About Us Advertise with us Be a Reporter E-Paper

Breaking Newsರಾಜ್ಯ

ಚುನಾವಣೆ: ಮತಗಟ್ಟೆ ಬಳಿ ವಾಮಾಚಾರ…!

ಬಾಗಲಕೋಟೆ: ಬಾಗಲಕೋಟೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕೈ ಮತ್ತು ಕಮಲದ ನಡುವೆ ಜಿದ್ದಾಜಿದ್ದಿ ನಡೆಯುತ್ತಿದೆ. ಈ ಮಧ್ಯೆ ಗುರುವಾರ ವಿದ್ಯಾಗಿರಿ ಪ್ರದೇಶದ ರೂಪ ಲ್ಯಾಂಡ್ ಬಳಿ 11ನೇ ವಾರ್ಡ್‌ನ ಮತಗಟ್ಟೆ ಸಂಖ್ಯೆ 45ರಲ್ಲಿ ವಾಮಾಚಾರ ನಡೆದಿದೆ.

ಇದೀಗ ಈ ವಾಮಾಚಾರ ವಿಷಯ ಜನರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು 11ನೇ ವಾರ್ಡ್‌ನ ಮತ ಕೇಂದ್ರವನ್ನಾಗಿ ಮಾಡಲಾಗಿದ್ದು, ಕೇಂದ್ರದ ಮೆಟ್ಟಿಲ ಬಳಿ ಸೂಜಿ ದಾರದಲ್ಲಿರುವ ನಿಂಬೆಹಣ್ಣು ಇಟ್ಟು ಮುಚ್ಚಲಾಗಿದೆ. ಚುನಾವಣೆಯಲ್ಲಿ ಗೆಲ್ಲುವ ದೃಷ್ಟಿಯಿಂದ ಮಾಡಲಾಗಿದೆಯೋ ಇಲ್ಲ ಬೇರೆ ದೃಷ್ಟಿಕೋನದಲ್ಲಿ ಮಾಡಿದ್ದಾರೆ ಎಂಬುದು ಗೊತ್ತಾಗಬೇಕಿದೆ.

Tags

Related Articles

Leave a Reply

Your email address will not be published. Required fields are marked *

Language
Close