಲಿಯನ್ನು ಕರೆಯುತ್ತಿದ್ದದ್ದು ಆರ್ಯಪುತ್ರ ಎಂದು ಶ್ರೀಲಂಕಾದಲ್ಲಿದ್ದ ಮಂಡೋದರಿ ತನ್ನ ಗಂಡ ರಾವಣನನ್ನು ಸಂಬೋಧಿಸುತ್ತಿದ್ದದ್ದೂ ಆರ್ಯಪುತ್ರ ಎಂದೇ! ದ್ರಾವಿಡ ಸಿದ್ಧಾಂತವನ್ನು ಪ್ರಬಲವಾಗಿ ಪ್ರತಿಪಾದಿಸುವ ತಮಿಳರೇ ಆರ್ಯ ಶಬ್ದದ ತದ್ಭವರೂಪವಾದ ಅಯ್ಯವನ್ನು ವ್ಯಾಪಕವಾಗಿ ಬಳಸುತ್ತಾರೆ! ಅಯ್ಯ ಎಂಬುದು ಜನಾಂಗಸೂಚಕವಲ್ಲವಾದರೆ ಅದರ ಮೂಲವಾದ ಆರ್ಯ ಹೇಗಾದೀತು? ಭಾರತದ ಪ್ರಾಚೀನತಮ ಸಾಹಿತ್ಯವೆಂದು ಎಲ್ಲರೂ ಮಾನ್ಯ ಮಾಡಿರುವ ಋಗ್ವೇದದ ಹತ್ತು ಮಂಡಲಗಳ ಹತ್ತು ಸಾವಿರಕ್ಕೂ ಹೆಚ್ಚು ಋಕ್ಕುಗಳಲ್ಲಿ ಆರ್ಯ ಶಬ್ದ ಕಾಣಿಸಿಕೊಳ್ಳುವುದು 38 ಸಲ  ಆದರೆ ಪ್ರತಿಯೊಂದು ಸಲವೂ ಅದು ಜ್ಞಾನಿ, ವೃದ್ಧ, ಸಜ್ಜನ ಎಂಬ ಅರ್ಥವನ್ನು ಧ್ವನಿಸಲಷ್ಟೇ ಬಳಕೆಯಾಗಿದೆಯಲ್ಲದೆ ಜನಾಂಗವನ್ನು ಸೂಚಿಸಲು ಅಲ್ಲ.

ಇನ್ನು ದ್ರವಿಡದ ಕತೆ! ದ್ರವಿಡ ಅಥವಾ ದ್ರಾವಿಡ ಎಂಬ ಪದವನ್ನು ಮೊದಲ ಬಾರಿ ಬಳಸಿದವರು ಆದಿ ಶಂಕರರು, ಕಾಶಿಯಲ್ಲಿ, ಮಂಡನಮಿಶ್ರರ ಜೊತೆ ವಾದಕ್ಕೆ ಕೂತಾದ. ದಕ್ಷಿಣ ಭಾರತದಿಂದ ಬಂದಿದ್ದೇನೆ; ಮೂರು ಸಮುದ್ರಗಳು ಕೂಡುವ ನೆಲದಿಂದ ಬಂದಿದ್ದೇನೆ ಎಂಬುದನ್ನು ಸೂಚಿಸಲು ಶಂಕರರು ತನ್ನನ್ನು ದ್ರಾವಿಡಶಿಶು ಎಂದು ಕರೆದುಕೊಂಡರು. ಮೂರು ಶರಧಿಗಳಿಂದ  ಸ್ಥಳ ಎಂಬುದು ಬಿಟ್ಟರೆ ದ್ರವಿಡ ಎಂಬುದಕ್ಕೆ ಬೇರೆ ಅರ್ಥ ಇಲ್ಲ. ಜನಾಂಗ ಅಥವಾ ರೇಸ್ ಎಂಬುದನ್ನಂತೂ ಅದು ಸೂಚಿಸುತ್ತಿರಲೇ ಇಲ್ಲ. ಭಾರತೀಯರು ಎರಡನೇ ದರ್ಜೆಯ ನಾಗರಿಕರು, ಕೊಚ್ಚೆಯಲ್ಲಿ ಬಿದ್ದು ಅಸಂಸ್ಕೃತರಾಗಿ ಉರುಳಾಡುತ್ತಿರುವ ಅವರನ್ನು ಎಬ್ಬಿಸಿ ಸ್ನಾನ ಮಾಡಿಸಿ ಬಟ್ಟೆಬರೆ ತೊಡಿಸಿ ನಾಗರಿಕರಾಗಿಸುವ ಜವಾಬ್ದಾರಿ ತಮ್ಮ ಮೇಲಿದೆ ಎಂದು ಭಾವಿಸಿದ ಪರಂಗಿಗಳು ಹುಟ್ಟುಹಾಕಿದ್ದೇ ಈ ಆರ್ಯ-ಅನಾರ್ಯ ಸಿದ್ಧಾಂತ. ಆರ್ಯರು ಭಾರತಕ್ಕೆ ಹೊರಗಿಂದ ಬಂದು, ಇಲ್ಲಿನ ಅಶಿಕ್ಷಿತರನ್ನು ಉದ್ಧರಿಸಬೇಕಾಯಿತು; ಹಾಗೆಯೇ ಹೊರಗಿಂದ  ಬಿಳಿಯರಿಂದಾಗಿ ಭಾರತೀಯರು ಏಳಿಗೆ ಕಾಣಬೇಕಾಗಿದೆ – ಎಂಬ ಥಿಯರಿಯನ್ನು ಹರಡುವುದು ಬ್ರಿಟಿಷರ ಅಜೆಂಡಾಗಳ ಪಟ್ಟಿಯಲ್ಲಿ ಸೇರಿತ್ತು. ಕ್ರಿಶ್ಚಿಯನ್ನರನ್ನು ಬಿಟ್ಟರೆ ಉಳಿದೆಲ್ಲರೂ ಪಾಪಾತ್ಮರು, ಅಂಥ ಅನ್ಯಧರ್ಮೀಯರನ್ನು ಕ್ರಿಶ್ಚಿಯಾನಿಟಿಯ ತೆಕ್ಕೆಯೊಳಗೆ ತರದೇ ಹೋದರೆ ಅವರೆಲ್ಲ ನರಕದಲ್ಲಿ ಬಿದ್ದು ಕೊಳೆಯಬೇಕಾಗುತ್ತದೆ. ಹಾಗಾಗಿ ಅಂಥವರನ್ನು ಸಾಧ್ಯವಾದಷ್ಟು ಮತಾಂತರಿಸುವುದೇ ತಮ್ಮ ಜೀವನದ ಪರಮೋದ್ದೇಶ ಎಂದು ಕ್ರಿಶ್ಚಿಯನ್ ಮಿಷನರಿಗಳು ಮನಃಪೂರ್ವಕ ನಂಬುವಂತೆ, ಜಗತ್ತಿನಲ್ಲಿರುವ ಬಿಳಿಯಲ್ಲದ ಮನುಷ್ಯರನ್ನೆಲ್ಲ ಉದ್ಧರಿಸಿ ಇಂಗ್ಲೀಷ್ ಮೋಕ್ಷ ಕಾಣಿಸಬೇಕಾದ್ದು ಪ್ರತಿಯೊಬ್ಬ ಬಿಳಿಯನ ಹೆಗಲ ಮೇಲಿರುವ  ಎಂದು ಬ್ರಿಟಿಷರೂ ನಂಬಿದ್ದರು. ವೈಟ್ ಮ್ಯಾನ್’ಸ್ ಬರ್ಡನ್ ಎಂಬ ಪದಗುಚ್ಛ ಹುಟ್ಟಿದ್ದೇ ಹಾಗೆ.

ತಮ್ಮದೊಂದೇ ಸಂಸ್ಕೃತಿ, ಜಗತ್ತಿನ ಉಳಿದವೆಲ್ಲವೂ ವಿಕೃತಿ ಎಂಬುದನ್ನು ಸೂಚಿಸಲು ಬಿಳಿಯರು ಬಗೆಬಗೆಯ ಸರ್ಕಸ್ಸು ಮಾಡಬೇಕಾಯಿತು. ಅದರ ಮೊದಲ ಅಂಗವಾಗಿ ಭಾರತದ ಅಷ್ಟೂ ಸಂಸ್ಕೃತ ಸಾಹಿತ್ಯವನ್ನು ತುಚ್ಛೀಕರಿಸಬೇಕಾಯತು. ಸಂಸ್ಕೃತದ ಗಂಧಗಾಳಿ ಇಲ್ಲದಿದ್ದ, ಭಾರತದ ಆತ್ಮ ಬಿಡಿ ಹೊರಾವರಣವನ್ನೇ ಅರಿಯದಿದ್ದ ಮೆಕಾಲೆ ಹೇಳುತ್ತಾನಲ್ಲ – ಭಾರತದ ಅಷ್ಟೂ ಸಂಸ್ಕೃತ ಸಾಹಿತ್ಯ ಇಂಗ್ಲೆಂಡಿನ ಪ್ರಾಥಮಿಕ ಶಾಲೆಗಳ ಸಾಧಾರಣ ಪಾಠಗಳನ್ನೂ  – ಎಂದು! ಅಂಥ ಹಲವು ಬಗೆಯ ಭರ್ತೃನವನ್ನು ಬ್ರಿಟಿಷರು ಸಂಸ್ಕೃತದ ಮೇಲೆ, ಸಂಸ್ಕೃತ ಮತ್ತು ಸಾಹಿತ್ಯವನ್ನು ಪೋಷಿಸಿಕೊಂಡುಬಂದ ಬ್ರಾಹ್ಮಣರ ಮೇಲೆ, ಭಾರತೀಯ ಸಂಸ್ಕೃತಿಯ ಮೇಲೆ, ಚಾರ್ತುರ್ವಣ್ಯದ ಮೇಲೆ ಬಿಡುವಿಲ್ಲದೆ ಮಾಡಿದರು. ಸಂಸ್ಕೃತದ ಮೇಲೆ ಅಪಾರ ಹಿಡಿತ, ಪ್ರೀತಿ ಇದ್ದಾಗ್ಯೂ ಮೋನಿಯೇರ್ ವಿಲಿಯಮ್‌ಸ್, ಸಂಸ್ಕೃತ-ಇಂಗ್ಲೀಷ್ ನಿಘಂಟು ಬರೆದದ್ದು ಯಾಕೆಂದರೆ ಇಂಗ್ಲೀಷ್ ಅದೆಂಥ ಪಂಡಿತಭಾಷೆ ಎಂಬುದನ್ನು ಪ್ರಚುರಪಡಿಸುವುದಕ್ಕಾಗಿ! ಇಂಗ್ಲೀಷ್ ಸಂಸ್ಕೃತಿ ಮತ್ತು ಕ್ರಿಶ್ಚಿಯನ್ ರಿಲಿಜನ್ – ಇವೆರಡನ್ನು ಹರಡುವುದೇ ನಮ್ಮ ಮುಖ್ಯ  ಎಂದು ಮೋನಿಯೇರ್ ತನ್ನ ಕೃತಿಯ ಪ್ರಸ್ತಾವನೆಯಲ್ಲಿ ಮುಚ್ಚುಮರೆಯಿಲ್ಲದೆ ಹೇಳಿಕೊಳ್ಳುತ್ತಾನೆ. ತಮಿಳುನಾಡಿಗೆ ಬಂದು, ತಮಿಳು ಕಲಿತು, ವಳ್ಳುವರ್‌ರ ತಿರುಕ್ಕುರಳ್ ಕೃತಿಯನ್ನು ಇಂಗ್ಲೀಷ್‌ಗೆ ಅನುವಾದಿಸಿದ – ಮತ್ತು ಆ ಮೂಲಕ ವಳ್ಳುವರ್ ಬಾಯಲ್ಲಿ ಬೈಬಲ್‌ನ ಸಾಲುಸಾಲುಗಳನ್ನು ಹೇಳಿಸಿದ – ಜಿ.ಯು. ಪೋಪ್ ಎಂಬ ಮಿಷನರಿ ತಾನು ಸಾಯುವ ಕಾಲಕ್ಕೆ ಹೇಳಿದ್ದೇನು ಗೊತ್ತೆ? ಭಾರತೀಯರನ್ನು ಮತಾಂತರಿಸಲು ನಾವು ಅವರದ್ದೇ ಭಾಷೆಯಲ್ಲಿ ಮಾತಾಡುವ ಅನಿವಾರ್ಯತೆಯಿತ್ತು. ಹಾಗಾಗಿ ತಮಿಳುದೇಶದಲ್ಲಿ ತಮಿಳು ಕಲಿತು, ಅವರ ಸಂಸ್ಕೃತಿಯನ್ನು ಒಡೆಯುವ  ನಾನು ಮಾಡಬೇಕಾಯಿತು. ತಿರುವಳ್ಳುವರ್ ಕೃತಿಯನ್ನು ಮೂಲಕ್ಕೆ ನಿಷ್ಠವಾಗಿ ನಾನು ಅನುವಾದಿಸಲಿಲ್ಲ; ಕೃತಿಯ ರಕ್ಷಾಪುಟವನ್ನು ಉಳಿಸಿಕೊಂಡು ಒಳಗೆ ನನ್ನ ಹೂರಣ ಸೇರಿಸಿದೆ!

ಇದು ಆ ಕಾಲದಲ್ಲಿ ಅತ್ಯಂತ ಓಪನ್ ಆಗಿ ನಡೆಯುತ್ತಿದ್ದ ಸಾಂಸ್ಕೃತಿಕ ವೈಟ್‌ವಾಷೀಕರಣ. ಭಾರತದ ನೆಲದಲ್ಲಿ ಇದ್ದವರು ಬುಡಕಟ್ಟು ಜನ. ಕಾಡುಗುಡ್ಡಗಳಲ್ಲಿ ಬೇಟೆಯಾಡುತ್ತ ಮಾಂಸವನ್ನು ಹಸಿಯೋ ಬೇಯಿಸಿಯೋ ತಿನ್ನುತ್ತ ಬದುಕುತ್ತಿದ್ದ ರೂಕ್ಷಜನ. ಅವರಿಗೆ ಸಾಹಿತ್ಯ ಬಿಡಿ, ಅಕ್ಷರದ ಗಂಧವೇ ಇರಲಿಲ್ಲ. ಅಂಥವರೆಲ್ಲ ಯುರೋಪಿಂದ ಬಂದು ಇಲ್ಲಿ ಬೇರುಬಿಟ್ಟ ಬಿಳಿಯರಿಂದ  – ಎಂಬ ಸಿದ್ಧಾಂತವನ್ನು ಬ್ರಿಟಿಷರು ಹಗಲಿರುಳು ನೇಯುತ್ತಿದ್ದರು. ಅದಕ್ಕಾಗಿ ನೂರಾರು ಬುದ್ಧಿವಂತರನ್ನು ಅಕ್ಷರಶಃ ಸೃಷ್ಟಿಸಿ ಭಾರತದಲ್ಲಿ ತಂದುಬಿಡಲಾಗುತ್ತಿತ್ತು. ಬಿಳಿದೊಗಲಿನ ಜನಕ್ಕೆ ಪೂರಕವಾಗುವಂಥ ಬುದ್ಧಿವಂತ ಥಿಯರಿಗಳನ್ನು ಹೆಣೆಯುವುದಕ್ಕಾಗಿ ಆ ಬುದ್ಧಿವಂತರಿಗೆ ಫೆಲೊಶಿಪ್‌ಗಳನ್ನು ಕೊಡಲಾಗುತ್ತಿತ್ತು. ಮ್ಯಾಕ್‌ಸ್ ಮುಲ್ಲರ್, ತನ್ನ ಜೀವನದ ಅಷ್ಟೂ ಸಿದ್ಧಾಂತಗಳನ್ನು ಹೆಣೆದದ್ದು ಬ್ರಿಟಿಷ್ ಸರಕಾರದ ಫೆಲೊಶಿಪ್ ನೆರಳಿನಲ್ಲಿ. ಆತ ಹುಟ್ಟಿಸಿದ ಆರ್ಯ-ದ್ರಾವಿಡ ಥಿಯರಿಯನ್ನು ನಂತರ ತಮಿಳುನಾಡಿಗೆ ಬಂದ ರಾಬರ್ಟ್ ಕಾಲ್‌ಡ್ವೆಲ್ ಮುಂದುವರಿಸಿದ. ತಮಿಳೊಂದನ್ನಷ್ಟೇ ಕಲಿತು ದಕ್ಷಿಣ ಭಾರತದ ದ್ರಾವಿಡ  ತುಲನಾತ್ಮಕ ಅಧ್ಯಯನ ಎಂಬ ಸಂಶೋಧನಾ ಕೃತಿ ಬರೆದ ಕಾಲ್‌ಡ್ವೆಲ್‌ನ ಸಾಧನೆ ಏನೆಂದರೆ ಭಾಷೆಯ ಬಗ್ಗೆ ಚರ್ಚಿಸುವುದನ್ನು ಬಿಟ್ಟು ದ್ರಾವಿಡರೆಂಬ ಹೊಸ ಸಮುದಾಯವನ್ನು ಸೃಷ್ಟಿಸಲು ತನ್ನ ಪುಸ್ತಕದ ಮುಕ್ಕಾಲು ಭಾಗವನ್ನು ಮೀಸಲಿಟ್ಟದ್ದು! (ಇನ್ನೊಂದು ಮಹಾನ್ ಸಾಧನೆ, ಬ್ರಾಹ್ಮಿನಿಕಲ್ ಆರ್ಯನ್‌ಸ್ ಎಂಬ ಜಾರ್ಗನ್ ಪದವನ್ನು ಸೃಷ್ಟಿಸಿದ್ದು! ಜೆಎನ್ಯು ಪಂಡಿತರಿಗಂತೂ ಬ್ರಾಹ್ಮಿನಿಕಲ್ ಎಂಬ ಪದ ಆಪ್ಯಾಯಮಾನ!) ಫ್ರಾನ್ಸಿಸ್ ವೈಟ್ ಎಲ್ಲಿಸ್ ಎಂಬಾತನ ದ್ರಾವಿಡಿಯನ್ ಲ್ಯಾಂಗ್ವೇಜ್ ಹೈಪಾಥಿಸಿಸ್ ಎಂಬ ಕೃತಿಯ ಹಾಳೆಹಾಳೆಗಳನ್ನೇ ಕಾಪಿ ಮಾಡಿ  ಪುಸ್ತಕ ಬರೆದ ಕಾಲ್‌ಡ್ವೆಲ್, ಬರೋಬ್ಬರಿ ನಲವತ್ತು ವರ್ಷಗಳ ಕಾಲ ತನ್ನ ಹೆಂಡತಿ, ಅತ್ತೆ, ಮಾವಂದಿರ ಜೊತೆಗೂಡಿ ತಮಿಳುನಾಡಿನಲ್ಲಿ ಬ್ರಾಹ್ಮಣರ ಮೇಲೆ ಉಳಿದ ಜಾತಿಗಳನ್ನು ಎತ್ತಿಕಟ್ಟುವ ಕೆಲಸ ಮಾಡಿದ. ಬಹುಸಂಖ್ಯೆಯಲ್ಲಿದ್ದ ಕೆಳವರ್ಗದ ಮಂದಿಯನ್ನು ತನ್ನ ಮತಾಂತರದ ತೆಕ್ಕೆಗೆಳೆದುಕೊಳ್ಳಲು ಮುಖ್ಯ ತಡೆಗೋಡೆಯಾಗಿರುವವರು ಬ್ರಾಹ್ಮಣರು ಎಂಬುದನ್ನು ಅರ್ಥ ಮಾಡಿಕೊಂಡ ಕಾಲ್‌ಡ್ವೆಲ್ ಅವೇ ಎರಡು ಜಾತಿಗಳ ಮಧ್ಯೆ ವೈಷಮ್ಯ ತಂದಿಟ್ಟರೆ ತನ್ನ ಕೆಲಸ ಸಲೀಸಾಗುತ್ತದೆಂದು ಬಗೆದ. ನಾಲ್ಕು ದಶಕಗಳಲ್ಲಿ ಸಹಸ್ರಾರು ಮಂದಿಯನ್ನು ಈತನೂ ಈತನ  ಸೇರಿ ತಮಿಳುನಾಡಲ್ಲಿ ಮತಾಂತರ ಮಾಡಿತು. ಅದಕ್ಕೆ ಕೃತಜ್ಞತೆಯೆನ್ನುವಂತೆ ಚರ್ಚ್ ಆಫ್ ಸೌತ್ ಇಂಡಿಯಾದವರು ಚೆನ್ನೈಯ ಮರೀನಾ ಬೀಚ್‌ನಲ್ಲಿ ಈತನ ದೊಡ್ಡದೊಂದು ಪ್ರತಿಮೆಯನ್ನು 1967ರಲ್ಲಿ ನಿಲ್ಲಿಸಿದರು. ನಮ್ಮ ದೇಶದ ಶಿಕ್ಷಣ ಅದೆಷ್ಟು ಕುಲಗೆಟ್ಟುಹೋಗಿದೆಯೆಂದರೆ, ಆರ್ಯರ ಆಕ್ರಮಣಕಾರೀ ಕೈಗಳಲ್ಲಿ ನಲುಗಿ ಬಸವಳಿದಿದ್ದ ದ್ರಾವಿಡರನ್ನು ಉದ್ಧರಿಸಿದ ಮಹಾಪುರುಷ ಎಂದೇ ಕಾಲ್‌ಡ್ವೆಲ್‌ನ ಬಗ್ಗೆ ವಿದ್ಯಾವಂತ ತಮಿಳರು ಇಂದಿಗೂ ತಿಳಿದಿದ್ದಾರೆ!

ರಾಬರ್ಟ್ ಮತ್ತು ಎಲಿಜಾ ಕಾಲ್‌ಡ್ವೆಲ್, ಚಾರ್ಲ್‌ಸ್ ಮತ್ತು ಮಾರ್ಥಾ ಮೌಲ್‌ಟ್, ಜಾನ್ ಡಿ ಬ್ರಿಟ್ಟೋ  ಮೊದಲಾದವರು ಸೃಷ್ಟಿಸಿ, ಬೆಳೆಸಿ, ಹಬ್ಬಿಸಿದ ದ್ರಾವಿಡ ಚಳವಳಿಯನ್ನು ಸ್ವಾತಂತ್ರ್ಯಾನಂತರದ ಭಾರತದಲ್ಲಿ ರಾಜಕೀಯಕ್ಕೆ ಬಳಸಿಕೊಳ್ಳಲಾಯಿತು. ಸ್ವಾತಂತ್ರ್ಯಾನಂತರದ ದ್ರಾವಿಡ ಚಳವಳಿಗೆ ಬೇಕಾದ ನೆಲವನ್ನು ಹಸನುಮಾಡಿಕೊಟ್ಟವನು ಇ.ವಿ. ರಾಮಸಾಮಿ ನಾಯ್ಕರ್. ಆರ್ಯದ್ವೇಷ ಈ ಮನುಷ್ಯನೊಳಗೆ ಅದೆಷ್ಟು ಹುತ್ತಗಟ್ಟಿತ್ತೆಂದರೆ ಭಾರತ ಸ್ವತಂತ್ರಗೊಳ್ಳುತ್ತದೆಂಬ ಸುದ್ದಿ ಬಂದಾಗ ಈತ ಮದ್ರಾಸಿನ ಪರಂಗಿ ಗವರ್ನರ್ ಬಳಿ ಹೋಗಿ ದೇಶ ಬಿಡಬಾರದೆಂದು ಅಂಗಲಾಚಿದ. ದೇಶ ಸ್ವತಂತ್ರವಾಗಿಯೇ ಆಗುತ್ತದೆ, ಬ್ರಿಟಷರು ಭಾರತ ಬಿಟ್ಟೇಹೋಗುತ್ತಾರೆಂಬುದು ಖಾತ್ರಿಯಾದ ಮೇಲೆ ಮಹಮ್ಮದ್ ಅಲಿ ಜಿನ್ನಾಗೆ ಪತ್ರ  ರಾಮಸಾಮಿ, ತಮಿಳುನಾಡು ಎಷ್ಟು ಮಾತ್ರಕ್ಕೂ ಭಾರತದ ಭಾಗವಾಗಕೂಡದೆಂದೂ ಪಾಕಿಸ್ತಾನದಂತೆಯೇ ತಮಿಳುನಾಡನ್ನು ದ್ರವಿಡಸ್ತಾನವಾಗಿಸಲು ಬೆಂಬಲ ಕೊಡಬೇಕೆಂದೂ ಕೇಳಿಕೊಂಡ! ಅಂದು ಆತ ಊರಿದ ವಿಷಬೀಜ ಇಂದು ಹೆಮ್ಮರವಾಗಿ ಬೆಳೆದಿದೆ. ಆರ್ಯರನ್ನು ದ್ವೇಷಿಸುವ ಸಲುವಾಗಿ ತಮಿಳರು ಉತ್ತರ ಭಾರತೀಯರನ್ನು, ಅವರಾಡುವ ಹಿಂದಿಯನ್ನು, ಈ ದೇಶದ ಪ್ರಧಾನಿಯನ್ನು ಕೂಡ ದ್ವೇಷಿಸುವ ಮಟ್ಟಕ್ಕೆ ಹೋಗಿದ್ದಾರೆ. ಕಾಲ್‌ಡ್ವೆಲ್, ಬ್ರಿಟ್ಟೋ, ಜಿ.ಯು. ಪೋಪ್ ಮೊದಲಾದ ದುರುಳರ ಪ್ರೇತಾತ್ಮಗಳು ತಮಿಳುನಾಡಿನ ಆಕಾಶದಲ್ಲಿ ಕೇಕೆ ಹಾಕುತ್ತ ಕುಣಿಯುತ್ತಿರಬಹುದು!

ಸ್ವಾತಂತ್ರ್ಯ ಬಂದ ಮೇಲೆ  ದೇಶದಲ್ಲಿ ಪಠ್ಯಪುಸ್ತಕಗಳನ್ನು ಬರೆವ ಗುತ್ತಿಗೆ ಪಡೆದವರು ನೆಹರೂ ಕಣ್ಮಣಿಗಳಾಗಿದ್ದ ಸೋಷಲಿಸ್‌ಟ್, ಕಮ್ಯುನಿಸ್‌ಟ್ ಬುದ್ಧಿಜೀವಿಗಳು. ತಮ್ಮ ಆರಾಧ್ಯದೈವವಾದ ಕಾರ್ಲ್ ಮಾರ್ಕ್‌ಸ್ ಆರ್ಯ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದ್ದರಿಂದ ಈ ಬುದ್ಧಿಜೀವಿಗಳೂ ಆ ಥಿಯರಿಯನ್ನು ಕುರುಡಾಗಿ ನಂಬಿದರು. ಆರ್ಯ – ದ್ರಾವಿಡ ಬಿಕ್ಕಟ್ಟಿನ ಬಗ್ಗೆ ಇತಿಹಾಸದ ಪಠ್ಯದಲ್ಲಿ ಥಾನು ಥಾನು ಬರೆದರು. ದುರ್ದೈವವೆಂದರೆ, ಇವರೆಲ್ಲ ಇತಿಹಾಸದ ಹೆಸರಲ್ಲಿ ಬರೆದ ಬೊಗಳೆಗಳನ್ನು, ಊಹಾ ಸಿದ್ಧಾಂತಗಳನ್ನು, ಸುಳ್ಳಿನ ಸರಮಾಲೆಯಾಗಿದ್ದ ಲೊಟ್ಟೆ ಲುಸ್ಕುಗಳನ್ನು ನಾವೆಲ್ಲ ಸತ್ಯಸ್ಯ ಸತ್ಯ  ಕಣ್ಣಿಗೊತ್ತಿಕೊಂಡು ನಂಬಿ ಓದಿ ಉರುಹೊಡೆದು ಪರೀಕ್ಷೆಯಲ್ಲಿ ಬರೆದು ಮಾರ್ಕು ಪಡೆದೆವು! ತಮಾಷೆಯೆಂದರೆ, ಆರ್ಯರು ಭಾರತದ ಮೇಲೆ ಆಕ್ರಮಣ ಮಾಡಿದರು ಎಂಬುದಕ್ಕೆ ಎಡಪಂಥೀಯ ಬುದ್ಧಿಜೀವಿಗಳು ಅದೆಷ್ಟು ಅಗೆದು ಗುಡ್ಡೆಹಾಕಿದರೂ ಒಂದೇ ಒಂದು ಸಾಕ್ಷ್ಯವೂ ಸಿಗಲಿಲ್ಲ. ಆಗ, ಆಕ್ರಮಣ ಎಂಬ ಪದವನ್ನು ನಯವಾಗಿ ಕೈಬಿಟ್ಟು ಆಗಮನ ಎಂಬ ಹೊಸ ಪದ ಪ್ರಯೋಗಿಸತೊಡಗಿದರು. ಆರ್ಯರು ಆಕ್ರಮಣ ಮಾಡಲಿಲ್ಲ; ನಿಧಾನವಾಗಿ ಬಂದು ಈ ದೇಶದಲ್ಲಿ ಸೇರಿಕೊಂಡು ದ್ರಾವಿಡರನ್ನು ದಕ್ಷಿಣಕ್ಕೆ ಒತ್ತಿಬಿಟ್ಟರು – ಎಂಬ ಹೊಚ್ಚಹೊಸ  ನೇಯ್ದರು! ಭಾರತದ ಉದ್ದಗಲಕ್ಕೂ ಹರಡಿದ್ದ ದ್ರಾವಿಡರನ್ನು ದಕ್ಷಿಣಕ್ಕೆ – ಅದೂ ತಮಿಳುನಾಡಿನಂಥ ಒಂದೇ ಒಂದು ಸಣ್ಣ ರಾಜ್ಯಕ್ಕೆ ಒತ್ತಿಡಬೇಕಾದರೆ ಆರ್ಯರು ಅದೆಷ್ಟು ಲಕ್ಷ ಸಂಖ್ಯೆಯಲ್ಲಿ ಬಂದಿರಬೇಕು! ಹಾಗೆ ಅವರು ಒತ್ತಿದೊಡನೆ ಇವರು ಇತ್ತ ಓಡೋಡಿಬಂದು ತಮಿಳುನಾಡು ಸೇರಿಕೊಂಡರೆ? ಯಾವ ದ್ರಾವಿಡನೂ ಪ್ರತಿರೋಧ ತೋರಲಿಲ್ಲವೆ? ಹಾಗೆ ಆರ್ಯರು ಬಂದಾಗ ಅವರಿಗೂ ಇವರಿಗೂ ದೊಡ್ಡಮಟ್ಟದ ಯುದ್ಧಗಳೇನೂ ನಡೆಯಲಿಲ್ಲವೆ? ಜಗ್ಗಿ ವಾಸುದೇವ್, ಆರ್ಯರು ಆಕ್ರಮಣಕಾರಿಗಳಾಗಿದ್ದರು. ಹಾಗಾಗಿ ಇಡೀ ಭಾರತ ಆಕ್ರಮಿಸಿಕೊಂಡರು. ಭೂಮಿಪೂಜಕರೂ ರೈತರೂ  ದ್ರಾವಿಡರು ರಾಜ್ಯಾಕಾಂಕ್ಷಿ ಆರ್ಯರ ಹಾಗೆ ರಾಜ್ಯವಿಸ್ತರಣೆಗೆ ಹೊರಟ ನಿದರ್ಶನಗಳಿಲ್ಲ ಎಂದು ಹೇಳುವ ಮೂಲಕ ಭಾರತದ ಇತಿಹಾಸಕ್ಕೆ ಮಾತ್ರವಲ್ಲ, ದ್ರಾವಿಡರ ಇತಿಹಾಸಕ್ಕೂ ಅಪಚಾರ ಮಾಡಿದ್ದಾರೆ. ಇಡೀ ಆಗ್ನೇಯ ಏಷ್ಯದ ಇತಿಹಾಸವೇ ದಕ್ಷಿಣ ಭಾರತದ ದೊರೆಗಳ ವಿಜಯಯಾತ್ರೆಗಳ ಇತಿಹಾಸ. ಏಷ್ಯದ ಅಷ್ಟೂ ದೇಶಗಳಲ್ಲಿ ಸಾಮ್ರಾಜ್ಯ ಕಟ್ಟಿದವರು, ಅಂಗ್ಕೋರ್ ವಾಟ್‌ನಂಥ ದೇಗುಲ ಸಮುಚ್ಚಯ ಕಟ್ಟಿದವರು ದಕ್ಷಿಣ ಭಾರತದ ರಾಜರುಗಳು. ಆಗ್ನೇಯ ಏಷ್ಯಕ್ಕೆ ರಾಮಾಯಣ, ಮಹಾಭಾರತಗಳನ್ನು ಕೊಟ್ಟವರು; ಅಲ್ಲಿನ ದೇವಾಲಯಗಳಲ್ಲಿ ಪುರಾಣ-ಭಾಗವತಗಳಿಗೆ ಸಂಬಂಧಿಸಿದ ಶಿಲ್ಪಗಳನ್ನು  ಭಾರತೀಯರು; ಜಗ್ಗಿ ಹೇಳುವ ದ್ರವಿಡದೇಶಸ್ಥರು! ನಮ್ಮ ಶಾಲೆಗಳಲ್ಲಿ ಮಕ್ಕಳು ಫ್ರೆಂಚ್ ಕ್ರಾಂತಿ, ಜರ್ಮನ್ ಕ್ರಾಂತಿ, ಅಮೆರಿಕಾ ಕ್ರಾಂತಿಗಳ ಪಾಠ ಓದುವಂತೆ ಆಗ್ನೇಯ ಏಷ್ಯದ ಇತಿಹಾಸವನ್ನು ಒಂದು ಪುಟದಷ್ಟಾದರೂ ಓದುತ್ತಾರೆಯೇ? ನಮ್ಮ ಸರಕಾರಗಳು ಓದಿಸುತ್ತವೆಯೇ? ಅದ್ಯಾವುದೋ ದೂರದ ಕ್ಯೂಬಾ, ಅಲಾಸ್ಕ, ಗ್ರೀನ್‌ಲ್ಯಾಂಡ್ ಬಗ್ಗೆ ಗೊತ್ತಿದ್ದಂತೆ ನಮಗೆ ನಮ್ಮದೇ ಪಕ್ಕದ ಫಿಲಿಪ್ಪೈನ್‌ಸ್, ಕಾಂಬೋಡಿಯಾ, ವಿಯೆಟ್ನಾಂ, ಜಾವಾ-ಸುಮಾತ್ರ, ಸಿಂಗಪುರಗಳ ಇತಿಹಾಸ ಗೊತ್ತಿದೆಯೇ? ಆ ದೇಶಗಳ ಹೆಸರೇ ನೆಟ್ಟಗೆ ಗೊತ್ತಿಲ್ಲದ ಮೇಲೆ ಅಲ್ಲಿನ ಇತಿಹಾಸದಲ್ಲಿ  ಪಾತ್ರದ ಬಗ್ಗೆ ತಿಳಿದಿರುವುದು ದೂರದ ಮಾತು! ಜಗ್ಗಿ ಕೂಡ ಇಂಥ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಉರುಳಿ ಬಂದಿರುವ ಫ್ಯಾಕ್ಟರಿ ಪ್ರಾಡಕ್ಟೇ ಆಗಿರುವಾಗ ಅವರಿಂದ ಹೊಸದನ್ನು, ಸತ್ಯವನ್ನು ನಿರೀಕ್ಷಿಸುವುದು ಹೇಗೆ!

ಕಳೆದೆರಡು ದಶಕಗಳಿಂದ ನಡೆದ ಡಿಎನ್‌ಎ ಪ್ರಯೋಗಗಳಿಂದ ಆರ್ಯ-ದ್ರಾವಿಡ ಸಿದ್ಧಾಂತ ಒಂದು ಮಿಥ್ಯೆಯೆಂಬುದು ವೈಜ್ಞಾನಿಕವಾಗಿ ಸಾಧಿತವಾಗಿದೆ. ದ್ರಾವಿಡರು ಈ ದೇಶದ ಮೂಲನಿವಾಸಿಗಳು; ಆರ್ಯರು ಹೊರಗಿಂದ ಬಂದರು. ಬ್ರಾಹ್ಮಣರು ಆರ್ಯರಾಗಿರುವುದರಿಂದ ಅವರೂ ಹೊರಗಿಂದ ಬಂದವರು. ಹಾಗಾಗಿ ಅವರನ್ನು ದ್ವೇಷಿಸಬೇಕು ಎಂಬ ಪೂರ್ವಗ್ರಹದ  ಮೊದಲು ನಾವು ಕಳೆದುಕೊಳ್ಳಬೇಕಿದೆ. ರಾವಣ, ಪುಲಸ್ತ್ಯ ಋಷಿಯ ಮೊಮ್ಮಗ. ಬ್ರಹ್ಮನ ಮರಿಮೊಮ್ಮಗ. ಬ್ರಾಹ್ಮಣ. ಆದರೂ ರಾಕ್ಷಸ! ಉತ್ತರ ಭಾರತದಲ್ಲಿ ಹುಟ್ಟಿದ ರಾವಣ, ದಕ್ಷಿಣದವರೆಗೆ ದಂಡೆತ್ತಿಬಂದು ಲಂಕೆಯನ್ನು ಕುಬೇರನೆಂಬ ಅನುಜನಿಂದ ಕಸಿದುಕೊಂಡ. ಲಂಕಾಧೀಶ್ವರನಾಗಿ ಬಹು ವರ್ಷಗಳ ಕಾಲ ಆಳಿದ. ದಕ್ಷಿಣದವರೆಲ್ಲ ಅಸುರರು, ಕಪ್ಪಗಿದ್ದವರು, ಅಬ್ರಾಹ್ಮಣರು ಮತ್ತು ಉತ್ತರದ ಮಂದಿ ದೇವತೆಗಳು, ಬೆಳ್ಳಗಿದ್ದವರು, ಬ್ರಾಹ್ಮಣರು ಎಂಬ ಥಿಯರಿ ಹೆಣೆದರೆ ಈ ಮೇಲಿನದನ್ನೆಲ್ಲ ವಿವರಿಸುವುದು ಹೇಗೆ? ಇನ್ನು ಈ ಸಿದ್ಧಾಂತಿಗಳು ಹೇಳುವ ಪ್ರಕಾರ  ಉತ್ತರದವನಾದ್ದರಿಂದ ಆರ್ಯನಾಗಬೇಕು. ಆದರೆ ಅವನ ಹೆಸರೇ ಹೇಳುತ್ತಿಲ್ಲವೆ ಅವನು ಕಪ್ಪಗಿದ್ದನೆಂದು? ಕಪ್ಪಗಿದ್ದವರೆಲ್ಲ ರಾಕ್ಷಸರು ಎಂಬ ಸರಳ ಸಮೀಕರಣ ಬರೆಯುವುದಾದರೆ ಕೃಷ್ಣನನ್ನು ಯಾವ ಕೆಟಗರಿಯಲ್ಲಿ ಹಾಕಬೇಕು? ದ್ರುಪದ ದೇಶದ ಸುಂದರಿ ದ್ರೌಪದಿ ಕೂಡ ಕಪ್ಪಗಿದ್ದವಳಲ್ಲವೆ? ಉತ್ತರ ಭಾರತದಲ್ಲಿದ್ದ ಕಂಸ, ನರಕಾಸುರರು ರಾಕ್ಷಸರಲ್ಲವೆ? ರಾವಣ ಎಂಬುದು ಸಂಸ್ಕೃತ ಹೆಸರಲ್ಲ; ಅದು ತಮಿಳಿನ ಇರೈವನ್ (=ರಾಜ) ಎಂಬ ಹೆಸರಿಂದ ಬಂದದ್ದು ಎಂದು ಮತ್ತೊಬ್ಬ ಬ್ರಿಟಿಷ್ ಬುದ್ಧಿಜೀವಿ ಎಫ್. ಇ. ಪರ್ಗಿಟರ್ ಬರೆದಿದ್ದಾನೆ. ಲಂಕೇಶ,  ದಶಗ್ರೀವ ಎಂಬ ಹೆಸರುಗಳಿಗೂ ಇಂಥವೇ ತಮಿಳುಮೂಲಗಳು ಸಿಕ್ಕಿಯಾವೆ? ಆತ ನಿಜಕ್ಕೂ ಸಂಸ್ಕೃತದ್ವೇಷಿ ದ್ರವಿಡನೇ ಆಗಿದ್ದರೆ ತನ್ನ ಮಕ್ಕಳಿಗೆ ಇಂದ್ರಜಿತ್, ಅತಿಕಾಯ, ಅಕ್ಷಯಕುಮಾರ, ನರಾಂತಕ, ದೇವಾಂತಕ, ತ್ರಿಶಿರ, ಪ್ರಹಸ್ತ ಎಂಬಂಥ ಅಪ್ಪಟ ಸಂಸ್ಕೃತ ಹೆಸರುಗಳನ್ನು ಏಕಿಟ್ಟ ಎಂಬ ಪ್ರಶ್ನೆ ಬರುತ್ತದೆ. ರಾವಣನ ವಂಶವೃಕ್ಷದಲ್ಲಿರುವ ಎಲ್ಲಾ ಹೆಸರುಗಳಿಗೂ ತಮಿಳಿನ ಮೂಲ ಹುಡುಕಬೇಕಾದ ದೊಡ್ಡ ಕೆಲಸ ದ್ರವಿಡಪಂಥೀಯ ಬುದ್ಧಿಜೀವಿಗಳದ್ದಾಗುತ್ತದೆ. ತಮಿಳು ಸ್ವತಂತ್ರವಾಗಿ ಉದಿಸಿತು; ಅದಕ್ಕೆ ಸಂಸ್ಕೃತದ ಯಾವ ಬೆಂಬಲವೂ ಇಲ್ಲ ಎಂದು ವಾದಿಸುವವರ  ಹೊಂಡ ಕೂಡ ಇಷ್ಟೇ ದೊಡ್ಡದು. ಅದನ್ನವರು ವಿತಂಡವಾದವೆಂಬ ಬೂದಿಯಿಂದ ಮುಚ್ಚಿಕೊಳ್ಳಬೇಕಾಗುತ್ತದೆ.

ನಮ್ಮ ದೇಶದಲ್ಲಿ ಬಾಬಾಗಳಿಗೆ, ಸ್ವಾಮೀಜಿಗಳಿಗೆ ಬರ ಇಲ್ಲ. ಯಾವ ಪ್ರಶ್ನೆಗೂ ಈ ಬಾಬಾಗಳಿಂದ ಉತ್ತರ ಸಿಗುತ್ತದೆ ಎಂದು ಜನ ನಂಬಿರುತ್ತಾರೆ. ಅದು ಜನರ ತಪ್ಪಲ್ಲ, ಮುಗ್ಧತೆ. ಆದರೆ ಜನ ಕೇಳುವ ಯಾವ ಪ್ರಶ್ನೆಗೂ ತಾವು ಉತ್ತರ ಹೇಳಬಲ್ಲೆವೆಂದು ಬಾಬಾಗಳೂ ತಿಳಿದಿರುತ್ತಾರೆ. ಅದು ಮಗ್ಧತೆಯಲ್ಲ, ಉಡಾಫೆ. ಅಹಂಕಾರ. ಅಜ್ಞಾನದ ಪರಮಾವಧಿ. ಗೊತ್ತಿರುವ ವಿಷಯವನ್ನಷ್ಟೇ ಮಾತಾಡಿ; ಗೊತ್ತಿಲ್ಲದ್ದನ್ನು ಪ್ರಾಮಾಣಿಕವಾಗಿ ಗೊತ್ತಿಲ್ಲ  ಒಪ್ಪಿಕೊಳ್ಳುವ ಮೂಲಕ ನಮ್ಮ ಘನತೆಯನ್ನು ಉಳಿಸಿಕೊಳ್ಳುವುದನ್ನು ನಾವು ಕಲಿಯಬೇಕಿದೆ.

Tags

ರೋಹಿತ್ ಚಕ್ರತೀರ್ಥ

ಶಿಕ್ಷಣ ಕ್ಷೇತ್ರದಲ್ಲಿ ಕನ್ಸ್‌ಲ್ಟೆಂಟ್‌ ಆಗಿರುವ ಅಂಕಣಕಾರರು, ಕನ್ನಡದ ಕೆಲವೇ ಕೆಲವು ವಿಜ್ಞಾನ ಲೇಖಕರಲ್ಲಿ ಒಬ್ಬರು. ಇದುವರಗೆ ಪ್ರಕಟವಾಗಿರುವ ಗಣಿತ, ವಿಜ್ಞಾನ, ರಾಜಕೀಯ ವಿಷಯದ ಪುಸ್ತಕಗಳು ಎಲ್ಲ ವರ್ಗದ ಓದುಗರಿಗೂ ಉಪಯುಕ್ತವಾದುದು. ಇವರ ಅಂಕಣ ಚಕ್ರವ್ಯೂಹವನ್ನು ಪ್ರತೀ ಮಂಗಳವಾರ ಓದಬಹುದು.

Related Articles

Leave a Reply

Your email address will not be published. Required fields are marked *

Language
Close