About Us Advertise with us Be a Reporter E-Paper

ಅಂಕಣಗಳು

4 ದಶಕದ ಹೋರಾಟಕ್ಕೆ ಜಯ

ಒಂದಲ್ಲ ಎರಡಲ್ಲ ಬರೋಬ್ಬರಿ ನಾಲ್ಕು ದಶಕದ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಮಹದಾಯಿ ತೀರ್ಪುನ್ನು ಪರ-ವಿರೋಧವಾಗಿ ವಿಶ್ಲೇಷಿಸಲಾಗುತ್ತಿದ್ದರೂ ಇನ್ನಿತರ ಜಲವಿವಾದವನ್ನು ಅವಲೋಕಿಸಿದಾಗ ಇದು ಕರ್ನಾಟಕದ ಪಾಲಿಗೆ ಜಯವೇ ಸರಿ. ಕರ್ನಾಟಕ ಕೇಳಿದ 36 ಟಿಎಂಸಿ ನೀರಿನ ಪೈಕಿ ಟಿಎಂಸಿ ನೀರು ಬಿಡುಗಡೆಗೆ ನ್ಯಾಯಾಧಿಕರಣ ತೀರ್ಪು ನೀಡಿದೆ.

ಬರಗಾಲದ ಹಿನ್ನೆಲೆಯಲ್ಲಿ ಕುಡಿಯಲಾದರೂ ನೀರುಕೊಡಿ ಎಂದು ಕರ್ನಾಟಕ ಸರಕಾರ ನ್ಯಾಯಾಧಿಕರಣಕ್ಕೆ ಮಧ್ಯಂತರ ಅರ್ಜಿ ಸಲ್ಲಿಸಿತ್ತು. ಈ ವಿಚಾರದಲ್ಲಿ ನ್ಯಾಯಾಧಿಕರಣ ನಡೆದುಕೊಂಡ ರೀತಿ ಒಂದು ರೀತಿಯಲ್ಲಿ ಆತಂಕ ಮೂಡಿಸಿತ್ತು. ನ್ಯಾಯಾಧಿಕರಣ ಮಧ್ಯಂತರ ಅರ್ಜಿಯನ್ನು ಸಾರಾಸಗಟಾಗಿ ತಿರಸ್ಕರಿಸಿತ್ತು. ಇದನ್ನು ಗಮನಿಸಿದಾಗ ಅಂತಿಮ ತೀರ್ಪಿನಲ್ಲಿ ನ್ಯಾಯಾಧಿಕರಣದ ನಿಲುವು ಏನಾಗಲಿದೆ ಎನ್ನುವ ಸಹಜ ಆತಂಕ ಮನೆ ಮಾಡಿತ್ತು. ಗೋವಾ ಕುಡಿಯಲು ನೀರೇ ಕೊಡುವುದಿಲ್ಲವೆಂದು ಹಠ ಹಿಡಿದಿದ್ದ ನ್ಯಾಯಾಧಿಕರಣ ಅಂತಿಮ ತೀರ್ಪಿನಲ್ಲಿ 13.7 ಟಿಎಂಸಿ ನೀರಿಗೆ ಆದೇಶಿಸಿದ್ದು, ಸ್ವಾಗತಾರ್ಹವೇ ಆಗಿದೆ.

ನ್ಯಾಯಾಧಿಕರಣ ನೀಡಿರುವ ತೀರ್ಪಿನ ವಿಚಾರವಾಗಿ ಅನೇಕ ರೈತ ಮುಖಂಡರು ಆಕ್ಷೇಪವನ್ನೂ ವ್ಯಕ್ತಪಡಿಸಿದ್ದಾರೆ. ನಮಗೆ ಕೊಟ್ಟಿರುವ ನೀರಿನ ಪ್ರಮಾಣ ಕಡಿಮೆ ಎಂದು ವಾದಿಸುತ್ತಿದ್ದಾರೆ. ಆದರೆ ನಲವತ್ತು ವರ್ಷಗಳಿಂದ ಬಡಿದಾಡುತ್ತಿರುವ ರೈತರ ಪಾಲಿಗೆ ಇದು ಅಮೃತವೇ ಆಗಿದೆ. ಕುಡಿಯಲು ನೀರು ಸಿಗುವ ಜತೆಗೆ ಹಸನಾಗಿ ಬೆಳೆ ಬೆಳೆಯಲು ನೀರು ಸಿಗುತ್ತದೆಯಲ್ಲ

ಎನ್ನುವ ಖುಷಿಯಲ್ಲಿದ್ದಾರೆ. ಇಂಥ ಸ್ಥಿತಿಯಲ್ಲಿ ಕೆಲವರು ಸುಪ್ರಿಂಕೋರ್ಟ್‌ನಲ್ಲಿ ಸಲ್ಲಿಸುವುದಾಗಿ ಹೇಳುತ್ತಿದ್ದಾರೆ. ಹಾಗಂತ ರಾಜ್ಯ ಸರಕಾರ ಈ ವಿಚಾರದಲ್ಲಿ ಪೂರ್ವಾಪರ ಸಮಾಲೋಚಿಸಿಯೇ ನಿರ್ಧಾರ ಕೈಗೊಳ್ಳಬೇಕು. ಪುನಃ ನ್ಯಾಯ ಕೇಳಲು ಹೋಗಿ ಮತ್ತೆ ನಲವತ್ತು ವರ್ಷ ಕಾಯುವ ದುಸ್ಥಿತಿ ಬರಬಾರದು. ಯಾವುದಕ್ಕೂ ಸೂಕ್ಷ್ಮ ಹೆಜ್ಜೆಯನ್ನಿಡುವುದು ಅಗತ್ಯವಿದೆ.

ಇನ್ನೊಂದು ಮುಖ್ಯ ವಿಚಾರವೆಂದರೆ, ನ್ಯಾಯಾಧಿಕರಣ 13.7 ಟಿಎಂಸಿ ನೀರು ನೀಡುವಂತೆ ತೀರ್ಪು ನೀಡಿದೆ. ಹೀಗಿರುವಾಗ ರಾಜ್ಯಕ್ಕೆ ನೀರು ಹರಿಸುವುದಾದರೂ ಹೇಗೆ ಎನ್ನುವ ಬಗ್ಗೆ ಸರಕಾರ ಗಂಭೀರ ಚಿಂತನೆ ನಡೆಸಬೇಕಿದೆ. ಕಳಸಾ ಮತ್ತು ಬಂಡೂರಿ ಮಲಪ್ರಭೆಗೆ ನೀರು ಹರಿದು ಬರಲು ತಕ್ಷಣ ಯೋಜನೆ ರೂಪಿಸಬೇಕಿದೆ. ಇದಕ್ಕೆ ಅಗತ್ಯ ಅನುದಾನವನ್ನೂ ಕಲ್ಪಿಸಬೇಕಿದೆ. ಈ ಎಲ್ಲ ಕಾರ್ಯ ಯುದ್ಧೋಪಾದಿಯಲ್ಲಿ ಆಗಬೇಕಿದೆ. 80ರ ದಶಕದಲ್ಲಿ ಅಂದಿನ ಗೋವಾ ಮುಖ್ಯಮಂತ್ರಿ ಪ್ರತಾಪ ಸಿಂಹ್ ರಾಣೆ ಮಹದಾಯಿ ಯೋಜನೆಗೆ ಸಮ್ಮತಿ ಸೂಚಿಸಿದ್ದರು. ಆದರೆ ಕರ್ನಾಟಕ ಸರಕಾರದ ನಿರ್ಲಕ್ಷ್ಯ ಧೋರಣೆಯಿಂದ ಯೋಜನೆ ಅನುಷ್ಠಾನವಾಗದಂತಾಯಿತು. ಆ ದಿನಗಳು ಪುನರಾವರ್ತಿತವಾಗದಂತೆ ರಾಜ್ಯ ಸರಕಾರ ಕಾಳಜಿ ವಹಿಸಬೇಕಿದೆ.

Tags

Related Articles

Leave a Reply

Your email address will not be published. Required fields are marked *

Language
Close