About Us Advertise with us Be a Reporter E-Paper

ಅಂಕಣಗಳು

ಸಾರಿಗೆ ಇಲಾಖೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲವೇಕೆ?

ಆಕ್ರೋಶ: ಕೆ.ಎಂ. ಶಿವಪ್ರಸಾದ್

ಇದು ನಿನ್ನೆ, ಮೊನ್ನೆಯ ಕಥೆಯಲ್ಲ ಹತ್ತಾರು ವರ್ಷಗಳಿಂದಲೂ ಮುಗಿಯದ ಗೋಳು. ನಾಡಿನ ಜನರಿಗೆ ಸೇವೆ ಒದಗಿಸುವ ನೆಪದಲ್ಲಿ ಸಾವಿರಾರು ಕೋಟಿ ರುಪಾಯಿಗಳನ್ನು ಹರಿಸಿದ್ದು ಬಂತೇ ಹೊರತು ಸರಿಯಾದ ಸಮಯಕ್ಕೆ ಬಸ್ ನಿಲ್ದಾಣಕ್ಕೆ ಬಸ್ಸುಗಳು ಬರುತ್ತಿಲ್ಲ. ತೆರಿಗೆ ಕಟ್ಟಿ ಜೀವ ಸವೆಸುತ್ತಿರುವ ಪ್ರಜೆಗಳಿಗಂತೂ ಅದರ ಉಪಯೋಗವೂ  ದಿನದ ಅವಧಿಯಲ್ಲಿ ಬೆಳಗ್ಗೆ ಒಂದೆರಡು ಗಂಟೆ, ಸಾಯಂಕಾಲ ಒಂದೆರಡು ಗಂಟೆಯ ಈ ಸಮಸ್ಯೆಗೆ ಇಂದಿಗೂ ಪರಿಹಾರ ಹುಡುಕಲು ಸಾಧ್ಯವಾಗದಷ್ಟು ಅಧಿಕಾರಿಗಳು  ಜನಪ್ರತಿನಿಧಿಗಳು ವಿಫಲವಾಗಿರುವುದು ಸರಕಾರಗಳ ಹೊಣೆಗೇಡಿತನಕ್ಕೆ ಸಾಕ್ಷಿ.

   ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಈಶಾನ್ಯ, ವಾಯವ್ಯ ಸಾರಿಗೆ ಸಂಸ್ಥೆಗಳು, ಮಹಾನಗರ ವ್ಯಾಪ್ತಿಗಳು, ಮತ್ತು ಗ್ರಾಮಾಂತರ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಸಾರಿಗೆ ಇಲಾಖೆಯ ಸಾವಿರಾರು ಬಸ್‌ಗಳು ಕಾರ್ಯನಿರ್ವಹಿಸುತ್ತಿವೆ. ಅದಕ್ಕೊಂದು ಇಲಾಖೆ, ಅದಕ್ಕೊಬ್ಬ ಸಚಿವ, ಸಿಂಗಲ್ ಡಿಗ್ರಿ, ಡಬಲ್ ಡಿಗ್ರಿ ಓದಿದ  ಬುದ್ಧಿವಂತ ಶಿರೋಮಣಿಗಳನ್ನೇ ಅಧಿಕಾರಿಗಳಾಗಿ ನೇಮಿಸಲಾಗುತ್ತದೆ. ಅವರಿಗೆ ಸಂಬಳ, ಭತ್ಯೆ ಅನ್ನುವ ನೆಪದಲ್ಲಿ ಸಾವಿರಾರು ಕೋಟಿ ರು. ವೆಚ್ಚ ಮಾಡಲಾಗುತ್ತಿದೆಯೇ ಹೊರತು ಆ ಇಲಾಖೆಯಿಂದ ಜನರಿಗೆ ಸಿಗಬೇಕಾದ ಸೇವೆ ಮಾತ್ರ ಸಿಗುತ್ತಿಲ್ಲ. ಪ್ರತಿನಿತ್ಯ ಲಕ್ಷಾಂತರ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳಲು ಹರಸಾಹಸ ಪಡಬೇಕಾಗಿದೆ. ಇನ್ನು ಇವರ ನಡುವೆ ಕೆಲಸಕ್ಕಾಗಿ ತೆರಳುವ ನೌಕರರ ಪಾಡಂತೂ ಹೇಳತೀರದಾಗಿದೆ. ಒಂದೆಡೆ ಸೂಕ್ತ ಸಮಯಕ್ಕೆ ಬಸ್ ವ್ಯವಸ್ಥೆ ಸಿಗದೇ ಸಂಕಷ್ಟ ಅನುಭವಿಸುತ್ತಿದ್ದರೆ, ಮತ್ತೊಂದೆಡೆ ಬಸ್ ಚಾಲಕರು ಮತ್ತು  ಧಿಮಾಕಿನ ಮಾತುಗಳು ಮತ್ತು ನಡೆನುಡಿಗಳಿಂದ ವಿದ್ಯಾರ್ಥಿಗಳು ಹಾಗೂ ಸಾರಿಗೆ ಇಲಾಖೆಯ ಬಸ್ ಗಳನ್ನೇ ಅವಲಂಬಿಸಿರುವ ನೌಕರರ ಬದುಕು ದುಸ್ತರವಾಗಿದೆ.

ಹತ್ತಾರು ವರ್ಷಗಳಿಂದಲೂ ಇದೇ ವಿಚಾರವಾಗಿ ಅದೆಷ್ಟು ಹೋರಾಟಗಳು, ನಡು ಬೀದಿಯ ಪ್ರತಿಭಟನೆಗಳು ಜರುಗಿವೆಯೋ ಲೆಕ್ಕಕ್ಕೆ ಸಿಗದು. ಆದರೂ ಇಷ್ಟೆಲ್ಲಾ ನಡೆಯುತ್ತಿದ್ದರು ಈ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕದೇ ಕಾಟಾಚಾರಕ್ಕೆ ಒಂದೆರಡು ದಿನ ಕಣ್ಣೊರೆಸುವ ನಾಟಕವಾಡಿ ಮತ್ತೇ-ಮತ್ತೆ ಅದೇ ಚಾಳಿ ಮುಂದುವರಿಸುತ್ತಿರುವುದು ಸರಕಾರಗಳ ಬೇಜವಾಬ್ದಾರಿಯ ಸಂಕೇತವಾಗಿದೆ. ದಿನದ ಅವಧಿಯಲ್ಲಿ ಒಂದು  ಮತ್ತೊಂದು ಸ್ಥಳಕ್ಕೆ ಪ್ರಯಾಣ ಮಾಡುವ ಬಹುತೇಕ ಮಂದಿ ಬೆಳಿಗ್ಗೆ 7:30 ರಿಂದ 10:30 ರವರೆಗೆ ಮತ್ತು ಸಾಯಂಕಾಲ 4:30 ರಿಂದ 06:30ರವರೆಗೆ ಹೆಚ್ಚಿರುತ್ತಾರೆ. ಬಹುತೇಕ ಶಾಲಾ-ಕಾಲೇಜುಗಳು, ಕಂಪನಿಗಳ, ಆಫೀಸುಗಳ ಕಾರ್ಯನಿರ್ವಹಣೆಯ ಸಮಯ ಇದಾಗಿರುವುದರಿಂದ ಜನರ ಓಡಾಟವೂ ಕೂಡ ಇದೇ ಸಮಯದಲ್ಲಿರುತ್ತದೆ. ಹಾಗಾಗಿ ಈ ಸಮಯದಲ್ಲಿ ಒಂದೆರಡು ಹೆಚ್ಚುವರಿ ಬಸ್ ಗಳನ್ನು ವ್ಯವಸ್ಥೆ ಮಾಡಿಕೊಡಿ ಅನ್ನುವುದು ಬಹುದಿನದ ಹಳೆಯ ಬೇಡಿಕೆ. ಹಾಗೆಯೇ ಹಕ್ಕೊತ್ತಾಯ ಕೂಡ. ಆದರೆ ಈ ಬೇಡಿಕೆಗೆ ಸರಕಾರಗಳು  ನೀಡಿವೆಯೇ ಅಂದರೆ ಇಲ್ಲವೆಂದೇ ಹೇಳಬೇಕು.

ಬೆಳಗ್ಗೆ-ಸಾಯಂಕಾಲ ಬಸ್ ಗಳಿಗಾಗಿ ಬಸ್ ನಿಲ್ದಾಣಗಳಲ್ಲಿ ಕಾಯುವುದೇ ದುಸ್ತರವಾಗಿದೆ. ಹೋಗಲಿ, ಸರಕಾರಿ ಸಾರಿಗೆ ಬಸ್ ಗಳಿಲ್ಲದೇ ಇದ್ದರೇನು ಖಾಸಗಿ ಬಸ್‌ಗಳು  ಮಿನಿ ವಾಹನಗಳು, ಆಟೋಗಳನ್ನಾದರೂ ಹಿಡಿದು ಪ್ರಯಾಣ ಮಾಡೋಣವೆಂದರೆ ಆರ್‌ಟಿಓ ದವರ ನೂರೆಂಟು ಕಾನೂನುಗಳು, ಎಲ್ಲೆಂದರಲ್ಲಿ ವಾಹನಗಳ ತಡೆದು ತಪಾಸಣೆ ಮಾಡುವ ಕಾರಣದಿಂದಾಗಿ ಅವುಗಳನ್ನು ಬಸಲು ಭಯ. ಹೀಗೆ ಒಂದು ಕಡೆ ಖಾಸಗಿ ವಾಹನಗಳ ಮೇಲೆ ಕಾನೂನಿನ ಅಸ್ತ್ರ ಪ್ರಯೋಗಿಸಿ ಅವುಗಳ ಸಂಚಾರಕ್ಕೆ  ಪಡಿಸುವ ಸರಕಾರ, ಇನ್ನೊಂದು ಕಡೆ ಜನರಿಗೆ ಸೇವೆ ಒದಗಿಸಲು ಸಂಪೂರ್ಣವಾಗಿ ವಿಫಲವಾಗುತ್ತಿದೆ. ಸಾರಿಗೆ ಇಲಾಖೆ ಬಸ್ ಗಳ ಹದಗೆಟ್ಟ ಸಮಯ ಪರಿಪಾಲನೆಯಿಂದಾಗಿ ನೌಕರರು, ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತಲುಪಬೇಕಾದ ಸ್ಥಳಕ್ಕೆ ತಲುಪಲಾಗುತ್ತಿಲ್ಲ. ಮತ್ತೊಂದು ಕಡೆ ಕೆಲವೊಂದು ಬಸ್ ನಿಲ್ದಾಣಗಳಲ್ಲಿ ಬೇಕಂತಲೇ ಬಸ್ ಗಳ ಕೃತಕ ಅಭಾವ ಸೃಷ್ಟಿಸಿ ಕುರಿ ತುಂಬಿದಂತೆ ಜನರನ್ನು ತುಂಬಿಕೊಂಡು ಹೋಗುವ ಮೂಲಕ ಶೋಷಣೆಯನ್ನು ಕೂಡ ಮಾಲಾುತ್ತಿದೆ. ಸಮಯಕ್ಕೆ ಸರಿಯಾಗಿ ಹೋಗಬೇಕಾದರೆ ಇಲಾಖೆಯ ಅಧಿಕಾರಿಗಳ ಈ  ಸಹಿಸಿಕೊಳ್ಳಲೇಬೇಕಾದಂತಹ ಇಕ್ಕಟ್ಟು ಕೂಡ ಜನಸಾಮಾನ್ಯರಿಗೆ ಎದುರಾಗಿದೆ.

ಇದರ ನಡುವೆ ಬಸ್ಸುಗಳ ಅಭಾವದ ಕಾರಣವಾಗಿ ಲಭ್ಯವಿರುವ ಬಸ್ಸುಗಳಲ್ಲಿ ಜಾಗ ಗಿಟ್ಟಿಸಲು ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರು ಏಕಕಾಲಕ್ಕೆ ಮುಗಿಬೀಳುವುದರಿಂದ ಆ ಸಮಯದಲ್ಲಿ ಹೆಂಗಸರಿಗೆ ಮತ್ತು ಶಾಲಾ-ಕಾಲೇಜಿನ ಹೆಣ್ಣು ಮಕ್ಕಳಿಗೆ ಆಗುತ್ತಿರುವ ದೈಹಿಕ ಮತ್ತು ಮಾನಸಿಕ ಕಿರಿಕಿರಿಗಳು ಕೂಡ ತೀರಾ ಅಸಹ್ಯವನ್ನುಂಟು ಮಾಡುತ್ತಿವೆ. ಖಾಸಗಿ ವಾಹನಗಳಿಗೆ ಇಂತಿಷ್ಟೇ ಪ್ರಯಾಣಿಕರು ಪ್ರಯಾಣ ಮಾಡಬೇಕೆಂದು ನಿಯಮ ರೂಪಿಸುವ ಸರಕಾರವೇ ತನ್ನ ಇಲಾಖೆಯ ಬಸ್ಸುಗಳಲ್ಲಿ ವಿದ್ಯಾರ್ಥಿಗಳು ಮತ್ತು  ಕುರಿಗಳಂತೆ ತುಂಬಿಕೊಂಡು ಹೋಗುತ್ತಿರುವುದು ಅದ್ಯಾವ ಜಾಣಪೆದ್ದುತನವೋ ತಿಳಿಯದು. ಅದರಲ್ಲೂ ಎರಡ್ಮೂರು ಮಾಜಿ ಸಿಎಂಗಳು ಹಾಲಿ ಸಿಎಂಗಳ ಕ್ಷೇತ್ರ ವ್ಯಾಪ್ತಿಗಳಲ್ಲಿ (ಅಂದರೆ ಹಳೇ ಮೈಸೂರು ಭಾಗದಲ್ಲೇ) ಅಲ್ಲದೇ ಸಾರಿಗೆ ಸಚಿವರುಗಳ ಕ್ಷೇತ್ರ ವ್ಯಾಪ್ತಿಯಲ್ಲೇ ಇಂತಹ ಬೆಟ್ಟದಷ್ಟು ಸಮಸ್ಯೆಗಳು ಇದ್ದರೂ ಇದುವರೆವಿಗೂ ಪರಿಹಾರ ಕಂಡುಕೊಳ್ಳದೇ ಇರುವುದು ನಾಚಿಕೆಗೇಡಿನ ಸಂಗತಿ.

ಬೆಳಗ್ಗೆ ಮತ್ತು ಸಾಯಂಕಾಲ ಸಾರಿಗೆ ಇಲಾಖೆಯ ಬಸ್‌ಗಳಲ್ಲಿ ಪ್ರಯಾಣಿಸುವ ಬಹುತೇಕ ಮಂದಿ (ವಿದ್ಯಾರ್ಥಿಗಳು ಸೇರಿ) ತಿಂಗಳ ಪಾಸ್ ಅನ್ನೋ, ವಾರ್ಷಿಕ ಪಾಸ್  ಹೊಂದಿರುತ್ತಾರೆ. ಈ ಕಾರಣಕ್ಕಾಗಿ ಬಸ್ ಹತ್ತುವಾಗ ಮತ್ತು ಇಳಿಯುವಾಗ ಉಂಟಾಗುವ ಜನಸಂದಣಿಯನ್ನು ನಿಭಾಯಿಸಲು ನಿರ್ಲಕ್ಷ್ಯ ವಹಿಸುವ ಸಾರಿಗೆ ಬಸ್ ಗಳ ನಿರ್ವಾಹಕರು ಈ ಸಮಯದಲ್ಲಿ ಕೆಲವೊಮ್ಮೆ  ಧಿಮಾಕಿನ ವರ್ತನೆ ತೋರುವುದಲ್ಲದೆ ತಮ್ಮ ಸೀಟುಗಳಲ್ಲಿಯೇ ಆಗುತ್ತಿರುವ ನೂಕುನುಗ್ಗಲಿಗೂ ತಮಗೂ ಸಂಬಂಧವೇ ಇಲ್ಲವೆಂಬಂತೆ ಕುಳಿತಿರುತ್ತಾರೆ. ಬಸ್ ಚಾಲಕರಂತೂ ಕೆಲ ವೇಳೆ ಬಸ್ ಒಳಗೆ ಸ್ಥಳಾವಕಾಶ ಇದ್ದರೂ ಕೂಡ, ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರು ಬಸ್ ಹತ್ತುತ್ತಿದ್ದರೂ ಅದ್ಯಾವುದನ್ನೂ ಲೆಕ್ಕಿಸದೆ ಬೇಕೆಂತಲೇ ಬಸ್‌ಗಳನ್ನು ವೇಗವಾಗಿ  ಹೋಗುವುದಲ್ಲದೇ ಕೋರಿಕೆ ನಿಲುಗಡೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಹೋಗಿ ಬರಲೂ ಸಹಾಯವಾಗಲೆಂದು ಅನುಮತಿ ನೀಡಿರುವ ಬಸ್ ನಿಲುಗಡೆಗಳನ್ನು ನೀಡುವುದಿಲ್ಲ. ಬೇಕಂತಲೇ ವಿದ್ಯಾರ್ಥಿಗಳೊಂದಿಗೆ ಕ್ಯಾತೆ ತೆಗೆದು ನಿಂದಿಸುವ ಕಾರ್ಯದಲ್ಲಿ ನಿರತರಾಗುತ್ತಾರೆ.

ಬೆಳಗ್ಗೆಯ ಅವಧಿಯಲ್ಲಿ ಈ ತರಹದ ವರ್ತನೆಗಳನ್ನು ತೋರುವ ಸಾರಿಗೆ ಇಲಾಖೆ ಸಿಬ್ಬಂದಿ ಮತ್ತು ಅಧಿಕಾರಿಗಳು ದಿನದ ಕೊನೆಯಲ್ಲೇ ಬೇಕಂತಲೇ ಬಸ್ ಗಳ ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ. ಅದರಲ್ಲೂ ಆರೇಳು ಗಂಟೆ ಕಳೆದ ಮೇಲಂತೂ ಒಂದೊಂದೇ ಬಸ್ ವ್ಯವಸ್ಥೆ ಮಾಡುವುದಲ್ಲದೇ  ಇಡೀ ಬಸ್, ಮುಖ್ಯ ಬಸ್ ನಿಲ್ದಾಣದಲ್ಲೇ ಭರ್ತಿಯಾಗುವ ತನಕ ಹೊರಡಲು ಅನುಮತಿ ನೀಡುತ್ತಿಲ್ಲ. ಹೀಗೆ ಮುಖ್ಯ ಬಸ್ ನಿಲ್ದಾಣದಲ್ಲೇ ಬಸ್ ಗಳೆಲ್ಲಾ ಬಹುತೇಕ ಭರ್ತಿಯಾಗುವುದರಿಂದ ಮುಂದಿನ ನಿಲ್ದಾಣಗಳಲ್ಲಿರುವ ಜನರಿಗೆ ಸ್ಥಳವಕಾಶವಿಲ್ಲದೇ ಬಾಗಿಲುಗಳ ಬಳಿ ನೇತಾಡಿಕೊಂಡೇ ಹೋಗುವಂತಹ ಸನ್ನಿವೇಶ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಖಾಸಗಿ ಮಿನಿ ವಾಹನಗಳು, ದ್ವಿಚಕ್ರ ವಾಹನ ಸವಾರರಿಗೆ ಕೈಯೊಡ್ಡುವ ಪರಿಸ್ಥಿತಿ ಬಂದೊದಗಿದೆ.

ಇದು ಕೇವಲ ಒಂದು ದಿನದ ಸಮಸ್ಯೆಯಲ್ಲ ಅಥವಾ ನಿನ್ನೆ-ಮೊನ್ನೆಉದ್ಭವಿಸಿದ್ದಲ್ಲ. ಹತ್ತಾರು ವರ್ಷಗಳಿಂದ ಜನರ  ಸ್ಪಂದಿಸದ ಬೇಜವಾಬ್ದಾರಿ ಸರಕಾರಗಳು ಮತ್ತು ಇಲಾಖೆಯ ಸಚಿವರುಗಳು ಹಾಗೂ ಅಧಿಕಾರಿಗಳ ಪಾಪದ ಕೂಸು. ರಾಜ್ಯಾದ್ಯಂತ ನೂರಾರು ಬಸ್ ಡಿಪೋಗಳು, ಸಾವಿರಾರು ಬಸ್‌ಗಳ ವ್ಯವಸ್ಥೆ ಇರುವ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಒಂದೆರಡು ಗಂಟೆಗಳಲ್ಲಿ ಸೃಷ್ಟಿಯಾಗುವ ಈ ಸಮಸ್ಯೆಗೆ ಪರಿಹಾರ ಹುಡುಕುವುದು ತೀರಾ ಕಷ್ಟದ ಕೆಲಸವೇನಲ್ಲ. ಆದ್ದರಿಂದ ಹಾಲಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹಾಗೂ ಮಾನ್ಯ ಮುಖ್ಯಮಂತ್ರಿಗಳು ಇತ್ತ ಗಮನಹರಿಸಿ ತೀರಾ ಅನಾನೂಕೂಲತೆ ಉಂಟಾಗಿರುವ ಬೆಳಗ್ಗೆ 7:30 ರಿಂದ 10:30 ರವರೆಗೆ  ಸಾಯಂಕಾಲ 4:00 ರಿಂದ 06 ಗಂಟೆಯವರೆಗೆ ಒಂದಷ್ಟು ವಿಶೇಷ ಬಸ್ ಗಳ ವ್ಯವಸ್ಥೆ ಮಾಡಿ, ಮಹಿಳೆಯರಿಗೆ ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಯನಿರಿಗೆ ಒಂದಷ್ಟು ಬಸ್ ಸೌಲಭ್ಯ ಮೀಸಲಿಡುವ ಕಡೆ ಗಮನ ಹರಿಸಬೇಕು. ಸಾರಿಗೆ ಬಸ್ ಗಳ ಚಾಲಕರಿಗೆ ಮತ್ತು ನಿರ್ವಾಹಕರಿಗೆ ಜನರೊಂದಿಗೆ ಮಾತನಾಡುವ ಶೈಲಿಯ ಬಗ್ಗೆ, ಸಾರ್ವಜನಿಕ ಜೀವನದಲ್ಲಿ ರೂಢಿಸಿಕೊಳ್ಳಬೇಕಾದ ನಡವಳಿಕೆಗಳ ಬಗ್ಗೆ ತಿಳಿ ಹೇಳಬೇಕು. ಅದರಲ್ಲೂ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಲೆಂದು ಸರಕಾರದಿಂದ ನೀಡುವ ಕೋರಿಕೆ ನಿಲುಗಡೆಗಳಲ್ಲಿ ಕಡ್ಡಾಯವಾಗಿ  ನಿಲ್ಲಿಸಬೇಕು ಇಲ್ಲವಾದಲ್ಲಿ ದಂಡದ ಹೊರೆಯನ್ನು ಹೊರಬೇಕಾಗುತ್ತದೆಯೆಂಬ ನಿಯಮ ರೂಪಿಸಬೇಕು. ಈ ಮೂಲಕ ಜನಸಾಮಾನ್ಯರ ಹಿತಕಾಯುವ ನಿರ್ಧಾರ ಕೈಗೊಳ್ಳಬೇಕು.

Tags

Related Articles

Leave a Reply

Your email address will not be published. Required fields are marked *

Language
Close