About Us Advertise with us Be a Reporter E-Paper

ಅಂಕಣಗಳು

ಜವಾಬ್ದಾರಿಯುತ ಸ್ಥಾನದಲ್ಲಿ ಅಸಹಾಯಕತೆ ಛಾಯೆ ಏಕೆ?

ಯಾರಿಗೆ ಹೇಳೋಣ?: ಪಿ. ರಾಜೀವ್

ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಒಂದಲ್ಲ ಒಂದು ರೀತಿಯ ಗೊಂದಲ ಸೃಷ್ಠಿಯಾಗುತ್ತಲೇ ಇದೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮುಳ್ಳಿನ ಮೇಲೆ ಮಲಗಿದ ವಿಷಕಂಠನಂತಾಗಿದೆ ನನ್ನ ಪರಿಸ್ಥಿತಿ ಎಂದು ಕಣ್ಣೀರಿಟ್ಟಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿ ಅಸಹಾಯಕತೆಯನ್ನು ತೋಡಿಕೊಂಡಿರುವುದು ರಾಜ್ಯದ ಜನತೆಯ ಹಿತದೃಷ್ಠಿಯಿಂದ ಒಳ್ಳೆಯದಲ್ಲ. ಭ್ರಷ್ಟಾಚಾರದ ಕಬಂಧಬಾಹುಗಳೊಂದಿಗೆ ಸೂಕ್ಷ್ಮ ನರಮಂಡಲಗಳನ್ನು  ಹಬ್ಬಿಸಿರುವ ವ್ಯವಸ್ಥಿತ ಗುಂಪುಗಳು ಇಂತಹ ಸನ್ನಿವೇಷವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಅವು ಆಳಕ್ಕಿಳಿದ, ಜಿಡ್ಡುಗಟ್ಟಿದ ವ್ಯವಸ್ಥೆಯ ಚುಕ್ಕಾಣಿ ಹಿಡಿದ ನಾವಿಕನ ಮನಸ್ಥಿತಿಯನ್ನು ಸದಾಕಾಲ ಅಭ್ಯಾಸ ಮಾಡುತ್ತಿರುತ್ತದೆ. ಮುಂದಾಳತ್ವ ವಹಿಸಿದ ನಾಯಕನ ಗೊಂದಲಮಯ ಕ್ಷಣಗಳು ಅಂಥವರ ಪಾಲಿಗೆ ಮಹದೂಟ ಬಡಿಸಿದಂತಾಗುತ್ತದೆ.

ಮಾರ್ಚ್ 23, 1931 ರಂದು ಭಗತ್‌ಸಿಂಗ್‌ರನ್ನು ನೇಣಿಗೇರಿಸಲಾಯಿತು. ನೇಣಿನ ಕುಣಿಕೆ ಮುಂದೆ ನಿಂತು ಭಗತ್ ಸಿಂಗ್ ‘ಇಂಕ್ವಿಲಾಬ್ ಜಿಂದಾಬಾದ್’ಎಂದು ಘೋಷಣೆ ಕೂಗುತ್ತಾರೆ. ಬ್ರಿಟಿಷರು ಜಾರಿಗೆ ತರುತ್ತಿದ್ದ ಭಾರತ ವಿರೋಧಿ  ಕ್ರಾಂತಿಕಾರಿಗಳು ವಿರೋಧಿಸುತ್ತಿದ್ದರು. ಸ್ವಾತಂತ್ರ ಹೋರಾಟ ತೀವ್ರಗತಿ ಪಡೆದುಕೊಳ್ಳಲು ಅಲ್ಲಲ್ಲಿ ಸಭೆ, ಸಮಾರಂಭ ಹಾಗೂ ಮುಷ್ಕರಗಳು ಏರ್ಪಡುತ್ತಿದ್ದವು. ಜನಜಾಗೃತಿಯನ್ನು ಮತ್ತಷ್ಟು ಹರಿತಗೊಳಿಸುವುದಕ್ಕಾಗಿ ಭಗತ್ ಸಿಂಗ್ ಆಯ್ದುಕೊಂಡ ಮಾರ್ಗ ಸ್ವಲ್ಪ ಭಿನ್ನವಾಗಿತ್ತು. ಜನಸಾಮಾನ್ಯರ ನೆತ್ತರಿನಲ್ಲಿ ದೇಶ ಪ್ರೇಮವನ್ನು ಮೇಳೈಸುವುದು ಅಂದಿನ ಪ್ರಮುಖ ಅಗತ್ಯತೆ ಎಂದು ಭಾವಿಸಿದ ಭಗತ್‌ಸಿಂಗ್ ಬ್ರಿಟಿಷರ ಅಣತಿಯಲ್ಲಿದ್ದ ಪಾರ್ಲಿಮೆಂಟ್ ಮೇಲೆ ಬಾಂಬ್ ಎಸೆಯುವ ಆಲೋಚನೆಯನ್ನು ಕೈಗೊಂಡರು. ದೇಹಲಿಯ ಪಾರ್ಲಿಮೆಂಟ್ ಮೇಲೆ ಬಾಂಬ್ ಸಿಡಿಸಿ ಸುಲಭ ಮಾರ್ಗದಿಂದ ತಪ್ಪಿಸಿಕೊಳ್ಳಬಹುದಾಗಿತ್ತು. ಆದರೆ  ಯಾವ ಪ್ರಯತ್ನವನ್ನೂ ಮಾಡಲಾರದಂತೆ ಮೊದಲೇ ನಿರ್ಧರಿಸಿಯಾಗಿತ್ತು. ಬ್ರಿಟಿಷ್ ಆಡಳಿದ ನ್ಯಾಯಾಲಯದಲ್ಲಿ ದೇಶಪ್ರೇಮಿಯೊಬ್ಬನ ಅದಮ್ಯ ಉತ್ಸಾಹ ದಾಖಲೆಗಳಲ್ಲಿ ಮುದ್ರಣವಾಗುವಂತೆ ನೋಡಿಕೊಳ್ಳಲು ಭಗತ್‌ಸಿಂಗ್ ಯಾರ ಪ್ರಾಣಕ್ಕೂ ತೊಂದರೆಯಾಗದಂತೆ ಬಾಂಬ್ ಎಸೆದರು.

ಕ್ರಾಂತಿಕಾರಿಗಳ ದಸ್ತಗಿರಿಯೊಂದಿಗೆ ಸ್ವಾತಂತ್ರ್ಯಗಂಗೆ ಹರಿವು ಮತ್ತಷ್ಟು ವೇಗ ಪಡೆದುಕೊಂಡಿತ್ತು. ಯಾವುದಕ್ಕೂ ಅಂಜದೆ ಅಳುಕದೆ ಮುನ್ನಡೆದರು, ಹೇಡಿಗಳಂತೆ ನೇಣಿಗೆ ಕೊರಳೊಡ್ಡಲು ನಿರಾಕರಿಸಿ, ‘ತಾನು ಯುದ್ಧಖೈದಿ. ಅನಾಯಾಸವಾಗಿ ನೇಣಿಗೇರಿ ಪ್ರಾಣ ಕಳೆದುಕೊಳ್ಳುವುದಿಲ್ಲ. ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ನಾವು ಯುದ್ಧ ಸಾರಿರುವುದರಿಂದ ನನ್ನ ಮೇಲೆ  ಗುಂಡಿನ ಸುರಿಮಳೆಗೈದರೆ ಅತ್ಯಂತ ಹೆಚ್ಚು ಸಂತೋಷ ಪಡುತ್ತೇನೆ. ನನ್ನ ದೇಹ ಚೂರು ಚೂರಾದರೂ ಅಡ್ಡಿಯಿಲ್ಲ. ಒಬ್ಬ ಭಗತ್ ಸಿಂಗ್ ಸತ್ತರೇನಂತೆ. ಲಕ್ಷಾಂತರ ಭಗತ್ ಸಿಂಗ್‌ಗಳು ಇದೇ ನಾಡಿನಲ್ಲಿ ಮತ್ತೆ ಹುಟ್ಟುತ್ತಾರೆ’ ಎಂದು ನೀಡಿದ ಹೇಳಿಕೆ ನೀಡಿದರು.

ಆದರೆ ನಮ್ಮ ದೇಶಕ್ಕೆ, ಇಂದಿನ ಪೀಳಿಗೆಗೆ ನಾವು ನೀಡುತ್ತಿರುವುದೇನು? ಜನಪ್ರಿಯ ಯೋಜನೆಗಳೊಂದಿಗೆ ಅಲ್ಪಪ್ರಮಾಣದ ಸಾಲಮನ್ನಾಗಳಂತಹ ಘೋಷಣೆಗಳು. ಅಷ್ಟೇ ಅಲ್ಲವೆ? ಅಂದು ದೇಶಕ್ಕಾಗಿ ಪ್ರಾಣಕೊಟ್ಟ ಮಹಾತ್ಮರ ಉದ್ದೇಶ ಈ ದೇಶವನ್ನು ಹೀಗೆ ನೋಡುವುದಾಗಿತ್ತೇ?  ಆಗಸ್‌ಟ್ 6 ಮತ್ತು 9 ರಂದು ನಡೆದ ಎರಡನೇ ಮಹಾಯುದ್ಧದಲ್ಲಿ ಜಪಾನ್‌ನ ಹಿರೋಷಿಮಾ,ನಾಗಾಸಕಿ ನಗರಗಳು ಸುಟ್ಟುಕರಕಲಾದವು. ಆದರೆ ಇಂದು ಜಪಾನ್ ಫಿನಿಕ್‌ಸ್ ಪಕ್ಷಿಯಂತೆ ಎತ್ತರಕ್ಕೆ ಬೆಳೆದಿದೆ. ಆದರೆ ಮೂವತ್ತೈದು ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ದೇಶ ಇನ್ನೂ ಕುಂಟುತ್ತಿದೆ. ಹಾಗಿದ್ದರೆ ನಾವು ಎಡವಿದ್ದಾದರೂ ಎಲ್ಲಿ? ಇಂದಿನ ಸಮಾಜಕ್ಕೆ ನೀಡಬೇಕಾದ ಸಂದೇಶಗಳು ಜನಪ್ರಿಯವಾಗಿರಬೇಕೆ ಅಥವಾ ಜನುಪಯೋಗಿಯಾಗಿ ಮುಂದಿನ ತಲೆಮಾರುಗಳಿಗೆ ಉಪಯೋಗವಾಗಬೇಕೆ?

       ಮೊನ್ನೆ ನಡೆದ ಅಧಿವೇಶನದಲ್ಲಿ ಕರ್ನಾಟಕದಲ್ಲಿ ಡ್ರಗ್‌ಸ್ ಮಾಫಿಯಾ ಹೆಚ್ಚುತ್ತಿದೆ  ಚರ್ಚೆ ನಡೆಯಿತು. ಯುವಕರು, ಕಾಲೇಜು ವಿದ್ಯಾರ್ಥಿಗಳು ಹಾಗೂ ಶಾಲಾ ಮಕ್ಕಳೂ ಮಾದಕ ವ್ಯಸನಿಗಳಾಗುತ್ತಿದ್ದಾರೆ. ಹೀಗೆ ಮುಂದುವರಿದರೆ ನಮ್ಮ ರಾಜ್ಯ ‘ಉಡ್ತಾ ಕರ್ನಾಟಕ’ ಆಗುವುದರಲ್ಲಿ ಸಂದೇಹವಿಲ್ಲ. ಮಧ್ಯ ಪ್ರವೇಶಿಸಿದ ಸ್ಪೀಕರ್ ರಮೇಶ್‌ಕುಮಾರ್ ಮಾದಕ ದ್ರವ್ಯಗಳು ಎಲ್ಲಿ ಮಾರಾಟವಾಗುತ್ತಿವೆ? ನಮ್ಮೂರಿನ ಹಳ್ಳಿಯ ಸರಕಾರಿ ಶಾಲೆಗಳಲ್ಲಿಯೇ,ರೈತ ಕುಟುಂಬಗಳಲ್ಲಿಯೇ ಅಥವಾ ಕಾರ್ಮಿಕ ಸಮುದಾಯಗಳಲ್ಲಿಯೇ?ಎಂದರು. ಆದರೆ ಇವೆಲ್ಲವೂ ಸರಬರಾಜಾಗುತ್ತಿರುವುದು ಶ್ರೀಮಂತರ ಮಕ್ಕಳು ಓದುವ ಶಾಲಾ ಕಾಲೇಜು ಕ್ಯಾಂಪಸ್‌ಗಳಲಿ.್ಲ ಕೇವಲ ಸಂಬಳದಿಂದ ಪ್ರವೇಶಾತಿ ಶುಲ್ಕ ಕಟ್ಟುವುದಾಗಿದ್ದರೆ ಅಂತಹ  ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ.ವಾಮಮಾರ್ಗದ ಮೂಲಕ ಹಣ ಗಳಿಸಿದ ಪೋಷಕರು ಪ್ರತಿವರ್ಷಕ್ಕೆ ಹತ್ತಿಪ್ಪತ್ತು ಲಕ್ಷ ಡೊನೆಷನ್ ನೀಡುತ್ತಿದ್ದಾರೆ. ಇಂಥವರಾರು ತಮ್ಮ ಮಕ್ಕಳು ಕಾಲೇಜಿನಲ್ಲಿ ಏನು ಮಾಡುತ್ತಾರೆ ಎಂದು ತಲೆ ಕೆಡಿಸಿಕೊಳ್ಳುವುದಿಲ್ಲ. ಮಕ್ಕಳು ಮನೆಗೆ ಬರುವಾಗ ತೂರಾಡುತ್ತಾ ಬಂದರೆ ಇವರ ಮರ್ಯಾದೆ ಕಥೆ ಏನು ಎಂದರು ಸ್ಪೀಕರ್.

ರಾಜಕಾರಣಿಗಳು ಮತಗಳಿಕೆ ಹಾಗೂ ಮುಂದಿನ ಚುನಾವಣೆ ಬಗ್ಗೆ ಯೋಚಿಸುತ್ತಿದ್ದಾರೆ. ಸುದ್ದಿವಾಹಿನಿ ಮಾಧ್ಯಮ, ಪತ್ರಿಕೆಗಳು ಟಿಆರ್‌ಪಿ ಮತ್ತು ಸರ್ಕ್ಯುಲೇಷನ್ ಕುರಿತಾಗಿ ಚಿಂತಿಸುತ್ತಿವೆ. ಶಿಕ್ಷಕರು ಸಮಾಜದಿಂದಲೇ  ಭಾವಿಸಿಕೊಂಡು ಬೋಧಕ ವೃತ್ತಿಯೊಂದಿಗೆ ಬೇರೊಂದು ಆದಾಯ ತರುವ ಕೆಲಸಕ್ಕೆ ಕೈ ಹಾಕಿದ್ದಾರೆ.ವ್ಯಾಪಾರಸ್ಥರು ಲಾಭಗಳಿಕೆಯನ್ನೇ ಧ್ಯೇಯವಾಗಿಸಿಕೊಂಡಿದ್ದಾರೆ. ದುಡಿಮೆಗೆ ತಕ್ಕ ಬೆಲೆ ಸಿಗದ ರೈತ, ಬೆವರಿನ ಹನಿಗೆ ಬೆಲೆಪಡೆಯಲಾಗದ ಕಾರ್ಮಿಕ, ವ್ಯವಸ್ಥೆಗಳಿರುವುದೆ ನಮ್ಮನ್ನು ಶೋಷಿಸುವುದಕ್ಕಾಗಿ ಎಂಬ ತೀರ್ಮಾನಕ್ಕೆ ಬಂದುನಿಂತಿದ್ದಾರೆ. ಇವರ ಮಧ್ಯೆ ದಿಕ್ಕುಕಾಣದ, ಗುರಿಯನ್ನು ಗ್ರಹಿಸಲಾಗದ ಮಕ್ಕಳು ಹಾಗೂ ಯುವಸಮೂಹ ಇವೆಲ್ಲವುಗಳ ತಾಕಲಾಟದಿಂದ ಬುದ್ಧಿ ಬಲಿಯುವುದಕ್ಕೆ ಮುಂಚೆ ವ್ಯವಸ್ಥೆಯ ಬಲಿಪಶುಗಳಾಗಿದ್ದಾರೆ.

ಬದಲಾವಣೆ ಎಂಬುದು ಎಲ್ಲಿಂದಲ್ಲಾದರೂ ಆರಂಭಗೊಳ್ಳಬಹುದು. ಆರಂಭಿಸುವವರು ಬೇಕಿದ್ದಾರಷ್ಟೆ. ಮೀತಿಮೀರಿ ಬೆಳೆಯುತ್ತಿರುವ  ಕಣ್ಣಿಗೆ ರಾಚುವ ಅಬ್ಬರದ ಬದುಕು ಎಲ್ಲವನ್ನೂ ಸಂಪತ್ತಿನ ದೃಷ್ಠಿಕೋನದಿಂದಲೇ ಅಳೆಯಬಹುದಾದ ವಾತಾವರಣದಲ್ಲಿ ಸಮಾಜಕ್ಕೆ ಸ್ಪಷ್ಟ ಸಂದೇಶ ಸಾರಬಲ್ಲ ಸಮರ್ಥ ನಾಯಕನ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ತೀವ್ರವಾಗಿವೆ. ದಿಕ್ಕು ದೆಸೆಯಿಲ್ಲದೆ ಮುಂದೆ ಸಾಗುತ್ತಿರುವ ಎಲ್ಲ ವರ್ಗಗಳಿಗೆ ನಾವು ಜೀವಿಸುತ್ತಿರುವುದು ಕೇವಲ ನಮಗಾಗಿ ಅಲ್ಲ. ಈ ಸಮಾಜದ ಪ್ರತಿಯೊಬ್ಬರ ಸಂತೃಪ್ತಿಗಾಗಿ. ನಾವು ಪ್ರಯತ್ನಿಸುತ್ತಿರುವುದು ಕೇವಲ ನಮಗಾಗಿ ಮತ್ತು ನಮ್ಮ ಕುಟುಂಬದವರಿಗಾಗಿ ಅಲ್ಲ. ಈ ದೇಶಕ್ಕಾಗಿ ಎಂದು ಮನವರಿಕೆ ಮಾಡಬೇಕಿದೆ. ನಮ್ಮ ಯೋಚನೆ,  ಶ್ರಮದ ದುಡಿಮೆ ಮತ್ತು ಆದಾಯಗಳಲ್ಲಿ ಬಹುಪಾಲು ಸೇರಬೇಕಾಗಿರುವುದು ಈ ಸಮಾಜಕ್ಕೆ. ಇಷ್ಟು ದಿನ ಸ್ವಂತಕ್ಕಾಗಿ ದುಡಿದಿರುವುದು ಸಾಕು! ಇನ್ನು ಮುಂದಾದರೂ ಈ ಸಮಾಜಕ್ಕಾಗಿ ದುಡಿಯೋಣ. ರಕ್ತದ ಕಾಲುವೆಯಲ್ಲಿ ತೇಲಿ ಬಂದ ಸ್ವಾತಂತ್ರವನ್ನು ಅಪವಿತ್ರಗೊಳಿಸುವುದು ಬೇಡ. ಸಮಾಜದೊಳಗಿನ ಅಸಮಾನತೆಯನ್ನು ಸಂಪೂರ್ಣವಾಗಿ ಸರ್ವನಾಶಗೊಳಿಸವವರೆಗೆ ನಾವು ಹೋರಾಡಬೇಕಾಗಿದೆ. ಪಾಕಿಸ್ತಾನ, ಚೀನಾ, ಬಾಂಗ್ಲಾ ದೇಶಗಳು ನಮ್ಮ ಶತ್ರುಗಳಲ್ಲ. ನಿರುದ್ಯೋಗ, ಸಂಪತ್ತಿನ ಅಸಮಾನ ಹಂಚಿಕೆ, ಕಟ್ಟ ಕಡೆಯ ವ್ಯಕ್ತಿಯ ಸಾಮಾಜಿಕ ದೌರ್ಬಲ್ಯಗಳು ನಮ್ಮ ಶತ್ರುಗಳಾಗಿವೆ. ಬನ್ನಿ  ಒಂದಾಗಿ ಇವುಗಳೆಲ್ಲವನ್ನೂ ಕಿತ್ತು ಹಾಕುವವರೆಗೆ ವಿಶ್ರಮಿಸದಿರೋಣ ಎಂಬ ಘೋಷಣಾ ವಾಕ್ಯ ಮೊಳಗಬೇಕಾಗಿದೆ.

ರಾಜಕೀಯ ಚದುರಂಗದಾಟದಲ್ಲಿ ಕುಮಾರಸ್ವಾಮಿಯವರ ಕಂಬನಿ ಇಂತಹ ಆಲೋಚನೆಗಳನ್ನು ಹಲವರಲ್ಲಿ ಸೃಷ್ಟಿಸಿರಬಹುದು. ಜವಾಬ್ದಾರಿಯುತ ಸ್ಥಾನವನ್ನಲಂಕರಿಸಿ ಹತಾಶೆಯ ಭಾವನೆಯನ್ನು ಮೈಗೂಡಿಸಿಕೊಳ್ಳುವುದಕ್ಕಿಂತ ಸಾಲದ ಹೊರೆ ಹೊತ್ತ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಹೆಗಲ ಮೇಲೆ ಹೊತ್ತಿದ್ದೇನೆ. ಅವರಿವರನ್ನು ಮೊದಲಿಸುತ್ತ ಕಣ್ಣೀರಿಡುವುದರ ಬದಲಾಗಿ ಇಂತಹದೊಂದು ಆಂದೋಲನಕ್ಕೆ ಅಣಿಯಾಗುವಂತೆ ನಾಡಿನ ದೊರೆ ವಿಶಾಲ ಕರ್ನಾಟಕದ ಅನಂತ ಹೃದಯಗಳಿಗೆ ನೀಡಿದ್ದರೆ ಸೂಕ್ತವೆನಿಸುತ್ತಿತ್ತೇನೊ. ಇನ್ನಾದರೂ ಅಂತಹದೊಂದು ಆಯಾಮ  ಸರಕಾರದಿಂದ ತೆರೆದುಕೊಳ್ಳಲಿ. ಬದಲಾಗುವ ಮನಸ್ಸುಗಳು ಅಸಂಖ್ಯದಷ್ಟಿವೆ. ಬದಲಿಸುವ ಇರಾದೆಯುಳ್ಳ ಹೃದಯ ನಮ್ಮೆಲ್ಲರಿಗೂ ಬೇಕಾಗಿದೆ. ಅವರು ಯಾರಾದರೂ ಒಪ್ಪಿಕೊಳ್ಳಲಡ್ಡಿಯಿಲ್ಲ!

Tags

Related Articles

Leave a Reply

Your email address will not be published. Required fields are marked *

Language
Close