About Us Advertise with us Be a Reporter E-Paper

ಅಂಕಣಗಳು

ದೀದಿಗೆ ಏಕೆ ವಲಸಿಗರ ಮೇಲೆ ಹಿಡಿ ಮಮತೆ ಜಾಸ್ತಿ?

ವಿಶ್ಲೇಷಣೆ: ರಾಹುಲ್ ಅಶೋಕ್ ಹಜಾರೆ

ಏನು ಬೇಕಾದರೂ ಮಾಡಲು ಸಿದ್ಧವಾಗಿರುವ ರಾಜಕಾರಣಿಗಳ ದಂಡೇ ಭಾರತದ ತುಂಬಾ ಇದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, 2005ರಲ್ಲಿ ಎನ್‌ಡಿಎಯ ಮಿತ್ರಪಕ್ಷಗಳಲ್ಲಿ ಒಬ್ಬರಾಗಿದ್ದರು. ಬಾಂಗ್ಲಾದಿಂದ ಬಂದ ನುಸುಳುಕೋರರು ವಿರೋಽಗಳ ವೋಟ್ ಬ್ಯಾಂಕ್ ಆಗಿರುವುದರಿಂದಲೇ ಬಾಂಗ್ಲಾ ಅಕ್ರಮ ವಲಸಿಗರನ್ನು ದೇಶದಿಂದ ಹೊರಗೆ ಕಳುಹಿಸಲೇಬೇಕು ಎಂಬ ಅಹವಾಲಿನಿಂದ ಸಂಸತ್ತಿನಲ್ಲಿ ಅತ್ತು-ಕರೆದು ದೊಡ್ಡ ರಂಪ ಮಾಡಿದ್ದರು. ಮಾತಾಡಲು ಅವಕಾಶ ಕೊಡಲಿಲ್ಲ ಎಂದು ಸ್ಪೀಕರ್ ಮುಖಕ್ಕೆ ಕಾಗದ ಪತ್ರಗಳನ್ನೆಲ್ಲ ಎಸೆದಿದ್ದರು. ರಾಜಕೀಯದ ರಾಜಕಾರಣದ ಕನಿಷ್ಠ ಅರಿವಿದ್ದವರಿಗೂ ದೀದಿ ಆಗಾಗ್ಗೆ ತೋರಿಸುವ  ಈ ಅತಿರೇಕದ ಪ್ರತಿಕ್ರಿಯೆಗಳ ಪರಿಚಯ ಇದ್ದೇ ಇರುತ್ತದೆ. ದೀದಿ ಸದ್ಯದ ಮಟ್ಟಿಗೆ ಪಶ್ಚಿಮ ಬಂಗಾಳದ ಪ್ರಶ್ನಾತೀತ ಮುಖ್ಯಮಂತ್ರಿಯೂ ಹೌದು.

ದೀದಿಯನ್ನು ಅವತ್ತು ಎಲ್ಲರೂ ದೇಶಭಕ್ತೆ ಎಂದುಕೊಂಡಿದ್ದರು. ಆದರೆ ಒಳಗಿದ್ದ ವೋಟ್ ಬ್ಯಾಂಕ್ ಹಸಿವಿನಿಂದ ಇವತ್ತು ಅವರ ನಿಜವಾದ ಬಣ್ಣ ಬಯಲಾಗಿದೆ. ಸದ್ಯದ ಕೇಂದ್ರ ಸರಕಾರ ರಾಷ್ಟ್ರೀಯ ಪೌರತ್ವ ನೋಂದಣಿ ಚಾಲನೆ ನೀಡಿ ಅದರ ಕರಡು ಪ್ರತಿಯನ್ನು ಹಿಡಿದು ನಿಂತಾಗ ದೀದಿ ವಲಸಿಗರ ಮೇಲೆ ಹಿಡಿ ಮಮತೆ ಜಾಸ್ತಿಯೇ ತೋರುತ್ತಿzರೆ. ಅಸ್ಸಾಂನ ಮೇಲೆ ಪಾಕಿಸ್ತಾನಕ್ಕೂ, ಮತ್ತು ಅದರಿಂದ ಬೇರೆಯಾದ ಬಾಂಗ್ಲಾಗೂ ಒಂದು ಕಣ್ಣು ಇದ್ದೇ ಇದೆ. ಇದಕ್ಕೆ ಹಲವಾರು ಕಾರಣಗಳಿವೆ. ಯಾವಾಗ ಅಸ್ಸಾಂನ ಕಬಳಿಕೆ ಸಾಧ್ಯವಾಗಲಿಲ್ಲವೋ ಆಗಿನಿಂದ ನುಸುಳುಕೋರರನ್ನು ಭಾರತದೊಳಕ್ಕೆ ಹರಿಬಿಟ್ಟು ದೇಶಕ್ಕೆ ತಮಗೆ ಬೇಕಾದ ಪಕ್ಷ ಮತ್ತು ನಾಯಕರನ್ನು ಅವರ ಮೂಲಕ ಆರಿಸಿ ಕಳಿಸುವ ಹುನ್ನಾರ ನಡೆದೇ ಇದೆ. ಹೊರಗಿದ್ದುಕೊಂಡೇ ತನ್ನ ವಿರೋಽ ರಾಷ್ಟ್ರವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ತಂತ್ರವಿದು.

 ಭಾರತ, ಬಾಂಗ್ಲಾ ದೇಶದೊಂದಿಗೆ ೪೧೫೬ ಕಿಲೋಮೀಟರ್‌ನಷ್ಟು ಗಡಿಯನ್ನು ಹಂಚಿಕೊಂಡಿದೆ. ಬಾಂಗ್ಲಾಗೆ ಆತುಕೊಂಡ ಆಸ್ಸಾಂ, ತ್ರಿಪುರಾ, ಮಿಜೋರಾಂ, ಮೇಘಾಲಯ, ಪಶ್ಚಿಮ ಬಂಗಾಳ ಐದು ರಾಜ್ಯಗಳಲ್ಲೂ ಈ ಅಕ್ರಮ ವಲಸಿಗರು ನಿಸ್ಸಂದೇಹವಾಗಿ ನೆಲೆಸಿzರೆ. ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಂತೂ ಅಂದಾಜಿಗೆ ಸಿಗದಷ್ಟು ಜನರಿzರೆ! ಸದ್ಯಕ್ಕೆ ದೀದಿ ಶರಂಪರ ಕೂಗಾಟ ಶುರುಮಾಡಿದ್ದು, ಹಿಂದೆ ವಿಷಾನಿಲವಾಗಿದ್ದ ಈ ಜನ ಈಗ ಆಕೆಯ ಪ್ರಾಣವಾಯುವಾಗಿರುವ ವಿಷಯ ಬಿಡಿಸಿ ಹೇಳಬೇಕಿಲ್ಲ ಅಲ್ಲವೇ? ಇಷ್ಟು ದಿನ ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಬೊಬ್ಬೆ ಹಾಕಿದವರೇ ಇವತ್ತು ಅಸಹಿಷ್ಣು ದೇಶದಲ್ಲಿ ಈ ನುಸುಳುಕೋರರಿಗೆ ನೆಲೆ ಕೊಡುವಂತೆ ಬಾಯಿ ಬಡಿದುಕೊಳ್ಳುತ್ತಿzರೆ.

ನರೇಂದ್ರ ಮೋದಿ ಸರಕಾರ ಬಂದ ತಕ್ಷಣ ಅವರು ಅನುಸರಿಸಿದ ವಿದೇಶಾಂಗ ನೀತಿ ವಿಶ್ವದ ಯಾವ ನಾಯಕನಿಗೂ ಅನುಕರಣೀಯ. ಇಂಥ ಸಮಯದಲ್ಲಿ ಈ ಅಕ್ರಮ ವಲಸಿಗರ ಪರವಾಗಿ ನಿಲ್ಲಬಹುದಾಗಿದ್ದ ಅಷ್ಟೂ ದೇಶಗಳೊಂದಿಗೆ ಸುಮಧುರ ಬಾಂಧವ್ಯ ಬೆಸೆದಿzರೆ. ಸ್ವತಃ ಬಾಂಗ್ಲಾದೊಂದಿಗಿನ ಸಂಬಂಧವನ್ನೇ ನೋಡಿ. ಬಾಂಗ್ಲಾ ದೇಶದ ಕರಾವಳಿ ಮತ್ತು ಭೂ ಭಾಗದ ಗಡಿ ಹಂಚಿಕೆ ಬಹಳ ದಿನದಿಂದ ನನೆಗುದಿಗೆ ಬಿದ್ದದ್ದು ಬಗೆಹರಿಯಿತು. ರಸ್ತೆ ಮತ್ತು ರೈಲು ಸಂಪರ್ಕಗಳು ಬಲಗೊಂಡವು. ಬಾಂಗ್ಲಾದೇಶದ ಪ್ರಧಾನಿ ಭಾರತದ ಭೇಟಿಗೆ ಬಂದಾಗ ಬೇರೆ ಬೇರೆ ಕ್ಷೇತ್ರಗಳಿಗೆ ಸಂಬಂಽಸಿದ ಒಟ್ಟು ೨೨ ಒಪ್ಪಂದಗಳಿಗೆ ಸಹಿ ಹಾಕಿದರು. ಭಾರತ ೪.೫ ಶತಕೋಟಿ ಡಾಲರ್ ಮತ್ತು ವಿವಿಧೋದ್ದೇಶ ಬೆಳವಣಿಗೆಗೆ ೨ ಶತಕೋಟಿ ಡಾಲರ್ ಸಾಲವನ್ನು ಬಾಂಗ್ಲಾದೇಶಕ್ಕೆ ಕೊಟ್ಟಿದೆ. ಈ ಹಣವು ಈಶಾನ್ಯ ರಾಜ್ಯಗಳೊಂದಿಗೆ ಬಾಂಗ್ಲಾದ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಇದು ಬರೀ ಬಾಂಗ್ಲಾದೇಶದ ಸಂಬಂಧದ ವಿಷಯವಾದರೆ ಜಗತ್ತಿನ ಇನ್ನಿತರೆ ರಾಷ್ಟ್ರಗಳೊಂದಿಗೆ ಮೋದಿ ಒಳ್ಳೆಯ ಬಾಂಧವ್ಯ ಬೆಸೆದು ತಮ್ಮ ಪ್ರತಿ ನಿರ್ಧಾರಕ್ಕೂ ಜಾಗತಿಕ ಮಟ್ಟದಲ್ಲಿ ವಿರೋಧಗಳು ಬರದಂತೆ ನೋಡಿಕೊಂಡಿzರೆ. ಈ ಮೊದಲು ಗಡಿಗಳಲ್ಲಿ ಅದರಲ್ಲೂ ಅರುಣಾಚಲ ಪ್ರದೇಶದಲ್ಲಿ ರಸ್ತೆ ಮಾಡಿದರೆ ಗುರ್ ಎನ್ನುತ್ತಿದ್ದ ಚೀನಾ ಸುಮ್ಮನಾಗಿದೆ. ಮೋದಿ ಬಂದ ಮೇಲೆ ಗಡಿಯ ರಸ್ತೆಗಳು ಗಣನೀಯ ಪ್ರಮಾಣದಲ್ಲಿ ನಿರ್ಮಾಣವಾಗಿದೆ.  ಇಷ್ಟಲ್ಲದೇ ಅಸ್ಸಾಂನ ಚುನಾವಣೆಯ ಮುನ್ನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಭರಾನಂದ್ ಸೋನೊವಾಲಾ, ತಮ್ಮ ರಾಜ್ಯ ಅಲ್ಲಿನ ಅಽಕೃತ ನಾಗರಿಕರಿಗಷ್ಟೇ ಮೀಸಲು ಎಂಬ ಹೇಳಿಕೆ ಕೊಟ್ಟಿದ್ದರು. ಮೋದಿ ಅಽಕಾರಕ್ಕೆ ಬಂದ ಮೇಲೆ ಗಡಿಗೆ ಬೇಲಿ ಹಾಕುವ ಕೆಲಸವನ್ನು ಕೈಗೆತ್ತಿಕೊಂಡು ಇನ್ನೇನು ಈ ಕೆಲಸ ಮುಗಿಯುವ ಹಂತದಲ್ಲಿದೆ.

ಒಂದು ಮಹತ್ತರವಾದ ನಿರ್ಧಾರ ಕೈಗೊಳ್ಳುವ ಮುನ್ನ ಸುಸಜ್ಜಿತವಾದ ವೇದಿಕೆಯನ್ನು ಸೃಷ್ಟಿಸಿಕೊಂಡ ಅಪರೂಪದ ಮುಂದಾಲೋಚನೆ ಮೋದಿಯವರzಗಿದೆ. ಎರಡು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ ರಾಷ್ಟ್ರೀಯ ಪೌರತ್ವ ನೋಂದಣಿ ಕಾರ್ಯಕ್ಕೆ ಅಸ್ತು ಎಂದಿತು. ಈಗ ಬಂದ ಕರಡು ಪ್ರತಿಯ ದಾಖಲೆಗಳ ಪ್ರಕಾರ ಅಸ್ಸಾಂನ ೩.೨೯ ಕೋಟಿ ಜನರಲ್ಲಿ ೪೦ ಲಕ್ಷ ಜನ ಅಕ್ರಮವಾಗಿ ನೆಲೆಸಿzರೆ. ಹಾಗಾದರೆ ತಕ್ಷಣ ಹೊರಗೆ ಹಾಕುತ್ತಾರಾ? ಇಲ್ಲ ವ್ಯಕ್ತಿಗೆ ಅವನ ಗುರುತನ್ನು ಸಾಬೀತು ಪಡಿಸಲು ಇನ್ನೂ ಒಂದು ಅವಕಾಶ ಇದೆ. ಅಷ್ಟಾಗಿಯೂ ಅವನು ಸುಪ್ರೀಂ ಕೋರ್ಟಿಗೂ ಹೋಗಬಹುದು. ಸಂವಿಧಾನಾತ್ಮಕವಾಗಿ ಇರುವ ಎಲ್ಲ ಹಾದಿಗಳಲ್ಲೂ ನಿರೂಪಿಸಲು ಸಾಧ್ಯವಾಗದೆ ಹೋದಾಗ ಮಾತ್ರ ಅವರನ್ನು ಹೊರಕಳಿಸಲಾಗುವುದು.

ಇದೊಂದು ಕರಡು ಪ್ರತಿ ಬರದಿದ್ದರೂ ನಾವು ಮೇಲ್ನೋಟಕ್ಕೆ ಊಹಿಸಬಹುದಾದ ಕೆಲವು ಸಂಗತಿಗಳಿವೆ. ಅಸ್ಸಾಂನ ಜನಸಂಖ್ಯೆ ೨೦೦೧-೨೦೧೧ ರ ನಡುವೆ ೨.೭ ಕೋಟಿಯಿಂದ ೩.೧ ಕೋಟಿಗೆ ಹೆಚ್ಚಳವಾಗಿದೆ! ಅದಲ್ಲದೇ ಮುಸ್ಲಿಂ ಜನಸಂಖ್ಯೆ ೩೦% ವೃದ್ಧಿಸಿದರೆ ಹಿಂದೂಗಳದ್ದು ೧೧% ಹೆಚ್ಚಳ ಕಂಡಿದೆ. ಅಂದರೆ ಹಿಂದೂಗಳ ಮೂರು ಪಟ್ಟು ಮುಸ್ಲಿಮರ ಜನಸಂಖ್ಯೆ ಹೆಚ್ಚಳವಾಗಿದೆ. ಈ ಬದಲಾವಣೆಗೆ ಕಾರಣ ಒಂದು ಅಲ್ಲಿ ಮತಾಂತರವಾಗಿರಬೇಕು ಇಲ್ಲವೇ ಹೊರಗಡೆಯಿಂದ ಜನ ಬಂದು ನೆಲೆಸಿರಬೇಕು. ಅಸ್ಸಾಂನ ನಂತರ ಪಶ್ಚಿಮ ಬಂಗಾಳದ ಮೇಲೆಯೂ ಕೇಂದ್ರ ಸರಕಾರದ ಈ ದಾಳಿ ಮುಂದುವರಿಯಲಿದೆ. ಅಸ್ಸಾಂನ ಕರಡು ಪ್ರತಿ ಬಿಡುಗಡೆಯಾಗುತ್ತಿದ್ದಂತೆ ದೀದಿಯ ಹೇಳಿಕೆ-ಪ್ರತಿಕ್ರಿಯೆಗಳನ್ನೊಮ್ಮೆ ನೋಡಿದರೆ ಒಳಗೊಳಗೆ ಕೇಂದ್ರ ಸರಕಾರ ತನ್ನ ಮತ ಬ್ಯಾಂಕನ್ನು ಕಸಿದುಕೊಳ್ಳುವ ಕಸಿವಿಸಿ ಅವರಿಗೆ ಉಂಟಾಗಿದೆ ಎನ್ನಬಹುದು. ಅಸ್ಸಾಂಗಿಂತ ಹೆಚ್ಚಿನ ಜನರು ದೀದಿಯ ‘ಮಮತೆ’ಯಲ್ಲಿ ಆಶ್ರಯ ಪಡೆದಿzರೆ ಎಂಬುದನ್ನು  ತಳ್ಳಿಹಾಕುವಂತಿಲ್ಲ.

ಎರಡು ವರ್ಷದ ಹಿಂದೆಯೇ ಈ ಕರಡು ರಚನೆ ಶುರುವಾಗಿದ್ದು ಅಲ್ಲಿನ ಅಕ್ರಮ ವಲಸಿಗರು ಮತ್ತೊಂದು ರಾಜ್ಯಗಳಿಗೆ ಪಲಾಯನ ಮಾಡಿರುವ ಸಾಧ್ಯತೆಗಳಿವೆ. ಹೀಗಾಗಿ ಇಡಿಯ ದೇಶದಲ್ಲಿ ಇಂಥ ನೋಂದಣಿ ನಡೆದರೆ ಪ್ರತಿ ರಾಜ್ಯದಲ್ಲೂ ದೊಡ್ಡ ಸಂಖ್ಯೆಯ ಇಂಥ ನಕಲಿ ನಾಗರಿಕರು ಸಿಕ್ಕಿಬೀಳುತ್ತಾರೆ. ದೇಶದ ತುಂಬೆ ಮಾಡಲಾಗದಿದ್ದರೂ ಕನಿಷ್ಠ ಪಕ್ಷ ಈಶಾನ್ಯ ರಾಜ್ಯಗಳಲ್ಲಂತೂ ಕಡ್ಡಾಯವಾಗಿ ಮಾಡಲೇ ಬೇಕಿದೆ. ಈ ಒಂದು ಘಟನೆಯಿಂದಾಗಬಹುದಾದ ರಾಜಕೀಯ ಸ್ಥಿತ್ಯಂತರಗಳನ್ನು ಊಹಿಸುವುದು ಕುತೂಹಲಕಾರಿ. ಮಮತಾ ಹೇಳಿಕೆಯನ್ನೇ ಕಾದುಕೂತಿದ್ದ ದೇವೇಗೌಡರು ತುರ್ತಾಗಿ ಭೇಟಿಯಾಗಿ ಅವರನ್ನೇ ತೃತೀಯ ರಂಗದ ಪ್ರಧಾನಿ ಅಭ್ಯರ್ಥಿ ಮಾಡಿದರೆ ತೊಂದರೆ ಇಲ್ಲ ಎಂಬ ಹೇಳಿಕೆಯನ್ನು ತೇಲಿಬಿಟ್ಟರು. ಈ ಮೊದಲು ರಾಗಾ ಪ್ರಧಾನಿಯಾಗುತ್ತೇನೆ ಎಂದಿದ್ದನ್ನು ಮೋದಿ ಉದ್ದೇಶಪೂರ್ವಕವಾಗಿ ತಮ್ಮ ಒಂದು ಭಾಷಣದಲ್ಲಿ ಉಖಿಸಿದ್ದರು. ಆ ಉಖ ಕೇಳಿ ಬಿಸಿ ಎಣ್ಣೆಯಲ್ಲಿ ಸಾಸಿವೆ ಸಿಡಿದಂತೆ ಮಮತಾ ಸಿಡಿದು ಬಿಟ್ಟಿದ್ದರು. ಇತ್ತೀಚೆಗಷ್ಟೆ ಕರ್ನಾಟಕದ ಮುಖ್ಯಮಂತ್ರಿಗಳು ರಾಗಾ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದಿದ್ದರು. ಈಗ ಗೌಡರ ಹೇಳಿಕೆಯನ್ನು ಮುಂದಿಟ್ಟುಕೊಂಡು ರಾಜ್ಯ ರಾಜಕಾರಣದಲ್ಲಿ ಏನೇನೆ ಬದಲಾವಣೆಗಳು ಘಟಿಸಬಹುದು? ಚುನಾವಣೆಗೂ ಮೊದಲು  ಮಾಯಾವತಿ, ಓವೈಸಿಯ ಬೆಂಬಲ ಪಡೆದು ಹಾಗೂ ಚುನಾವಣೋತ್ತರ ಕಾಂಗ್ರೆಸ್ಸಿನ ಬೆಂಬಲ ಪಡೆದು ಈಗ ಮಮತಾಳೆಡೆಗೆ ವಾಲಿದ ಗೌಡರ ನಡೆ ರಾಗಾ, ಮಾಯಾವತಿ, ಓವೈಸಿಯಂಥವರಿಗೆ ಬೇಸರ ಉಂಟು ಮಾಡಬಹುದೇ? ಯಾವುದೋ ಕ್ಷೇತ್ರದ ಶಾಸಕ ಮಾತ್ರವಾದರೂ ಇಡೀ ರಾಜ್ಯ ಸರಕಾರದ ಶಕ್ತಿ ಕೇಂದ್ರವೂ ಆದಂಥ ಮತ್ತು ಸರಕಾರ ಕೆಡವಲು ಹಂಬಲಿಸುತ್ತಿರುವ ವ್ಯಕ್ತಿ ಈ ಹೇಳಿಕೆಯ ‘ಸದುಪಯೋಗ’ ಪಡೆಯಬಹುದೇ?

ಒಟ್ಟಿನಲ್ಲಿ ದೇಶದ ಅನಽಕೃತ ನಾಗರಿಕರನ್ನು ಹೊರಗೆ ಹಾಕುವ ಪ್ರಕ್ರಿಯೆ ದೇಶದ ಎಲ್ಲ ರಾಜಕಾರಣಿಗಳ ಮುಖವಾಡ ಕಳಚಿ, ಅವರ ನಿಜ ಸ್ವರೂಪವನ್ನು ಬಹಿರಂಗಗೊಳಿಸಿತು. ದೀದಿಯ ಮಮತೆ ವೋಟ್ ಬ್ಯಾಂಕಿನ ಮೇಲೇ ಹೊರತು ರಾಷ್ಟ್ರೀಯತೆ ಮೇಲಲ್ಲ ಎಂಬುದು ಜಾಹೀರಾಯಿತು. ಮುಂದಿನ ದಿನಗಳಲ್ಲಿ ಇನ್ನಿತರೆ ರಾಜ್ಯಗಳಿಗೂ ಈ ನೋಂದಣಿ ಹಬ್ಬುತ್ತಾ? ಹಬ್ಬಿದರೆ ಆಗುವ ರಾಜಕೀಯ ಮತ್ತು ಸಾಮಾಜಿಕ ತಲ್ಲಣಗಳೇನು ಕಾದು ನೋಡಬೇಕಿದೆ.

ಸದ್ಯದಲ್ಲಿಯೇ  ಲೋಕ ಸಭೆಗೆ ಚುನಾವಣೆ ನಡೆಯಲಿದ್ದು ಮಮತಾರ ಈ ನಡೆ ಯಾವ ಪರಿಣಾಮ ಬೀರಬಹುದು ಎನ್ನುವ ಪ್ರಶ್ನೆಯೂ ಇದೆ.

ಜನಪ್ರಿಯತೆಯನ್ನು ಸಾಕಷ್ಟು ಅನುಭವಿಸಿರುವ ನಾಯಕಿ,  ರಾಷ್ಟ್ರ ರಾಜಕಾರಣ ಪ್ರವೇಶಿಸುವ ಮಾತು ಒತ್ತಟ್ಟಿಗಿರಲಿ,  ಮೂಲೆಗುಂಪಾಗಬಹುದು. ಮೋದಿಯವರನ್ನು ಸೋಲಿಸಲು ಮಮತಾರನ್ನು ಮುಂದಿಟ್ಟುಕೊಂಡು ಸಜ್ಜಾಗುತ್ತಿರುವ ತೃತೀಯ ರಂಗವೇನೋ ಅವರ ಈ ಹೊಸ ಆವೇಶದಿಂದ ಪ್ರಭಾವಿತವಾಗಿದೆ. ಅದನ್ನು ‘ಕ್ಯಾಶ್ ಇನ್’ ಮಾಡಿಕೊಳ್ಳಲೂ ಹವಣಿಸುತ್ತಿದೆ. ಆದರೆ ಇತ್ತೀಚೆಗೆ ಪಶ್ಚಿಮ ಬಂಗಾಳದ ಮತದಾರನೇ ತೃಣಮೂಲ ಕಾಂಗ್ರೆಸ್ ಹಿಂಸಾಚಾರ ತುಂಬಿದ ಚುನಾವಣಾ ಪ್ರಕ್ರಿಯೆ ಹಾಗೂ ಈ ಕುರಿತು ದೀದಿಯ ಮೌನದಿಂದ ಅಪ್ರತಿಭನಾಗಿರುವಾಗ ರಾಷ್ಟ್ರ ನಾಯಕಿಯಾಗಿ ಅವರು ಆಯ್ಕೆಗೊಳ್ಳುವ ಸಾಧ್ಯತೆ ಸಾಕಷ್ಟು ದೂರವೇ ಇದೆ ಎನ್ನಬಹುದು.

Tags

Related Articles

Leave a Reply

Your email address will not be published. Required fields are marked *

Language
Close