About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಸಾಲ ಮರುಪಾವತಿಸುತ್ತೇನೆಂದರೂ ಹಣ ಪಡೆಯಲು ಬ್ಯಾಂಕ್​ಗಳಿಗೆ ಪ್ರಧಾನಿ ಸೂಚಿಸುತ್ತಿಲ್ಲವೇಕೆ?: ಮಲ್ಯ

ದೆಹಲಿ: ”ಬ್ಯಾಂಕ್​ಗಳಿಂದ ಪಡೆದಿರುವ ಸಾಲವನ್ನು ಮರುಪಾವತಿಸುತ್ತೇನೆಂದರೂ ಪ್ರಧಾನಿ ನರೇಂದ್ರ ಮೋದಿ ಅವರು ಹಣ ಪಡೆದುಕೊಳ್ಳುವಂತೆ ಬ್ಯಾಂಕ್​ಗಳಿಗೆ ಯಾಕೆ ಸೂಚಿಸುತ್ತಿಲ್ಲ” ಎಂದು ಮದ್ಯದ ಉದ್ಯಮಿ ವಿಜಯ ಮಲ್ಯ ಗುರುವಾರ ಟ್ವೀಟ್​ ಮೂಲಕ ಪ್ರಶ್ನಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಮಲ್ಯ ‘ಪ್ರಧಾನಿ ನರೇಂದ್ರ ಮೋದಿ ಅವರೋರ್ವ ಚತುರ ಮಾತುಗಾರ, ಭಾಷಣಕಾರ; ಆದರೆ ನಾನು ಕೊಡುವ ಹಣವನ್ನು ಸ್ವೀಕರಿಸುವಂತೆ ಅವರು ಬ್ಯಾಂಕುಗಳಿಗೆ ಯಾಕೆ ಸೂಚನೆ ನೀಡುತ್ತಿಲ್ಲ. ಕನಿಷ್ಠ ಪಕ್ಷ ಕಿಂಗ್​ಫಿಶರ್​ಗೆ ನೀಡಿದ್ದ ಸಾರ್ವಜನಿಕ ಹಣವನ್ನಾದರೂ ಮರುಪಾವತಿಸಲು ಅವಕಾಶ ನೀಡಿ’ ಎಂದು ಕೇಳಿಕೊಂಡಿದ್ದಾರೆ.

‘ಬುಧವಾರ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಭಾಷಣ ಮಾಡುವಾಗ 9 ಸಾವಿರ ಕೋಟಿ ರೂಪಾಯಿ ಪಡೆದುಕೊಂಡು ಒಬ್ಬರು ಪಲಾಯನ ಮಾಡಿದ್ದಾರೆ ಎಂದು ಹೆಸರನ್ನು ಹೇಳದೆ ಪ್ರಸ್ತಾಪಿಸಿದ್ದರು. ಮಾಧ್ಯಮಗಳು ಮಾಡಿರುವ ವಿಶ್ಲೇಷಣೆ ಪ್ರಕಾರ ಪ್ರಧಾನಿಯವರು ನನ್ನನ್ನು ಉಲ್ಲೇಖಿಸಿ ಹೇಳಿದ್ದಾಗಿತ್ತು’ ಎಂದು ಮಲ್ಯ ತಮ್ಮ ಟ್ವೀಟ್‌ ನಲ್ಲಿ ತಿಳಿಸಿದ್ದಾರೆ.

ಹಣ ಮರುಪಾವತಿಸುವ ಅವಕಾಶ ಕೊಟ್ಟರೆ ನಾನು ಕರ್ನಾಟಕ ಹೈಕೋರ್ಟ್​ ಮುಂದೆಯೇ ಹಣ ಹಿಂತಿರುಗಿಸುವುದಾಗಿ ಸರಣಿ ಟ್ವೀಟ್ ಮಾಡುವ ಮುಖಾಂತರ ಪ್ರಸ್ತಾಪ ಮಾಡಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close