ಮಲಗಿದವರ ಎಬ್ಬಿಸಿದ್ಯಾಕೆ ?

Posted In : ಸಂಪಾದಕೀಯ-2

ಒಂದು ಕೈಯಲ್ಲಿ ಇಂಜಕ್ಷನ್ ಸಿರಿಂಜ್, ಮತ್ತೊಂದು ಕೈಯಲ್ಲಿ ಗ್ಲೂಕೋಸಿನ ಸಲಾಯನ್ ಬಾಟಲು ಹಿಡಿದು ಹೊರಟೇಬಿಟ್ಟ ಸಿದ್ಲಿಂಗು. ಅವನಿಗೆ ಅರ್ಜೆಂಟು ಬೆಳಗಾವಿಗೆ ಹೋಗಬೇಕಂತೆ, ಯಾಕೇಂತ ಕೇಳಿದೆ. ಇಡೀ ರಾಜ್ಯದ ಎಲ್ಲಾ ಕಡೆಯಿಂದ ವೈದ್ಯರು ಬರುತ್ತಿದ್ದಾರೆ, ಅವರಿಗೆ ಟ್ರೀಟ್‌ಮೆಂಟ್ ಕೊಡಬೇಕು ಎಂದ ಸಿದ್ಲಿಂಗು. ಡಾಕ್ಟ್ರಿಗೇ ಅದ್ಯಾವ ಟ್ರೀಟ್‌ಮೆಂಟ್ ಕೊಡ್ತೀಯೋ ಮಹರಾಯಾ ? ಎಂದೆ.

ಇಲ್ರಿ ಸರ, ಡಾಕ್ಟರೆಲ್ಲಾ ರೊಚ್ಚಿಗೆದ್ದು ಬಿಟ್ಟಾರ. ಅವರ ಆರೋಗ್ಯಾ ನಾನು ನೋಡ್ಕೋ ಬೇಕಲ್ರೀ’ ಅಂದ.

ಬೆಳಗಾವಿಯಲ್ಲಿ ಅವರೇನು ಮಾಡ್ತಾರೆ ?

ಒಂದಿಷ್ಟು ಸ್ಪೆಷಲಿಸ್ಟು ಅದಾರ್ರೀ, ಒಂದು ಇಂಜಕ್ಷನ್ ಸಿದ್ದರಾಮಯ್ಯನವರ ಪೃಷ್ಠಕ್ಕ ಕೊಡ್ತಾರ. ಇನ್ನೊಂದು ಇಂಜಕ್ಷನ್ ಹೆಲ್ತ್ ಮಿನಿಸ್ಟರ್ ರಮೇಶ್‌ಕುಮಾರ ಸೊಂಟಕ್ಕ ಕೊಡತಾರ’

ಯಾವ ಇಂಜಕ್ಷನ್ ಕೊಡತಾರಯ್ಯಾ ?’

ಅದರೀ ಸರ, ಇಬ್ಬರಿಗೂ ಬುದ್ದಿ ಭ್ರಮಣೆ ಆಗೇದ ಅಂತ ಮಾತಾಡಾಕ ಹತ್ತಿದ್ರು.ಅದರಾಗ ಒಬ್ಬ ಅನೆಸ್ತೀಶಿಯಾ ಡಾಕ್ಟರು, ಮತ್ತೊಬ್ಬಾವಾ ಸೈಕಿಯಾಟಿಸ್ಟ್ ಅಂತ್ರಿ’

ಅವರು ಇಂಜಕ್ಷನ್ ಕೊಟ್ರೆ ಏನಾಗತ್ತಯ್ಯಾ ?’

ಸಿದ್ರಾಮಣ್ಣನೋರು ಆಸ್ ಯುಷುವಲ್ ಸದನದಾಗ ಮಲಕೊಂಡು ಬಿಡ್ತಾರ್ರೀ. ಇನ್ನು ರಮೇಶ ಕುಮಾರ್ ಅವರು ಹುಚ್ಚುಚ್ಚಾಗಿ ಮಾತಾಡೋದನ್ನ ನಿಲ್ಲಿಸಿ ಗಪ್ ಹೊಡದು ಕುಂತುಬಿಡ್ತಾರ್ರೀ’

ಅಂದ್ರೆ ಇಬ್ಬರಿಗೂ ಮೋಸಾ ಮಾಡ್ತಾರಾ ?’

ಮೋಸಾ ಮಾಡಂಗಿಲ್ರೀ. ಅವರು ನಾರ್ಮಲ್ ಆಗಿರೋ ಹಂಗ ಮಾಡ್ತಾರ್ರೀ. ಈಗ ಅವರೇನೋ ಅಬ್‌ನಾರ್ಮಲ್ ಆಗ್ಯಾರಂತ್ರೀ’

ಏನೇನೋ ಹೇಳ್ಬೇಡ ಕಣಯ್ಯಾ, ಒಬ್ರು ಮಿನಿಸ್ಟರು ಇನ್ನೊಬ್ರು ಚೀಮಿನಿಸ್ಟರು’

ನೋಡ್ರಿ, ಎಲ್ಲಿ ತನಕಾ ಸಿದ್ರಾಮಣ್ಣನವರು ನಿದ್ದಿ ಮಾಡಕೋಂತ ಇದ್ರು ಅಲ್ಲೀತನಕಾ ಎಲ್ಲಾ ಬರಾಬರಿ ಇತ್ತು. ಯಾವಾಗ ಜನಾ ನಿದ್ರಾಮಣ್ಣ ಅಂದ್ರು ಅವಾಗ ಅವರು ಎದ್ದು ಕೂತ್ರು. ಈಗ ಅನುಭವಿಸ್ರಿ’

ಅಂದ್ರೆ ಅವರು ಮಲಗಿದ್ದರೇ ಒಳ್ಳೆಯದಿತ್ತು ಅಂತೀಯಾ ?’

ಹಂಗಲ್ರೀ. ಕೆಲವೊಬ್ಬರ ಸ್ವಭಾವ ಒಂದೊಂದು ಥರಾ. ಅವರ ಪಾಡಿಗೆ ಅವರಿದ್ರು. ನೀವು ಅವರಿಗೆ ಸಿಟ್ಟಿಗೆ ಎಬ್ಬಿಸಿದಿರಿ. ಅದಕ್ಕ ಅವರು ನಿಮ್ಮ ತೆಲಿಮ್ಯಾಗ ಕೈ ಇಡಾಕ ಹತ್ಯಾರ.’

ಅಂದ್ರೂ ಡಾಕ್ಟರ್‌ದು ಕಷ್ಟ ಅಂತೀಯಾ ?’

ಇಷ್ಟು ದಿವಸ ಕಷ್ಟ ಕೊಡಾಕ ಹತ್ತಿದ್ರು. ಈಗ ಕಷ್ಟ ಅಂದ್ರೇನು ಗೊತ್ತಾಗತೈತಿಬಿಡ್ರಿ’

ಮಲಗಿದವನು ಎದ್ದರೇನು ಸುಖ

ಎದ್ದವನು ಎದ್ದೆದ್ದು ಕುಣಿದರೇನು ಸುಖ

ಮಲಗಿದರೂ ಎದ್ದರೂ ಸಿದ್ಧಪುರುಷನಂತಿರಬೇಕು ಸಿದ್ಲಿಂಗಾ !

Leave a Reply

Your email address will not be published. Required fields are marked *

12 − eight =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top