About Us Advertise with us Be a Reporter E-Paper

Breaking Newsಪಾಲಿಟಿಕ್ಸ್ಪ್ರಚಲಿತ
Trending

ಮೋದಿ ಏಕೆ ಮುಸ್ಲಿಮರ ಟೋಪಿ ಹಾಕುವುದಿಲ್ಲ? ತರೂರ್‌ ಪ್ರಶ್ನೆ

ತಿರುವನಂತಪುರo: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೇಲೆ ಉರಿ ಕಾರಿಕೊಂಡ ಕಾಂಗ್ರೆಸ್‌ ನಾಯಕ ಶಶಿ ತರೂರ್‌,”ಮುಸ್ಲಿಮರ ಸ್ಕಲ್‌ ಕ್ಯಾಪ್‌ ಬಿಟ್ಟು ಮಿಕ್ಕೆಲ್ಲವನ್ನೂ ಪ್ರಧಾನಿ ಮೋದಿ ಧರಿಸುತ್ತಾರೆ” ಎಂದಿದ್ದಾರೆ.

ಹಸಿರು ಬಣ್ಣದ ಪೋಷಾಕು ತೊಡಲು ಪ್ರಧಾನಿಯೇಕೆ ಮುಂದೆ ಬರುವುದಿಲ್ಲ ಎಂದು ತರೂರ್‌ ಇದೇ ವೇಳೆ ಪ್ರಶ್ನಿಸಿದ್ದಾರೆ.

ತಮ್ಮ ಸಂಸದೀಯ ಕ್ಷೇತ್ರ ತಿರುವನಂತಪುರಂನಲ್ಲಿ ನಡೆಯುತ್ತಿರುವ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ತರೂರ್‌ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ಗೋರಕ್ಷಕರಿಂದ ದನಗಳ್ಳರ ಮೇಲೆ ಆಗುತ್ತಿರುವ ದಾಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ದೇಶದಲ್ಲಿ 2,920 ಕೋಮು ಗಲಭೆಯ ಘಟನೆಗಳು ಜರುಗಿದ್ದು 389 ಮಂದಿ ಮೃತಪಟ್ಟಿದ್ದಾರೆ ಎಂದು ಗೃಹ ಸಚಿವಾಲಯದ ಅಂಕಿಅಂಶಗಳು ತಿಳಿಸುತ್ತಿದ್ದು, ಈ ಘಟನೆಗಳನ್ನು ಮೋದಿ ಖಂಡಿಸದ ಕಾರಣ ಹಿಂಸಾಚಾರ ಇನ್ನಷ್ಟು ಹೆಚ್ಚಿದೆ ಎಂದು ಹೇಳಿದ್ದಾರೆ.

ಸಮಾರಂಭದಲ್ಲಿ ಸ್ವಾಮಿ ಅಗ್ನಿವೇಷರೂ ಭಾಗವಹಿಸಿದ್ದರು. ಇವರಿಗೆ ಜಾರ್ಖಂಡ್‌ನಲ್ಲಿ ಇತ್ತೀಚಿಗೆ ಕೆಲ ಯುವಕರು ಸಾರ್ವಜನಿಕವಾಗಿ ಗೂಸಾ ನೀಡಿದ್ದರು. ಹಿಂದೂ ಧರ್ಮದ ಕುರಿತು ಅವಹೇಳನಾಕಾರಿ ಭಾಷಣ ಮಾಡಿದ್ದರೆಂಬ ಬಲವಾದ ಆಪಾದನೆ ಅಗ್ನಿವೇಷ್‌ ಮೇಲಿದೆ.

Tags

Related Articles

Leave a Reply

Your email address will not be published. Required fields are marked *

Language
Close