About Us Advertise with us Be a Reporter E-Paper

ವಿವಾಹ್

ಸೂಪರ್‌ವುಮೆನ್ ಎಂಬ ಹಣೆಪಟ್ಟಿಯೊಂದಿಗೆ….!

- ಭವ್ಯ ಬೊಳ್ಳೂರು

ಆಫೀಸ್, ಮನೆ ಎರಡನ್ನೂ ನಿಭಾಯಿಸಬೇಕಾದ ಅನಿವಾರ್ಯತೆ, ಎಲ್ಲೂ ತನ್ನ ಕಾರ್ಯವೈಖರಿಗೆ ಭಂಗ ಬಾರದಂತೆ, ಪುರುಷರಿಗೆ ತಾನು ಯಾವುದರಲ್ಲೂ ಕಡಿಮೆ ಇಲ್ಲದಂತೆ ಬದುಕನ್ನು ನಡೆಸಬೇಕಾದ ಅವಶ್ಯಕತೆ ಈಗಿನ ಸೂಪರ್ ವುಮೆನ್ ಎಂಬ ಹಣೆಪಟ್ಟಿಕಟ್ಟಿಕೊಂಡ ಪ್ರತಿಯೊಬ್ಬ ಮಹಿಳೆಯದ್ದು ಆಗಿದೆ.

ಎಷ್ಟೇ ಕೆಲಸದ ಒತ್ತಡವಿರಲಿ, ಅದನ್ನು ಸಮರ್ಥವಾಗಿ ನಿಭಾಯಿಸಿ, ಎಲ್ಲವನ್ನೂ ಮುಗಿಸಿ ಮನೆಯ ಹೊಸ್ತಿಲನ್ನು ಪ್ರವೇಶಿಸಿದ ತಕ್ಷಣ ಟಿಪಿಕಲ್ ಗೃಹಿಣಿಯಾಗಿ ಬಿಡುತ್ತಾಳವಳು. ಅಯ್ಯೋ.. ಇವತ್ತು ಲೇಟ್..ಎಂಬ ಉದ್ಗಾರ.. ಶಾಲೆ ಮುಗಿಸಿ, ಸ್ನೇಹಿತರೊಂದಿಗೆ ಆಟವಾಡಿ, ಹೋಮ್‌ವರ್ಕ್ ಮುಗಿಸಿದ ಮಕ್ಕಳು ಅಮ್ಮನಿಗಾಗಿ ಕಾದು ಬಸವಳಿದು, ಕುಳಿತಿರುತ್ತಾರೆ. ಡ್ರೆಸ್‌ನ್ನೂ ಬದಲಾಯಿಸದೆ, ಅದರ ಮೇಲೊಂದು ಏಪ್ರನ್‌ನ್ನು ಏರಿಸಿ, ಪಟಪಟನೆ ಸಿಂಕ್‌ನಲ್ಲಿ ಪೇರಿಸಿಟ್ಟ ಪಾತ್ರೆಗಳನ್ನು ತೊಳೆದು, ಕುಕ್ಕರ್ ಇಟ್ಟು, ಅನ್ನ, ಸಾಂಬಾರ್ ರೆಡಿ ಮಾಡುವಷ್ಟರ ಹೊತ್ತಿಗೆ ತೂಕಡಿಸುತ್ತಿದ್ದ ಮಕ್ಕಳು ಅದಾಗಲೇ ನಿದ್ದೆಗೆ ಜಾರಿಯಾಗಿರುತ್ತದೆ. ಅವರನ್ನು ಎಬ್ಬಿಸಿ ಊಟ ಮಾಡಿಸುಷ್ಟರ ಹೊತ್ತಿಗೆ, ಪಕ್ಕದ ಮನೆಯಲ್ಲಿ ಲೈಟ್ ಆರಿರುತ್ತದೆ. ಮಕ್ಕಳನ್ನು ಮಲಗಿಸಿ, ಉಳಿದ ಮನೆಕೆಲಸಗಳನ್ನು ಮುಗಿಸಿ, ತನ್ನ ಊಟ ಮುಗಿಸುವ ವೇಳೆಗೆ ಅರ್ಧರಾತ್ರಿ ಕಳೆದುಹೋಗಿರುತ್ತದೆ. ನಾಳೆ ಬೆಳಗ್ಗಿನ ತಿಂಡಿ, ಕೆಲಸಕಾರ್ಯಗಳ ಬಗ್ಗೆ ಸುಸ್ತಾದ ಜೀವವನ್ನು ನಿದ್ರಾದೇವಿ ಆವರಿಸಿಕೊಂಡುಬಿಡುತ್ತಾಳೆ. ಇದು ಆಫೀಸ್ ಹಾಗೂ ಮನೆ ನಿಭಾಯಿಸುವ ಪ್ರತಿ ಮಹಿಳೆಯ ನಿತ್ಯದ ದಿನಚರಿ.

ನೀತಾ, ಸದಾ ತಮಾಷೆ ಮಾಡುತ್ತಾ ತನ್ನ ಸುತ್ತಮುತ್ತಲಿರುವವನ್ನು ನಗಿಸುತ್ತಾ, ತನ್ನದೇ ಧಾಟಿಯಲ್ಲಿ ತನ್ನಿಷ್ಟದಂತೆ ಬದುಕು ಸಾಗಿಸುತ್ತಿದ್ದ ಆಕರ್ಷಕ ವ್ಯಕ್ತಿತ್ವ ಹೊಂದಿದ್ದ ಬುದ್ಧಿವಂತ ಯುವತಿ. ಒಬ್ಬಳೇ ಮಗಳೆಂದು ಯಾವುದೇ ಕಷ್ಟ ಸೋಂಕದಿರುವಂತೆ ಅಪ್ಪ, ಅಮ್ಮ ಮುದ್ದಿನಿಂದಲೇ ಸಾಕಿದ್ದರು. ಚೆನ್ನಾಗಿ ಓದಿ, ಒಳ್ಳೆ ಉದ್ಯೋಗವನ್ನೂ ಪಡೆದುಕೊಂಡಿದ್ದಳು. ಮಗಳು ಉತ್ತಮ ಹುದ್ದೆ ಪಡೆದ ತಕ್ಷಣ ಸೂಕ್ತ ವರನ ಹುಡುಕಾಟಕ್ಕೆ ಇಳಿದಿದ್ದರು. ಕೊನೆಗೂ ನೀತಾಗೆ ಸರಿಹೊಂದುವ ಸಂಗಾತಿ ಸಿಕ್ಕು, ವೈವಾಹಿಕ ಬದುಕಿಗೂ ಕಾಲಿಟ್ಟಳು. ಆರಂಭದ ದಿನಗಳಲ್ಲಿ ಸಂಸಾರ ಬಂಧನದ ಖುಷಿ, ಸಂಭ್ರಮದ ಮತ್ತು ಸ್ವರ್ಗದಲ್ಲೇ ತೇಲಿಸಿತ್ತು. ಮದುವೆಗೆಂದು ತೆಗೆದುಕೊಂಡ ರಜಾ ಮುಗಿದು ಕೆಲಸಕ್ಕೆ ಹಾಜರಾದ ನಂತರವೇ ವಾಸ್ತವದ ಅರಿವಾದದ್ದು. ಬದುಕು ಏನೆಂಬುದು ನಿಧಾನಕ್ಕೆ ತಿಳಿಯುತ್ತಾ ಹೋಯಿತು. ಆಫೀಸಿನಲ್ಲಿ ಮೈಮುರಿದು ದುಡಿದು ಮನೆಗೆ ಕಾಲಿಟ್ಟವಳಿಗೆ ಬೆಳಗ್ಗೆ ಹೊರಡುವ ಗಡಿಬಿಡಿಯಲ್ಲಿ ಚೆಲ್ಲಾಪಿಲ್ಲಿಯಾದ ಮನೆಯ ಸಾಮಾಗ್ರಿಗಳು, ಅಡುಗೆ ಮನೆಯಲ್ಲಿ ಹರಡಿಟ್ಟ ಅರ್ಧಂಬರ್ಧ ಮುಗಿಸಿಟ್ಟ ಕೆಲಸ ಕಾರ್ಯಗಳು ಕಣ್ಣಿಗೆ ರಾಚುತ್ತಿದ್ದವು, ಕೆಲಸದವಳನ್ನು ಹೇಳೋಣವೆಂದರೆ ಮುಂಜಾನೆ ಎದ್ದು ಕೆಲಸಕ್ಕೆ ಹೋದವರು, ಹಿಂದಿರುಗುವುದು ರಾತ್ರಿಯಾದ ಮೇಲೆ. ಕೆಲಸದವಳು ಬರಲು ಸಮಯ ನಿಗದಿಪಡಿಸುವುದಕ್ಕೋಸ್ಕರ ಒದ್ದಾಡುವ ಪರಿಸ್ಥಿತಿ.

ಕೊನೆ ಕೊನೆಗೆ ನೀತಾ ಎಲ್ಲವನ್ನೂ ಸಂಭಾಳಿಸುವುದನ್ನು ಕಲಿತುಕೊಂಡಳು, ಹಾಗಿದ್ದರೂ ಅತಿಯಾದ ಒತ್ತಡ ನಿಧಾನಕ್ಕೆ ಮನಸ್ಸನ್ನು ಖಿನ್ನತೆಗೆ ದೂಡಿತು. ಸುಂದರವಾಗಿದ್ದ ಅವಳ ಬದುಕನ್ನು, ಸೂಪರ್ ವುಮೆನ್ ಎಂಬ ಪಟ್ಟದಿಂದಲೇ ಶೋಚನೀಯ ಸ್ಥಿತಿಗೆ ತಲಪಿತ್ತು.

ದ್ವಿಪಾತ್ರ ಒತ್ತಡದಲ್ಲಿ ಕೊನೆಯೇ…
ಇವತ್ತಿನ ಜಗತ್ತಿನಲ್ಲಿ ಉದ್ಯೋಗ ಹಾಗೂ ಸಂಸಾರ ಎರಡನ್ನೂ ನಿಭಾಯಿಸುವ ಬಹಳಷ್ಟು ಮಹಿಳೆಯರಿದ್ದಾರೆ. ಸಂಸಾರ, ಮಕ್ಕಳ ಜವಬ್ದಾರಿಯ ಭಾರವನ್ನು ಉದ್ಯೋಗ ಕ್ಷೇತ್ರದಲ್ಲಿ ಕಿಂಚಿತ್ತೂ ಕಾಣದಂತೆ ನೋಡಿಕೊಳ್ಳಬೇಕಾಗುತ್ತದೆ. ಇದೇ ತನ್ನ ವೀಕ್‌ನೆಸ್ ಆಗಬಹುದೇ ಎಂಬ ಭಯದಿಂದಾಗಿ ಇತರರಿಗಿಂತಲೂ ಒಂದು ಪಟ್ಟು ಹೆಚ್ಚು ಶಕ್ತಿಯನ್ನೇ ಕೆಲಸಕ್ಕೋಸ್ಕರ ವಿನಿಯೋಗಿಸುತ್ತಾರೆ. ಇನ್ನು ಎಷ್ಟು ದೊಡ್ಡ ಆಫೀಸರ್ ಆಗಿದ್ದರೂ, ಮನೆಗೆ ಕಾಲಿಟ್ಟ ತಕ್ಷಣ ಪಕ್ಕಾ ಗೃಹಿಣಿ. ಆಳುಕಾಳುಗಳಿದ್ದರೂ ತನ್ನ ಗಂಡ, ಮಕ್ಕಳ ಬೇಕು ಬೇಡ ನೋಡಿಕೊಳ್ಳುವುದು, ಅವರಿಷ್ಟ ಊಟ ತಿಂಡಿ, ಎಲ್ಲದರ ಜವಬ್ದಾರಿ ಇವಳದ್ದೇ. ಅದನ್ನು ಇತರರಿಗೆ ಒಪ್ಪಿಸಲು ಮನಸ್ಸು ಸುತರಾಂ ಇಷ್ಟಪಡದು. ಗಂಡ ಆಫೀಸ್ ಮುಗಿಸಿ ಬಂದಾಕ್ಷಣ ರಿಲೀಫ್ ಆದರೂ ಈಕೆಗೆ ಆ ಅದೃಷ್ಟವೂ ಇಲ್ಲ. ಇವೆಲ್ಲಾ ಹೆಣ್ಣನ್ನು ಖಿನ್ನತೆಗೆ ದೂಡುತ್ತದೆ. ಕೆಲಸದ ಒತ್ತಡದೊಂದಿಗೆ, ಹಾರ್ಮೋನ್‌ಗಳ ವೈಪರೀತ್ಯ, ದೈಹಿಕ ಸ್ಥಿತಿಯೂ ಇನ್ನಷ್ಟು ನಿಶ್ಯಕ್ತಳನ್ನಾಗಿಸುತ್ತದೆ.

ಕಾಳಜಿಯೆಂಬ ಟಾನಿಕ್
ಪ್ರತೀ ಹೆಣ್ಣಿಗೂ ತಾನು ಯಾರಿಗೂ ಕಮ್ಮಿ ಇಲ್ಲದಂತೆ ಬದುಕಬೇಕು, ಗಂಡನಿಗೆ ಸರಿಸಮಾನಳಾಗಿ ಜವಬ್ದಾರಿ ಹಂಚಿಕೊಂಡು ಹೆಗಲು ಕೊಡಬೇಕು, ಜತೆಗೆ ತನ್ನನ್ನು ನಂಬಿದವರಿಗೆ ಕೊರತೆಯುಂಟಾಗದಂತೆ ಕಾಪಾಡಿಕೊಳ್ಳಬೇಕು ಎಂದೆಲ್ಲಾ ಬಯಸುತ್ತಾಳೆ. ಇಲ್ಲಿ ಅವಳಿಗೆ ಅವಳದ್ದೇ ಆದ ಯಾವುದೇ ಸ್ವಾರ್ಥವಿಲ್ಲ. ಆಸೆ-ಆಕಾಂಕ್ಷೆಗಳಿಲ್ಲ. ಇತರರಿಗೋಸ್ಕರವೇ ತನ್ನ ಜೀವವನ್ನು ಗಂಧದಂತೆ ಸವೆಸುತ್ತಾಳೆ. ಈ ಸಂದರ್ಭದಲ್ಲಿ ಆಕೆ ಬಯಸುವುದಿಷ್ಟೇ, ತನಗೊಂದಿಷ್ಟು ಕಾಳಜಿ, ಪ್ರೀತಿ ತೋರಿಸುವ ಮನಸ್ಸನ್ನು. ಪತಿಯಾದವನು ತನ್ನಂತೆ ಇವಳೂ ಆಫೀಸಿನಲ್ಲಿ ದುಡಿದಿರುತ್ತಾಳೆ, ಮನೆಗೆ ಬಂದು ಸುಸ್ತಾಗಿರುತ್ತಾಳೆ. ಮನೆಕೆಲಸ, ಮಕ್ಕಳ ಜವಬ್ದಾರಿಯನ್ನು ಒಂದಿಷ್ಟು ಹಂಚಿಕೊಳ್ಳೋಣ ಎಂಬ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ‘ಸುಸ್ತಾಗಿದ್ದಿ, ಸ್ವಲ್ಪ ರೆಸ್‌ಟ್ ತೆಗೋ, ನಾನು ಎಲ್ಲವನ್ನೂ ನೋಡಿಕೊಳ್ಳುತ್ತೇನೆ’ ಎಂಬ ಒಂದೇ ಒಂದು ಕಾಳಜಿಯ ಮಾತು ಟಾನಿಕ್‌ನಂತೆ ಕೆಲಸ ಮಾಡುತ್ತದೆ. ಆಕೆಯ ಇಡೀ ದಿನದ ಒತ್ತಡ, ಸುಸ್ತನ್ನು ಒಂದೇ ಕ್ಷಣದಲ್ಲಿ ನಿವಾಳಿಸಿಬಿಡುತ್ತದೆ. ‘ಇರಲಿ ಬಿಡಿ, ಇದೇನು ದೊಡ್ಡ ಕೆಲಸ, ನಾನೇ ಮಾಡ್ತೀನಿ’ ಅಂತ ಹೊಸ ಹುರುಪಿನಿಂದ ಮತ್ತೆ ಮುನ್ನುಗ್ಗುತ್ತಾಳೆ.

ಉದ್ಯೋಗ ಕ್ಷೇತ್ರದಲ್ಲೂ ಆಕೆಯನ್ನು ಒಬ್ಬ ಸ್ಪರ್ಧಿ ಎಂದು ಪರಿಗಣಿಸದೆ, ಪ್ರೀತಿಯಿಂದ ಕೆಲಸವನ್ನು ಹಂಚಿಕೊಳ್ಳುವ ಒಳ್ಳೆಯ ಮನಸ್ಸನ್ನು ಆಕೆ ಬಯಸುತ್ತಾಳೆ. ಅದನ್ನೊಂದಿಷ್ಟು ಅರ್ಥ ಮಾಡಿಕೊಂಡು ಸಹಕಾರ ನೀಡಿದರೆ ಆಕೆ ಇಡೀ ಜಗತ್ತನ್ನೇ

Tags

Related Articles

Leave a Reply

Your email address will not be published. Required fields are marked *

Language
Close