ವಿಶ್ವವಾಣಿ

ಉಗುರು ಕಚ್ಚೋ ಅಭ್ಯಾಸ ಇದ್ರೆ ಬಿಡೋದು ಒಳ್ಳೆದು, ಯಾಕೆ ಗೊತ್ತಾ ಈ ಸ್ಟೋರಿ ಓದಿ

ಆಸ್ಟ್ರೇಲಿಯಾ: ಎಷ್ಟೋ ಜನ ಉಗುರು ಕಡಿಯುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ, ಅದನ್ನು ಅಷ್ಟು ಗಂಭೀರವಾಗಿ ಪರಿಗಣಿಸುವುದಿಲ್ಲ. ನಿಮಗೂ ಉಗುರು ಕಚ್ಚುವ ಅಭ್ಯಾಸ ಇದ್ದರೆ ಅದನ್ನು ಈ ಕ್ಷಣವೇ ನಿಲ್ಲಿಸಿಬಿಡಿ.

ಹೌದು, ನಿಮ್ಮ ಹಾಗೇ 20 ವರ್ಷದ ಕರ್ಟ್ನಿ ವಿಥಾರ್ನ್ ಕೂಡ ಉಗುರು ಕಚ್ಚುವ ಅಭ್ಯಾಸವನ್ನು ರೂಢಿಸಿಕೊಂಡಿದ್ದರು. ಆದರೆ, ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಶಾಲೆಯಲ್ಲಿದ್ದಾಗಲೆ ಉಗುರು ಕಚ್ಚುವ ಅಭ್ಯಾಸ ಬೆಳೆಸಿಕೊಂಡಿದ್ದ ಈಕೆಯ ಹೆಬ್ಬೆಟ್ಟು ಕಪ್ಪಗಾಗಲು ಆರಂಭಿಸಿತು. ಆದರೆ, ಸತತ ನಾಲ್ಕು ವರ್ಷಗಳ ಕಾಲ ಕರ್ಟ್ನಿ ಇದನ್ನು ಮುಚ್ಚಿಟ್ಟಿದ್ದರು.

ಇನ್ನೂ ಎಷ್ಟು ದಿನ ಹೀಗೆ ಮುಚ್ಚಿಡುವುದೆಂದು ವೈದ್ಯರನ್ನು ಭೇಟಿ ಮಾಡಿದ ಮನಃಶಾಸ್ತ್ರ ವಿದ್ಯಾರ್ಥಿನಿಗೆ ಆಘಾತವೇ ಕಾದಿತ್ತು. ಹೌದು, ಆಕೆ ವೈದ್ಯರನ್ನು ಭೇಟಿ ಮಾಡಿದ ನಂತರ ವಿಭಿನ್ನ ಕ್ಯಾನ್ಸರ್​ನಿಂದ ಬಳಲುತ್ತಿರುವುದು ಪತ್ತೆಯಾಯಿತು. ಕೂಡಲೇ ಶಸ್ತ್ರಚಿಕಿತ್ಸೆ ಮಾಡಿಸಬೇಕೆಂದು ವೈದ್ಯರು ಸೂಚಿಸಿದರು.

ಶಸ್ತ್ರ ಚಿಕಿತ್ಸೆ ವೇಳೆ ಅಕ್ರಾಲ್​ ಲೆಂಟಿಜಿನಸ್ ಸಬುಂಗ್ವಲ್​​ ಮೆಲನೊಮ (acral lentiginous subungual melanoma) ಎಂಬ ಕ್ಯಾನ್ಯರ್​ನನ್ನು ತೆಗೆಯಬೇಕಾದಾಗ ವೈದ್ಯರು ಕರ್ಟ್ನಿಯ ಬೆರಳನ್ನೇ ಕತ್ತರಿಸಿದರು. ಸದ್ಯ ಕರ್ಟ್ನಿಯ ಹೆಬ್ಬೆಟ್ಟನ್ನು ಕತ್ತರಿಸಲಾಗಿದ್ದರೂ, ಈ ಕ್ಯಾನ್ಸರ್​ ದೇಹದ ಯಾವ ಭಾಗದಲ್ಲಿದೆ ಎಂಬುದನ್ನು ವೈದ್ಯರಿಗೆ ಇನ್ನೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.